ಕೋಮಾದಲ್ಲಿದ್ದ ಅಜ್ಜಿಗೆ ಪ್ರಜ್ಞೆ ಬಂತು; ಮನೆಗೆ ಬಂದು ಊಟ ಮಾಡಿ ಹೋದಳು ಮಗಳು ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಜಾಹ್ನವಿ ನರಸಿಂಹನ ಮನೆಯಿಂದ ರಾತ್ರಿ ಮೆಲ್ಲನೆ ಹೊರಟು ಲಕ್ಷ್ಮೀ ನಿವಾಸಕ್ಕೆ ಬಂದಿದ್ದಾಳೆ. ಅಲ್ಲಿ ನಿದ್ದೆಯಲ್ಲಿದ್ದ ಅಮ್ಮ, ಅಜ್ಜಿಯನ್ನು ಮಾತನಾಡಿಸಿಕೊಂಡು ವಾಪಸ್ ಹೋಗಿದ್ದಾಳೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಜಾಹ್ನವಿ, ನರಸಿಂಹನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಜಾಹ್ನವಿಗೆ ಊಟ ತಂದುಕೊಟ್ಟ ನರಸಿಂಹನ ಪತ್ನಿ, ಅವಳ ಜೊತೆ ಮಾತನಾಡುತ್ತಾ ಕುಳಿತಿದ್ದಾಳೆ. ಜತೆಗೆ, ತನ್ನ ಗಂಡನ ಜೀವ ಉಳಿಸಿ, ಮಾಂಗಲ್ಯ ಉಳಿಸಿದ್ದಕ್ಕೆ ಅವಳಿಗೆ ಧನ್ಯವಾದ ಹೇಳಿದ್ದಾಳೆ. ಜತೆಗೆ ಅವಳನ್ನು ಮಾತನಾಡಿಸಿ, ಅವಳ ಬಗ್ಗೆ ತಿಳಿದುಕೊಳ್ಳುವ ಯತ್ನ ಮಾಡಿದ್ದಾಳೆ. ಆದರೆ ಜಾಹ್ನವಿ ಮಾತ್ರ, ನನಗಾರೂ ಇಲ್ಲ, ನಾನು ಈಗ ಒಂಟಿ, ನನ್ನ ಪಾಲಕರು ಎರಡು ವರ್ಷದ ಹಿಂದೆ ತೀರಿಕೊಂಡಿದ್ದಾರೆ ಎನ್ನುತ್ತಾಳೆ. ಗಂಡನ ಬಗ್ಗೆ ಕೇಳಿದಾಗ, ಅವರನ್ನು ಬಿಟ್ಟು ಬಂದಿದ್ದೇನೆ, ಅವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಮತ್ತೆ ಅವಳಲ್ಲಿ ಹೆಚ್ಚಿನ ವಿವರ ಕೇಳಿಲ್ಲ.
ಅವರು ಅತ್ತ ಹೋಗುತ್ತಲೇ, ಜಾನುಗೆ ಮನೆಯ ನೆನಪು ಕಾಡತೊಡಗಿದೆ. ಮನೆಯಲ್ಲಿ ಈಗ ಪರಿಸ್ಥಿತಿ ಹೇಗಿರಬಹುದು, ಮನೆಯವರು ಏನು ಅಂದುಕೊಂಡಿರಬಹುದು, ಅಪ್ಪ ಅಮ್ಮ ಏನು ಮಾಡುತ್ತಿದ್ದಾರೆ ಎಂದು ಯೋಚಿಸುತ್ತಾ ಕುಳಿತಿದ್ದಾಳೆ. ಅವಳಿಗೆ ಈಗ ಮನೆಯ ನೆನಪು ಜಾಸ್ತಿಯಾಗಿ, ಹೇಗಾದರೂ ಮಾಡಿ ಮನೆಗೆ ಹೋಗಿ ಅವರನ್ನು ನೋಡಿಕೊಂಡು ಬರಬೇಕು ಎಂದು ಅಂದುಕೊಂಡಿದ್ದಾಳೆ. ಅದಕ್ಕೆ ನರಸಿಂಹನ ಮನೆಯಲ್ಲಿ ಎಲ್ಲರೂ ಮಲಗಿದ ಬಳಿಕ ಮೆಲ್ಲನೆ ಎದ್ದು ಹೊರಟಿದ್ದಾಳೆ.
ರಾತ್ರಿ ನಡೆದುಕೊಂಡು ಹೊರಟ ಜಾನು, ಲಕ್ಷ್ಮೀ ನಿವಾಸ ತಲುಪಿದ್ದಾಳೆ. ಮನೆಯ ಹಿಂಬಾಗಿಲಿನಿಂದ ಹೋದ ಜಾನು, ಮೊದಲು ಅಪ್ಪ ಅಮ್ಮನ ಕೋಣೆಗೆ ಹೋಗಿದ್ದಾಳೆ. ಅವರನ್ನು ನೋಡಿ, ಬಳಿಕ ಅಲ್ಲಿಯೇ ಕುಳಿತು ಅತ್ತಿದ್ದಾಳೆ. ಆಗ ಲಕ್ಷ್ಮೀಗೆ ಎಚ್ಚರವಾಗಿದೆ. ಆದರೆ ತಾನು ಕನಸಿನಲ್ಲಿ ಅಥವಾ ನಿದ್ದೆಯಲ್ಲಿ ಜಾನುವನ್ನು ನೋಡುತ್ತಿರಬಹುದು ಎಂದುಕೊಂಡು ಲಕ್ಷ್ಮೀ ಅವಳ ಜೊತೆ ಮಾತನಾಡಿದ್ದಾಳೆ. ನಂತರ ಮೆಲ್ಲನೆ ಅಲ್ಲಿಂದ ಎದ್ದು ಹೊರಟಿದ್ದಾಳೆ.
ಬಳಿಕ ಹಾಲ್‌ಗೆ ಬಂದಾಗ ಅಲ್ಲಿ ತನ್ನ ಫೋಟೊ ಮುಂದೆ ಎಡೆ ಇರಿಸಿ ಊಟ, ತಿಂಡಿ ಬಡಿಸಿರುವುದನ್ನು ನೋಡಿ ಜಾನುಗೆ ಅಳು ಬರುತ್ತದೆ. ಅವಳು ಅಲ್ಲಿಯೇ ಕುಳಿತು ತನ್ನ ನೆಚ್ಚಿನ ತಿಂಡಿಗಳನ್ನು ಬೇಗಬೇಗನೇ ತಿನ್ನುತ್ತಾಳೆ. ನಂತರ ಅಜ್ಜಿಯನ್ನೊಮ್ಮೆ ನೋಡಿಕೊಂಡು ಹೋಗೋಣ ಎಂದು ಅಜ್ಜಿಯ ರೂಮ್‌ಗೆ ಹೋಗುತ್ತಾಳೆ. ಅಲ್ಲಿ ಹೋಗಿ ಅಜ್ಜಿಯ ಜೊತೆ ಮಾತನಾಡಿದಾಗ ಅಜ್ಜಿ ಎಚ್ಚರಗೊಂಡು, ಜಾನು ಜೊತೆ ಮಾತನಾಡಿದ್ದಾರೆ. ನಾನು ಪ್ರಜ್ಞೆ ಇದ್ದರೂ, ಜೀವಭಯದಿಂದ ಹೀಗೆ ನಟಿಸುತ್ತಿದ್ದೇನೆ ಎಂದು ಅಜ್ಜಿ ಹೇಳುತ್ತಾರೆ.
ಅಜ್ಜಿಯ ಜೊತೆ ನಡೆದ ಎಲ್ಲವನ್ನೂ ಜಾನು ಹೇಳಿದ್ದಾಳೆ. ಬಳಿಕ ಇನ್ನೊಮ್ಮೆ ಬರುವೆ ಎಂದು ಹೇಳಿ ಹೊರಡಲು ಅನುವಾಗಿದ್ದಾಳೆ. ಅಷ್ಟರಲ್ಲಿ ಜಯಂತ ಮನೆಗೆ ಬಂದಿದ್ದಾನೆ. ಜಾಹ್ನವಿ ಮನೆಗೆ ಬರುತ್ತಾಳೆ ಎಂದು ಜೋಯಿಸರು ಹೇಳಿದ ಮಾತನ್ನು ಅವನು ನಂಬಿದ್ದು, ಜಾಹ್ನವಿಗಾಗಿ ಬಂದೆ ಎಂದು ಮನೆಯವರಲ್ಲಿ ಹೇಳಿದ್ದಾನೆ. ಅವನು ಅಜ್ಜಿಯ ರೂಮ್‌ಗೆ ಹೋಗುತ್ತಲೇ, ಬಾಗಿಲ ಸಂದಿಯಲ್ಲಿ ಅಡಗಿದ್ದ ಜಾನು ಹೊರಗೆ ಓಡುತ್ತಾಳೆ. ಮನೆಯಿಂದ ಆಚೆ ಹೋಗುತ್ತಾಳೆ.
ನಂತರ ಹಾಲ್‌ನಲ್ಲಿ ಮಲಗಿದ ಜಯಂತ, ಜಾನುಗೆ ಬಡಿಸಿದ್ದ ತಿಂಡಿ ಖಾಲಿಯಾಗಿರುವುದನ್ನು ಗಮನಿಸುತ್ತಾನೆ. ಅದನ್ನೇ ನೋಡುತ್ತಾ ನಿದ್ದೆ ಮಾಡಲು ಮುಂದಾಗುತ್ತಾನೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಏಪ್ರಿಲ್ 14ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ