ಪುನೀತ್ ರಾಜ್‌ಕುಮಾರ್ ಹಿರಿ ಮಗಳು ಧೃತಿ ಅವತಾರ ಕಂಡು ‘ನಮ್ ದೊರೆ ಮಗ್ಳು’ ಎಂದು ಹುಬ್ಬೇರಿಸಿದ ಫ್ಯಾನ್ಸ್
ಪುನೀತ್ ರಾಜ್‌ಕುಮಾರ್ ಹಿರಿ ಮಗಳು ಧೃತಿ ರಾಜ್‌ಕುಮಾರ್ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮ್ಯಾಕ್ಸಿಕೊದಲ್ಲಿನ ಬಗೆಬಗೆ ತಾಣಗಳಿಗೆ ಭೇಟಿ ನೀಡಿ, ರೆಸ್ಟೋರಂಟ್‌ಗಳಿಗೆ ತೆರಳಿ ಅಲ್ಲಿನ ತರಹೇವಾರಿ ಖಾದ್ಯಗಳ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಪ್ಪು ಫ್ಯಾನ್ಸ್ ಕಡೆಯಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿವೆ.
Puneeth Rajkumar Daughter Drithi Rajkumar: ಪವರ್‌ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಇಲ್ಲವಾಗಿ ಮೂರು ವರ್ಷ ಮುಗಿದೇ ಹೋಯ್ತು. ಇಂದಿಗೂ ಅವರ ಅಭಿಮಾನಿಗಳು ಪುನೀತ್ ಅವರ ಸ್ಮರಣೆಯಲ್ಲಿದ್ದಾರೆ. ಅಪ್ಪು ನಟಿಸಿದ ಸಿನಿಮಾ, ಅವರ ಹಾಡುಗಳು, ಸಿನಿಮಾ ಡೈಲಾಗ್‌ಗಳ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಮರು ಬಿಡುಗಡೆ ಆಗುತ್ತಿರುವ ಅವರ ಸಿನಿಮಾಗಳ ಮೇಲೆಯೂ ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ಬರೀ ಪುನೀತ್ ರಾಜ್‌ಕುಮಾರ್ ಮಾತ್ರವಲ್ಲ, ಅಪ್ಪು ಇಲ್ಲದ ಮೇಲೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತವರ ಇಬ್ಬರು ಹೆಣ್ಣುಮಕ್ಕಳಲ್ಲಿಯೇ ಪುನೀತ್ ಅವರನ್ನು ಕಾಣುತ್ತಿದ್ದಾರೆ ಫ್ಯಾನ್ಸ್. ಇದೀಗ ದೊರೆ ಮಗಳ ಹೊಸ ಅವತಾರ ಕಂಡು ಹುಬ್ಬೇರಿಸಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಅವರಿಗೆ ಧೃತಿ ಮತ್ತು ವಂದಿತಾ ಎಂಬಿಬ್ಬರು ಮಕ್ಕಳು. ಅಪ್ಪ ದೊಡ್ಡ ಸ್ಟಾರ್ ಆಗಿದ್ದರೂ, ಸಾರ್ವಜನಿಕವಾಗಿ ಇವರಿಬ್ಬರು ಎಲ್ಲೆಡೆ ಕಾಣಿಸಿಕೊಂಡ ಉದಾಹರಣೆ ಇಲ್ಲ. ಅಪ್ಪನ ಅಗಲಿಕೆ ಬಳಿಕವಂತೂ ಎಲ್ಲದರಿಂದಲೂ ಕೊಂಚ ಅಂತರ ಕಾಯ್ದುಕೊಂಡಿದ್ದರು. ಸೋಷಿಯಲ್ ಮೀಡಿಯಾವನ್ನು ಇಬ್ಬರೂ ಬಳಕೆ ಮಾಡುತ್ತಿದ್ದಾರಾದರೂ, ಹೆಚ್ಚು ಸಕ್ರಿಯರಾಗಿರಲಿಲ್ಲ. ಇಬ್ಬರಲ್ಲಿ ಹಿರಿ ಮಗಳು ಧೃತಿ ಕೊಂಚ ಓಪನ್ ಗರ್ಲ್. ಸೋಷಿಯಲ್ ಮೀಡಿಯಾದಲ್ಲಿ ತಮಗಿಷ್ಟವಾದ ಫೋಟೋಗಳನ್ನು ಶೇರ್ ಮಾಡುತ್ತಲಿರುತ್ತಾರೆ. ಇತ್ತೀಚೆಗಷ್ಟೇ ತುಂಡು ಉಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ಶೇರ್ ಮಾಡಿದ್ದಕ್ಕೆ ಟೀಕೆ ಎದುರಿಸಿದ್ದ ಧೃತಿಗೆ ಇದೀಗ ಅದೇ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿದೇಶದಲ್ಲಿ ಧೃತಿ ವಿದ್ಯಾಭ್ಯಾಸ
ಧೃತಿ ರಾಜ್‌ಕುಮಾರ್ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದಿನ ಜತೆಜತೆಗೆ ವಿದೇಶಿ ಸುತ್ತಾಟದ ಕ್ಷಣವನ್ನೂ ಅನುಭವಿಸುತ್ತಿದ್ದಾರೆ. ಮ್ಯಾಕ್ಸಿಕೊದಲ್ಲಿನ ಬಗೆಬಗೆ ತಾಣಗಳಿಗೆ ಭೇಟಿ ನೀಡಿ, ರೆಸ್ಟೋರಂಟ್‌ಗಳಿಗೆ ತೆರಳಿ ಅಲ್ಲಿನ ತರಹೇವಾರಿ ಖಾದ್ಯಗಳ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ, ಅಪ್ಪು ಫ್ಯಾನ್ಸ್ ಕಡೆಯಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿವೆ. ಪುನೀತ್ ಅವರನ್ನೇ ನೋಡಿದಂತಾಯ್ತು ಎಂದು ಕೆಲವರು ಹೇಳಿದರೆ, ನಮ್ಮ ಬಾಸ್ ಮಗಳು, ನಮ್ಮ ದೊರೆ ಮಗಳು ಎಂದೆಲ್ಲ ಕಾಂಪ್ಲಿಮೆಂಟ್ ಕಾಮೆಂಟ್ ಹಾಕುತ್ತಿದ್ದಾರೆ.
ನಮ್ ದೇವ್ರ ಮಗಳು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ ಸ್ಟಾರ್ ನಟರಾಗಿದ್ದವರು. ಅವರ ಅಕಾಲಿಕ ಸಾವು ಕೇವಲ ಅವರ ಕುಟುಂಬವನ್ನಷ್ಟೇ ಅಲ್ಲ, ಇಡೀ ಕರುನಾಡನ್ನೇ ದುಃಖದಲ್ಲಿ ಮುಳಿಗಿಸಿದೆ. ಇತ್ತ ಪುನೀತ್ ಅವರ ಕುಟುಂಬದ ಮೇಲೂ ಅಷ್ಟೇ ಗೌರವ ಇಟ್ಟುಕೊಂಡಿದ್ದಾರೆ. ಅದರಂತೆ, ಈಗ ಧೃತಿ ರಾಜ್‌ಕುಮಾರ್ ಫೋಟೋಗಳಿಗೆ ನಮ್ ದೇವ್ರ ಮಗಳು ಎಂದು ಕಾಮೆಂಟ್ ಹಾಕಿ, ಆ ಪ್ರೀತಿಯನ್ನು ದಾಟಿಸುತ್ತಿದ್ದಾರೆ. ಅಪ್ಪು ಸರ್ ಅವರನ್ನೇ ನೋಡಿದಂಗೆ ಆಯ್ತು, ಅಪ್ಪು ಮಗಳನ್ನು ಅಪ್ಪಿ ಎನ್ನಬಹುದು, ನನ್ನ ದೇವರು ಅಪ್ಪು ತರಾನೇ ಇದಿರಾ ತಂಗೆಮ್ಮ, ಬಾಸ್ ಪ್ರತಿರೂಪ, ನಮ್ ದೊರೆ ಮಗಳು ಎಂದೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.