ಮಾಧ್ಯಮಗಳಲ್ಲಿ ಭಾವನಾಳನ್ನು ನೋಡಿ ಕೆಂಡ ಕಾರಿದ ಸಿದ್ದೇಗೌಡನ ಅಜ್ಜಿ ತಾಯವ್ವ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಾಧ್ಯಮಗಳಲ್ಲಿ ಭಾವನಾಳನ್ನು ನೋಡಿ ಕೆಂಡ ಕಾರಿದ ಸಿದ್ದೇಗೌಡನ ಅಜ್ಜಿ ತಾಯವ್ವ: ಲಕ್ಷ್ಮೀ ನಿವಾಸ ಧಾರಾವಾಹಿ

ಮಾಧ್ಯಮಗಳಲ್ಲಿ ಭಾವನಾಳನ್ನು ನೋಡಿ ಕೆಂಡ ಕಾರಿದ ಸಿದ್ದೇಗೌಡನ ಅಜ್ಜಿ ತಾಯವ್ವ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ನನಗೆ ನ್ಯಾಯ ದೊರೆಯುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಭಾವನಾ ಪೊಲೀಸ್‌ ಸ್ಟೇಷನ್‌ ಮುಂದೆ ಧರಣಿ ಕೂರುತ್ತಾಳೆ. ಅವಳನ್ನು ಮಾಧ್ಯಮಗಳಲ್ಲಿ ನೋಡಿ ಕೋಪಗೊಂಡ ಸಿದ್ದು ಅಜ್ಜಿ, ಭಾವನಾಳನ್ನು ಮನೆಯಿಂದ ಹೊರ ಕಳಿಸಿದ್ದೇ ತಪ್ಪಾಯ್ತು ಎನ್ನುತ್ತಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 17ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 17ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ ವಿಚಾರಣೆ ಆಗಲೇಬೇಕು, ಖುಷಿಗೆ ನ್ಯಾಯ ಸಿಗಲೇಬೇಕು ಎಂದು ಭಾವನಾ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಅದು ಜವರೇಗೌಡ ಹಾಗೂ ಸಿದ್ದೇಗೌಡ ಇಬ್ಬರೇ ಮಾಡಿದ ಆಕ್ಸಿಡೆಂಟ್‌ ಎಂದು ತಿಳಿದಿದ್ದರಿಂದ ಈ ದೂರು ತೆಗೆದುಕೊಳ್ಳದಿರುವಂತೆ ಎಸ್‌ಪಿಗೆ ಸೂಚಿಸುತ್ತಾರೆ. ಎಸ್‌ಪಿ ಸೂಚನೆಯಂತೆ ಸಬ್‌ಇನ್ಸ್‌ಪೆಕ್ಟರ್‌, ನಾನು ಈ ದೂರು ತೆಗೆದುಕೊಳ್ಳುವುದಿಲ್ಲ ಎಂದು ಭಾವನಾಗೆ ಹೇಳುತ್ತಾರೆ.

ಧರಣಿ ಕುಳಿತ ಭಾವನಾಗೆ ಸಾಥ್‌ ನೀಡಿದ ಸಿದ್ದೇಗೌಡ

ಇದು ಹಳೆಯ ಕೇಸ್‌, ಈಗ ಪರಿಹಾರ ಮಾಡಲು ಬೇಕಾದಷ್ಟು ಕೇಸ್‌ಗಳು ನಮ್ಮ ಮುಂದೆ ಇದೆ ಆದ್ದರಿಂದ ನಾವು ಈ ದೂರು ತೆಗೆದುಕೊಳ್ಳುವುದಿಲ್ಲ, ನೀವು ಕೊಟ್ಟ ದೂರಿನ ಕಾಪಿಯನ್ನು ನೀವೇ ವಾಪಸ್‌ ತೆಗೆದುಕೊಂಡು ಹೋಗಿ ಎಂದು ಇನ್ಸ್‌ಪೆಕ್ಟರ್‌ ಹೇಳಿದ ಮಾತು ಕೇಳಿ ಭಾವನಾ ಕೋಪಗೊಳ್ಳುತ್ತಾಳೆ. ಕೇಸ್‌ ಹಳೆಯದಾದರೆ ಏನಂತೆ? ನ್ಯಾಯ ಕೇಳಿಕೊಂಡು ನಿಮ್ಮ ಬಳಿ ಬಂದವರಿಗೆ ನೀವು ನ್ಯಾಯ ದೊರಕಿಸಿಕೊಡಬೇಕು, ನೀವು ಈ ದೂರು ತೆಗೆದುಕೊಳ್ಳುವವರೆಗೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಒಬ್ಬಳೇ ಪೊಲೀಸ್‌ ಸ್ಟೇಷನ್‌ ಮುಂದೆ ಧರಣಿ ಕೂರುತ್ತಾಳೆ. ಭಅವಳನ್ನು ನೋಡಿ ಸಿದ್ದೇಗೌಡ ಕೂಡಾ ಹೆಂಡತಿಗೆ ಸಾಥ್ ನೀಡುತ್ತಾನೆ.

ಭಾವನಾ ಹಾಗೂ ಸಿದ್ದೇಗೌಡನ ವಿಚಾರ ಮಾಧ್ಯಮಗಳಿಗೆ ತಿಳಿದು ಸುದ್ದಿಗಾಗಿ ಪೊಲೀಸ್‌ ಸ್ಟೇಷನ್‌ ಬಳಿ ಬರುತ್ತಾರೆ. ನೀವು ಈ ರೀತಿ ಧರಣಿ ಕುಳಿತಿರುವುದು ಏಕೆ ಎಂದು ಕೇಳುತ್ತಾರೆ. ಮಾಧ್ಯಮಗಳಲ್ಲಿ ಭಾವನಾ ಕಾಣಿಸಿಕೊಂಡಿದ್ದನ್ನು ನೋಡಿ ಸಿದ್ದೇಗೌಡನ ಅಜ್ಜಿ ತಾಯವ್ವ ಕೋಪಗೊಳ್ಳುತ್ತಾರೆ. ಮನೆಯಲ್ಲಿ ಸುಮ್ಮನೆ ಹಾಕಿದ್ದನ್ನು ತಿಂದುಕೊಂಡು ಇರುವ ಬದಲಿಗೆ ಇಲ್ಲದ್ದನ್ನೆಲ್ಲಾ ಮಾಡುತ್ತಿದ್ದಾಳೆ. ಇವಳನ್ನು ಮನೆಯಿಂದ ಹೊರ ಹೋಗಿದ್ದೇ ತಪ್ಪಾಯ್ತು ಎಂದು ಸಿಡುಕುತ್ತಾಳೆ. ಭಾವನಾ ಪರ ವಹಿಸಿಕೊಂಡು ಮಾತನಾಡಿದ ಮರೀಗೌಡನ ಬಾಯಿ ಮುಚ್ಚಿಸುತ್ತಾರೆ.‌

ಕೊನೆಗೂ ದೂರು ಪಡೆದ ಪೊಲೀಸರು

ಈ ವಿಚಾರ ಸೌಪರ್ಣಿಕಾಗೂ ತಿಳಿಯುತ್ತದೆ, ಸತ್ತಿರುವುದು ನನ್ನ ಅಮ್ಮ, ಅಣ್ಣ. ಪೊಲೀಸರ ಬಳಿ ನಾನು ನ್ಯಾಯ ಕೇಳಬೇಕು ಅಂತದ್ದರಲ್ಲಿ ಭಾವನಾ ಯಾರು ಇದನ್ನೆಲ್ಲಾ ಮಾಡಲು ಎಂದು ಕೋಪಗೊಳ್ಳುತ್ತಾಳೆ. ರವಿ ಜೊತೆ ಸೌಪರ್ಣಿಕಾ ಪೊಲೀಸ್‌ ಸ್ಟೇಷನ್‌ ಬಳಿ ಬರುತ್ತಾಳೆ. ನಿನ್ನ ಉದ್ದೇಶ ಏನು? ಏತಕ್ಕಾಗಿ ಇದೆಲ್ಲಾ ಮಾಡುತ್ತಿದ್ದೀಯ ಎಂದು ಕೇಳುತ್ತಾಳೆ. ಖುಷಿಗೆ ನ್ಯಾಯ ದೊರಕಿಸಿಕೊಡಬೇಕು ಅನ್ನೋದು ನನ್ನ ಉದ್ದೇಶ ಬೇರೇನೂ ಇಲ್ಲ ಎಂದು ಭಾವನಾ ಉತ್ತರಿಸುತ್ತಾಳೆ. ಸರಿ ಹಾಗಿದ್ರೆ ನೀನು ಈ ರೀತಿ ಧರಣಿ ಕೂತರೆ ಏನೂ ಪ್ರಯೋಜನವಾಗುವುದಿಲ್ಲ, ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾಳೆ.

ಭಾವನಾ ಜೊತೆ ಸೌಪರ್ಣಿಕಾ ಕೂಡಾ ಬಂದಿದ್ದಾಳೆ ಎಂದು ತಿಳಿದ ಅಜ್ಜಿ ಗಾಬರಿಯಾಗುತ್ತಾರೆ. ಇದು ಹೀಗೆ ಮುಂದುವರೆದರೆ ಕಷ್ಟ, ನಾಮಕಾವಸ್ಥೆಗೆ ಕಂಪ್ಲೇಂಟ್‌ ತೆಗೆದುಕೊಳ್ಳಿ, ಆದರೆ ಯಾವುದೇ ಕಾರಣಕ್ಕೂ ರಿಜಿಸ್ಟರ್‌ ಮಾಡಬೇಡಿ ಎಂದು ಇನ್ಸ್‌ಪೆಕ್ಟರ್‌ಗೆ ಸೂಚಿಸುತ್ತಾರೆ. ಅದರಂತೆ ಇನ್ಸ್‌ಪೆಕ್ಟರ್‌ ಬಂದು ನೀವು ದೂರು ಕೊಡಬಹುದು ಎನ್ನುತ್ತಾರೆ. ಅದನ್ನು ಕೇಳಿ ಭಾವನಾ ಖುಷಿಯಾಗುತ್ತಾಳೆ.

ಪೊಲೀಸ್‌ ಕೇಸ್‌ ವಿಚಾರ ಜವರೇಗೌಡನಿಗೆ ತಿಳಿಯುವುದಾ? ಭಾವನಾ ಮುಂದಿನ ನಡೆ ಏನು? ಸೋಮವಾರದ ಎಪಿಸೋಡ್‌ಗಳಲ್ಲಿ ತಿಳಿಯುತ್ತದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

 

Whats_app_banner