ಎಸ್‌ಪಿಗೆ ಸೂಚನೆ ಕೊಟ್ಟ ಜವರೇಗೌಡ್ರು; ಮನೆಗೆ ಕಳ್ಳರು ಬಂದಿದ್ದಾರೆ ಎಂದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಎಸ್‌ಪಿಗೆ ಸೂಚನೆ ಕೊಟ್ಟ ಜವರೇಗೌಡ್ರು; ಮನೆಗೆ ಕಳ್ಳರು ಬಂದಿದ್ದಾರೆ ಎಂದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

ಎಸ್‌ಪಿಗೆ ಸೂಚನೆ ಕೊಟ್ಟ ಜವರೇಗೌಡ್ರು; ಮನೆಗೆ ಕಳ್ಳರು ಬಂದಿದ್ದಾರೆ ಎಂದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 7ರ ಸಂಚಿಕೆಯಲ್ಲಿ ಜವರೇಗೌಡ್ರು ಮನೆಗೆ ಎಸ್‌ಪಿಯವರನ್ನು ಕರೆಸಿ ಕೇಸ್ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಮತ್ತೊಂದೆಡೆ ಮನೆಯಲ್ಲಿ ವಸ್ತುಗಳು ಅದಲು ಬದಲಾಗಿದೆ ಎಂದು ಜಯಂತ್‌ಗೆ ಅನ್ನಿಸಿದೆ. ಹೀಗಾಗಿ ಆತ ಪರಿಶೀಲನೆಯಲ್ಲಿ ತೊಡಗಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಫೆಬ್ರುವರಿ 7ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಫೆಬ್ರುವರಿ 7ರ ಸಂಚಿಕೆ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 7ರ ಸಂಚಿಕೆಯಲ್ಲಿ ಸೊಸೆ ಮತ್ತು ಮಗನ ಕೋರಿಕೆ ಮೇರೆಗೆ ಜವರೇಗೌಡ್ರು ಕೇಸ್ ಸಂಬಂಧವಾಗಿ ಎಸ್‌ಪಿಯವರನ್ನು ಮನೆಗೆ ಕರೆಸಿದ್ದಾರೆ. ಆದಷ್ಟು ಬೇಗ ಈ ಪ್ರಕರಣದ ತನಿಖೆ ಆಗಬೇಕು. ತನಿಖೆ ನಡೆಸಿ, ಯಾರು ತಪ್ಪಿತಸ್ಥರು ಎನ್ನುವುದನ್ನು ಪತ್ತೆಹಚ್ಚಬೇಕು ಎಂದು ಹೇಳುತ್ತಾರೆ. ಈ ಸುದ್ದಿ ಕೇಳಿ ಭಾವನಾಗೆ ಖುಷಿಯಾಗುತ್ತದೆ. ಆದರೆ ಸಿದ್ದೇಗೌಡರಿಗೆ ಮನಸ್ಸಿನಲ್ಲೇ ಕಸಿವಿಸಿಯಾಗುತ್ತದೆ. ಆದರೂ ಟೆನ್ಶನ್ ಆಗಿರುವುದನ್ನು ತೋರಿಸದೆ, ಮನೆಯಿಂದ ಹೊರಗೆ ಹೋಗುತ್ತಾನೆ.

ಮತ್ತೊಂದೆಡೆ, ಲಕ್ಷ್ಮೀ ಮನೆಯಲ್ಲಿ ಚಿಂತೆ ಮಾಡುತ್ತಾ ಕುಳಿತಿದ್ದಾಳೆ, ಅಲ್ಲಿಗೆ ಸೊಸೆ, ವೀಣಾ ಬರುತ್ತಾಳೆ, ಅಯ್ಯೋ ಅತ್ತೆ, ಯಾಕೆ ಇಷ್ಟೊಂದು ಚಿಂತೆ ಮಾಡುತ್ತೀದ್ದೀರಿ, ಎಲ್ಲವೂ ಸರಿಯಾಗುತ್ತದೆ, ಚಿಂತಿಸಬೇಡಿ ಎನ್ನುತ್ತಾಳೆ. ಒಳಗಡೆ ಹೋಗಿ, ಸಂತೋಷ್‌ಗೆ ನೀವು ಯಾವತ್ತೂ ಹಣ ಹಣ ಎನ್ನುತ್ತೀರಿ, ಸ್ವಲ್ಪ ಅತ್ತೆ ಮಾವನ ಆರೋಗ್ಯದ ಕಡೆಗೂ ಗಮನ ಹರಿಸಿ ಎನ್ನುತ್ತಾಳೆ. ಅದಕ್ಕೆ ಸಂತೋಷ್ ಕಿವಿಗೊಡುವುದಿಲ್ಲ. ಇತ್ತ, ಹರೀಶನ ಬಳಿ, ಸಿಂಚನಾ, ಈ ಮನೆಯಲ್ಲಿ ಸರಿಯಾಗುತ್ತಿಲ್ಲ, ನಾವು ಬೇರೆ ಮನೆ ಮಾಡೋಣ ಎನ್ನುತ್ತಾಳೆ. ಅದಕ್ಕೆ ಹರೀಶ ಒಪ್ಪುವುದಿಲ್ಲ, ಸದ್ಯಕ್ಕೆ ಇಲ್ಲೇ ಇರೋಣ ಎನ್ನುತ್ತಾನೆ. ನಾವು ಈಗ ಹೊರಹೋದರೆ, ಓಡಿ ಹೋದರು, ಪರಿಸ್ಥಿತಿ ಎದುರಿಸಲು ನಮ್ಮಿಂದ ಆಗಲಿಲ್ಲ ಎಂದುಕೊಳ್ಳುತ್ತಾರೆ ಎಂದು ಹರೀಶ, ಸಿಂಚನಾಳ ಮಾತಿಗೆ ತಡೆ ನೀಡುತ್ತಾನೆ.

ಎಸ್‌ಪಿಗೆ ಸೂಚನೆ ಕೊಟ್ಟಿದ್ದಾರೆ ಜವರೇಗೌಡ್ರು

ನಾನು ಹೇಳಿದೆ ಎಂದು ಕೇಸ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಕೇಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸಬೇಡಿ, ಸುಮ್ಮನೆ ಇದ್ದುಬಿಡಿ, ಅದರಿಂದ ಏನೂ ಪ್ರಯೋಜನವಿಲ್ಲ. ಮನೆಯವರ ಎದುರು ಹಾಗೆ ಹೇಳಿದೆನಷ್ಟೇ, ನೀವು ನಿಧಾನಕ್ಕೆ ವಿಚಾರಣೆ ಮಾಡಿ, ಸೊಸೆ ಕೇಳಿದರೆ, ವಿಚಾರಣೆ ನಡೆಯುತ್ತಿದೆ ಎಂದು ಹೇಳಿಬಿಡಿ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳುತ್ತಾರೆ. ಎಸ್‌ಪಿಯವರು, ಅರ್ಥವಾಯಿತು ಗೌಡ್ರೆ ಎಂದು ನಮಸ್ಕರಿಸಿ ಹೋಗುತ್ತಾರೆ. ಇತ್ತ ಮರಿಗೌಡ್ರು ಕೂಡ ಕೇಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವಂತೆ ಕಾಣುತ್ತಿದೆ.

ಮನೆಗೆ ಕಳ್ಳರು ಬಂದಿರಬಹುದು ಎಂದು ಜಯಂತನಿಗೆ ಸಂಶಯ

ಮನೆಗೆ ಬಂದ ಜಯಂತನಿಗೆ, ಕೆಲವೊಂದು ವಸ್ತುಗಳು ಅದಲು ಬದಲಾಗಿರುವುದು, ಅದರ ಸ್ವಸ್ಥಾನದಿಂದ ಬದಲಾಗಿ, ಬೇರೆ ಕಡೆ ಇರುವುದು ಕಂಡುಬರುತ್ತದೆ. ಹೀಗಾಗಿ ಮನೆಯಲ್ಲಿ ಕಳ್ಳತನ ನಡೆದಿರಬಹುದು ಅಥವಾ ಯಾರಾದರೂ ಹೊರಗಿನವರು ಬಂದಿರಬಹುದು ಎಂದು ಜಯಂತ್ ಯೋಚಿಸಲು ಶುರು ಮಾಡುತ್ತಾನೆ. ಅಲ್ಲದೆ, ಮನೆಯೆಲ್ಲಾ ಓಡಾಡಿ ಪರಿಶೀಲಿಸುತ್ತಾನೆ. ಅಲ್ಲಿಗೆ ಬಂದ, ಜಾಹ್ನವಿ, ಮೊಬೈಲ್‌ನಲ್ಲಿಯೇ ಸಿಸಿಟಿವಿಯಲ್ಲಿ ನೋಡಿ, ಪೊಲೀಸ್ ದೂರು ಎಲ್ಲ ಯಾಕೆ ಎಂದು ಹೇಳುತ್ತಾಳೆ. ಅಲ್ಲಿಗೆ ಶುಕ್ರವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner