ʻಅಪ್ಪು ಎಲ್ಲೂ ಹೋಗಿಲ್ಲ, ನಿಮ್ಮಲ್ಲಿಯೇ ಇದ್ದಾರೆʼ; ಪುನೀತ್ ರಾಜ್ಕುಮಾರ್ ಹಿರಿ ಮಗಳು ಧೃತಿಗೆ ನೆಟ್ಟಿಗರ ಶುಭಾಶಯ
ಪುನೀತ್ ರಾಜ್ಕುಮಾರ್ ಹಿರಿಯ ಮಗಳು ಧೃತಿ ಬರ್ತ್ಡೇ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಈ ಖುಷಿಯನ್ನು ಹಂಚಿಕೊಂಡಿದ್ದೇ ತಡ, ಅಪ್ಪು ಅಭಿಮಾನಿಗಳಿಂದ ಸಾಲು ಸಾಲು ಶುಭಾಶಯ ಸಂದೇಶಗಳು ರವಾನೆಯಾಗುತ್ತಿವೆ.

ಸ್ಯಾಂಡಲ್ವುಡ್ನ ಪವರ್ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಇಲ್ಲವಾಗಿ ಮೂರೂವರೆ ವರ್ಷಗಳಾಗುತ್ತ ಬಂತು. ಇಂದಿಗೂ ಅವರಿಲ್ಲ ಅನ್ನೋ ಭಾವ ಕರುನಾಡಿನ ಜನರಲ್ಲಿ ಮೂಡಿಲ್ಲ. ಒಂದಿಲ್ಲ ಒಂದು ರೀತಿ ನಿತ್ಯ ಅಪ್ಪು ಅವರ ದರ್ಶನವಾಗುತ್ತಲೇ ಇರುತ್ತದೆ. ಪುನೀತ್ ಅವರನ್ನು ಅವರ ಸಿನಿಮಾಗಳ ರೂಪದಲ್ಲಿ, ಹಾಡು, ಡೈಲಾಗ್ಗಳ ರೂಪದಲ್ಲಿ ನಿತ್ಯ ನೆನೆಯುತ್ತಲೇ ಇದ್ದಾರೆ. ಇದೀಗ ಇದೇ ಪುನೀತ್ ರಾಜ್ಕುಮಾರ್ ಹಿರಿಯ ಮಗಳು ಧೃತಿ ಬರ್ತ್ಡೇ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದೇ ತಡ, ಅಪ್ಪು ಅಭಿಮಾನಿಗಳಿಂದ ಸಾಲು ಸಾಲು ಶುಭಾಶಯ ಸಂದೇಶಗಳು ರವಾನೆಯಾಗುತ್ತಿವೆ.
ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿ ಮಗಳು ಧೃತಿ, ಕಿರಿ ಮಗಳು ವಂದಿತಾ. ಸ್ಟಾರ್ ನಟನ ಮಕ್ಕಳಾದರೂ, ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಇದ್ದಾರೆ ಪುನೀತ್ ಮಕ್ಕಳು. ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಅತ್ಯಾಪರೂಪ. ಇಂದಿಗೂ ಈ ಇಬ್ಬರು ವಿದ್ಯಾಭ್ಯಾಸದಲ್ಲಿಯೇ ನಿರತರಾಗಿದ್ದಾರೆ. ಹಿರಿಯ ಪುತ್ರಿ ಧೃತಿ ವಿದೇಶದಲ್ಲಿ ಓದುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬೆಂಗಳೂರಿಗೆ ಆಗಮಿಸುವ ಧೃತಿ, ದೂರದ ಮೆಕ್ಸಿಕೋದಲ್ಲಿ ಸಿನಿಮಾ ಸಂಬಂಧಿ ಶಿಕ್ಷಣ ಪಡೆಯುತ್ತಿದ್ದಾರೆ.
ಅಪ್ಪ ದೊಡ್ಡ ಸ್ಟಾರ್ ಆಗಿದ್ದರೂ, ಸಾರ್ವಜನಿಕವಾಗಿ ಇವರಿಬ್ಬರು ಎಲ್ಲೆಡೆ ಕಾಣಿಸಿಕೊಂಡ ಉದಾಹರಣೆ ಕಡಿಮೆ. ಸೋಷಿಯಲ್ ಮೀಡಿಯಾವನ್ನು ಇಬ್ಬರೂ ಬಳಕೆ ಮಾಡುತ್ತಿದ್ದಾರಾದರೂ, ಹೆಚ್ಚು ಸಕ್ರಿಯರಾಗಿರಲಿಲ್ಲ. ಇಬ್ಬರಲ್ಲಿ ಹಿರಿ ಮಗಳು ಧೃತಿ ಕೊಂಚ ಓಪನ್ ಗರ್ಲ್. ಸೋಷಿಯಲ್ ಮೀಡಿಯಾದಲ್ಲಿ ತಮಗಿಷ್ಟವಾದ ಫೋಟೋಗಳನ್ನು ಶೇರ್ ಮಾಡುತ್ತಲಿರುತ್ತಾರೆ. ಇದೀಗ ಇದೇ ಧೃತಿ 22ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಬಗ್ಗೆ ಫೋಟೋವೊಂದನ್ನು ಶೇರ್ ಮಾಡಿ ʻ22ʼ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿ ಬಳಗದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಅಪ್ಪು ಎಲ್ಲೂ ಹೋಗಿಲ್ಲ, ನಿಮ್ಮಲ್ಲೇ ಇದ್ದಾರೆ..
ಇನ್ನು ಪುನೀತ್ ರಾಜ್ಕುಮಾರ್ ಅವರ ಮಗಳು ಧೃತಿ ಬರ್ತ್ಡೇ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳಿಂದ ಬಗೆಬಗೆ ಶುಭಾಶಯಗಳು ಸಂದಾಯವಾಗುತ್ತಿವೆ. ಅಪ್ಪು ಅವರನ್ನೇ ಗಮನದಲ್ಲಿಟ್ಟುಕೊಂಡು, ವಿಶ್ ಮಾಡುತ್ತಿದ್ದಾರೆ. ಧೃತಿ ಫೋಟೋ ನೀಡಿದ ಫ್ಯಾನ್ಸ್, "ಓ ದೇವರೇ, ಒಂದು ಕ್ಷಣ ನಾನು ಅಪ್ಪು ಅಂತ ಅಂದುಕೊಂಡೆ" ಎಂದಿದ್ದಾರೆ. "ನಮ್ ಕರ್ನಾಟಕದ ಮಗಳು", "ಬಾಸ್ ಥರಾನೇ ಇದ್ದಾರೆ", "ಅಪ್ಪು ಅವರಂತೆಯೇ ನಿಮ್ಮ ನಗು ಕೂಡ ಇದೆ", "ನೀವು ಸಾವಿರ ವರ್ಷ ಬದುಕಬೇಕು, ಏಕೆಂದರೆ ನೀವು ದೇವರ ಮಗಳು", "ಅಪ್ಪು ಎಲ್ಲೂ ಹೋಗಿಲ್ಲ, ನಿಮ್ಮಲ್ಲೇ ಇದ್ದಾರೆ.." ಎಂದೂ ಫ್ಯಾನ್ಸ್ ಕಾಮೆಂಟ್ ಹಾಕುತ್ತಿದ್ದಾರೆ.
ನಟನೆ ಬದಲು ತೆರೆಹಿಂದಿನ ಕಲಿಕೆ
ಸಿನಿಮಾ ನಟನೆ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದವರು ಪುನೀತ್ ರಾಜ್ಕುಮಾರ್. ಇದೀಗ ಅಪ್ಪು ಇಲ್ಲದ ಮೇಲೆ ಅವರ ಕನಸಿನ ಪಿಆರ್ಕೆ ಪ್ರೊಡಕ್ಷನ್ಸ್ ಜತೆ ನಿಂತವರು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್. ಸಿನಿಮಾ ನಿರ್ಮಾಣಗಳನ್ನು ಮಾಡುತ್ತ, ಹೊಸಬರಿಗೂ ಅವಕಾಶ ನೀಡುತ್ತ ಬರುತ್ತಿದ್ದಾರೆ. ಸದ್ಯ ಯುವ ರಾಜ್ಕುಮಾರ್ ಅವರ ʻಎಕ್ಕʼ ಸಿನಿಮಾಕ್ಕೂ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ ಅಶ್ವಿನಿ ಪುನೀತ್. ಈಗಾಗಲೇ ಬಹುಪಾಲು ಶೂಟಿಂಗ್ ಮುಗಿಸಿರುವ ಈ ಸಿನಿಮಾ ಜೂನ್ 6ರಂದು ಬಿಡುಗಡೆ ಆಗಲಿದೆ. ಇತ್ತ ನಟನೆ ಬದಲು ಸಿನಿಮಾ ಹಿಂದಿನ ತಂತ್ರಜ್ಞಾನದ ಕೋರ್ಸ್ಗಳನ್ನು ಕಲಿಯುತ್ತಿದ್ದಾರೆ ಧೃತಿ.
ವಿಭಾಗ