ಚೀಟಿ ವ್ಯವಹಾರದಲ್ಲಿ ಪೊಲೀಸರಿಂದ ಹರೀಶ್ ಬಂಧನ; ಜಯಂತ್‌ನನ್ನು ಬಿಟ್ಟು ಹೊರಟ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಚಿಟ್ ಫಂಡ್ ವಿಚಾರದಲ್ಲಿ ಹರೀಶನನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ತಾನು ಮಿನಿಸ್ಟರ್ ಜವರೇಗೌಡ್ರ ಅಳಿಯ ಎಂದರೂ ಪೊಲೀಸರು ಕೇಳಿಲ್ಲ. ಮತ್ತೊಂದೆಡೆ ಜಾಹ್ನವಿ ಜಯಂತ್‌ನನ್ನು ಬಿಟ್ಟು ಹೋಗುವುದಾಗಿ ನಿರ್ಧಿರಿಸಿದ್ದಾಳೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಜಾಹ್ನವಿಗೆ ಜಯಂತ್ ಮನೆಯಲ್ಲಿ ಸಿಸಿಟಿವಿ ಇರಿಸಿರುವುದು ಗಮನಕ್ಕೆ ಬಂದಿದೆ. ಆದರೆ ಜಯಂತ್ ಈ ಬಗ್ಗೆ ಜಾಹ್ನವಿಗೆ ಏನೂ ಹೇಳಿಲ್ಲ. ಅಲ್ಲದೆ, ಜಯಂತ್ ನಡವಳಿಕೆ ಅವಳಿಗೆ ಮತ್ತಷ್ಟು ಹೆದರಿಕೆ ತಂದಿದೆ. ಹೀಗಾಗಿ ಮನೆಯಲ್ಲಿ ಈ ವಿಚಾರ ಹೇಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ ಹಾಗೆ ಹೇಳಿದರೆ ಜಯಂತ್ ಮನೆಗೆ ಹೋಗಲು ಬಿಡುವುದಿಲ್ಲ, ಅಲ್ಲದೇ ಮನೆಗೆ ಫೋನ್ ಮಾಡಿ ಹೇಳುವ ಹಾಗೂ ಇಲ್ಲ. ಅದಕ್ಕಾಗಿ ನೇರವಾಗಿ ಮನೆಗೆ ಹೋಗಿ, ಅವರಲ್ಲೇ ಈ ವಿಚಾರ ತಿಳಿಸುವುದು ಉತ್ತಮ ಎಂದು ನಿರ್ಧರಿಸುತ್ತಾಳೆ. ಜಯಂತ್ ಆಫೀಸ್‌ಗೆ ಹೊರಡುತ್ತಲೇ, ಜಾಹ್ನವಿ ಅಜ್ಜಿಯನ್ನು ನೋಡಿಕೊಳ್ಳುವ ನರ್ಸ್ ಬಳಿ ಹೇಳಿ, ಮೆಲ್ಲನೆ ಮನೆಯಿಂದ ಹೊರಗಡೆ ಹೋಗುತ್ತಾಳೆ. ಜಯಂತ್ ಈ ವಿಚಾರವನ್ನು ಸಿಸಿಟಿವಿಯಲ್ಲಿ ನೋಡುತ್ತಾನೆ. ಆದರೆ, ಜಾಹ್ನವಿ ಏನಾದರೂ ತರುವುದಕ್ಕೆ ಮಾರ್ಕೆಟ್‌ಗೆ ಹೋಗಿರಬಹುದು ಎಂದುಕೊಳ್ಳುತ್ತಾನೆ. ಈಗ ಕೇಳಬಾರದು ಎಂದುಕೊಂಡು ಸುಮ್ಮನಾಗುತ್ತಾನೆ. ಆದರೆ ಜಾಹ್ನವಿ ತವರು ಮನೆಗೆ ಹೊರಟಿದ್ದಾಳೆ. ಮನೆಗೆ ವಾಪಸ್ ಬಂದು ಜಯಂತ್ ನೋಡಿದಾಗ ಜಾಹ್ನವಿ ಇರುವುದಿಲ್ಲ.
ಪೊಲೀಸರಿಂದ ಹರೀಶ್ ಬಂಧನ
ಒಂದೆಡೆ ಸಿಂಚನ ಒಡವೆ ಕಳೆದುಕೊಂಡ ಕೋಪದಲ್ಲಿ ಇದ್ದಾಳೆ. ಮನೆಯಲ್ಲಿ ಕೇಳಬೇಕು ಎಂದುಕೊಂಡಿದ್ದಾಳೆ, ಆದರೆ ಹರೀಶ್ ಅವಳನ್ನು ತಡೆದು, ಈಗ ಬೇಡ. ನಾನೇ ಕೇಳುತ್ತೇನೆ, ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಹೇಳಿ ಸಮಾಧಾನ ಮಾಡುತ್ತಾನೆ, ಅದಕ್ಕೆ ಸಿಂಚನ ಒಪ್ಪುತ್ತಾಳೆ. ಹಾಗೆಯೇ ಮಾತನಾಡುತ್ತಿರುವಾಗ, ಪೊಲೀಸರು ಬಂದು ಹರೀಶ್ ಯಾರು ಎಂದು ಕೇಳುತ್ತಾರೆ. ಬಳಿಕ, ಚೀಟಿ ವ್ಯವಹಾರ, ಫೈನಾನ್ಸ್ ಮಾಡುವಾಗ ಸೂಕ್ತ ಪರವಾನಗಿ ಪಡೆದುಕೊಂಡಿಲ್ಲ ಎಂದು ದೂರು ದಾಖಲಾಗಿದೆ, ಹೀಗಾಗಿ ವಿಚಾರಣೆಗೆ ಬರಬೇಕು ಎಂದು ಹರೀಶನನ್ನು ಬಂಧಿಸಿ ಕರೆದೊಯ್ಯುತ್ತಾರೆ.
ಜವರೇಗೌಡ್ರ ಬಳಿ ಓಡಿದ ಸಿಂಚನಾ
ಹರೀಶನನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಲೇ, ಸಿಂಚನಾ ತವರು ಮನೆಗೆ ಓಡಿ ಬರುತ್ತಾಳೆ. ಅಪ್ಪನ ಬಳಿ ವಿಷಯ ಹೇಳುತ್ತಾಳೆ, ಆಗ ಜವರೇಗೌಡ್ರು ಮರಿಗೌಡನನ್ನು ಪೊಲೀಸರ ಬಳಿ ಕಳುಹಿಸಿ, ಹರೀಶನನ್ನು ಬಿಡಿಸಿಕೊಂಡು ಬರುತ್ತಾರೆ. ಹರೀಶನನ್ನು ಕಂಡ ಕೂಡಲೇ ಸಿಂಚನಾ ಅಜ್ಜಿ ಒಂದೇ ಸಮನೆ ಬಯ್ಯಲು ಆರಂಭಿಸುತ್ತಾರೆ. ಜವರೇಗೌಡ್ರು ಕೂಡ, ನೀನು ನನ್ನ ಕುಟುಂಬದ ಮರ್ಯಾದೆ ತೆಗೆಯಲು ಯತ್ನಿಸುತ್ತಿದ್ದೀ, ನನ್ನ ಮಗಳ ಗಂಡ ಎನ್ನುವ ಒಂದೇ ಕಾರಣಕ್ಕೆ ಸುಮ್ಮನೆ ಬಿಡುತ್ತಿದ್ದೇನೆ, ಒಂದು ಉದ್ಯಮ ನಡೆಸಲು ಲೈಸನ್ಸ್ ಬೇಕು ಎನ್ನುವ ಕನಿಷ್ಠ ಜ್ಞಾನವೂ ನಿನಗಿಲ್ಲವೇ? ಯಾವ ಸೀಮೆಯ ಗಂಡಸು ನೀನು ಎಂದೆಲ್ಲ ಹೀನಾಯವಾಗಿ ಬಯ್ಯುತ್ತಾರೆ. ಆಗ ಸಿಂಚನಾ ಮಧ್ಯಪ್ರವೇಶಿಸಿ, ದಯವಿಟ್ಟು ಬೈಬೇಡಿ, ಎಲ್ಲವನ್ನೂ ನಾನು ಸರಿಪಡಿಸುತ್ತೇನೆ ಎಂದು ಹೇಳುತ್ತಾಳೆ. ಅಲ್ಲಿಗೆ ಮಂಗಳವಾರದ ಸಂಚಿಕೆ ಕೊನೆಗೊಂಡಿದೆ. ಇತ್ತ ತವರು ಮನೆಗೆ ಹೊರಟ ಜಾಹ್ನವಿಯನ್ನು ಜಯಂತ್ ತಡೆಯುತ್ತಾನಾ? ಕಾದುನೋಡಬೇಕಿದೆ..
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ