ಆಸ್ಪತ್ರೆಯಲ್ಲಿ ಅಜ್ಜಿಯನ್ನು ಕೊಲ್ಲಲು ಜಯಂತ್‌ ಯತ್ನ, ಗಂಡನ ಕ್ರಿಮಿನಲ್‌ ಬುದ್ಧಿ ಜಾನುಗೆ ಗೊತ್ತಾಗುತ್ತಾ? ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಆಸ್ಪತ್ರೆಯಲ್ಲಿ ಅಜ್ಜಿಯನ್ನು ಕೊಲ್ಲಲು ಜಯಂತ್‌ ಯತ್ನ, ಗಂಡನ ಕ್ರಿಮಿನಲ್‌ ಬುದ್ಧಿ ಜಾನುಗೆ ಗೊತ್ತಾಗುತ್ತಾ? ಲಕ್ಷ್ಮೀ ನಿವಾಸ ಧಾರಾವಾಹಿ

ಆಸ್ಪತ್ರೆಯಲ್ಲಿ ಅಜ್ಜಿಯನ್ನು ಕೊಲ್ಲಲು ಜಯಂತ್‌ ಯತ್ನ, ಗಂಡನ ಕ್ರಿಮಿನಲ್‌ ಬುದ್ಧಿ ಜಾನುಗೆ ಗೊತ್ತಾಗುತ್ತಾ? ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 9ರ ಎಪಿಸೋಡ್‌ನಲ್ಲಿ ಆಸ್ಪತ್ರೆ ಸೇರಿರುವ ಅಜ್ಜಿಗೆ ಪ್ರಜ್ಞೆ ಬರುತ್ತದೆ, ಆದರೆ ಅವರು ಜಾನುಗೆ ನಿಜ ಹೇಳಿದರೆ ಕಷ್ಟ ಎಂದು ಭಯಪಡುವ ಜಯಂತ್‌, ಆಸ್ಪತ್ರೆಯಲ್ಲೇ ಅಜ್ಜಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 9ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 9ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ತನ್ನ ಬಗ್ಗೆ ಅಜ್ಜಿಗೆ ಎಲ್ಲವೂ ತಿಳಿದುಹೋಯ್ತು, ಜಾನುಗೆ ನಿಜ ಹೇಳಿದರೆ ನನ್ನನು ಬಿಟ್ಟು ಹೋಗುವುದು ಖಂಡಿತ ಎಂದು ಭಯಗೊಂಡು ಜಯಂತ್‌, ಅಜ್ಜಿಯನ್ನು ಕೊಲ್ಲಲು ಯತ್ನಿಸುತ್ತಾನೆ. ಅದರೆ ಆಕೆ ಪ್ರಜ್ಞೆ ತಪ್ಪಿ ಬೀಳುತ್ತಾರೆ, ಮರುದಿನ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿ ಆಂಬ್ಯುಲೆನ್ಸ್‌ ಕರೆಸಿ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ.

ಅಜ್ಜಿಯನ್ನು ಕೊಲ್ಲಲು ಯತ್ನಿಸುವ ಜಯಂತ್‌

ಲಕ್ಷ್ಮೀಗೆ ಹೊರತುಪಡಿಸಿ ಎಲ್ಲರಿಗೂ ವಿಚಾರ ಗೊತ್ತಾಗುತ್ತದೆ, ಭಾವನಾಳನ್ನು ಕರೆದುಕೊಂಡು ಸಿದ್ದೇಗೌಡ ಆಸ್ಪತ್ರೆಗೆ ಬರುತ್ತಾನೆ. ಅಜ್ಜಿಗೆ ಪ್ರಜ್ಞೆ ಬಂದಿದೆ ಎಂದು ಡಾಕ್ಟರ್‌ ವಿಚಾರ ತಿಳಿಸುತ್ತಾರೆ, ಎಲ್ಲರೂ ಅಜ್ಜಿಯನ್ನು ನೋಡಲು ಒಳಗೆ ಹೋಗುತ್ತಾರೆ, ಆದರೆ ಜಯಂತ್‌ನನ್ನು ನೋಡಿ ಅಜ್ಜಿ ಗಾಬರಿ ಆಗುತ್ತಾರೆ. ರಾತ್ರಿ ನಡೆದ ವಿಚಾರವನ್ನು ಮಗನ ಬಳಿ ಹೇಳಲು ಅಜ್ಜಿ ಪ್ರಯತ್ನಿಸುತ್ತಾರೆ, ಆದರೆ ಜಯಂತ್‌ ಮುಖ ನೋಡಿ ಅವರು ಇನ್ನಷ್ಟು ಗಾಬರಿ ಆಗುತ್ತಾರೆ. ಕೂಡಲೇ ಡಾಕ್ಟರ್‌ ಬಂದು ಎಲ್ಲರನ್ನೂ ಹೊರ ಕಳಿಸುತ್ತಾರೆ.

ಎಲ್ಲರೂ ಗಾಬರಿಯಾಗಿದ್ದಾರೆ, ಹೇಗೋ ಅವರಿಗೆ ಪ್ರಜ್ಞೆ ಬಂದಿದೆ, ಆಸ್ಪತ್ರೆಯಲ್ಲಿ ಒಬ್ಬರು ಇದ್ದರೆ ಸಾಕು ಎಂದು ನಮ್ಮ ಮನೆಯವರ ಮುಂದೆ ಹೇಳುವಂತೆ ಡಾಕ್ಟರ್‌ ಬಳಿ ಜಯಂತ್‌ ಮನವಿ ಮಾಡುತ್ತಾನೆ. ಅದರಂತೆ ಡಾಕ್ಟರ್‌ ಹೇಳುತ್ತಾರೆ. ನೀವೆಲ್ಲರೂ ಹೋಗಿ ನಾನು ಇಲ್ಲಿ ಇರುತ್ತೇನೆ ಎಂದು ಜಯಂತ್‌, ಉಪಾಯ ಮಾಡಿ ಎಲ್ಲರನ್ನೂ ಮನೆಗೆ ಕಳಿಸುತ್ತಾನೆ. ಜಾನು, ಶ್ರೀನಿವಾಸ್ ಮನೆಗೆ ಬಂದರೂ ಎಲ್ಲರ ಗಮನ ಅಜ್ಜಿ ಕಡೆಗೇ ಇರುತ್ತದೆ. ಇತ್ತ ಜಯಂತ್‌ ಅಜ್ಜಿ ಬಳಿ ಬಂದು ಆಕ್ಸಿಜನ್‌ ಮಾಸ್ಕ್‌ ತೆಗೆಯಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ನರ್ಸ್‌ ಬರುತ್ತಾರೆ.

ಮನೆ ಕೆಲಸದವರ ಬಗ್ಗೆ ಜಯಂತ್‌ ಬಳಿ ವಿಚಾರಿಸಿದ ಶ್ರೀನಿವಾಸ್

ನರ್ಸ್‌ ಹೋಗುತ್ತಿದ್ದಂತೆ ಮತ್ತೆ ಜಯಂತ್‌, ಅಜ್ಜಿ ಬಳಿ ಬಂದು ಆಕ್ಸಿಜನ್‌ ಮಾಸ್ಕ್‌ ತೆಗೆಯುವ ಪ್ರಯತ್ನ ಮಾಡುತ್ತಾನೆ. ಆಗ ಸಿದ್ದು ಅಲ್ಲಿಗೆ ಬರುತ್ತಾನೆ. ಏನು ಮಾಡುತ್ತಿದ್ದೀರಿ ಎಂದು ಸಿದ್ದು ಕೇಳುತ್ತಾನೆ, ಅಜ್ಜಿ ಬಳಿ ಮಾತನಾಡಿಸುತ್ತಿದ್ದೆ, ಹೀಗೆ ಮಾತನಾಡಿಸಿದರೆ ಬೇಗ ಪ್ರಜ್ಞೆ ಬರುತ್ತದೆ ಎಂದು ಡಾಕ್ಟರ್‌ ಹೇಳಿದ್ದಾರೆ ಎಂದು ನಾಟಕ ಮಾಡುತ್ತಾನೆ. ನಾನು ಇಲ್ಲಿ ಇರುತ್ತಿದ್ದೆ, ನೀವೇಕೆ ಬಂದ್ರಿ ಎಂದು ಜಯಂತ್‌ ಗಾಬರಿಯಾಗುತ್ತಾನೆ. ಈಗ ಮನೆಯಲ್ಲಿ ನನಗಿಂತ ನಿಮ್ಮ ಅವಶ್ಯಕತೆ ಹೆಚ್ಚಾಗಿರೋದು ನೀವು ಹೋಗಿ, ನಾನು ಇಲ್ಲಿ ಇರುತ್ತೇನೆ ಎಂದು ಸಿದ್ದು ಬಲವಂತ ಮಾಡಿ ಜಯಂತ್‌ನನ್ನು ಮನೆಗೆ ಕಳಿಸುತ್ತಾನೆ. ಜಯಂತ್‌ಗೆ ಇಷ್ಟವಿಲ್ಲದಿದ್ದರೂ ಮನೆಗೆ ಬರುತ್ತಾನೆ.

ನಾನು ಅಮ್ಮನನ್ನು ಇಲ್ಲಿಗೆ ಕಳಿಸಿದ್ದು ಸಮಸ್ಯೆ ಆಯ್ತು ಇಲ್ಲದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಶ್ರೀನಿವಾಸ್‌, ಮಗಳು ಜಾನು ಬಳಿ ಹೇಳಿಕೊಂಡು ಬೇಸರಗೊಳ್ಳುತ್ತಾನೆ.ಅಷ್ಟರಲ್ಲಿ ಜಯಂತ್‌ ಮನೆಗೆ ಬರುತ್ತಾನೆ, ನಿಮ್ಮ ಮನೆ ಕ್ಲೀನ್‌ ಮಾಡಲು ಕೆಲಸದವರು ಎಷ್ಟು ಗಂಟೆಗೆ ಬರುತ್ತಾರೆ? ನಿನ್ನೆ ಅಮ್ಮನನ್ನು ಅವರು ನೋಡಿದ್ರಾ? ಅವರು ನೋಡಿದಾಗ ಅಮ್ಮ ಏನು ಮಾಡುತ್ತಿದ್ದರು ಎಂದು ನಾನು ಕೇಳಬೇಕು, ಅಜ್ಜಿಗೆ ಏನಾಯ್ತು ಎಂದು ಡಾಕ್ಟರ್‌ ಪದೇ ಪದೆ ಕೇಳುತ್ತಿದ್ದಾರೆ, ವಿಷಯ ಗೊತ್ತಾದರೆ ಡಾಕ್ಟರ್‌ಗೆ ಹೇಳಬಹುದು ಎಂದು ಶ್ರೀನಿವಾಸ್‌ ಕೇಳುತ್ತಾನೆ, ಅವರು 4-5 ದಿನ ಇಲ್ಲಿಗೆ ಬರುವುದಿಲ್ಲ, ನಾನೇ ಫೋನ್‌ ಮಾಡಿ ವಿಚಾರಿಸುತ್ತೇನೆ ಎಂದು ಜಯಂತ್‌ ಹೇಳುತ್ತಾನೆ.

ಗಂಡನ ಕ್ರಿಮಿನಲ್‌ ಬುದ್ಧಿ ಜಾನುಗೆ ತಿಳಿಯುತ್ತಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner