ಅಕ್ಕ, ಮನೆ ಬಿಟ್ಟು ಹೋದ ವಿಚಾರ ಕೇಳಿ ಬೇಸರಗೊಂಡ ಹರೀಶನಿಗೆ ಮತ್ತೆ ಅವಮಾನ ಮಾಡಿದ ತಾಯವ್ವ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 21ರ ಎಪಿಸೋಡ್‌ನಲ್ಲಿ ತಾಯವ್ವನನ್ನು ಹೊಸ ಆಫೀಸ್ ಉದ್ಘಾಟನೆಗೆ ಆಹ್ವಾನಿಸಲು ಸಿಂಚನಾ, ತವರು ಮನೆಗೆ ಬರುತ್ತಾಳೆ. ಮನೆಗೆ ಬಂದ ಅಳಿಯನಿಗೆ ಗೌರವವನ್ನೂ ಕೊಡದೆ ತಾಯವ್ವ, ಹರೀಶನಿಗೆ ಅವಮಾನ ಮಾಡುತ್ತಾಳೆ.

Lakshmi Nivasa Serial: ಪೊಲೀಸ್ ಸ್ಟೇಷನ್ ಮುಂದೆ ಭಾವನಾ ಧರಣಿ ಕೂತ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದನ್ನು ನೋಡಿ ತಾಯವ್ವ ಕೋಪಗೊಳ್ಳುತ್ತಾಳೆ. ಸಿದ್ದು ಹಾಗೂ ಭಾವನಾ ಮನೆಗೆ ಬಂದಾಗ ಭಾವನಾಗೆ ಬೈಯ್ಯುವ ತಾಯವ್ವ, ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡುತ್ತಾಳೆ. ಅವರಿಗೆ ಈ ಮನೆಯಲ್ಲಿ ಜಾಗ ಇಲ್ಲವೆಂದರೆ ನಾನೂ ಇಲ್ಲಿ ಇರುವುದಿಲ್ಲ ಎಂದು ಸಿದ್ದು ಕೂಡಾ ಭಾವನಾ ಜೊತೆ ಹೊರಗೆ ಹೋಗುತ್ತಾನೆ.
ಸ್ನೇಹಿತನ ಮನೆಯಲ್ಲಿ ಉಳಿದುಕೊಂಡ ಸಿದ್ದೇಗೌಡ-ಭಾವನಾ
ಎಲ್ಲಿ ಹೋಗುವುದು ಎಂದು ತಿಳಿಯದೆ ಸಿದ್ದು ತನ್ನ ಸ್ನೇಹಿತರಿಗೆ ಕರೆ ಮಾಡುತ್ತಾನೆ. ಇಬ್ಬರೂ ಸಿದ್ದುವನ್ನು ಭೇಟಿ ಮಾಡುತ್ತಾರೆ. ಅದರಲ್ಲಿ ಒಬ್ಬಾತ, ಸಿದ್ದು ಹಾಗೂ ಭಾವನಾ ಇಬ್ಬರನ್ನೂ ತನ್ನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಹೋಗುತ್ತಿದ್ದಂತೆ ಭಾವನಾಗೆ ಊಟ ತರಲು ಸಿದ್ದು ಹೊರಗೆ ಹೋಗುತ್ತಾನೆ. ಇತ್ತ ಭಾವನಾ, ರೂಮ್ ಕ್ಲೀನ್ ಮಾಡುತ್ತಾಳೆ. ಸಿದ್ದು ಊಟ ತಂದ ನಂತರ ನಾಲ್ವರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಮನೆಯವರು ನೆನಪಾದರು, ಅವರು ಒಂದು ದಿನವೂ ನಮ್ಮಿಬ್ಬರನ್ನು ಅರ್ಥ ಮಾಡಿಕೊಳ್ಳಲಿಲ್ಲ, ಮಾಡಿಕೊಂಡಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವಿಬ್ಬರೂ ಒಟ್ಟಿಗೆ ಕುಳಿತು ಒಂದು ದಿನವೂ ಊಟ ಮಾಡಿದವರಲ್ಲ ಎಂದು ಸಿದ್ದು ಬೇಸರಗೊಳ್ಳುತ್ತಾನೆ. ಊಟ ಮುಗಿದ ಬಳಿಕ ಸಿದ್ದು ಸ್ನೇಹಿತ ಹೊರಗಡೆ ಮಲಗಲು ಹೋಗುತ್ತಾನೆ. ಮಂಚದ ಮೇಲೆ ಭಾವನಾಗೆ ಮಲಗಲು ಹೇಳಿ ಸಿದ್ದು, ಕೆಳಗೆ ಮಲಗುತ್ತಾನೆ.
ಸಿಂಚನಾ ಮನೆಯಲ್ಲಿ ಹರೀಶನಿಗೆ ಅವಮಾನ
ಮತ್ತೊಂದೆಡೆ ಹರೀಶ ಹಾಗೂ ಸಿಂಚನಾ, ಹೊಸ ಆಫೀಸ್ ಉದ್ಘಾಟನೆಗೆ ಬರುವಂತೆ ಅಜ್ಜಿಯನ್ನು ಆಹ್ವಾನಿಸಲು ಹೋಗುತ್ತಾರೆ. ಒಂದೆಡೆ ಭಾವನಾಳನ್ನು ಅವಮಾನ ಮಾಡುವ ಸಿದ್ದೇಗೌಡ ಕುಟುಂಬದವರು, ಹರೀಶನನ್ನು ಕೂಡಾ ಅಳಿಯ ಎಂದು ನೋಡದೆ ಅವಮಾನ ಮಾಡುತ್ತಾರೆ. ಭಾವನಾ ಹಾಗೂ ಸಿದ್ದು ಇಬ್ಬರೂ ತಾಯವ್ವಳಿಂದ ಮನೆ ಬಿಟ್ಟು ಹೋದ ವಿಚಾರ ಕೇಳಿ ಹರೀಶ ಬೇಸರಗೊಳ್ಳುತ್ತಾನೆ. ಬಿಟ್ಟು ಹೋಗಿ ಹೊಸ ಕೆಲಸ ಶುರು ಮಾಡಿದ್ದೀರಂತೆ ಸಾಹೇಬ್ರು, ಅಳಿಯ ಅನ್ನೋ ಕಾರಣಕ್ಕೆ ಒಮ್ಮೆ ಮೇಲೆತ್ತಬಹುದು, ಆದರೆ ಪದೇ ಪದೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ತಾಯವ್ವ ಎಲ್ಲರೆದುರು ಹರೀಶನನ್ನು ಅವಮಾನ ಮಾಡುತ್ತಾಳೆ. ಹರೀಶ ಬೇಸರದಿಂದ ಹೊರ ಹೋಗುತ್ತಾನೆ.
ಹರೀಶನ ವಿಚಾರದಲ್ಲಿ ಮೊಮ್ಮಗಳ ಕಿವಿ ಚುಚ್ಚಿದ ತಾಯವ್ವ
ನಿನ್ನ ಗಂಡ ನಿನ್ನ ಸುಪರ್ದಿಯಲ್ಲಿರಲಿ, ನೀನು ಹೇಳಿದಂತೆ ಅವನು ಕೇಳಬೇಕು, ಹಾಗೆ ಇಟ್ಟುಕೋ ಎಂದು ತಾಯವ್ವ, ಮೊಮ್ಮಗಳಿಗೆ ಬುದ್ಧಿ ಹೇಳುತ್ತಾಳೆ. ಸ್ವಲ್ಪ ದಿನ ನಾವು ಇಲ್ಲೇ ಇರುತ್ತೇವೆ, ನೀನೇ ಅವನನ್ನು ಸರಿ ದಾರಿಗೆ ತರಬೇಕು ಅಜ್ಜಿ ಎಂದು ಸಿಂಚನಾ ಅಜ್ಜಿ ಬಳಿ ಮನವಿ ಮಾಡುತ್ತಾಳೆ. ಸಿದ್ದು ಹಾಗೂ ಭಾವನಾ ಹೊರ ಹೋದರು ಎಂದು ಖುಷಿಯಾಗಿದ್ದ ನೀಲು ಆ ಜಾಗಕ್ಕೆ ಹರೀಶ್, ಸಿಂಚನಾ ಬರುತ್ತಿದ್ದಾರೆ ಎಂದು ತಿಳಿದು ಕೋಪಗೊಳ್ಳುತ್ತಾಳೆ. ಅವರಂತೆ ನಿಮ್ಮನ್ನೂ ಮನೆಯಿಂದ ಓಡಿಸುತ್ತೇನೆ ಎಂದು ನಿರ್ಧರಿಸುತ್ತಾಳೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ