Dragon movie: ಕಾಮಿಡಿಯೊಟ್ಟಿಗೆ ಬದುಕಿನ ಪಾಠ; ಒಟಿಟಿಗೆ ಪ್ರವೇಶಿಸಲಿದೆ ‘ಡ್ರ್ಯಾಗನ್’ ಸಿನಿಮಾ
Dragon movie: ನೀವು ಈ ವಾರದ ಕೊನೆಯಲ್ಲಿ ಯಾವುದಾದರೂ ಸಿನಿಮಾ ನೋಡಬೇಕು ಅಂದುಕೊಂಡಿದ್ದರೆ. ‘ಡ್ರ್ಯಾಗನ್’ ಸಿನಿಮಾ ನೋಡಬಹುದು. ಕಾಮಿಡಿಯೊಟ್ಟಿಗೆ ಬದುಕಿನ ಪಾಠ ಹೇಳಿಕೊಡುವ ಸಿನಿಮಾ ಇದು.

ಅಶ್ವಥ್ ಮಾರಿಮುತ್ತು ನಿರ್ದೇಶಿಸಿದ ‘ಡ್ರ್ಯಾಗನ್’ ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಲಿದೆ. ಈ ವಾರದಲ್ಲೇ ನೀವು ಮನೆಯಲ್ಲೇ ಕೂತು ಈ ತಮಿಳು ಸಿನಿಮಾವನ್ನು ವೀಕ್ಷಿಸಬಹುದು. ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುವ ಬಗ್ಗೆಯೂ ಮಾಹಿತಿ ನೀಡಿದೆ. ಚಿತ್ರದ ಬಗ್ಗೆ ಸಾಕಷ್ಟು ಜನ ಧನಾತ್ಮಕ ಅಭಿಪ್ರಾಯ ತಿಳಿಸಿದ್ದು. ಈ ಸಿನಿಮಾ ಉತ್ತಮವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಗಲ್ಲಾಪೆಟ್ಟಿಯಲ್ಲೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಎಲ್ಲ ವಯೋಮಾನದವರಿಗೂ ಮನರಂಜೆ ನೀಡುವ ಸಿನಿಮಾ ಇದಾಗಿದೆ.
ಈ ಒಟಿಟಿಯಲ್ಲಿ ವೀಕ್ಷಿಸಿ
ನಟ ಮತ್ತು ಚಲನಚಿತ್ರ ನಿರ್ಮಾಪಕ ಪ್ರದೀಪ್ ರಂಗನಾಥನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬ್ಲಾಕ್‌ಬಸ್ಟರ್ ತಮಿಳು ಸಿನಿಮಾ ‘ಡ್ರ್ಯಾಗನ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆಯೇ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದರಂತೆ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್ 21ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದು ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಇಂಗ್ಲೀಷ್ ಸಬ್‌ಟೈಟಲ್‌ನೊಂದಿಗೆ ವೀಕ್ಷಣೆಗೆ ಲಭ್ಯವಿದೆ.
ಸಿನಿಮಾದ ಕಥೆ ಏನು?
ಡ್ರ್ಯಾಗನ್ ಚಿತ್ರವನ್ನು ಅಶ್ವಥ್ ಮಾರಿಮುತ್ತು ಬರೆದು ನಿರ್ದೇಶಿಸಿದ್ದಾರೆ, ಇವರು ಈ ಹಿಂದೆ ರೊಮ್ಯಾಂಟಿಕ್ ಹಾಸ್ಯ ಚಿತ್ರ 'ಓ ಮೈ ಕಡವುಲೆ' ಸಿನಿಮಾ ನಿರ್ದೇಶನ ಮಾಡಿದ್ದರು. ಡ್ರ್ಯಾಗನ್ ಕಥೆಯು ಒಬ್ಬ ವ್ಯಕ್ತಿಯ ಸುತ್ತ ಸುತ್ತುತ್ತದೆ. ವಿದ್ಯಾರ್ಥಿಯಾಗಿ ಕಾಲೇಜಿಗೆ ಸೇರಿ ಎಲ್ಲರಂತೆಯೇ ಇದ್ದು ಹೆಚ್ಚು ಮೋಜು ಮಾಡುತ್ತಾ ಇರುವ ಹುಡುಗನೊಬ್ಬ ಕಲಿಕೆಯ ಕೊನೆಯ ಹಂತದಲ್ಲಿ ನೋವನ್ನು ಅನುಭವಿಸುತ್ತಾನೆ. ಪರೀಕ್ಷೆಯ ಸಂದರ್ಭದಲ್ಲಿ ತಾನು ಓದದೇ ಪಾಸ್ ಆಗಬೇಕು ಎಂದು ಬಯಸುತ್ತಾನೆ. ಎಲ್ಲ ಸ್ನೇಹಿತರಂತೆ ತನಗೂ ಉತ್ತಮ ಕೆಲಸ ಬೇಕು ಎಂಬ ಬಯಕೆ ಹುಟ್ಟಿಕೊಳ್ಳುತ್ತದೆ. ಯಾವುದಾದರೂ ತಪ್ಪು ಮಾರ್ಗ ಹಿಡಿದಾದರೂ ಸರಿ ತಾನು ಉತ್ತಮ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಅವನು ನಿರ್ಧಾರ ಮಾಡುತ್ತಾನೆ. ಇದೇ ರೀತಿ ಕಥೆ ಸಾಗುತ್ತದೆ. ಆತ ತನ್ನ ಪ್ರೀತಿಯನ್ನು ಪಡೆದುಕೊಳ್ಳಲೂ ಸಹ ತುಂಬಾ ಕಷ್ಟಪಡುತ್ತಾನೆ. ಕೊನೆಗೆ ಆ ಪ್ರೀತಿ ಸಿಕ್ಕಿತಾ? ಅವನು ಜೀವನದಲ್ಲಿ ಯಶಸ್ವಿ ಆದನೋ, ಇಲ್ಲವೋ? ಎಂದು ತಿಳಿದುಕೊಳ್ಳಲು ಈ ಸಿನಿಮಾ ನೋಡಿ.
ಈ ಚಿತ್ರದಲ್ಲಿ ಕಾಯದು ಲೋಹರ್, ಅನುಪಮಾ ಪರಮೇಶ್ವರನ್, ಮೈಸ್ಕಿನ್, ಗೌತಮ್ ಮೆನನ್, ವಿಜೆ ಸಿಧು, ಹರ್ಷತ್ ಖಾನ್ ಮತ್ತು ಇತರರು ನಟಿಸಿದ್ದಾರೆ. ಡ್ರಾಗನ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದೆ. ಈ ವರ್ಷ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಇದಾಗಿದೆ. ಅಜಿತ್ ಕುಮಾರ್ ಅವರ ವಿದಾಮುಯಾರ್ಚಿ ಸಿನಿಮಾದ ಕಲೆಕ್ಷನ್‌ಅನ್ನು ಸಹ ಈ ಸಿನಿಮಾ ಹಿಂದಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Ramachari Serial: ಮನೆ ಬಿಟ್ಟು ಹೋದ ಮಗ ಸೊಸೆಯನ್ನು ನೆನೆದು ಕಣ್ಣೀರಿಟ್ಟ ಜಾನಕಿ; ಸಮಾಧಾನ ಮಾಡಿದ ಚಾರು
