ವೆಂಕಿಯನ್ನು ಮನೆಯಿಂದ ಹೊರದಬ್ಬಲು ಸಂಚು ರೂಪಿಸುತ್ತಿರುವ ಹರೀಶ ಮತ್ತು ಸಂತೋಷ್: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ವೆಂಕಿಯನ್ನು ಮನೆಯಿಂದ ಹೊರದಬ್ಬಲು ಸಂಚು ರೂಪಿಸುತ್ತಿರುವ ಹರೀಶ ಮತ್ತು ಸಂತೋಷ್: ಲಕ್ಷ್ಮೀ ನಿವಾಸ ಧಾರಾವಾಹಿ

ವೆಂಕಿಯನ್ನು ಮನೆಯಿಂದ ಹೊರದಬ್ಬಲು ಸಂಚು ರೂಪಿಸುತ್ತಿರುವ ಹರೀಶ ಮತ್ತು ಸಂತೋಷ್: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ವೆಂಕಿಯನ್ನು ಮನೆಯಿಂದ ಹೊರಹಾಕಲು ಹರೀಶ ಮತ್ತು ಸಂತೋಷ್ ಸಂಚು ರೂಪಿಸುತ್ತಿದ್ದಾರೆ. ಮತ್ತೊಂದೆಡೆ ಮನೆಯಲ್ಲಿ ಕ್ಯಾಮೆರಾ ವಿಚಾರವಾಗಿ ಜಾಹ್ನವಿಗೆ ಜಯಂತ್ ಮೇಲೆ ಸಂಶಯ ಇನ್ನೂ ಕಡಿಮೆಯಾಗಿಲ್ಲ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 14ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 14ರ ಸಂಚಿಕೆ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ಮನೆಯಲ್ಲೇ ಕುಳಿತುಕೊಂಡಿರುವ ವೆಂಕಿಯನ್ನು ಹೇಗಾದರೂ ಮಾಡಿ ಮನೆಯಿಂದ ಹೊರಹಾಕಬೇಕು ಎಂದು ಸಂತೋಷ್ ಮತ್ತು ಹರೀಶ ಸಂಚು ರೂಪಿಸುತ್ತಿದ್ದಾರೆ. ವೆಂಕಿ ಮಾತ್ರ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾನೆ. ಮನೆಯ ಹೊರಗಡೆ ಮಾತನಾಡುತ್ತಾ ಕುಳಿತಿದ್ದ ಸಂತೋಷ್ ಮತ್ತು ಹರೀಶ, ಈಗ ಸಿಂಚನಾಳನ್ನು ಮನೆ ಬಿಟ್ಟು ಹೋಗುವುದನ್ನು ತಡೆಯಬೇಕು ಎಂದು ಯೋಚಿಸುತ್ತಿರುತ್ತಾನೆ. ಸಂತೋಷ್ ಕೂಡ, ಮೊದಲು ನೀನು ಅವಳನ್ನು ಮನೆಯಲ್ಲಿ ಉಳಿಸಿಕೋ, ಇಲ್ಲದಿದ್ದರೆ ಮತ್ತೆ ಸಮಸ್ಯೆಯಾಗುತ್ತದೆ, ನಂತರ ವೆಂಕಿಯನ್ನು ಮನೆಯಿಂದ ಓಡಿಸಲು ಸಂಚು ಮಾಡೋಣ ಎಂದು ಹೇಳುತ್ತಾನೆ. ಅದರಂತೆ ಹರೀಶ, ಸಿಂಚನಾ ಬಳಿ ತೆರಳಿ ನಾಟಕ ಮಾಡುತ್ತಾನೆ. ನಾನಿನ್ನು ಒಂದು ಕ್ಷಣವೂ ಮನೆಯಲ್ಲಿ ಇರಲ್ಲ ಎಂದು ಸಿಂಚನಾಳ ಮನ ಒಲಿಸಿ, ಎರಡೇ ದಿನದಲ್ಲಿ ವೆಂಕಿಯನ್ನು ಓಡಿಸುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಸಿಂಚನಾ ಒಪ್ಪಿ, ಸರಿ ಎಂದು ಹೇಳುತ್ತಾಳೆ. ಮನೆಯಲ್ಲೇ ಉಳಿಯುತ್ತಾಳೆ.

ಜಯಂತ್ ಜತೆ ಮಾತನಾಡಿದ ಜಾಹ್ನವಿ

ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ವಿಚಾರವಾಗಿ ಜಯಂತ್ ಜತೆ ಜಾಹ್ನವಿ ಮುನಿಸಿಕೊಂಡಿದ್ದಾಳೆ, ಅದೇ ಸಂದರ್ಭದಲ್ಲಿ ವೆಂಕಿಗೆ ವಿಡಿಯೊ ಕಾಲ್ ಮಾಡಿದಾಗ ಅವನು ಮನೆಯಲ್ಲಿ ಇರುವುದು ಕಂಡುಬರುತ್ತದೆ. ಅವರು ನಡೆದ ವಿಚಾರವನ್ನು ಜಾಹ್ನವಿಗೆ ತಿಳಿಸುತ್ತಾರೆ. ಲಕ್ಷ್ಮೀ ಮತ್ತು ಶ್ರೀನಿವಾಸ್‌ ಮನೆ ಬಿಟ್ಟು ಹೋಗಿರುವುದು ಜಾಹ್ನವಿಗೆ ತೀವ್ರ ದುಃಖವಾಗುತ್ತದೆ. ಅದಕ್ಕೆ ಅವಳು ಅವರಿಬ್ಬರನ್ನೂ ಮನೆಗೆ ಕರೆಸಿಕೊಳ್ಳೋಣ, ಸ್ವಲ್ಪ ದಿನ ಮನೆಯಲ್ಲೇ ಇರಲಿ ಎಂದು ಜಾಹ್ನವಿ ಜಯಂತ್‌ಗೆ ಹೇಳುತ್ತಾಳೆ. ಆದರೆ ಅವರು ಮನೆಗೆ ಬರುವುದು ಜಯಂತ್‌ಗೆ ಇಷ್ಟವಿಲ್ಲ, ಜಾಹ್ನವಿ ಬಳಿ ಅವನು ಸರಿ ಎಂದರೂ, ಮನಸ್ಸಿನಲ್ಲಿಯೇ ಅವರನ್ನು ದೂರ ಇರಿಸಲು ಸಂಚು ಮಾಡುತ್ತಿದ್ದಾನೆ.

ವೆಂಕಿಗೆ ಊಟ ಕೊಡದೇ ಸತಾಯಿಸಿದ ಮನೆಯವರು

ಮನೆಯಲ್ಲಿ ವೆಂಕಿ ತೀವ್ರ ಹಸಿವಿನಿಂದ ಕಂಗೆಟ್ಟು ಕುಳಿತಿದ್ದಾನೆ. ವೆಂಕಿಯ ಹೆಂಡತಿ, ತಟ್ಟೆ ಹಿಡಿದುಕೊಂಡು ಸಿಂಚನಾ ಬಳಿ ತೆರಳುತ್ತಾಳೆ. ಆದರೆ ಆಗ ಸಿಂಚನಾ ಅವಳಿಗೆ ಊಟ ನೀಡಲು ನಿರಾಕರಿಸುತ್ತಾಳೆ. ಅಲ್ಲದೆ, ಅವಮಾನ ಮಾಡಿ ಕಳುಹಿಸುತ್ತಾಳೆ. ಅತ್ತ, ವೀಣಾ ತಯಾರಿಸಿ ಇಟ್ಟಿದ್ದ ಅಡುಗೆಯನ್ನು ತಟ್ಟೆಗೆ ಬಡಿಸಿಕೊಳ್ಳಲು ವೆಂಕಿಯ ಹೆಂಡತಿ ಹೋಗುತ್ತಾಳೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಂತೋಷ್, ಊಟವನ್ನು ಮರಳಿ ಪಾತ್ರೆಗೆ ಹಾಕುತ್ತಾನೆ, ನಿಮಗೆ ಇಲ್ಲಿ ಊಟ ಕೊಡಲು ಸಾಧ್ಯವಿಲ್ಲ, ಕೂಡಲೇ ಮನೆಯಿಂದ ಹೊರಡಿ, ಮನೆಯಲ್ಲಿ ನೀವು ಇರುವುದು ಬೇಡ ಎಂದು ಹೇಳುತ್ತಾನೆ. ಹೀಗಾಗಿ ವೆಂಕಿಗೆ ಊಟ ದೊರೆಯುವುದಿಲ್ಲ, ಜತೆಗೆ ಮನೆಯಲ್ಲಿ ಚುಚ್ಚು ಮಾತುಗಳು ಅವನಿಗೆ ಸಂಕಟ ತರಿಸುತ್ತದೆ.

ಇತ್ತ ಸಿದ್ದೇಗೌಡ ಮತ್ತು ಮರಿಗೌಡ ಇಬ್ಬರೂ ಮಾತನಾಡಿಕೊಂಡಿದ್ದು, ನೀಲುಗೆ ಈ ವಿಚಾರ ತಿಳಿದಿರಬಹುದು ಎಂದು ಮರಿಗೌಡ ಸಂಶಯ ವ್ಯಕ್ತಪಡಿಸುತ್ತಾನೆ. ಅದನ್ನು ಕೇಳಿ ಸಿದ್ದೇಗೌಡನಿಗೆ ಮತ್ತಷ್ಟು ಸಂಕಟವಾಗುತ್ತದೆ. ಅಲ್ಲಿಗೆ ಶುಕ್ರವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner