ತಾಯಿ ರೇಣುಕಾ ಮಾತನ್ನು ಧಿಕ್ಕರಿಸಿ ಅಜ್ಜಿಯನ್ನು ನೋಡಲು ಭಾವನಾಳನ್ನು ಆಸ್ಪತ್ರೆಗೆ ಕರೆದೊಯ್ದ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 7ರ ಎಪಿಸೋಡ್‌ನಲ್ಲಿ ಅಜ್ಜಿಯನ್ನು ನೋಡಲು ಸಿದ್ದೇಗೌಡ ಜೊತೆ ಭಾವನಾ ಆಸ್ಪತ್ರೆಗೆ ಹೋಗುವಾಗ ರೇಣುಕಾ ತಡೆಯುತ್ತಾಳೆ. ತಾಯಿ ವರ್ತನೆಗೆ ಬೇಸರಗೊಂಡ ಸಿದ್ದೇಗೌಡ, ರೇಣುಕಾ ಮಾತನ್ನು ಕೇಳದೆ ಭಾವನಾಳನ್ನು ಕರೆದೊಯ್ಯುತ್ತಾನೆ.
Lakshmi Nivasa Serial: ಗೆಳೆಯ ಸಚಿನ್ ತನ್ನ ಬಗ್ಗೆ ಎಲ್ಲಾ ಸತ್ಯವನ್ನು ಜಾನುಗೆ ಹೇಳಿ, ಅವಳು ನನ್ನನ್ನು ಬಿಟ್ಟು ಹೋಗುತ್ತಾಳೆ ಎಂಬ ಭಯದಿಂದ ಜಯಂತ್, ತನ್ನ ಗೆಳೆಯನನ್ನ ಬೆದರಿಸಿ ಮನೆಯಿಂದ ಕಳಿಸುತ್ತಾನೆ, ಒಂದಲ್ಲಾ ಒಂದು ದಿನ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿ ಸಚಿನ್, ಮನೆಯಿಂದ ವಾಪಸ್ ಹೊರಡುತ್ತಾನೆ. ಜಯಂತ್ ಹಾಗೂ ಸಚಿನ್ ಮಾತನಾಡುವಾಗ ಜಾನು ಅಜ್ಜಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ.
ಅಜ್ಜಿ ಬದುಕಬಾರದು ಎಂದು ದೇವರನ್ನು ಪ್ರಾರ್ಥಿಸಿದ ಜಯಂತ್
ಒಂದು ಸಮಸ್ಯೆ ಮುಗಿದಂತೆ ಎಂದು ಮನೆ ಒಳಬರುವ ಜಯಂತ್‌ಗೆ ಅಜ್ಜಿಯನ್ನು ನೋಡಿ ಗಾಬರಿ ಆಗುತ್ತದೆ. ನೀನು ನನ್ನ ಮೊಮ್ಮಗಳಿಗೆ ಮೋಸ ಮಾಡುತ್ತಿದ್ದೀಯ, ಅವಳು ನಿನ್ನನ್ನು ಒಳ್ಳೆಯವನು ಎಂದು ತಿಳಿದಿದ್ದಾಳೆ. ನಿನ್ನದು ನಿಜವಾದ ಪ್ರೀತಿ ಅಲ್ಲ, ಈಗಲೇ ಅವಳಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಕೋಪಗೊಳ್ಳುತ್ತಾರೆ. ನನ್ನ ಮಾತನ್ನು ಕೇಳಿ, ನಂತರ ಜಾನುಗೆ ಹೇಳಬೇಕೋ, ಬೇಡವೋ ನಿರ್ಧರಿಸಿ ಎಂದು ಅಜ್ಜಿಯನ್ನು ಸಮಾಧಾನ ಮಾಡಲು ಜಯಂತ್ ಪ್ರಯತ್ನಿಸುತ್ತಾನೆ. ಆದರೆ ಅಜ್ಜಿ ಮಾತ್ರ ಜಯಂತ್ ಮಾತನ್ನು ಕೇಳುವುದಿಲ್ಲ. ತಾನು ವೆಂಕಿ ಸ್ನೇಹಿತ ಎಂದು ಗೊತ್ತಿದ್ದರೂ ಇಷ್ಟು ದಿನಗಳ ಕಾಲ ಸುಮ್ಮನಿದ್ದ ಜಯಂತನ ಮೇಲೆ ಕೋಪ ಹೆಚ್ಚಾಗುತ್ತದೆ.
ಅಜ್ಜಿಯನ್ನು ಹೇಗಾದರೂ ತಡೆಯಬೇಕೆಂದು ಜಯಂತ್, ಅವರ ಕುತ್ತಿಗೆ ಹಿಸುಕುತ್ತಾನೆ. ಅಜ್ಜಿ ಪ್ರಜ್ಞೆ ತಪ್ಪುತ್ತಾರೆ, ನನಗೆ ಏನೂ ಗೊತ್ತಿಲ್ಲ ಎನ್ನುವಂತೆ ಜಯಂತ್ ಮಲಗುತ್ತಾನೆ. ಬೆಳಗ್ಗೆ ಅಜ್ಜಿಯನ್ನು ನೋಡಿದ ಜಾನು ಗಾಬರಿಗೊಂಡು ಜಯಂತ್‌ನನ್ನು ಕರೆಯುತ್ತಾಳೆ. ಜಯಂತ್ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಅಜ್ಜಿ ಬದುಕಿ ಬಂದರೆ ಕಷ್ಟ, ಡಾಕ್ಟರ್ ಬಂದು ಸಾರಿ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದರೆ ನನಗೆ ಖುಷಿಯಾಗುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ.
ಭಾವನಾಳನ್ನು ಆಸ್ಪತ್ರೆಗೆ ಹೋಗಲು ಬಿಡದ ರೇಣುಕಾ
ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಿರುವ ವಿಚಾರ ಎಲ್ಲರಿಗೂ ಗೊತ್ತಾಗುತ್ತದೆ. ಆಸ್ಪತ್ರೆಗೆ ಬಂದ ಶ್ರೀನಿವಾಸ್, ಇದೆಲ್ಲಾ ಹೇಗಾಯ್ತು, ಅಮ್ಮ ಒಬ್ಬರೇ ಹೊರಗೆ ಹೋದವರಲ್ಲ, ಆ ರೀತಿ ಹೋಗಬೇಕೆಂದರೂ ಯಾರನ್ನಾದರೂ ಎಬ್ಬಿಸುತ್ತಾರೆ ಎನ್ನುತ್ತಾನೆ, ಈ ವಿಚಾರ ಜಯಂತ್‌ಗೆ ಕೂಡಾ ಗೊತ್ತಿಲ್ಲ, ಅವರು ಮಲಗಿದ್ದರು ನಾನು ನೋಡಿದ ನಂತರವಷ್ಟೇ ಅವರಿಗೂ ವಿಚಾರ ಗೊತ್ತಾಗಿದ್ದು ಎಂದು ಜಾನವಿ ಅಪ್ಪನನ್ನು ಸಮಾಧಾನ ಮಾಡುತ್ತಾಳೆ.
ಭಾವನಾ ಕೂಡಾ ವಿಚಾರ ತಿಳಿದು ಗಾಬರಿ ಆಗುತ್ತಾಳೆ. ಅಜ್ಜಿ ವಿಚಾರವನ್ನು ಸಿದ್ದೇಗೌಡನಿಗೆ ತಿಳಿಸುತ್ತಾಳೆ. ಸರಿ ನಾವು ಹೋಗಿ ಬರೋಣ ಎಂದು ಭಾವನಾಳನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಡುತ್ತಾನೆ. ಅಮ್ಮನಿಗೆ ಒಂದು ಮಾತು ತಿಳಿಸೋಣ ಎಂದು ವಿಚಾರವನ್ನು ರೇಣುಕಾಗೆ ಹೇಳುತ್ತಾನೆ. ಇವಳು ಇಲ್ಲಿಗೆ ಬಂದಾಗಿನಿಂದ ನೀನು ಬಹಳ ಬದಲಾಗಿದ್ದೀಯ, ನಿನಗೆ ಬೇರೆಯವರ ಮನೆ ಬಗ್ಗೆ ಯೋಚನೆ, ಆದರೆ ನಿನ್ನ ತಾಯಿ ಬಗ್ಗೆ ಸ್ವಲ್ಪವೂ ಕನಿಕರ ಇಲ್ಲ, ನಿಮ್ಮಿಷ್ಟ ಬಂದಂತೆ ಹೋಗಲು, ಇಷ್ಟಬಂದಂತೆ ಬರಲು ಇದು ಛತ್ರ ಅಲ್ಲ ಎನ್ನುತ್ತಾಳೆ.
ಈ ಸಮಯದಲ್ಲೂ ನೀವು ಹೀಗೆ ಮಾತನಾಡುವುದು ಸರಿಯಲ್ಲ, ನನಗೆ ನಿಮ್ಮ ಬಗ್ಗೆಯೂ ಕಾಳಜಿ ಇದೆ, ಆದರೆ ಈಗ ಭಾವನಾ ಅವರ ಅಜ್ಜಿ ಆಸ್ಪತ್ರಗೆ ಸೇರಿದ್ದಾರೆ, ಮೊಮ್ಮಗಳಾಗಿ ಅವರು ಹೋಗಬೇಕು, ನಮ್ಮನ್ನು ಹೋಗಲು ಬಿಡು ಎಂದು ಸಿದ್ದು, ತಾಯಿ ರೇಣುಕಾ ಮಾತನ್ನು ಕೇಳದೆ ಅಲ್ಲಿಂದ ಹೊರಡುತ್ತಾನೆ. ಅಷ್ಟರಲ್ಲಿ ಮರೀಗೌಡ ಬಂದು ಭಾವನಾಳನ್ನು ನೀನೇ ಕರೆದುಕೊಂಡು ಹೋಗಿ ಬಿಟ್ಟು ಬಾ , ಅಮ್ಮನ ಜೊತೆ ನಾನು ಮಾತನಾಡುತ್ತೇನೆ ಎನ್ನುತ್ತಾನೆ. ಸಿದ್ದು ಹೆಂಡತಿ ಭಾವನಾ ಜೊತೆ ಆಸ್ಪತ್ರೆಗೆ ಬರುತ್ತಾನೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ಇದನ್ನೂ ಓದಿ: ಕಲರ್ಸ್ ಕನ್ನಡದ ವಧು ಸೀರಿಯಲ್ ನಾಯಕ ನಟ ಇವರೇ ನೋಡಿ
ವಿಭಾಗ