ತೀರ್ಥಯಾತ್ರೆ ಮುಗಿಸಿ ಮನೆಗೆ ಮರಳಿದ ಲಕ್ಷ್ಮೀ; ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೆದರಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತೀರ್ಥಯಾತ್ರೆ ಮುಗಿಸಿ ಮನೆಗೆ ಮರಳಿದ ಲಕ್ಷ್ಮೀ; ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೆದರಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

ತೀರ್ಥಯಾತ್ರೆ ಮುಗಿಸಿ ಮನೆಗೆ ಮರಳಿದ ಲಕ್ಷ್ಮೀ; ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೆದರಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಜನವರಿ 31ರ ಸಂಚಿಕೆಯಲ್ಲಿ ಲಕ್ಷ್ಮೀ ತೀರ್ಥಯಾತ್ರೆ ಮುಗಿಸಿ ಮನೆಗೆ ಮರಳಿ ಬಂದಿದ್ದಾಳೆ. ಮತ್ತೊಂದೆಡೆ ಜಯಂತ್ ತಂದುಕೊಟ್ಟ ಗೊಂಬೆಯಲ್ಲೂ ಕ್ಯಾಮೆರಾ ಇರುವುದು ಕಂಡು ಜಾಹ್ನವಿ ಹೆದರಿದ್ದಾಳೆ. ಹರೀಶ್ ಮತ್ತು ಸಂತೋಷ್ ಮಾತನಾಡುತ್ತಾ, ಮನೆಗೆ ಹೆಚ್ಚು ಹಣ ಕೊಡುವುದು ಬೇಡ ಎಂದು ನಿರ್ಧರಿಸಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಜನವರಿ 31ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಜನವರಿ 31ರ ಸಂಚಿಕೆ (Pixabay)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಜನವರಿ 31ರ ಸಂಚಿಕೆಯಲ್ಲಿ ಸಿದ್ದೇಗೌಡ್ರು ಮನಸಿನಲ್ಲೇ ಕೊರಗುತ್ತಿದ್ದಾರೆ. ಆಕ್ಸಿಡೆಂಟ್ ವಿಚಾರವನ್ನು ಮನೆಯಲ್ಲಿ ಹೇಳಲೂ ಆಗದೇ, ಮನಸ್ಸಿನಲ್ಲಿ ಇರಿಸಿಕೊಳ್ಳಲೂ ಆಗದೇ ಚಡಪಡಿಸುತ್ತಿದ್ದಾರೆ. ಇದರಿಂದ ತುಂಬ ಕಿರಿಕಿರಿ ಅನುಭವಿಸುತ್ತಿರುವುದು ಕಂಡುಬಂದಿದೆ. ಭಾವನಾ ಕೇಳಿದರೂ ಅದಕ್ಕೆ ಸಿದ್ದೇಗೌಡರು ಉತ್ತರಿಸಲಿಲ್ಲ. ಹೀಗಾಗಿ ಮತ್ತೆ ಅವರ ಮನಸ್ಸಿಗೆ ನೋವು ಮಾಡುವುದು ಬೇಡ ಎಂದು ಭಾವನಾ ಸುಮ್ಮನಾಗಿದ್ದಾಳೆ. ಒಂದೇ ಕೋಣೆಯಲ್ಲಿ ಮಲಗಿದ್ದರೂ, ಇಬ್ಬರಲ್ಲೂ ಪರಸ್ಪರ ಮಾತುಕತೆ ಇರುವುದಿಲ್ಲ.

ಮನೆಗೆ ಮರಳಿದ ಲಕ್ಷ್ಮೀ

ತೀರ್ಥಯಾತ್ರೆಗೆ ತೆರಳಿದ್ದ ಲಕ್ಷ್ಮೀ, ಮನೆಗೆ ಮರಳಿ ಬಂದಿದ್ದಾಳೆ. ಆಕೆಯನ್ನು ಶ್ರೀನಿವಾಸ್ ಮತ್ತು ವೀಣಾ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಯಾತ್ರೆಯ ವಿಚಾರಗಳನ್ನು ಹಂಚಿಕೊಂಡ ಬಳಿಕ ಲಕ್ಷ್ಮೀ, ಶ್ರೀನಿವಾಸ್ ಅವರಲ್ಲಿ ಯಾಕೆ ನೀವು ಇಷ್ಟೊಂದು ಸಪ್ಪಗಿದ್ದೀರಿ ಎಂದು ಕೇಳುತ್ತಾಳೆ. ಆಗ ಶ್ರೀನಿವಾಸ್ ಹಾಗೇನೂ ಇಲ್ಲ, ನಾನು ಆರಾಮವಾಗಿದ್ದೇನೆ ಎಂದು ಉತ್ತರಿಸುತ್ತಾರೆ. ಮತ್ತೆ ಕೇಳಿದಾಗ, ನಾನು ರಾತ್ರಿ ಪಾಳಿಯಲ್ಲಿ ಮಾಡುತ್ತಿದ್ದ ಕೆಲಸದಿಂದ ನನ್ನನ್ನು ತೆಗೆದುಹಾಕಿದ್ದಾರೆ. ಮಾಲೀಕರಲ್ಲಿ ಮತ್ತೆ ಕೆಲಸ ಕೊಡಿ ಎಂದು ಕೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಅದಕ್ಕೆ ಲಕ್ಷ್ಮೀ, ಚಿಂತಿಸುವುದು ಬೇಡ, ಬೇರೆ ಏನಾದರೂ ದಾರಿ ಹುಡುಕೋಣ ಎಂದು ಹೇಳುತ್ತಾಳೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು ಹೋಗಲ್ಲ ಎಂದ ಭಾಗ್ಯ; ಕನ್ನಿಕಾ ಕಾಮತ್‌ಗೆ ಮುಖಭಂಗ: ಭಾಗ್ಯಲಕ್ಷ್ಮೀ ಧಾರಾವಾಹಿ

ಅರಿಯದೇ ನಕಲಿ ಒಡವೆ ಧರಿಸಿ ಹೊರಟ ಸಿಂಚನ

ಬರ್ತ್‌ಡೇ ಪಾರ್ಟಿಗೆ ಹೊರಟ ಸಿಂಚನಾ, ಹರೀಶ್ ಬದಲಿಸಿ ಇಟ್ಟಿದ್ದ ನಕಲಿ ಒಡವೆಯ ಸಂಗತಿ ತಿಳಿಯದೇ ಅದನ್ನೇ ಧರಿಸಿಕೊಂಡು ಹೋಗುತ್ತಾಳೆ. ಹರೀಶ್ ಅದು ಒಡವೆ ಬೇಡ, ಚೆನ್ನಾಗಿಲ್ಲ ಎಂದರೂ ಕೇಳಿಸಿಕೊಳ್ಳದೆ, ತನಗೆ ಅದೇ ಇಷ್ಟ, ಅದೇ ಬೇಕು ಎಂದು ಹೊರಡುತ್ತಾಳೆ. ಹರೀಶ್ ಎಂದಿನಂತೆ ಮೊಬೈಲ್‌ನಲ್ಲಿ ಗೇಮಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಾನೆ.

ಹರೀಶ್ ಮತ್ತು ಸಂತೋಷ್ ಮಾತುಕತೆ

ಮತ್ತೊಂದೆಡೆ ಹರೀಶ್ ಮತ್ತು ಸಂತೋಷ್ ಮಾತುಕತೆಯಲ್ಲಿ ತೊಡಗಿದ್ದಾರೆ. ಅಪ್ಪ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಈಗ ಎರಡು ಕಡೆ ಸಂಪಾದನೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳು ಮನೆ ಖರ್ಚಿಗೆ ಕೊಡುವ ಹಣದಲ್ಲಿ ಸ್ವಲ್ಪ ಕಡಿಮೆ ಮಾಡೋಣ ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಹರೀಶನಲ್ಲಿ ತಾನು ಮನೆ ಕಟ್ಟಿಸುತ್ತಿರುವ ಸಂಗತಿಯನ್ನು ಸಂತೋಷ್ ಬಾಯಿಬಿಡುವುದಿಲ್ಲ.

ಇದನ್ನೂ ಓದಿ: ಹೋಟೆಲ್‌ನಲ್ಲಿ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆ; ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಕನ್ನಿಕಾ ಪ್ಲ್ಯಾನ್ ಸಕ್ಸಸ್: ಭಾಗ್ಯಲಕ್ಷ್ಮೀ ಧಾರಾವಾಹಿ

ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೌಹಾರಿದ ಜಾಹ್ನವಿ

ಮನೆಯಲ್ಲಿ ಜಯಂತ್ ಸದಾ ಮೊಬೈಲ್‌ನಲ್ಲಿ ಮುಳುಗಿರುವುದು ಜಾಹ್ನವಿ ಗಮನಕ್ಕೆ ಬಂದಿದೆ. ಆದರೂ ಸೂಕ್ತ ಸಮಯ ಬರಲಿ, ಆವಾಗ ಕೇಳೋಣ ಎಂದು ಸುಮ್ಮನಾಗಿದ್ದಾಳೆ. ಜಯಂತ್ ತಂದುಕೊಟ್ಟ ಗೊಂಬೆಯ ಕಣ್ಣಿನಲ್ಲಿ ಕ್ಯಾಮೆರಾ ಇರಿಸಿ, ಅದನ್ನು ಅಜ್ಜಿಯ ರೂಮ್‌ನಲ್ಲಿ ಇರಿಸಿದ್ದಾನೆ. ಅಜ್ಜಿಯ ರೂಮ್‌ಗೆ ಹೋದ ಜಾಹ್ನವಿಗೆ ಅಲ್ಲಿರುವ ಗೊಂಬೆಯ ಕಣ್ಣಿನಲ್ಲಿ ಕೂಡ ಕ್ಯಾಮೆರಾ ಇರುವುದು ಕಂಡುಬರುತ್ತದೆ. ಅದನ್ನು ಕಂಡು ಜಾಹ್ನವಿ ಹೆದರುತ್ತಾಳೆ. ಆದರೆ ಅದು ಜಯಂತ್ ಕೆಲಸವಾಗಿರಹುದು ಎಂದು ಅಂದುಕೊಂಡರೂ, ಕೇಳಲು ಸಾಧ್ಯವಾಗದೇ ಸುಮ್ಮನಾಗುತ್ತಾಳೆ. ರಾತ್ರಿ ಮಲಗಿರುವಾಗ ಮೆಲ್ಲನೆ ಎದ್ದ ಜಾಹ್ನವಿ, ಜಯಂತ್ ಮೊಬೈಲ್ ಕೈಗೆತ್ತಿಕೊಳ್ಳುತ್ತಾಳೆ. ಮುಂದೇನಾಗುವುದೋ ಎನ್ನುವುದನ್ನು ಸೋಮವಾರದ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner