ಮತ್ತೆ ಕೋಮಾದಲ್ಲಿ ಎಚ್ಚರಗೊಂಡು ಜಯಂತಾ ಜಯಂತಾ ಎಂದು ಕರೆಯುತ್ತಿದ್ದಾರೆ ಅಜ್ಜಿ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೆ ಕೋಮಾದಲ್ಲಿ ಎಚ್ಚರಗೊಂಡು ಜಯಂತಾ ಜಯಂತಾ ಎಂದು ಕರೆಯುತ್ತಿದ್ದಾರೆ ಅಜ್ಜಿ: ಲಕ್ಷ್ಮೀ ನಿವಾಸ ಧಾರಾವಾಹಿ

ಮತ್ತೆ ಕೋಮಾದಲ್ಲಿ ಎಚ್ಚರಗೊಂಡು ಜಯಂತಾ ಜಯಂತಾ ಎಂದು ಕರೆಯುತ್ತಿದ್ದಾರೆ ಅಜ್ಜಿ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 17ರ ಸಂಚಿಕೆಯಲ್ಲಿ ಜಾಹ್ನವಿ ಜಯಂತ್‌ನನ್ನ ಕರೆದು, ಅಜ್ಜಿ ಹುಷಾರಾಗಿದ್ದಾರೆ ಅಲ್ವಾ, ಆ ಖುಷಿಗೆ ನಾವು ಸಿಹಿ ತಿನ್ನೋಣ ಎಂದು ಬಲವಂತ ಮಾಡುತ್ತಾಳೆ. ಜಾಹ್ನವಿ ಮಾತಿಗೆ ಜಯಂತ್ ಒಲ್ಲದ ಮನಸ್ಸಿನಿಂದ ತಿಂಡಿ ತಿನ್ನಲು ಬರುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಮಾರ್ಚ್ 17ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಮಾರ್ಚ್ 17ರ ಸಂಚಿಕೆ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 17ರ ಸಂಚಿಕೆಯಲ್ಲಿ ಹರೀಶನ ಜೊತೆ ವೀಣಾ ಮಾತನಾಡುತ್ತಾ ಕುಳಿತಿದ್ದಾರೆ. ಅಜ್ಜಿಯ ಬಗೆಗೂ ಮಾತನಾಡುತ್ತಾ ವೀಣಾ, ನೀನು ಅಂದ್ರೆ ಅಜ್ಜಿಗೆ ಅಷ್ಟೊಂದು ಇಷ್ಟ ಆಗಿದ್ರೆ, ಅವರು ಬೇಗ ಹುಷಾರಾಗಲಿ ಎಂದು ನೀನು ಯಾಕೆ ಮುಡಿ ಕೊಡಬಾರದು ಎಂದು ಕೇಳುತ್ತಾಳೆ. ಆಗ ಹರೀಶ, ಅದು ಹೇಗೆ ಸಾಧ್ಯ, ಅಜ್ಜಿ ಬಗ್ಗೆ ಪ್ರೀತಿಯಿದೆ, ಅದರ ಬದಲು ಬೇರೆ ಏನಾದರೂ ಹೇಳಿ ಅತ್ತಿಗೆ ಎನ್ನುತ್ತಾಳೆ. ಆಗ ಹರೀಶನ ಬಳಿ, ವೀಣಾ ನೀನು ಹೋಗಿ ಅಜ್ಜಿಯನ್ನು ಸ್ವಲ್ಪ ನೋಡಿಕೋ, ಅಷ್ಟು ಸಾಕು ಎನ್ನುತ್ತಾಳೆ. ಅದರಂತೆ ಹರೀಶ್ ಅಜ್ಜಿಯನ್ನು ನೋಡಿಕೊಳ್ಳಲು ಹೋಗುತ್ತಾನೆ.

ಭಾವನಾ ಮತ್ತು ಸಿದ್ದೇಗೌಡ್ರು ಮನೆಯಲ್ಲಿ ಮಾತನಾಡುತ್ತಾ, ಕೇಸ್ ಬಗೆಗೂ ಮಾತನಾಡುತ್ತಾರೆ, ನೀವು ಯಾಕೆ ಚಿಂತೆಯಲ್ಲಿದ್ದೀರಿ ಎಂದು ಭಾವನಾ ಕೇಳುತ್ತಾಳೆ. ಆಗ ಸಿದ್ದೇಗೌಡ್ರು, ಹಾಗೇನಿಲ್ಲ, ನಾನು ಕೇಸ್ ಬಗ್ಗೆ ಚಿಂತೆ ಮಾಡುತ್ತಿದ್ದೆ, ಅವನು ಯಾವಾಗ ಸಿಕ್ಕಿಬೀಳುತ್ತಾನೆ ಎಂದು ಕೇಳುತ್ತಾನೆ. ನಂತರ ಪೊಲೀಸರಲ್ಲೂ ಈ ಬಗ್ಗೆ ವಿಚಾರಿಸಿದ್ದೇನೆ ಎಂದು ಹೇಳುತ್ತಾನೆ. ಅದರಂತೆ ಭಾವನಾ ಕೂಡ, ಜವರೇಗೌಡ್ರು ಕೂಡ ಎಸ್‌ಪಿಯವರನ್ನು ಕರೆದು ಕೇಸ್ ಬಗ್ಗೆ ಸೂಚನೆ ಕೊಟ್ಟಿದ್ದಾರೆ ಎಂದು ಹೇಳುತ್ತಾಳೆ.

ಇತ್ತ ಮನೆಯಲ್ಲಿ ಜಾಹ್ನವಿ ಸ್ವೀಟ್ ತಯಾರಿಸಿದ್ದಾಳೆ, ಜಾಹ್ನವಿ ಜಯಂತ್‌ನನ್ನ ಕರೆದು, ಬನ್ನಿ ರೀ, ನಾವು ಸ್ವೀಟ್ ತಿನ್ನೋಣ, ಅಜ್ಜಿ ಹುಷಾರಾಗಿದ್ದಾರೆ ಅಲ್ವಾ, ಆ ಖುಷಿಗೆ ನಾವು ಸಿಹಿ ತಿನ್ನೋಣ ಎಂದು ಬಲವಂತ ಮಾಡುತ್ತಾಳೆ. ಜಾಹ್ನವಿ ಮಾತಿಗೆ ಜಯಂತ್ ಒಲ್ಲದ ಮನಸ್ಸಿನಿಂದ ತಿಂಡಿ ತಿನ್ನಲು ಬರುತ್ತಾನೆ. ಅಷ್ಟರಲ್ಲಿ ಜಾಹ್ನವಿ, ನಾನು ಈಗಲೇ ಅಕ್ಕನಿಗೆ ಕರೆ ಮಾಡಿ ಎಲ್ಲ ವಿಷಯ ಹೇಳುತ್ತೇನೆ ಎನ್ನುತ್ತಾಳೆ, ಆಗ ಜಯಂತ್ ಬೆಚ್ಚಿ ಬೀಳುತ್ತಾನೆ. ಅದನ್ನು ಕಂಡ ಜಾಹ್ನವಿ, ನಾನು ನಿನ್ನ ಬಗ್ಗೆ ಹೇಳುತ್ತಿಲ್ಲ, ಈಗ ಅದರಿಂದ ಪ್ರಯೋಜನವಿಲ್ಲ, ಅದರ ಬದಲು ಅಜ್ಜಿಯ ಬಗ್ಗೆ ನಾವು ಮಾತನಾಡುತ್ತೇವೆ ಎಂದು ಹೇಳುತ್ತಾಳೆ.

ಇತ್ತ ಹರೀಶ ಅಜ್ಜಿಯ ಜೊತೆ ಮಾತನಾಡುತ್ತಾ ಕುಳಿತಿದ್ದ ಸಂದರ್ಭದಲ್ಲಿ, ಅಜ್ಜಿ ಜಯಂತ್ ಜಯಂತ್ ಎಂದು ಕನವರಿಸುತ್ತಾ ಮಲಗಿದ್ದಾರೆ. ಆದರೆ ಅಜ್ಜಿ ಜಯಂತ್ ಎನ್ನುವುದನ್ನು ಕೇಳಿಸಿಕೊಂಡ ಹರೀಶ, ಅದನ್ನು ಟ್ರಂಕ್ ಎಂದುಕೊಳ್ಳುತ್ತಾನೆ. ಅದನ್ನು ಅವನು ಬಂದು ಅಪ್ಪ ಮತ್ತು ವೀಣಾ ಬಳಿ ಹೇಳುತ್ತಾನೆ.

ಮತ್ತೊಂದೆಡೆ ರವಿಶಂಕರ್ ಮನೆಗೆ ಬಂದು ಜವರೇಗೌಡ್ರ ಜೊತೆ ಮಾತನಾಡುತ್ತಿದ್ದಾನೆ. ಅದನ್ನು ಕೇಳಿಸಿಕೊಂಡ ಭಾವನಾ ಮತ್ತು ಸಿದ್ದೇಗೌಡ ಅಲ್ಲಿಗೆ ಬಂದು, ರವಿಶಂಕರ್‌ಗೆ ನೀವು ಸಹಾಯ ಮಾಡುವ ಮೊದಲು ಒಮ್ಮೆ ಯೋಚನೆ ಮಾಡಿ, ಅವರ ಉದ್ದೇಶ ಒಳ್ಳೆಯದಿಲ್ಲ ಎಂದು ಹೇಳುತ್ತಾರೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಮಾರ್ಚ್ 17ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner