ಜಾಹ್ನವಿ ಹೆಜ್ಜೆಯ ಜಾಡು ಹಿಡಿದು ಹೊರಟಿದ್ದಾನೆ ಜಯಂತ; ನರಸಿಂಹನ ಮನೆಯಲ್ಲಿ ಲಕ್ಷ್ಮೀ ಕಥೆ ಕೇಳಿದ ಜಾನು: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 15ರ ಸಂಚಿಕೆಯಲ್ಲಿ ಜಯಂತ ಮನೆಯಲ್ಲಿ ಜಾನು ಬಂದು ಹೋಗಿರುವ ಕುರುಹುಗಳನ್ನು ಹುಡುಕುತ್ತಿದ್ದಾನೆ. ಅಲ್ಲಿ ಅವನಿಗೆ ಜಾಹ್ನವಿ ಬಂದು ಹೋಗಿದ್ದಾಳೆ ಎನ್ನುವುದಕ್ಕೆ ಪೂರಕವಾದ ಒಂದು ಬಲವಾದ ಸಾಕ್ಷ್ಯ ಸಿಕ್ಕಿದೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 15ರ ಸಂಚಿಕೆಯಲ್ಲಿ ಜಯಂತ ಜಾಹ್ನವಿ ತವರು ಮನೆಯಲ್ಲಿ ತಂಗಿದ್ದಾನೆ. ಬೆಳಗ್ಗೆ ವಾಪಸ್ ಹೋಗಲು ತಯಾರಿ ನಡೆಸುತ್ತಿದ್ದಾನೆ, ಅಷ್ಟರಲ್ಲಿ ಅಜ್ಜಿಯ ಬಳಿ ಹೋಗಿ ಮತ್ತೆ ಜಾಹ್ನವಿ ಬಗ್ಗೆ ವಿಚಾರಿಸಿದ್ದಾನೆ. ಆದರೆ ಅಜ್ಜಿಯಿಂದ ಅವನಿಗೆ ಯಾವುದೇ ಸುಳಿವು ಸಿಕ್ಕಿಲ್ಲ, ಹೀಗಾಗಿ ಇನ್ನೇನು ಹೊರಡಬೇಕು ಎಂದು ಎದ್ದಾಗ ಅವನಿಗೆ ಕಾಲ ಬಳಿ ಏನೋ ಕಾಣಿಸಿದೆ. ನೋಡಿದರೆ ಅದು ಜಾಹ್ನವಿಯ ಕಾಲ್ಗೆಜ್ಜೆ! ಅದನ್ನು ಎತ್ತಿಕೊಂಡು ಅವನು ಪರಿಶೀಲಿಸುತ್ತಾನೆ. ಆಗ ಅದು ಅವನೇ ಅವಳಿಗೆ ಕೊಡಿಸಿದ ಕಾಲ್ಗೆಜ್ಜೆ ಎಂದು ಅರಿವಾಗುತ್ತದೆ. ಅವನು ಮತ್ತೆ ಗೆಜ್ಜೆಯನ್ನು ಎತ್ತಿಕೊಂಡು ನೋಡುತ್ತಾನೆ. ಅಂದರೆ ಜಾಹ್ನವಿ ಇನ್ನೂ ಜೀವಂತವಾಗಿದ್ದಾಳೆ ಎನ್ನುವುದು ಅವನಿಗೆ ತಿಳಿಯುತ್ತದೆ.
ನಂತರ ಜಯಂತ ಶಾರದಮ್ಮನನ್ನು ಕರೆದುಕೊಂಡು ವಾಪಸ್ ಮನೆಗೆ ಮರಳುತ್ತಾನೆ. ಮನೆಗೆ ತಲುಪಿದ ಬಳಿಕವೂ ಅವನಿಗೆ ಜಾನುವಿನದೇ ಯೋಚನೆಯಾಗುತ್ತದೆ. ಹೀಗಾಗಿ ಅವನು ಮತ್ತೆ ಶ್ರೀಲಂಕಾಗೆ ಹೊರಡುವ ಪ್ಲ್ಯಾನ್ ಮಾಡುತ್ತಾನೆ. ಅಲ್ಲಿ ಹೋಗಿ ಜಾಹ್ನವಿಯನ್ನು ಹುಡುಕುವ ಯೋಚನೆ ಅವನದ್ದಾಗಿದೆ. ಜೋಯಿಸರು ಹೇಳಿದ ಮಾತು, ಮನೆಯಲ್ಲಿ ಇರಿಸಿದ್ದ ಎಡೆಯಲ್ಲಿ ತಿಂಡಿಗಳು ಖಾಲಿಯಾಗಿರುವುದು ಮತ್ತು ಅಜ್ಜಿಯ ರೂಮ್‌ನಲ್ಲಿ ಸಿಕ್ಕಿದ ಜಾನು ಕಾಲ್ಗೆಜ್ಜೆ ಎಲ್ಲವೂ ಅವನಿಗೆ ಜಾನು ಇರುವಿಕೆಯ ಸೂಚನೆ ನೀಡಿದೆ. ಹೀಗಾಗಿ ಅದೊಂದು ಬಲವಾದ ಕಾರಣದಿಂದ ಅವನು ಮತ್ತೆ ಜಾನುವನ್ನು ಹುಡುಕಲು ಮುಂದಾಗಿದ್ದಾನೆ.
ಅದರಂತೆ ಜಯಂತ, ಜಾನುವಿನ ಹುಡುಕಾಟಕ್ಕಾಗಿ ಮತ್ತೆ ಶ್ರೀಲಂಕಾಗೆ ಹೊರಟಿದ್ದಾನೆ. ಅಲ್ಲಿ ಹೋಗಿ, ಅವರಿಬ್ಬರೂ ಪ್ರವಾಸಕ್ಕೆ ಹೋಗಿದ್ದ ಎಲ್ಲ ತಾಣಗಳಿಗೂ ಹೋಗಿ ಅಲ್ಲಿ ಸಿಕ್ಕವರಲ್ಲಿ ಜಾನು ಫೋಟೊ ತೋರಿಸಿ, ಅವಳ ಬಗ್ಗೆ ವಿಚಾರಿಸಿದ್ದಾನೆ. ಆದರೆ ಜಾನು ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ ಜಯಂತ ಪ್ರಯತ್ನ ಬಿಟ್ಟಿಲ್ಲ, ಬದಲಾಗಿ ಮತ್ತೆ ಹುಡುಕಾಟ ಮುಂದುವರಿಸಿದ್ದಾನೆ. ಅವನ ಸ್ಥಿತಿ ಕಂಡು ಶಾರದಮ್ಮನಿಗೆ ಚಿಂತೆಯಾಗಿದೆ.
ಇತ್ತ ನರಸಿಂಹನ ಮನೆಯಲ್ಲಿ ಜಾಹ್ನವಿ, ಮನೆಯವರ ಜತೆ ನಿಧಾನವಾಗಿ ಬೆರೆಯುತ್ತಿದ್ದಾಳೆ. ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನರಸಿಂಹನ ಅಪ್ಪನ ಸ್ಥಿತಿ ಕಂಡು ಅವಳು ಮರುಕಪಟ್ಟಿದ್ದಾಳೆ. ಹೀಗಾಗಿ ಅವರ ಬಗ್ಗೆ ವಿಚಾರಿಸಿದಾಗ, ನರಸಿಂಹ, ಅಪ್ಪನ ಸ್ಥಿತಿಗೆ ಅವರ ಮಗಳೇ ಕಾರಣ. ಅವಳಿಂದಾಗಿ ನಾವೆಲ್ಲ ತುಂಬಾ ತೊಂದರೆ ಅನುಭವಿಸುವಂತಾಯಿತು ಎಂದು ಹೇಳುತ್ತಾನೆ. ಅದನ್ನು ಕೇಳಿ ಜಾಹ್ನವಿ ಮರುಕಪಡುತ್ತಾಳೆ.
ಇದರ ಮಧ್ಯೆ ಜಾಹ್ನವಿಗೆ ಮನೆಯವರ ನೆನಪು ಮತ್ತೆ ಕಾಡುತ್ತದೆ. ಮನೆಯಲ್ಲಿ ಲಕ್ಷ್ಮೀ ಕೂಡ ಶ್ರೀನಿವಾಸ್ ಬಳಿ, ನನಗೆ ಜಾನು ಇನ್ನೂ ನಮ್ಮೊಂದಿಗೆ ಇದ್ದಾಳೆ ಎಂದು ಎನಿಸುತ್ತಿದೆ. ಹೀಗಾಗಿ ನನಗೆ ಪ್ರತಿಕ್ಷಣ ಅವಳ ನೆನಪು ಕಾಡುತ್ತಿದೆ, ಇಲ್ಲಿಯೇ ಅವಳು ಸುತ್ತಮುತ್ತ ನಮ್ಮ ಜೊತೆ ಜೀವಿಸುತ್ತಿದ್ದಾಳೆ ಎಂದು ಹೇಳುತ್ತಾಳೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಮಂಗಳವಾರ ಏಪ್ರಿಲ್ 15ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ