ಅಪ್ಪನನ್ನು ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ ತೆಗೆದ ಸಂತೋಷ್; ಜ್ಚರದಿಂದ ಬಳಲುತ್ತಿರುವ ಸಿದ್ದುಗೆ ಭಾವನಾ ಆರೈಕೆ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಬಿಟ್ಟು ಹೋಗಿದ್ದ ಸಿದ್ದೇಗೌಡ ಮತ್ತು ಭಾವನಾರನ್ನು ಜವರೇಗೌಡ ಮರಳಿ ಮನೆಗೆ ಕರೆತಂದಿದ್ದಾರೆ. ಅಕ್ಸಿಡೆಂಟ್ ವಿಚಾರ ತಿಳಿದಾಗಿನಿಂದ ಸಿದ್ದೇಗೌಡ ಮಂಕಾಗಿದ್ದು, ಪಶ್ಚಾತಾಪದಿಂದ ಬಳಲುತ್ತಿದ್ದಾನೆ.

Lakshmi Nivasa Serial: ಮಗ ಸೊಸೆಯನ್ನು ಮನೆಗೆ ಜವರೇಗೌಡ ಕರೆತಂದಿದ್ದಾರೆ. ಆದರೆ ಸಿದ್ದೇಗೌಡ ಮತ್ತು ಭಾವನಾ ಜತೆಗೆ ಮನೆಗೆ ಮರಳಿದ್ದು, ಮನೆಯವರಿಗೆ ಇಷ್ಟವಾಗಿಲ್ಲ. ಮರಿಗೌಡ ಒಬ್ಬನೇ ಈ ವಿಚಾರವಾಗಿ ಖುಷಿಪಟ್ಟಿದ್ದು ಬಿಟ್ಟರೆ ಮತ್ತೆ ಉಳಿದವರು ಸಿದ್ದೇಗೌಡ ಇರಲಿ, ಭಾವನಾ ಯಾಕೆ ಬರಬೇಕಿತ್ತು ಎಂದು ಹೇಳುತ್ತಾರೆ. ಅಲ್ಲದೆ, ಸಿದ್ದೇಗೌಡನನ್ನು ಹೊರಗಡೆ ಕರೆದುಕೊಂಡು ಹೋಗಿ ಅಕ್ಸಿಡೆಂಟ್ ಸಂಗತಿಯನ್ನು ಜವರೇಗೌಡ ಹೇಳಿದಾಗಿನಿಂದ ಸಿದ್ದೇಗೌಡನಿಗೆ ಆಘಾತವಾಗಿದೆ. ಶ್ರೀಕಾಂತ್ ಸಾವಿಗೆ ಸಿದ್ದೇಗೌಡ ತೀವ್ರ ಪಶ್ಚಾತಾಪಪಟ್ಟು, ಊಟ ನಿದ್ರೆ ಬಿಟ್ಟಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ.
ಸೊಸೆಯಾಗಿ ಒಪ್ಪಿಕೊಳ್ಳಲು ತಾಕೀತು
ಮತ್ತೊಂದೆಡೆ, ಭಾವನಾಳಿಂದಾಗಿಯೇ ನನಗೆ ಮಂತ್ರಿಯೋಗ ಬಂದಿದೆ, ಮುಂದೆ ಮುಖ್ಯಮಂತ್ರಿಯೂ ಆಗುವವನಿದ್ದೇನೆ. ಸಮಾಜದ, ಮಾಧ್ಯಮದ ಕಣ್ಣು ನಮ್ಮ ಕುಟುಂಬದ ಮೇಲಿದೆ. ಹೀಗಾಗಿ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು, ನಮ್ಮ ಮನೆಯ ಸೊಸೆಯನ್ನೇ ಮನೆಯಿಂದ ಹೊರಗೆ ಹಾಕಿದ್ದೇವೆ ಎಂದು ಊರವರು ಮಾತನಾಡಿಕೊಳ್ಳುವಂತಾಗಬಾರದು ಎಂದು ಜವರೇಗೌಡ ಮನೆಯವರಿಗೆ ಹೇಳುತ್ತಾನೆ. ಹೀಗಾಗಿ ಎಲ್ಲರೂ ಭಾವನಾಳನ್ನು ಸೊಸೆಯಾಗಿ ಒಪ್ಪಿಕೊಳ್ಳಬೇಕು. ಅಲ್ಲದೆ, ಅದೇ ಕೊರಗಿನಿಂದ ಸಿದ್ಧೇಗೌಡ ಬಳಲಿ ಹಾಸಿಗೆ ಹಿಡಿದಿದ್ದಾನೆ. ಅವನು ಆರೋಗ್ಯವಾಗಿರಬೇಕಾದರೆ, ನೀವೆಲ್ಲರೂ ನಾನು ಹೇಳಿದಂತೆಯೇ ಮಾಡಬೇಕು ಎನ್ನುತ್ತಾನೆ. ಅದಕ್ಕೆ ಮನೆಯವರಿಂದ ಆಕ್ಷೇಪ ಕೇಳಿಬಂದರೂ, ಸಿದ್ದೇಗೌಡನಿಗೋಸ್ಕರ ಒಪ್ಪಿಕೊಳ್ಳುತ್ತಾರೆ.
ಇದನ್ನೂ ಓದಿ: ಮಾವನಿಗೆ ಕಾರು ಕೊಡಿಸಿದ ಭಾಗ್ಯಾ, ಕನ್ನಿಕಾ ಜೊತೆ ಸೇರಿಕೊಂಡ ಶ್ರೇಷ್ಠಾ
ಶ್ರೀನಿವಾಸ್ ನೌಕರಿಗೆ ಕುತ್ತು
ಮನೆಯ ಖರ್ಚು ವೆಚ್ಚ ಸರಿದೂಗಿಸಲು ಶ್ರೀನಿವಾಸ್ ರಾತ್ರಿ ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅದು ತನ್ನ ಮಗನೇ ಕಟ್ಟಿಸುತ್ತಿರುವ ಮನೆ ಎಂದು ಅವರಿಗೆ ತಿಳಿದಿಲ್ಲ. ಅಲ್ಲದೆ, ಹರೀಶ್‌ಗೂ ತನ್ನ ತಂದೆ ತಾನು ಕಟ್ಟಿಸುತ್ತಿರುವ ಮನೆಯಲ್ಲಿ ರಾತ್ರಿ ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವುದು ಗೊತ್ತಿರುವುದಿಲ್ಲ. ಆದರೆ ಮನೆ ಕೆಲಸದ ಮೇಸ್ತ್ರಿಯನ್ನು ಭೇಟಿ ಮಾಡಲು ಹೊರಟಾಗ ಮೇಸ್ತ್ರಿ ಜತೆ ತಂದೆ ಇರುವುದನ್ನು ಕಂಡು, ತನ್ನ ಮನೆಯನ್ನು ಕಾಯುತ್ತಿರುವ ಸೆಕ್ಯುರಿಟಿ ಗಾರ್ಡ್ ತನ್ನ ತಂದೆಯೇ ಎಂದು ಹರೀಶ್‌ಗೆ ಗೊತ್ತಾಗುತ್ತದೆ. ಕೂಡಲೇ ಮೇಸ್ತ್ರಿಗೆ ಸೆಕ್ಯುರಿಟಿ ಗಾರ್ಡ್‌ಗೆ ಕೊಡಬೇಕಾದ ಹಣವನ್ನು ಕೊಟ್ಟು, ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ ಎಂದು ಹೇಳುತ್ತಾನೆ. ಮೇಸ್ತ್ರಿ ಅದನ್ನು ಶ್ರೀನಿವಾಸ್‌ಗೆ ತಿಳಿಸುತ್ತಾನೆ. ನೌಕರಿಗೆ ಕುತ್ತು ಬಂದ ಸಂಗತಿ ಕೇಳಿ ಶ್ರೀನಿವಾಸ್‌ಗೆ ಆಘಾತವಾಗುತ್ತದೆ.
ಮತ್ತೊಂದೆಡೆ ಜಾಹ್ನವಿ ತಾನು ಕೆಲದಿನಗಳ ಮಟ್ಟಿಗೆ ಮನೆಗೆ ಹೋಗುತ್ತೇನೆ, ಕಳುಹಿಸಿಕೊಡಿ ಎಂದು ಜಯಂತ್‌ಗೆ ಹೇಳುತ್ತಾಳೆ. ಆದರೆ ಜಯಂತ್ ಅದೂ ಇದೂ ಕಾರಣ ನೀಡಿ ಅವಳ ಕೋರಿಕೆಯನ್ನು ತಳ್ಳಿಹಾಕುತ್ತಾನೆ. ಮತ್ತೊಂದೆಡೆ ಭಾವನಾ ಜತೆ ಸರಿಯಾಗಿ ಮಾತನಾಡಲೂ ಸಾಧ್ಯವಾಗದೇ ಸಿದ್ದೇಗೌಡ, ತಾನಿನ್ನು ಸುಮ್ಮನೆ ಕೂರುವುದಿಲ್ಲ. ಆಕ್ಸಿಡೆಂಟ್ ವಿಚಾರವನ್ನು ಭಾವನಾ ಜೊತೆ ಹೇಳುವುದಾಗಿ ಜವರೇಗೌಡರಲ್ಲಿ ಹೇಳುತ್ತಾನೆ. ಯಾವ ರೀತಿ ಸಿದ್ದೇಗೌಡ ಭಾವನಾಗೆ ಈ ಸಂಗತಿ ಹೇಳುತ್ತಾನೆ ಎನ್ನುವ ವಿಚಾರ ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ