ಮಗ-ಸೊಸೆಯನ್ನು ಮನೆಗೆ ಕರೆತಂದ ಜವರೇಗೌಡ, ಆಕ್ಸಿಡೆಂಟ್‌ ಮಾಡಿದ್ದು ನಾನೇ ಎಂದು ತಿಳಿದು ಪಶ್ಚಾತಾಪ ಪಟ್ಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಗ-ಸೊಸೆಯನ್ನು ಮನೆಗೆ ಕರೆತಂದ ಜವರೇಗೌಡ, ಆಕ್ಸಿಡೆಂಟ್‌ ಮಾಡಿದ್ದು ನಾನೇ ಎಂದು ತಿಳಿದು ಪಶ್ಚಾತಾಪ ಪಟ್ಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ

ಮಗ-ಸೊಸೆಯನ್ನು ಮನೆಗೆ ಕರೆತಂದ ಜವರೇಗೌಡ, ಆಕ್ಸಿಡೆಂಟ್‌ ಮಾಡಿದ್ದು ನಾನೇ ಎಂದು ತಿಳಿದು ಪಶ್ಚಾತಾಪ ಪಟ್ಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 27ರ ಎಪಿಸೋಡ್‌ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಇಬ್ಬರನ್ನೂ ಜವರೇಗೌಡ ಮತ್ತೆ ಮನೆಗೆ ಕರೆತರುತ್ತಾನೆ. ಶ್ರೀಕಾಂತ್‌ಗೆ ಆಕ್ಸಿಡೆಂಟ್‌ ಮಾಡಿದ್ದು ನಾನೇ ಎಂಬ ವಿಚಾರ ತಿಳಿದು ಸಿದ್ದೇಗೌಡ ಪಶ್ಚಾತಾಪ ವ್ಯಕ್ತಪಡಿಸುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 27ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 27ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ರಾಜಕೀಯದ ಕೆಲಸಕ್ಕೆ ಬೇರೆ ಊರಿಗೆ ಹೋಗಿ ಬಂದ ಜವರೇಗೌಡನಿಗೆ ಮನೆಯಲ್ಲಿ ಮಗ ಸೊಸೆ ಇಲ್ಲದ ವಿಚಾರ ತಿಳಿಯುತ್ತದೆ. ಸಿದ್ದುವನ್ನು ಹುಡುಕುತ್ತಾ ಅವನ ಸ್ನೇಹಿತರ ಬಳಿ ಹೋಗುತ್ತಾನೆ. ಸಿದ್ದು ಮನೆಬಿಟ್ಟು ಬಂದು ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಜವರೇಗೌಡ ಬೇಸರಗೊಳ್ಳುತ್ತಾನೆ. ನಾನು ಎಲೆಕ್ಷನ್‌ನಲ್ಲಿ ಗೆದ್ದದ್ದು, ಮಿನಿಸ್ಟರ್‌ ಆಗಿದ್ದು ಸೊಸೆ ಕಾಲ್ಗುಣದಿಂದಲೇ ಎಂದು ಜವರೇಗೌಡ ನಂಬಿದ್ದಾನೆ. ಇದೇ ಕಾರಣಕ್ಕೆ ಮನೆಯವರ ಬಳಿ ಮಾತನಾಡಿ ಮತ್ತೆ ಮಗ ಸೊಸೆಯನ್ನು ವಾಪಸ್‌ ಕರೆದುಹೋಗಲು ನಿರ್ಧರಿಸುತ್ತಾನೆ.

ಮಗ ಸೊಸೆ ಬಳಿ ಮನವಿ ಮಾಡಿ ಮನೆಗೆ ವಾಪಸ್‌ ಕರೆ ತಂದ ಜವರೇಗೌಡ

ಅಪ್ಪ ಇದ್ದಕ್ಕಿದ್ದಂತೆ ತನ್ನ ಬಳಿ ಬಂದಿದ್ದನ್ನು ನೋಡಿ ಸಿದ್ದು ಶಾಕ್‌ ಆಗುತ್ತಾನೆ, ನಾನು ಕಷ್ಟಪಟ್ಟು ದುಡಿಯುತ್ತಿರುವುದು ನನ್ನ‌ ಮಕ್ಕಳು ಚೆನ್ನಾಗಿರಲಿ ಎಂಬ ಕಾರಣಕ್ಕೆ ನೀನು ನೋಡಿದರೆ ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದೀಯ ಮನೆಗೆ ವಾಪಸ್‌ ಬಾ ಎಂದು ಕರೆಯುತ್ತಾನೆ. ನಾನು ಬಂದರೂ ಮೇಡಂ ಬರುವುದಿಲ್ಲ ಎಂದು ಸಿದ್ದಗೌಡ ಹೇಳುತ್ತಾನೆ. ಜವರೇಗೌಡ ವಿಧಿ ಇಲ್ಲದೆ ಮನೆಗೆ ವಾಪಸ್‌ ಹೋಗುತ್ತಾನೆ. ಮರುದಿನ ಸಿದ್ದು ಕೆಲಸಕ್ಕೆ ಹೊರಡುವ ಸಮಯದಲ್ಲಿ ಜವರೇಗೌಡ ಆ ಮನೆಗೆ ಬರುತ್ತಾನೆ. ಮಾವನನ್ನು ಅಲ್ಲಿ ನೋಡಿ ಭಾವನಾ ಗಾಬರಿಯಾಗುತ್ತಾಳೆ. ಒಳಗೆ ಬರುತ್ತಿದ್ದಂತೆ ಜವರೇಗೌಡ ಸೊಸೆಗೆ ನಮಸ್ಕಾರ ಎಂದು ಹೇಳುತ್ತಾನೆ. ಭಾವನಾ ಕೂಡಾ ಮುಜುಗರದಿಂದ ಮಾವನಿಗೆ ನಮಸ್ಕರಿಸುತ್ತಾಳೆ.

ನೀವು ಈ ಮನೆಯಲ್ಲಿರುವುದು, ಕೂಲಿ ಮಾಡುವುದು ನನಗೆ ಇಷ್ಟ ಇಲ್ಲ. ನಾನು ಎಲೆಕ್ಷನ್‌ನಲ್ಲಿ ಗೆಲ್ಲಲು, ಮಿನಿಸ್ಟರ್‌ ಆಗಲು ನೀವಿಬ್ಬರೇ ಕಾರಣ, ನೀವೇ ಮನೆಯಲ್ಲಿ ಇಲ್ಲ ಎಂದರೆ ನಾನೂ ಇಲ್ಲೇ ಇದ್ದುಬಿಡುತ್ತೇನೆ, ನಾನೂ ನಿನ್ನ ಜೊತೆ ಕೂಲಿ ಕೆಲಸ ಮಾಡುತ್ತೇನೆ ಬಾ ಎನ್ನುತ್ತಾನೆ. ಮೇಡಂ ಬಂದರೆ ಮಾತ್ರ ನಾನು ಬರುತ್ತೇನೆ ಎಂದು ಸಿದ್ದು ಹೇಳುತ್ತಾನೆ. ಜವರೇಗೌಡ ಅಷ್ಟು ಬಲವಂತ ಮಾಡಿದ್ದಕ್ಕೆ ಭಾವನಾ, ಮತ್ತೆ ಮನೆಗೆ ವಾಪಸ್‌ ಹೋಗಲು ನಿರ್ಧರಿಸುತ್ತಾಳೆ. ಸಿದ್ದು ಹಾಗೂ ಭಾವನಾ ಇಬ್ಬರೂ ಜವರೇಗೌಡನ ಜೊತೆ ಮನೆಗೆ ವಾಪಸ್‌ ಬರುತ್ತಾರೆ. ಅವರಿಬ್ಬರನ್ನೂ ನೋಡುತ್ತಿದ್ದಂತೆ ಮರೀಗೌಡ ಹೊರತುಪಡಿಸಿ ಉಳಿದವರು ಸಿಟ್ಟಾಗುತ್ತಾರೆ.

ಆಕ್ಸಿಡೆಂಟ್‌ ವಿಚಾರ ತಿಳಿದು ಶಾಕ್‌ ಆದ ಸಿದ್ದೇಗೌಡ

ನಿನ್ನ ಜೊತೆ ಮಾತನಾಡಬೇಕು ಎಂದು ಸಿದ್ದೇಗೌಡನನ್ನು ಜವರೇಗೌಡ ಹೊರಗೆ ಕರೆದುಕೊಂಡು ಹೋಗುತ್ತಾನೆ. ಅವರಿಬ್ಬರೂ ಹೋಗಿದ್ದನ್ನು ನೋಡಿ ಮನೆಯವರಿಗೆ ಕುತೂಹಲ ಉಂಟಾಗುತ್ತದೆ, ನಿನ್ನ ಹೆಂಡತಿಗೇನೋ ಬುದ್ಧಿ ಇಲ್ಲ, ನಿನಗಾದರೂ ಬುದ್ಧಿ ಬೇಡವೇ? ಪೊಲೀಸ್‌ ಸ್ಟೇಷನ್‌ಗೆ ಕರೆದ ಮಾತ್ರಕ್ಕೆ ನೀನು ಏಕೆ ಹೋದೆ ಎಂದು ಕೇಳುತ್ತಾನೆ. ನ್ಯಾಯ ಎಲ್ಲರಿಗೂ ಒಂದೇ, ಅವರಿಗೆ ಅನ್ಯಾಯವಾಗಿದೆ ಅದಕ್ಕೆ ನಾನು ಹೋಗಿದ್ದೆ ಎಂದು ಸಿದ್ದು ಹೇಳುತ್ತಾನೆ. ಆ ಆಕ್ಸಿಡೆಂಟ್‌ ಮಾಡಿಸಿದ್ದು ನೀನೇ ಎಂದು ಆ ದಿನವನ್ನು ನೆನಪು ಮಾಡುತ್ತಾನೆ.

ವಿಚಾರ ಕೇಳಿ ಸಿದ್ದುವಿಗೆ ಆಘಾತವಾಗುತ್ತದೆ. ಆ ದಿನ ಶ್ರೀಕಾಂತ್‌ ಪ್ರಯಾಣಿಸುತ್ತಿದ್ದ ಕಾರಿಗೆ ತಾನು ಡಿಕ್ಕಿ ಹೊಡೆದದ್ದನ್ನು ನೆನಪಿಸಿಕೊಂಡು ಸಿದ್ದುವಿಗೆ ದುಃಖವಾಗುತ್ತದೆ. ವಿಚಾರ ತಿಳಿದಾಗಿನಿಂದ ಸಿದ್ದೇಗೌಡ ಪಶ್ಚಾತಾಪ ಪಡುತ್ತಾನೆ. ಭಾವನಾ ಮಾತನಾಡಿಸಿದರೂ ಅವಳೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ. ನಾನು ಮನಸಾರೆ ಪ್ರೀತಿಸಿದವರಿಗೆ ಈ ರೀತಿ ನೋವು ಮಾಡುತ್ತಿದ್ದೇನಲ್ಲಾ ಎಂದು ಸಿದ್ದು ಬೇಸರ ವ್ಯಕ್ತಪಡಿಸುತ್ತಾನೆ.

ಶ್ರೀಕಾಂತ್‌ ಸಾವಿಗೆ ನಾನೇ ಕಾರಣ ಎಂಬ ಸತ್ಯವನ್ನು ಭಾವನಾ ಬಳಿ ಸಿದ್ದು ಹೇಳುತ್ತಾನಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner