ಶ್ರೀಲಂಕಾದಲ್ಲಿ ಭಾವನಾ ಮತ್ತು ಸಿದ್ಧು ಭೇಟಿಯಾದ ಜಾಹ್ನವಿ; ರೆಸಾರ್ಟ್‌ನಲ್ಲಿ ಮತ್ತೆ ತನ್ನ ಬುದ್ದಿ ತೋರಿಸಿದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಭಾವನಾಗೆ ಕಳೆದುಹೋದ ಮಾಂಗಲ್ಯ ಮತ್ತೆ ಸಿಕ್ಕಿದೆ. ಅದನ್ನು ಸಿದ್ದೇಗೌಡರೇ ಅವಳಿಗೆ ಮತ್ತೆ ಕಟ್ಟಿದ್ದಾರೆ. ಇತ್ತ ಜಾಹ್ನವಿಗೆ ಭಾವನಾ ಮತ್ತು ಸಿದ್ದೇಗೌಡ ಶ್ರೀಲಂಕಾ ಪ್ರವಾಸದಲ್ಲಿ ಹೊರಗಡೆ ಸುತ್ತಾಡುತ್ತಿರುವಾಗ ಭೇಟಿಯಾಗಿದ್ದಾರೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಭಾವನಾಗೆ ಕಳೆದುಕೊಂಡ ಮಾಂಗಲ್ಯ ಸರ ಮತ್ತೆ ಸಿಕ್ಕಿದೆ. ಭಾವನಾ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿದ್ದೇಗೌಡರು ಮಾಂಗಲ್ಯ ಸರ ಹುಡುಕಿಕೊಂಡು ಬಂದು ಕೊಟ್ಟಿದ್ದಾರೆ. ನಂತರ ಅದನ್ನು ಸಿದ್ದೇಗೌಡನೇ ಭಾವನಾಗೆ ಕಟ್ಟಿದ್ದಾನೆ. ಬಳಿಕ ಅವರಿಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದಾರೆ. ಅಲ್ಲಿ ಸಿದ್ದೇಗೌಡ, ಭಾವನಾ ಬಳಿ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಭಾವನಾ ಕೂಡ ಅವನ ಬಳಿ ಪ್ರೀತಿ ಹಂಚಿಕೊಂಡಿದ್ದಾಳೆ. ಇಬ್ಬರೂ ಖುಷಿಯಾಗಿ ಸುತ್ತಾಡಿ, ಮತ್ತೆ ರೆಸಾರ್ಟ್‌ಗೆ ಮರಳಿ ಬಂದಿದ್ದಾರೆ. ನಂತರ ಭಾವನಾ, ಸಿದ್ದುವನ್ನು ತನ್ನ ಜೊತೆಗೇ ಮಲಗಬೇಕು ಎಂದು ಒತ್ತಾಯಿಸಿದ್ದಾಳೆ.
ಇತ್ತ ಪ್ರಕಾಶ, ಮರಿಗೌಡರ ಬಳಿ ಮಾತನಾಡಿ, ಅಕ್ಸಿಡೆಂಟ್ ವಿಚಾರವಾಗಿ ಓರ್ವ ವ್ಯಕ್ತಿಯನ್ನು ಸರೆಂಡರ್ ಆಗಲು ಹೇಳಿದ್ದೇನೆ, ಅವನು ಬಂದ ಕೂಡಲೇ ಎಲ್ಲವನ್ನೂ ಸರಿಪಡಿಸಿ, ಈ ಕೇಸ್ ಕ್ಲೋಸ್ ಮಾಡಿಸೋಣ ಎಂದಿದ್ದಾನೆ. ಜತೆಗೆ ಜವರೇಗೌಡ್ರು ಕೂಡ ಮರಿಗೌಡನ ಜತೆ ಸಂಭಾಷಣೆ ನಡೆಸಿದ್ದಾರೆ. ಬಳಿಕ ಎಸ್‌ಪಿಯನ್ನು ಮನೆಗೆ ಕರೆಸಿ, ಅವರಿಗೂ ಸೂಚನೆ ಕೊಟ್ಟಿದ್ದಾರೆ. ಅದರಂತೆ ಎಸ್‌ಪಿ ಕೇಸ್ ಬಗ್ಗೆ ಮತ್ತೆ ಕಾರ್ಯೋನ್ಮುಖರಾಗಿದ್ದಾರೆ.
ಲಕ್ಷ್ಮೀ ನಿವಾಸದಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸ್ ಮಾತನಾಡುತ್ತಾ, ಹೆಣ್ಣು ಮಕ್ಕಳ ಬಗ್ಗೆ ಖುಷಿಪಡುತ್ತಿದ್ದಾರೆ. ಇಬ್ಬರೂ ಸಂತೋಷವಾಗಿದ್ದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಅಷ್ಟರಲ್ಲಿ ಭಾವನಾ ಮತ್ತು ಜಾಹ್ನವಿ ಇಬ್ಬರೂ ಒಂದೇ ತಾಣಕ್ಕೆ ಪ್ರವಾಸ ಹೋಗಿರುವುದು ಅವರ ಗಮನಕ್ಕೆ ಬರುತ್ತದೆ. ಅವರಿಬ್ಬರೂ ಅಕಸ್ಮಾತ್ ಆಗಿ ಭೇಟಿಯಾಗಲಿ ಎಂದು ಇಬ್ಬರಲ್ಲೂ ವಿಷಯ ಹೇಳದೇ, ಸುಮ್ಮನಿರುತ್ತಾರೆ. ಮತ್ತೊಂದೆಡೆ ಹರೀಶ ಮತ್ತು ಸಿಂಚನಾಳ ವಿವಾಹ ವಾರ್ಷಿಕೋತ್ಸವವೂ ನಡೆಯುತ್ತಿದೆ, ಅಪ್ಪ ನಮಗಾಗಿ ಏನೂ ಮಾಡಿಲ್ಲ ಎಂದು ಸಿಂಚನಾ ಹರೀಶ್ ಬಳಿ ಹೇಳಿಕೊಂಡು ಬೇಸರಪಟ್ಟುಕೊಳ್ಳುತ್ತಾಳೆ.
ಇತ್ತ ಜಾಹ್ನವಿ ಜಯಂತ್ ಬಗ್ಗೆ ಕೋಪದಲ್ಲಿದ್ದರೂ, ಅದನ್ನು ತೋರಿಸಿಕೊಳ್ಳುವುದಿಲ್ಲ. ಅದರ ಬದಲು, ಚೆನ್ನಾಗಿ ಇರುವಂತೆ ನಾಟಕ ಮಾಡುತ್ತಾಳೆ. ಇಬ್ಬರೂ ಹೊರಗಡೆ ತಿರುಗಾಡಲು ಹೋದಾಗ, ಜಯಂತ್ ಜಾಹ್ನವಿಯನ್ನು ಬಿಟ್ಟು ಅಡಗಿಕೊಳ್ಳುತ್ತಾನೆ. ಅವನನ್ನು ಹುಡುಕುತ್ತಾ ಜಾಹ್ನವಿ ಹೋಗುತ್ತಾಳೆ. ಅಷ್ಟರಲ್ಲಿ ಅವಳಿಗೆ ಭಾವನಾ ಮತ್ತು ಸಿದ್ದೇಗೌಡರು ಎದುರಾಗುತ್ತಾರೆ, ಇಬ್ಬರೂ ಉಭಯ ಕುಶಲೋಪರಿ ಮಾತನಾಡುತ್ತಾರೆ. ಅಷ್ಟರಲ್ಲಿ ಜಯಂತ್ ಕೂಡ ಅಲ್ಲಿಗೆ ಬರುತ್ತಾನೆ. ಅವನಿಗೆ ಇವರಿಬ್ಬರನ್ನು ನೋಡಿ ಕಸಿವಿಸಿಯಾಗುತ್ತದೆ, ಜತೆಗೆ ಜಾಹ್ನವಿ ಏನಾದರೂ ಹೇಳಬಹುದು ಎಂಬ ಹೆದರಿಕೆಯೂ ಆಗುತ್ತದೆ.
ಜಾಹ್ನವಿ ಜೊತೆ ಮಾತನಾಡುತ್ತಾ, ಭಾವನಾ, ಮಗುವಿನ ಬಗ್ಗೆ ವಿಚಾರಿಸಿದ್ದಾಳೆ. ಅಷ್ಟರಲ್ಲಿ ಅವಳ ಮುಖ ಬಿಳುಚಿಕೊಂಡಿದೆ. ಯಾವುದೇ ಮಾತನ್ನು ಜಾಹ್ನವಿ ಆಡದಿರುವುದು ಭಾವನಾಗೆ ಅವಳ ಬಗ್ಗೆ ಸಂಶಯವಾಗಿದೆ. ಹೀಗಾಗಿ ಅವಳನ್ನು ಪ್ರತ್ಯೇಕವಾಗಿ ವಿಚಾರಿಸಲು ಮುಂದಾಗಿದ್ದಾಳೆ. ಅಲ್ಲಿಗೆ ನಿವಾಸ ಧಾರಾವಾಹಿ ಗುರುವಾರ ಮಾರ್ಚ್ 27ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ