ವೆಂಕಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೆಲ್ವಿ; ಮನೆಗೆ ಮರಳಿದ ಜಯಂತ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ವೆಂಕಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೆಲ್ವಿ; ಮನೆಗೆ ಮರಳಿದ ಜಯಂತ: ಲಕ್ಷ್ಮೀ ನಿವಾಸ ಧಾರಾವಾಹಿ

ವೆಂಕಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೆಲ್ವಿ; ಮನೆಗೆ ಮರಳಿದ ಜಯಂತ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 8ರ ಸಂಚಿಕೆಯಲ್ಲಿ ಚೆಲ್ವಿ ವೆಂಕಿಯನ್ನು ಹುಡುಕಿಕೊಡುವಂತೆ ಪ್ರಕಾಶಣ್ಣನ ಬೆನ್ನು ಬಿದ್ದಿದ್ದಾಳೆ. ನಂತರ ಅವನ ಮೂಲಕ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿ ವೆಂಕಿಯನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಮಂಗಳವಾರ ಏಪ್ರಿಲ್ 8ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಮಂಗಳವಾರ ಏಪ್ರಿಲ್ 8ರ ಸಂಚಿಕೆ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 8ರ ಸಂಚಿಕೆಯಲ್ಲಿ ಜಯಂತ, ಲಕ್ಷ್ಮೀ ನಿವಾಸದಿಂದ ಹೊರಟು ಮನೆಗೆ ಮರಳಿದ್ದಾನೆ. ಮನೆಗೆ ಹೋಗುವೆ ಎಂದು ಅವನು ಹೇಳಿದಾಗ, ಮನೆಯವರು ಅವನನ್ನು ಕಳುಹಿಸಲು ಒಪ್ಪಿಲ್ಲ. ಆದರೆ ಜಯಂತ ಮಾತ್ರ, ಮನೆಯಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೋಗಿದ್ದಾನೆ, ಮನೆಯವರು ಭಾರವಾದ ಮನಸ್ಸಿನಿಂದ ಅವನನ್ನು ಕಳುಹಿಸಿಕೊಟ್ಟಿದ್ದಾರೆ. ಮನೆಗೆ ಹೋದ ಜಯಂತ, ಜಾಹ್ನವಿ ನೆನಪಿನಲ್ಲೇ ದಿನ ಕಳೆದಿದ್ದಾನೆ. ಜಾಹ್ನವಿಯ ಹಾಡಿನ ರೆಕಾರ್ಡಿಂಗ್ ಕೇಳಿದ್ದಾನೆ, ಅವಳ ಹಳೆಯ ಫೋಟೊ ನೋಡಿದ್ದಾನೆ. ನಂತರ ಮದುವೆಯ ಫೋಟೊಗಳನ್ನು ನೋಡಿ ಮರುಕಪಟ್ಟುಕೊಂಡಿದ್ದಾನೆ. ಅಷ್ಟರಲ್ಲಿ ಅವನ ಕಣ್ಣ ಮುಂದೆ ಜಾಹ್ನವಿ ಸಮುದ್ರಕ್ಕೆ ಹಾರಿದ ದೃಶ್ಯ ಅವನ ನೆನಪಿಗೆ ಬಂದಿದೆ. ಹೀಗಾಗಿ ಜಯಂತ ಮಂಕಾಗಿ ಅಲ್ಲೇ ಕುಳಿತಿದ್ದಾನೆ.

ಮತ್ತೊಂದೆಡೆ ಸಿದ್ದೇಗೌಡ, ಮನೆಯಲ್ಲಿ ಮರಿಗೌಡನ ಜೊತೆ ಮಾತುಕತೆ ನಡೆಸಿದ್ದಾನೆ. ನನ್ನ ಬದಲಿಗೆ ಜೈಲಿಗೆ ಹೋಗಿರುವ ವ್ಯಕ್ತಿಯನ್ನು ನಾನೊಮ್ಮೆ ನೋಡಬೇಕು, ಮಾತನಾಡಬೇಕು ಎಂದು ಹವಣಿಸುತ್ತಿದ್ದಾನೆ. ಅದಕ್ಕೆ ಮರಿಗೌಡ, ಎಲ್ಲ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ, ನೀನು ಚಿಂತಿಸಬೇಡ, ಎಲ್ಲ ಕೆಲಸ ಮುಗಿಯಲಿ, ನಂತರ ನೀನು ಅವನನ್ನು ಭೇಟಿಯಾಗಿ ಥ್ಯಾಂಕ್ಸ್ ಹೇಳು ಎಂದಿದ್ದಾನೆ. ನಂತರ ಹೊರಗಡೆ ಬಂದು ಭಾವನಾಗೆ ಸಮಾಧಾನ ಮಾಡಿದ್ದಾನೆ.

ಇತ್ತ ಚೆಲ್ವಿ ಪ್ರಕಾಶಣ್ಣನ ಮನೆಗೆ ಹೋಗಿದ್ದಾಳೆ. ವೆಂಕಿಯನ್ನು ಹುಡುಕಲು ಸಹಾಯ ಮಾಡುವೆ ಎಂದು ಪ್ರಕಾಶಣ್ಣ ಹೇಳಿದ್ದರಿಂದ, ಅದನ್ನೇ ಅವಳು ನಂಬಿಕೊಂಡು ಕುಳಿತಿದ್ದಾಳೆ. ಆದರೆ ಪ್ರಕಾಶಣ್ಣನ ತಂತ್ರ ಅವಳಿಗೆ ಅರಿವಿಗೆ ಬಂದಿಲ್ಲ. ಜತೆಗೆ ವೆಂಕಿ ಕೂಡ ಹೀಗೆ ಮಾಡಲು ಒಪ್ಪಿಕೊಂಡಿರಬಹುದು ಎಂದು ಅವಳು ಅಂದುಕೊಂಡಿಲ್ಲ. ಅದಕ್ಕಾಗಿ ಅವಳು ಪ್ರಕಾಶಣ್ಣನ ಸಹಾಯ ಬಯಸಿದ್ದಾಳೆ.

ಮನೆಯ ಬಳಿ ಹೋದಾಗ ಅಲ್ಲಿ ಪ್ರಕಾಶಣ್ಣ ಇರುವುದಿಲ್ಲ. ಹೀಗಾಗಿ ಚೆಲ್ವಿ ಕಾದು ಕುಳಿತಿದ್ದಾಳೆ. ನಂತರ ಪ್ರಕಾಶಣ್ಣ ಬರುತ್ತಲೇ, ಅವನನ್ನು ಕರೆದುಕೊಂಡು ಪೊಲೀಸ್ ಸ್ಟೇಶನ್‌ಗೆ ಹೋಗಿದ್ದಾಳೆ. ಅವಳನ್ನು ಹೊರಗಡೆ ನಿಲ್ಲಿಸಿದ ಪ್ರಕಾಶಣ್ಣ, ಒಳಗಡೆ ಹೋಗಿ ವೆಂಕಿಯ ಬಳಿ ವಿಚಾರ ತಿಳಿಸಿದ್ದಾನೆ. ಚೆಲ್ವಿ ಒಳಗೆ ಬರುವಾಗ ಅವಳೆದುರು ಕಾಣಿಸಿಕೊಳ್ಳಬೇಡ, ಸುಮ್ಮನೆ ಒಳಗಿರು ಎಂದು ಎಚ್ಚರಿಸಿ ಹೋಗಿದ್ದಾನೆ. ನಂತರ ಚೆಲ್ವಿ ಒಳಗಡೆ ಬಂದು, ಪೊಲೀಸರಲ್ಲಿ ದೂರು ನೀಡಿದ್ದಾಳೆ. ಅವಳ ವಿವರಣೆ ಕೇಳಿ, ವೆಂಕಿಯೇ ಅವಳ ಗಂಡ ಎಂದು ಅವರಿಗೆ ಅರಿವಾಗಿದೆ, ಹೀಗಾಗಿ ಅವಳನ್ನು ಬೇಗ ಬೇಗನೇ ಹೊರಗಡೆ ಕಳುಹಿಸಿದ್ದಾರೆ.

ಮನೆಗೆ ಬಂದ ಚೆಲ್ವಿ, ಪೊಲೀಸರು ವೆಂಕಿಯನ್ನು ಹುಡುಕಲು ಸಹಾಯ ಮಾಡುತ್ತಿಲ್ಲ, ಅವರು ಸರಿ ಕೆಲಸ ಮಾಡುತ್ತಿಲ್ಲ ಎಂದು ಅವ್ವನ ಬಳಿ ದೂರಿದ್ದಾಳೆ. ಅವ್ವ ಅವಳಿಗೆ ಸಮಾಧಾನ ಮಾಡಿ ಕೂರಿಸಿದ್ದಾಳೆ. ವೆಂಕಿ ಬರುತ್ತಾನೆ ಎಂದು ಚೆಲ್ವಿ ಭರವಸೆಯಲ್ಲಿ ಕಾಯುತ್ತಾ ಕುಳಿತಿದ್ದಾಳೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಮಂಗಳವಾರ ಏಪ್ರಿಲ್ 8ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in