ಭಾವನಾ ಜೊತೆ ವಿದೇಶಕ್ಕೆ ಹನಿಮೂನ್ ಹೊರಟ ಸಿದ್ದೇಗೌಡ್ರು; ಜವರೇಗೌಡ್ರ ಮನೆಯವರ ಕೊಂಕು ನುಡಿ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾವನಾ ಜೊತೆ ವಿದೇಶಕ್ಕೆ ಹನಿಮೂನ್ ಹೊರಟ ಸಿದ್ದೇಗೌಡ್ರು; ಜವರೇಗೌಡ್ರ ಮನೆಯವರ ಕೊಂಕು ನುಡಿ: ಲಕ್ಷ್ಮೀ ನಿವಾಸ ಧಾರಾವಾಹಿ

ಭಾವನಾ ಜೊತೆ ವಿದೇಶಕ್ಕೆ ಹನಿಮೂನ್ ಹೊರಟ ಸಿದ್ದೇಗೌಡ್ರು; ಜವರೇಗೌಡ್ರ ಮನೆಯವರ ಕೊಂಕು ನುಡಿ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಮಾರ್ಚ್ 21ರ ಸಂಚಿಕೆಯಲ್ಲಿ ಭಾವನಾ ಮತ್ತು ಸಿದ್ದೇಗೌಡ್ರು ವಿದೇಶಕ್ಕೆ ಹನಿಮೂನ್ ಹೊರಡುವ ಸಿದ್ಧತೆಯಲ್ಲಿದ್ದಾರೆ. ಮರಿಗೌಡ ಮತ್ತು ಜವರೇಗೌಡ್ರು ಬಿಟ್ಟರೆ ಮನೆಯಲ್ಲಿ ಉಳಿದವರಿಗೆ ಇವರಿಬ್ಬರೂ ಪ್ರವಾಸಕ್ಕೆ ಹೋಗುವುದು ಇಷ್ಟವಿಲ್ಲ.

ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಮಾರ್ಚ್ 21ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಮಾರ್ಚ್ 21ರ ಸಂಚಿಕೆ (ZEE Kannada facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಮಾರ್ಚ್ 21ರ ಸಂಚಿಕೆಯಲ್ಲಿ ಭಾವನಾ ಮತ್ತು ಸಿದ್ದೇಗೌಡ, ವಿದೇಶಕ್ಕೆ ಹನಿಮೂನ್ ಹೊರಡುವ ಸಿದ್ಧತೆಯಲ್ಲಿದ್ದಾರೆ. ಅವರ ಪ್ರಯಾಣದ ಕುರಿತು ಮರಿಗೌಡ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾನೆ, ಜವರೇಗೌಡ್ರು ಕೂಡ ಖುದ್ದು ಇವರ ಪ್ರಯಾಣದ ಬಗ್ಗೆ ಮುತುವರ್ಜಿ ವಹಿಸಿ ಅವರಿಬ್ಬರನ್ನೂ ಕಳುಹಿಸಿಕೊಡಲು ಮುಂದಾಗಿದ್ದಾರೆ. ಪ್ರಯಾಣದ ವ್ಯವಸ್ಥೆ ಬಗ್ಗೆ ಮಾತನಾಡುತ್ತಿರುವಾಗಲೇ, ಮರಿಗೌಡನ ಪತ್ನಿ ವಿನು ಬಂದು, ಅವನ ಬಳಿ ಕೊಂಕು ಮಾತನಾಡುತ್ತಾಳೆ. ನಾವು ಮದುವೆಯಾಗಿ ಇಷ್ಟು ವರ್ಷವಾದರೂ, ಒಮ್ಮೆಯೂ ನೀವು ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿಲ್ಲ, ಈಗ ನೋಡಿದರೆ ನೀವು ಅವರನ್ನು ಕಳುಹಿಸುತ್ತಿದ್ದೀರಿ, ನಂದೂ ಒಂದು ಜನ್ಮ ಎಂದು ಹೀಯಾಳಿಸಿ ಹೋಗುತ್ತಾಳೆ.

ಆಗ ಮರಿಗೌಡ, ಅವರಿಬ್ಬರೂ ಹೊಸದಾಗಿ ಮದುವೆಯಾಗಿದ್ದಾರೆ, ಈಗ ಹೋದರೆ ತಪ್ಪೇನು? ನಾವು ಕೂಡ ಹೋಗಬಹುದು, ಆದರೆ ನಮ್ಮದು ಈಗ ಹನಿಮೂನ್ ಹೋಗುವ ವಯಸ್ಸಲ್ಲ ಎಂದು ಹೇಳುತ್ತಾನೆ. ಆದರೆ ವಿನುವಿಗೆ ಸಮಾಧಾನವಾಗುವುದಿಲ್ಲ. ಅವಳು, ನೀವು ಸ್ವಲ್ಪ ನಮ್ಮ ಬಗೆಗೂ ಯೋಚನೆ ಮಾಡಬೇಕಿತ್ತು. ಟೂರ್ ಬುಕ್ ಮಾಡುತ್ತಿದ್ದೀರಿ ಎಂದಾಗ, ನಾವು ಹೋಗುತ್ತಿದ್ದೇವೆ ಎಂದುಕೊಂಡಿದ್ದೆ, ಆದರೆ ಈಗ ಅವರು ಹೋಗುತ್ತಿದ್ದಾರೆ. ಹೀಗಾದರೆ ಹೇಗೆ ಎಂದು ಅವಳು ಮರಿಗೌಡನ ಬಳಿ ಕ್ಯಾತೆ ತೆಗೆಯುತ್ತಾಳೆ.

ಅಷ್ಟರಲ್ಲಿ ಜವರೇಗೌಡ್ರ ಬಳಿ, ಅವರ ಪತ್ನಿ ಕೂಡ ಸಿದ್ದೇಗೌಡ ಮತ್ತು ಭಾವನಾ ಪ್ರವಾಸ ಹೋಗುವ ಬಗ್ಗೆ ಪ್ರಸ್ತಾಪಿಸಿ, ಕಿರಿಕಿರಿ ಮಾತನಾಡಿದ್ದಾಳೆ. ಮನೆಯಲ್ಲಿ ನನ್ನ ಮಾತಿಗೆ ಬೆಲೆಯೇ ಇಲ್ಲ, ಯಾರೂ ಕೇಳುವುದಿಲ್ಲ ನನ್ನನ್ನು ಒಂದು ಮಾತು. ಹಾಗಿರುವಾಗ ನಾನು ಯಾಕೆ ಬೇಕು ಇಲ್ಲಿ ಎಂದು ಬೇಸರಿಸಿಕೊಳ್ಳುತ್ತಾಳೆ. ಅದಕ್ಕೆ ಜವರೇಗೌಡ್ರು ತಲೆ ಚಚ್ಚಿಕೊಳ್ಳುತ್ತಾರೆ. ಭಾವನಾ ಮತ್ತು ಸಿದ್ದೇಗೌಡ್ರು ಹೊರಟು ಬಂದಾಗಲೂ, ಮನೆಯವರು ಅವರಿಬ್ಬರ ಜೊತೆ ಚೆನ್ನಾಗಿ ಮಾತನಾಡಲಿಲ್ಲ. ನಂತರ ಇಬ್ಬರೂ, ಭಾವನಾ ತವರು ಮನೆಗೆ ಹೋಗಿ, ಅವರ ಆಶೀರ್ವಾದ ಪಡೆದುಕೊಂಡು ವಿದೇಶ ಪ್ರಯಾಣ ಮುಂದುವರಿಸುತ್ತಾರೆ.

ಜಾಹ್ನವಿಗೆ ಮತ್ತೆ ಮಾತ್ರೆ ತಿನ್ನಿಸಿದ ಜಯಂತ್

ಇತ್ತ ಜಯಂತ್, ಜಾಹ್ನವಿಯನ್ನು ಹೇಗಾದರೂ ಮಾಡಿ ಹೊರಗಡೆ ಕರೆದುಕೊಂಡು ಹೋಗಬೇಕು ಎಂಬ ಯೋಚನೆಯಲ್ಲಿದ್ದಾನೆ. ಅದಕ್ಕಾಗಿ, ಅವಳಿಗೆ ಹಾಲಿನಲ್ಲಿ ಮಾತ್ರೆ ಬೆರೆಸಿ ಕೊಟ್ಟಿದ್ದಾನೆ. ಅದನ್ನು ಕುಡಿದ ಜಾಹ್ನವಿ, ನಿದ್ದೆಗೆ ಜಾರಿದ್ದಾಳೆ. ನಂತರ ಅವಳನ್ನು ಕರೆದುಕೊಂಡು ಜಯಂತ್, ರೆಸಾರ್ಟ್‌ಗೆ ಬಂದಿದ್ದಾನೆ. ಆದರೆ ಇದ್ಯಾವುದೂ ಜಾಹ್ನವಿ ಗಮನಕ್ಕೆ ಬಂದಿಲ್ಲ.

ನಿದ್ದೆಯಿಂದ ಎದ್ದ ಜಾಹ್ನವಿ, ತಾನು ಮನೆಯಲ್ಲಿ ಇಲ್ಲ ಎನ್ನುವುದನ್ನು ಅರಿತುಕೊಳ್ಳುತ್ತಾಳೆ, ನಂತರ ಎದ್ದು ಕೂರುವಷ್ಟರಲ್ಲಿ ಜಯಂತ್ ಅಲ್ಲಿಗೆ ಬರುತ್ತಾನೆ. ನಿಮ್ಮನ್ನು ನಾನೇ ಇಲ್ಲಿಗೆ ಕರೆದುಕೊಂಡು ಬಂದೆ, ನೀವು ಮೊದಲಿನಂತೆ ಹುಷಾರಾಗುವುದು ಮುಖ್ಯ ಎಂದು ಹೇಳುತ್ತಾನೆ, ಆಗ ಜಾಹ್ನವಿ, ನನ್ನ ಅನುಮತಿಯಿಲ್ಲದೇ, ಹೇಗೆ ನೀವು ಇಲ್ಲಿ ಕರೆದುಕೊಂಡು ಬಂದಿರಿ ಎಂದು ಕೋಪಗೊಳ್ಳುತ್ತಾಳೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಮಾರ್ಚ್ 21ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner