Latest OTT Releases: ಅಕ್ಷರಶಃ ನಿಮ್ಮನ್ನು ನಡುಗಿಸುತ್ತೆ ಈ ವೆಬ್‌ಸಿರೀಸ್, ಯಾವುದೇ ಕಾರಣಕ್ಕೂ ಒಬ್ರೆ ಕೂತು ನೋಡ್ಲೇಬೇಡಿ
ಈ ವಾರ (ಏಪ್ರಿಲ್ 14ರಿಂದ 20ರ ವರೆಗೆ) ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳ ಜತೆಗೆ ಹಾರರ್ ವೆಬ್‌ಸಿರೀಸ್‌ಗಳೂ ಭಯ ಹುಟ್ಟಿಸಲು ಆಗಮಿಸುತ್ತಿವೆ. ಇಲ್ಲಿವೆ ನೋಡಿ ವಿವರ.

OTT Releases This Week: ಈ ವಾರ ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಅದರಲ್ಲೂ ಮೈ ಜುಂ ಎನಿಸುವ, ಭಯ ಹುಟ್ಟಿಸುವ ಖೌಫ್ ಸಿರೀಸ್ ಟ್ರೇಲರ್ ಮೂಲಕವೇ ಹೆದರಿಸಿದೆ. ಇನ್ನುಳಿದಂತೆ, ಈ ವಾರದ ಪ್ರಮುಖ ಸಿನಿಮಾ ಮತ್ತು ಸಿರೀಸ್‌ಗಳ ಕುರಿತು ಮಾಹಿತಿ ಇಲ್ಲಿದೆ.
ದಿ ಲಾಸ್ಟ್ ಆಫ್ ಅಸ್ ಸೀಸನ್ 2: ದಿ ಲಾಸ್ಟ್ ಆಫ್ ಅಸ್ ಸೀಸನ್ 2 ಅಮೆರಿಕನ್ ವೆಬ್ ಸಿರೀಸ್ ಏಪ್ರಿಲ್ 14ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಫಂಗಲ್ ಇನ್‌ಫೆಕ್ಷನ್ ಹಿನ್ನೆಲೆಯಲ್ಲಿ ಈ ಸಿರೀಸ್ ಸಾಗಲಿದೆ. ಇದರ ಮೊದಲ ಸೀಸನ್ 2020ರಲ್ಲಿ ರಿಲೀಸ್ ಆಗಿತ್ತು. ಇದೀಗ ಈ ಸಿರೀಸ್ ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ದಾವೀದ್: ಗೋವಿಂದ್ ವಿಷ್ಣು ನಿರ್ದೇಶನದ ಮಲಯಾಳಂನ ದಾವೀದ್ ಸಿನಿಮಾ ಇದೀಗ ಒಟಿಟಿ ಪ್ಲೇ ಪ್ರೀಮಿಯಮ್‌ನಲ್ಲಿ ಏಪ್ರಿಲ್ 18ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಬೌನ್ಸರ್‌ವೊಬ್ಬನ ಜೀವನದ ಏರಿಳಿತಗಳನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಿದ್ದಾರೆ. ಫೆಬ್ರವರಿ 14ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು.
ಖೌಫ್: ಮಹಿಳಾ ಹಾಸ್ಟೆಲ್‌ನಲ್ಲಿ ನಡೆಯುವ ಸಸ್ಪೆನ್ಸ್‌ಫುಲ್ ಹಾರರ್ ಡ್ರಾಮಾ ಸಿರೀಸ್ ಈ ಖೌಫ್. ಸ್ಮಿತಾ ಸಿಂಗ್ ನಿರ್ದೇಶನದ ಈ ವೆಬ್‌ಸಿರೀಸ್‌ನಲ್ಲಿ ಸುಚಿ ಮಲ್ಹೋತ್ರಾ, ರಾಹೋ, ರಿಯಾ ಶುಕ್ಲಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸೂಕ್ಷ್ಮ ಮನಸ್ಸಿನವರಿಗೆ ಈ ಸೀರಿಸ್ ಭಯ ಹುಟ್ಟಿಸಬಹುದು. ಈ ಸಿರೀಸ್ ಏಪ್ರಿಲ್ 18ರಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಲಾಗೌಟ್: ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಿರ್ಮಾಣವಾದ ಈ ಸಿನಿಮಾ, ಏಪ್ರಿಲ್ 18ರಿಂದ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ವೊಬ್ಬನ ಸುತ್ತ ಇಡೀ ಸಿನಿಮಾ ಸುತ್ತಲಿದೆ.
ಮೆರಿ ಹಸ್‌ಬಂಡ್ ಕಿ ಬಿವಿ: ಬಾಲಿವುಡ್‌ನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮೆರಿ ಹಸ್‌ಬಂಡ್ ಕಿ ಬಿವಿ ಸಿನಿಮಾದಲ್ಲಿ ಅರ್ಜುನ್ ಕಪೂರ್, ಭೂಮಿ ಪಡ್ನೆಕರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದಾರೆ. ಫೆಬ್ರವರಿ 21ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಈ ಸಿನಿಮಾ ಏಪ್ರಿಲ್ 18ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಸೋತ್ಯಿ ಬೊಲೆ ಸೋತ್ಯಿ ಕಿಚ್ಚು ನೆಯ್: ಸೋತ್ಯಿ ಬೊಲೆ ಸೋತ್ಯಿ ಕಿಚ್ಚು ನೆಯ್ ಹೆಸರಿನ ಬೆಂಗಾಲಿ ಸಿನಿಮಾ ಏಪ್ರಿಲ್ 18ರಿಂದ hoichoi ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಲಿಗಲ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ.
