ಮನೆಗೆ ಬರ್ತಿದ್ದಂತೆ ಯಾವಾಗ ವಾಪಸ್ ಹೋಗ್ತೀರಿ ಎಂದು ವೆಂಕಿ-ಚೆಲ್ವಿಯನ್ನು ಪ್ರಶ್ನಿಸಿದ ಜಯಂತ್, ಬೇಸರಗೊಂಡ ಜಾನು: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 24ರ ಎಪಿಸೋಡ್‌ನಲ್ಲಿ ಅಜ್ಜಿಯನ್ನು ತಮ್ಮ ಜೊತೆ ಕಳಿಸಿಕೊಡುವಂತೆ ವೆಂಕಿ, ಜಯಂತ್ ಬಳಿ ಕೇಳುತ್ತಾನೆ. ನೀವು ಸಂಪಾದನೆ ಮಾಡುವುದು ಅಜ್ಜಿ ಇಂಜೆಕ್ಷನ್‌ಗೆ ಸಾಕಾಗುವುದಿಲ್ಲ ಎಂದು ಜಯಂತ್ ರೇಗುತ್ತಾನೆ, ಗಂಡನ ವರ್ತನೆಗೆ ಜಾನು ಬೇಸರ ಮಾಡಿಕೊಳ್ಳುತ್ತಾಳೆ.

Lakshmi Nivasa Serial: ಅಜ್ಜಿ ಕೋಮಾದಲ್ಲಿದ್ದಾರೆ ಎಂದು ತಿಳಿದಾಗಿನಿಂದ ವೆಂಕಿ ಬೇಸರಗೊಳ್ಳುತ್ತಾನೆ. ಅಜ್ಜಿಯನ್ನು ನೋಡಲು ಕಾತರದಲ್ಲಿರುತ್ತಾನೆ, ಕೆಲಸದಿಂದ ಬಿಡುವು ಪಡೆದು ಚೆಲ್ವಿ ಜೊತೆ ಅಜ್ಜಿಯನ್ನು ನೋಡಲು ಹೋಗುತ್ತಾನೆ. ಏನೂ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಮನೆಗೆ ಬಂದ ವೆಂಕಿ ಹಾಗೂ ಚೆಲ್ವಿಯನ್ನು ಕಂಡು ಜಯಂತ್ ಗಾಬರಿಯಾಗುತ್ತಾನೆ. ಏನು ಇದ್ದಕ್ಕಿದ್ದಂತೆ ಬಂದಿದ್ದೀರಿ ಎನ್ನುತ್ತಾನೆ. ಅಜ್ಜಿ ನೋಡಲು ಬಂದಿದ್ದು ಎಂದು ಚೆಲ್ವಿ ಹೇಳುತ್ತಾಳೆ. ಒಲ್ಲದ ಮನಸ್ಸಿನಂದಲೇ ನಗುತ್ತಾ ಒಳಗೆ ಬನ್ನಿ ಎಂದು ಜಯಂತ್ , ಅವರಿಬ್ಬರನ್ನೂ ಬರಮಾಡಿಕೊಳ್ಳುತ್ತಾನೆ.
ಮೈ ಮರೆತು ವೆಂಕಿ ಹೆಸರನ್ನು ಅರ್ಜುನ್ ಎಂದ ಜಯಂತ್
ಅಣ್ಣ ಅತ್ತಿಗೆಯನ್ನು ಕಂಡು ಜಾನು ಖುಷಿಯಾಗುತ್ತಾಳೆ. ಮನೆಯಿಂದ ತಂಗಿಗಾಗಿ ತಂದಿದ್ದ ಎಲ್ಲವನ್ನೂ ವೆಂಕಿ ಹಾಗೂ ಚೆಲ್ವಿ, ಜಾನುಗೆ ಕೊಡುತ್ತಾರೆ. ನಂತರ ಅಜ್ಜಿ ನೋಡಲು ರೂಮ್‌ಗೆ ಹೋಗುತ್ತಾರೆ. ಅಜ್ಜಿಯನ್ನು ನೋಡುತ್ತಿದ್ದಂತೆ ವೆಂಕಿ ಅಳಲು ಶುರು ಮಾಡುತ್ತಾನೆ. ಜಾನು ಕೂಡಾ ಅಳುತ್ತಾಳೆ. ಪ್ರೀತಿಯ ಹೆಂಡತಿ ಅಳುವುದನ್ನು ನೋಡಿ ಜಯಂತ್ ಸಿಟ್ಟಾಗುತ್ತಾನೆ, ಕೋಪದಿಂದ ಅರ್ಜುನ್ ಎಂದು ಅರಚುತ್ತಾನೆ, ಆದರೆ ಎಚ್ಚರಕೊಂಡು ಮತ್ತೆ ವೆಂಕಿ ಎಂದು ಕರೆಯುತ್ತಾನೆ. ವೆಂಕಿ ಎಂದು ಕರೆಯುವ ಮುನ್ನ ನೀವು ಬೇರೆ ಏನೂ ಹೇಳಿದಿರಲ್ಲ ಏನದು ಎಂದು ಜಾನು ಕೇಳುತ್ತಾಳೆ. ಏನೂ ಇಲ್ಲ, ನಾನು ವೆಂಕಿ ಅಂತಾನೆ ಕರೆದದ್ದು, ನೀವು ಈ ಸಮಯದಲ್ಲಿ ನೀವು ಅಳಬಾರದು, ಇಲ್ಲಿಂದ ಹೊರಗೆ ಬನ್ನಿ ಎಂದು ಎಲ್ಲರನ್ನೂ ಹೊರಗೆ ಕರೆದುಕೊಂಡು ಹೋಗುತ್ತಾನೆ.
ಗಂಡನ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಜಾನು
ವೆಂಕಿ-ಚೆಲ್ವಿ ಮನೆಗೆ ಬಂದು ಸ್ವಲ್ಪ ಹೊತ್ತಾಗಿಲ್ಲ, ಆಗಲೇ ನೀವು ಯಾವಾಗ ಹೊರಡುತ್ತಿದ್ದೀರಿ ಎಂದು ಕೇಳುತ್ತಾನೆ. ಅದನ್ನು ಕೇಳಿ ಅವರಿಬ್ಬರಿಗೂ ಮುಜುಗರ ಎನಿಸುತ್ತದೆ, ಅಜ್ಜಿಯನ್ನು ತಮ್ಮ ಜೊತೆ ಕಳಿಸುವಂತೆ ವೆಂಕಿ ಮನವಿ ಮಾಡುತ್ತಾನೆ, ಕೋಮಾದಲ್ಲಿರುವ ರೋಗಿಗಳನ್ನು ನೋಡಿಕೊಳ್ಳುವುದಕ್ಕೂ ಸಾಮಾನ್ಯ ರೋಗಿಗಳನ್ನು ನೋಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ, ನೀವು ದಿನಕ್ಕೆ ಸಂಪಾದನೆ ಮಾಡುವ ಹಣ ಅಜ್ಜಿಯ ಒಂದು ಹೊತ್ತು ಇಂಜೆಕ್ಷನ್‌ಗೆ ಸಾಕಾಗುವುದಿಲ್ಲ ಎಂದು ರೇಗುತ್ತಾನೆ. ಗಂಡನ ವರ್ತನೆಯಿಂದ ಜಾಹ್ನವಿ ಬೇಸರ ಮಾಡಿಕೊಳ್ಳುತ್ತಾರೆ. ನನ್ನ ಸ್ವಂತ ಅಣ್ಣಂದಿರೇ ಒಂದು ದಿನವೂ ಅಜ್ಜಿ ಬಗ್ಗೆ ವಿಚಾರಿಸಿಲ್ಲ, ಅಂತದರಲ್ಲಿ ವೆಂಕಿ,ಅವರನ್ನು ನೋಡಲು ಇಲ್ಲಿವರೆಗೂ ಬಂದಿದ್ದಾನೆ ಎಂದರೆ ಅವನಿಗೆ ಅಜ್ಜಿ ಮೇಲೆ ಎಷ್ಟು ಪ್ರೀತಿ ಇದೆ ಎಂದು ನೀವೇ ಯೋಚನೆ ಮಾಡಿ ಎನ್ನುತ್ತಾಳೆ.
ಇದು ಪ್ರೀತಿ , ಗೌರವದ ವಿಚಾರವಲ್ಲ.ನಾನು ಯಾವ ಉದ್ದೇಶದಿಂದ ಹೇಳಿದ್ದು ಎಂದು ನೀವಾದರೂ ಅರ್ಥ ಮಾಡಿಕೊಳ್ಳುತ್ತೀರ ಎಂದುಕೊಂಡೆ, ಆದರೆ ನೀವೂ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಜಯಂತ್ ಬೇಸರಗೊಂಡು ಅಲ್ಲಿಂದ ಹೋಗುತ್ತಾನೆ. ಅಣ್ಣ ಹಾಗೂ ಅತ್ತಿಗೆಗೆ ಜಾನು ಸಮಾಧಾನ ಮಾಡುತ್ತಾಳೆ.
ಮಗ ಸೊಸೆಯನ್ನು ಮನೆಗೆ ಕರೆತರಲು ಮುಂದಾದ ಜವರೇಗೌಡ
ಮತ್ತೊಂದೆಡೆ ಭಾವನಾ-ಸಿದ್ದೇಗೌಡ ಮನೆಬಿಟ್ಟು ಹೋಗಿರುವ ವಿಚಾರ ಜವರೇಗೌಡನಿಗೆ ತಿಳಿಯುತ್ತದೆ. ಸಿದ್ದು ಕೂಲಿ ಮಾಡುತ್ತಿರುವ ವಿಚಾರ ಕೂಡಾ ತಿಳಿಯುತ್ತದೆ, ಮನೆಯವರನ್ನು ಒಪ್ಪಿಸಿ ಮತ್ತೆ ಭಾವನಾ, ಸಿದ್ದುವನ್ನು ಮನೆಗೆ ವಾಪಸ್ ಕರೆತರಲು ಜವರೇಗೌಡ ನಿರ್ಧರಿಸುತ್ತಾನೆ. ಆದರೆ ಅದಕ್ಕೆ ರೇಣುಕಾ, ತಾಯವ್ವ ಒಪ್ಪುವುದಿಲ್ಲ. ತಮ್ಮ ಮನೆಗೆ ಬರುವಂತೆ ಮತ್ತೊಮ್ಮೆ ಅಪ್ಪ ಕರೆದರೂ ಭಾವನಾ, ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ.
ತಾಯಿ ಮಾತನ್ನೂ ಧಿಕ್ಕರಿಸಿ ಜವರೇಗೌಡ , ಮಗ ಸೊಸೆಯನ್ನು ಮನೆಗೆ ವಾಪಸ್ ಕರೆ ತರುತ್ತಾನಾ. ಮಾವನ ಮಾತಿಗೆ ಒಪ್ಪಿ ಭಾವನಾ ಮನೆಗೆ ವಾಪಸ್ ಬರುತ್ತಾಳಾ? ವೆಂಕಿ-ಚೆಲ್ವಿ ಜೊತೆಗೆ ಜಯಂತ್ ಅಜ್ಜಿಯನ್ನು ಕಳಿಸಿಕೊಡುತ್ತಾನಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ