ಕೋಮಾಗೆ ಜಾರಿದ ಜಾಹ್ನವಿ ಅಜ್ಜಿಯನ್ನು ತನ್ನ ಮನೆಗೇ ಕರೆತಂದ ಜಯಂತ್, ಮುಂದೆ ಗತಿಯೇನು? ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 9ರ ಎಪಿಸೋಡ್‌ನಲ್ಲಿ ಆಸ್ಪತ್ರೆ ಸೇರಿರುವ ಅಜ್ಜಿಗೆ ಪ್ರಜ್ಞೆ ಬರುತ್ತದೆ, ಆದರೆ ಅವರು ಜಾನುಗೆ ನಿಜ ಹೇಳಿದರೆ ಕಷ್ಟ ಎಂದು ಭಯಪಡುವ ಜಯಂತ್, ಆಸ್ಪತ್ರೆಯಲ್ಲೇ ಅಜ್ಜಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ.
Lakshmi Nivasa Serial: ಪ್ರಜ್ಞೆ ತಪ್ಪಿದ ಅಜ್ಜಿಯನ್ನು ಜಯಂತ್ ಆಸ್ಪತ್ರೆಗೆ ಸೇರಿಸುತ್ತಾನೆ. ಅಜ್ಜಿಗೆ ಪ್ರಜ್ಞೆ ಬಂದರೆ ನನ್ನ ಕಥೆ ಮುಗಿದಂತೆ ಎಂದುಕೊಂಡು ಆಸ್ಪತ್ರೆಯಲ್ಲೇ ಅವರನ್ನು ಕೊಲ್ಲಲು ಯತ್ನಿಸುತ್ತಾನೆ. ಒಮ್ಮೆ ಆಕ್ಸಿಜನ್ ಮಾಸ್ಕ್ ತೆಗೆಯುವಾಗ ಸಿಸ್ಟರ್ ಬರುತ್ತಾರೆ, ಮತ್ತೊಮ್ಮೆ ಪ್ರಯತ್ನಿಸುವಾಗ ಸಿದ್ದೇಗೌಡ ಬರುತ್ತಾನೆ. ಸಿದ್ದು ಆಸ್ಪತ್ರೆಗೆ ಬಂದು ಜಯಂತ್‌ನನ್ನು ಮನೆಗೆ ಕಳಿಸುತ್ತಾನೆ.
ಕೋಮಾಗೆ ಜಾರಿದ ಜಾಹ್ನವಿ ಅಜ್ಜಿ
ಜಯಂತ್, ಮನೆಗೆ ವಾಪಸ್ ಬಂದಾಗ ಇದೆಲ್ಲಾ ಹೇಗಾಯ್ತು ಎಂದು ಶ್ರೀನಿವಾಸ್ ಕೇಳುತ್ತಾನೆ. ಮನೆ ಕೆಲಸದವರು ಸ್ವಲ್ಪ ದಿನ ಈ ಕಡೆ ಬರುವುದಿಲ್ಲ, ಅವರು ಬಂದರೆ ವಿಚಾರಿಸುವೆ ಎಂದು ಜಯಂತ್ ಸುಳ್ಳು ಹೇಳುತ್ತಾನೆ. ಅಷ್ಟರಲ್ಲಿ ಆಸ್ಪತ್ರೆಯಿಂದ ಕರೆ ಬರುತ್ತದೆ, ಎಲ್ಲರೂ ಗಾಬರಿಯಾಗಿ ಅಲ್ಲಿ ಹೋಗುತ್ತಾರೆ. ಏನೋ ಮಾತನಾಡಬೇಕು, ನನ್ನ ಜೊತೆ ಬನ್ನಿ ಎಂದು ಡಾಕ್ಟರ್, ಶ್ರೀನಿವಾಸ್‌ಗೆ ಹೇಳುತ್ತಾರೆ. ಅದನ್ನು ಕೇಳಿ ಜಯಂತ್‌ಗೆ ಗಾಬರಿ ಆಗುತ್ತದೆ, ಇವರು ನನ್ನ ಹೆಣ್ಣು ಮಕ್ಕಳು ಹಾಗೂ ಅಳಿಯಂದಿರು. ಇವರ ಎದುರಿಗೆ ನೀವು ಹೇಳಿ ಎಂದು ಶ್ರೀನಿವಾಸ್ ಹೇಳುತ್ತಾರೆ. ಹಾಗಾದರೆ ನೀವು ಹಾಗೂ ಹೆಣ್ಣು ಮಕ್ಕಳು ಒಳಗೆ ಬನ್ನಿ, ಅಳಿಯಂದಿರು ಇಲ್ಲೇ ಇರಲಿ ಎಂದು ಡಾಕ್ಟರ್, ಎಲ್ಲರನ್ನೂ ಒಳಗೆ ಕರೆದುಕೊಂಡು ಹೋಗುತ್ತಾರೆ.
ಎಲ್ಲರೂ ಹೊರಗೆ ಹೋದ ನಂತರ ಜಯಂತ್‌ಗೆ ಗಾಬರಿ ಆಗುತ್ತದೆ, ಅಜ್ಜಿಗೆ ಪ್ರಜ್ಞೆ ಬಂದು ಎಲ್ಲವನ್ನೂ ಡಾಕ್ಟರ್ ಬಳಿ ಹೇಳಿಬಿಟ್ರಾ ಎಂಬ ಅನುಮಾನ ಶುರುವಾಗುತ್ತದೆ, ಅಷ್ಟರಲ್ಲಿ ಎಲ್ಲರೂ ಅಳುತ್ತಾ ಹೊರಗೆ ಬರುತ್ತಾರೆ. ನಾನು ನಿಮ್ಮ ಮನೆಗೆ ಅಮ್ಮನನ್ನು ಕಳಿಸಿದ್ದೇ ದೊಡ್ಡ ತಪ್ಪಾಯ್ತು, ಇಲ್ಲದಿದ್ದರೆ ಅವರಿಗೆ ಈ ಗತಿ ಬರುತ್ತಿರಲಿಲ್ಲ ಎಂದು ಶ್ರೀನಿವಾಸ್ ಬೇಸರ ವ್ಯಕ್ತಪಡಿಸುತ್ತಾನೆ. ಮಾವನ ಮಾತು ಕೇಳಿ ಜಯಂತ್‌ಗೆ ಗಾಬರಿ ಆಗುತ್ತದೆ, ಏನಾಯ್ತು ಹೇಳಿ ಎಂದು ಕೇಳಿದಾಗ, ಅಜ್ಜಿ ಕೋಮಾಗೆ ಜಾರಿದ್ದಾರೆ ಎಂದು ಜಾನು ಹೇಳುತ್ತಾಳೆ. ಇದನ್ನು ಕೇಳಿ ಜಯಂತ್‌ಗೆ ಖುಷಿಯಾಗುತ್ತದೆ, ಆದರೂ ಬೇಸರವಾದಂತೆ ನಾಟಕವಾಡುತ್ತಾನೆ.
ಅಜ್ಜಿಯನ್ನು ತನ್ನ ಮನೆಗೆ ಕರೆತಂದ ಜಯಂತ್
ಅಜ್ಜಿಗೆ ಯಾವಾಗ ಪ್ರಜ್ಞೆ ಬರಬಹುದು ಎಂದು ಸಿದ್ದು ಕೇಳುತ್ತಾನೆ. 3 ದಿನ ಆಗಬಹುದು, 3 ತಿಂಗಳು ಅಥವಾ 3 ವರ್ಷಗಳಾಗಬಹುದು. ನೀವು ಆಸ್ಪತ್ರೆಯಲ್ಲಿ ಬಿಟ್ಟರೆ ಏನೂ ಪ್ರಯೋಜನವಾಗುವುದಿಲ್ಲ, ಮನೆಗೆ ಕರೆದುಕೊಂಡು ಹೋಗುವುದು ಒಳ್ಳೆಯದು ಎಂದು ಡಾಕ್ಟರ್ ಸಲಹೆ ನೀಡುತ್ತಾರೆ. ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಶ್ರೀನಿವಾಸ್ ಹೇಳುತ್ತಾನೆ. ಆದರೆ ಅಜ್ಜಿ, ಮನೆಗೆ ವಾಪಸ್ ಹೋದರೆ ಎಲ್ಲಿ ಪ್ರಜ್ಞೆ ಬರುವುದೋ ಎಂಬ ಭಯಕ್ಕೆ ಜಯಂತ್, ನಿಮ್ಮ ನಿರ್ಧಾರಕ್ಕೆ ನನಗೆ ಒಪ್ಪಿಗೆ ಇಲ್ಲ. ಅಜ್ಜಿಗೆ ಈ ಪರಿಸ್ಥಿತಿ ಬಂದಿದ್ದು ನಮ್ಮ ಮನೆಯಲ್ಲಿ, ಆದ್ದರಿಂದ ಅವರು ನನ್ನ ಮನೆಯಲ್ಲೇ ಇರಲಿ ಎಂದು ಹೇಳುತ್ತಾನೆ. ಶ್ರೀನಿವಾಸ್‌ಗೆ ಇದು ಇಷ್ಟವಿಲ್ಲದಿದ್ದರೂ ಮಗಳು, ಅಳಿಯನ ಬಲವಂತಕ್ಕೆ ಸರಿ ಎನ್ನುತ್ತಾನೆ.
ಅಜ್ಜಿಯನ್ನು ಮನೆಗೆ ಕರೆದೊಯ್ದು ಜಯಂತ್ ಕೊಲೆ ಮಾಡುತ್ತಾನಾ? ಜಾಹ್ನವಿಗೆ ಗಂಡನ ಕುತಂತ್ರ ಯಾವಾಗ ತಿಳಿಯುವುದು? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ವಿಭಾಗ