ಮಗ ಸೊಸೆಯನ್ನು ಫಾರಿನ್ ಟೂರ್‌ಗೆ ಕಳುಹಿಸಿ ತಮ್ಮ ಪ್ಲ್ಯಾನ್ ಜಾರಿಗೊಳಿಸಲು ಮುಂದಾದ್ರು ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಗ ಸೊಸೆಯನ್ನು ಫಾರಿನ್ ಟೂರ್‌ಗೆ ಕಳುಹಿಸಿ ತಮ್ಮ ಪ್ಲ್ಯಾನ್ ಜಾರಿಗೊಳಿಸಲು ಮುಂದಾದ್ರು ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

ಮಗ ಸೊಸೆಯನ್ನು ಫಾರಿನ್ ಟೂರ್‌ಗೆ ಕಳುಹಿಸಿ ತಮ್ಮ ಪ್ಲ್ಯಾನ್ ಜಾರಿಗೊಳಿಸಲು ಮುಂದಾದ್ರು ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜವರೇಗೌಡ ಮತ್ತು ಮರಿಗೌಡ್ರು, ಸಿದ್ದೇಗೌಡನನ್ನು ಅಪಾಯದಿಂದ ಪಾರು ಮಾಡಲು ಹೊಸ ಉಪಾಯ ಮಾಡಿದ್ದಾರೆ. ಅದರಂತೆ ಸಿದ್ದೇಗೌಡ ಮತ್ತು ಭಾವನಾರನ್ನು ಫಾರಿನ್ ಟೂರ್‌ಗೆ ಕಳುಹಿಸಲಾಗಿದೆ. ಆದರೆ ಈ ವಿಚಾರ, ಮನೆಯಲ್ಲಿ ಕಲಹಕ್ಕೆ ಕಾರಣವಾಗಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ ಮತ್ತು ಭಾವನಾ ದಂಪತಿ, ಖುಷಿಯಿಂದ ಫಾರಿನ್ ಟೂರ್‌ಗೆ ಹೋಗಿದ್ದಾರೆ. ಅವರಿಬ್ಬರನ್ನೂ ಉಪಾಯದಿಂದ ಜವರೇಗೌಡ ಮತ್ತು ಮರಿಗೌಡ್ರು ಕಳುಹಿಸಿಕೊಟ್ಟಿದ್ದಾರೆ. ಇಬ್ಬರೂ ಅತ್ತ ಹೋಗಿರುವ ಈ ಸಂದರ್ಭವನ್ನು ಬಳಸಿಕೊಂಡು, ಜವರೇಗೌಡ ಮತ್ತು ಮರಿಗೌಡ್ರು, ಸಿದ್ದೇಗೌಡನ ಮೇಲಿನ ಕೇಸ್ ಅನ್ನು ಕ್ಲೋಸ್ ಮಾಡಿಸುವ ಪ್ಲ್ಯಾನ್ ರೂಪಿಸಿದ್ದಾರೆ. ಅದರಂತೆ ಎಲ್ಲ ಸಿದ್ಧತೆ ನಡಿದಿದೆ. ಆದರೆ ಭಾವನಾ ಮತ್ತು ಸಿದ್ದೇಗೌಡ, ಫಾರಿನ್ ಟೂರ್ ಹೋಗಿರುವುದು ಮಾತ್ರ ಮನೆಯವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ಹರೀಶ್ ಮತ್ತು ಸಂತೋಷ್, ಮನೆಯಲ್ಲಿ ಖರ್ಚು ವೆಚ್ಚ ಹೆಚ್ಚಾಗುತ್ತಿದೆ ಎಂದು ಚಿಂತೆ ಮಾಡುತ್ತಿದ್ದಾರೆ. ಅದಕ್ಕಾಗಿ ಅಜ್ಜಿಯ ಟ್ರಂಕ್ ಎಗರಿಸಿದರೂ, ಅದರಿಂದ ಏನೂ ಪ್ರಯೋಜನವಾಗಿಲ್ಲ, ಹೀಗಾಗಿ ಅವರು ಪ್ಲ್ಯಾನ್ ಅನ್ನು ಅಲ್ಲಿಯೇ ಕೈಬಿಟ್ಟಿದ್ದಾರೆ. ಅದರ ಬದಲು, ಅಪ್ಪ ಮತ್ತು ಅಜ್ಜಿಯ ಬಳಿ ಇರುವ ಹಣವನ್ನ ಎಗರಿಸುವುದು ಹೇಗೆ ಎಂದು ಯೋಚನೆ ಮಾಡುತ್ತಿದ್ದಾರೆ. ಸಿಂಚನಾಗೆ ಭಾವನಾ ವಿದೇಶಕ್ಕೆ ಹನಿಮೂನ್ ಹೋಗಿರುವುದು ಒಂದಡೆ ಚಿಂತೆಯಾದರೆ, ಮತ್ತೊಂದೆಡೆ ಹರೀಶ್ ಮತ್ತು ನನಗಾಗಿ ಮನೆಯವರು ಏನೂ ಮಾಡುತ್ತಿಲ್ಲ ಎಂಬ ಯೋಚನೆಯಾಗಿದೆ.

ಇತ್ತ ವೆಂಕಿಯ ಅತ್ತೆ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಅವರು ಆರಾಮವಿಲ್ಲದೇ ಇರುವುದನ್ನು ಕಂಡು ವೆಂಕಿ ಮತ್ತು ಚೆಲ್ವಿ ಹೆದರಿಕೊಂಡಿದ್ದಾರೆ. ಅವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಇಬ್ಬರೂ ಪ್ರಾರ್ಥಿಸುತ್ತಿದ್ದಾರೆ. ಮನೆಯವರಿಗೆ ಈ ವಿಚಾರ ಈಗ ಹೇಳುವುದು ಬೇಡ ಎಂದು ಇಬ್ಬರೂ ಸುಮ್ಮನಾಗಿದ್ದಾರೆ. ಅತ್ತ ಸಂತೋಷ್, ಮನೆ ಕಟ್ಟಿಸುತ್ತಿರುವ ವಿಚಾರವನ್ನು ಮನೆಯಲ್ಲಿ ಮುಚ್ಚಿಟ್ಟಿದ್ದಾನೆ. ಆ ಸಂಗತಿ ಮನೆಯವರಿಗೆ ಗೊತ್ತಾಗಬಾರದು ಎಂದು ಅವನು ಪ್ರಯತ್ನಿಸುತ್ತಲೇ ಇದ್ದಾನೆ.

ಜಾಹ್ನವಿ ಮನಸ್ಸು ಇನ್ನೂ ತಿಳಿಯಾಗಿಲ್ಲ, ಜಯಂತನ ಅವತಾರಗಳನ್ನು ಕಂಡ ಬಳಿಕ ಆಕೆ, ಅಸಹಾಯಕ ಸ್ಥಿತಿಯಲ್ಲಿ ಇದ್ದಾಳೆ. ಒಂದೆಡೆ ಮನೆಯವರು, ಅವಳು ಗರ್ಭಿಣಿ ಎಂದೇ ನಂಬಿದ್ದಾರೆ. ಮತ್ತೊಂದೆಡೆ ಜಯಂತ್ ಪ್ರೀತಿ ಹೆಸರಿನಲ್ಲಿ ಹೀಗೆಲ್ಲಾ ಮಾಡಿದ, ಅಜ್ಜಿಯನ್ನು ಕೂಡ ಕೊಲ್ಲಲು ಯತ್ನಿಸಿದ ಎನ್ನುವುದು ಆಕೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ಅಜ್ಜಿ ಕೋಮಾದಿಂದ ಎಚ್ಚರಗೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದು ಜಯಂತ್‌ಗೆ ನಡುಕ ಹುಟ್ಟಿಸಿದೆ. ಅಜ್ಜಿ ಎದ್ದು ಬಾಯಬಿಟ್ಟರೆ ನನ್ನ ಕಥೆ ಮುಗಿಯುತ್ತದೆ ಎನ್ನುವುದು ಅವನಿಗೆ ತಿಳಿದಿದೆ.

ಒಂದೆಡೆ ಜಾಹ್ನವಿಯನ್ನು ಮೆಚ್ಚಿಸಬೇಕು, ಮತ್ತೊಂದೆಡೆ ಆಕೆಯ ಆರೋಗ್ಯ ನೋಡಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿ ಆಕೆಗೆ ಹಾಲಿನಲ್ಲಿ ಮಾತ್ರೆ ಹಾಕಿಕೊಡುವ ಮೂಲಕ, ಆಕೆಯ ಅರಿವಿಗೆ ಬಾರದೇ ಅವಳನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಎಚ್ಚರಗೊಂಡಾಗ, ಜಾಹ್ನವಿಗೆ ತನ್ನನ್ನು ಇಲ್ಲಿ ಕರೆತಂದಿರುವುದು ಗೊತ್ತಾಗಿದೆ. ಅದನ್ನು ಅವಳು ಜಯಂತ್‌ನಲ್ಲಿ ಪ್ರಶ್ನಿಸಿದ್ದಾಳೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಮಾರ್ಚ್ 21ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner