Tejasvi Surya: ಸದ್ಯದಲ್ಲೇ ಮದುವೆ ಆಗ್ತಾರಾ ಸಂಸದ ತೇಜಸ್ವಿ ಸೂರ್ಯ, ಯಾರು ಆ ಹುಡುಗಿ ಎಂಬ ಪ್ರಶ್ನೆಗೆ ಇಲ್ಲೇ ಇದೆ ಉತ್ತರ
Tejasvi Surya: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬ್ಯಾಚುಲರ್ ಸಂಸದ ತೇಜಸ್ವಿ ಸೂರ್ಯ ಯಾವಾಗ ಮದುವೆ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅವರನ್ನು ಮದುವೆಯಾಗುವ ಹುಡುಗಿ ಯಾರು ಎಂಬ ಮಾಹಿತಿಯೂ ಇಲ್ಲಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿಂದೆಯೂ ಅವರು ಮದುವೆಯಾಗುತ್ತಾರೆ ಎಂಬ ಮಾತುಗಳು ಸಾಕಷ್ಟು ಬಾರಿ ಕೇಳಿ ಬಂದಿದ್ದವು. ಸಾಕಷ್ಟು ಬಾರಿ ಮದುವೆಯ ವಿಚಾರವಾಗಿಯೇ ಅವರನ್ನು ಪ್ರಶ್ನೆ ಮಾಡಲಾಗುತ್ತಿತ್ತು. ನೀವು ಯಾವ ರೀತಿ ಹುಡುಗಿಯನ್ನು ಇಷ್ಟಪಡುತ್ತೀರಿ ಎಂದು ಸಾಕಷ್ಟು ಬಾರಿ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಆದರೆ ಅವರು ಅಷ್ಟಾಗಿ ಉತ್ತರಿಸುತ್ತಿರಲಿಲ್ಲ. ಆದರೆ ಯಾರನ್ನು ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಬಂದಾಗ ಅಷ್ಟು ನಿಖರವಾದ ಉತ್ತರ ಇರಲಿಲ್ಲ. ಈ ಬಾರಿ ಅವರು ಮದುವೆಯಾಗುತ್ತಿರುವ ಹುಡುಗಿ ಯಾರೆಂಬ ವಿಚಾರವೂ ಗೊತ್ತಾಗಿದೆ. ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಭರತನಾಟ್ಯ ಕಲಾವಿದೆ ಶಿವಶ್ರೀ
ಈಗ ಅವರ ವಿವಾಹದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚೆನ್ನೈ ಮೂಲದ ಗಾಯಕಿ, ಭರತನಾಟ್ಯ ಕಲಾವಿದೆ ಆಗಿರುವ ಶಿವಶ್ರೀ ಸ್ಕಂದಪ್ರಸಾದ್ ಎಂಬ ಯುವತಿಯನ್ನು ತೇಜಸ್ವಿ ಸೂರ್ಯ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವಶ್ರೀ ಸ್ಕಂದಪ್ರಸಾದ್ ಮತ್ತು ತೇಜಸ್ವಿ ಸೂರ್ಯ ಇಬ್ಬರ ಕುಟುಂಬದ ನಡುವೆ ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಮದುವೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಶ್ರೀ ಸ್ಕಂದಪ್ರಸಾದ್ ಸಾಕಷ್ಟು ಹಾಡುಗಳನ್ನೂ ಹಾಡಿದ್ದು ಉತ್ತಮ ಕಲಾವಿದೆ ಎನಿಸಿಕೊಂಡಿದ್ದಾರೆ. ಇವರು ಚೆನ್ನೈ ಮೂಲದವರು ಅವರ ಕುಟುಂಬವೂ ಕಲಾವಿದರಿಂದ ಕೂಡಿದೆ ಎನ್ನಲಾಗುತ್ತಿದೆ.
ಅವರ ತಂದೆ ಹಾಗೂ ತಾತ ಎಲ್ಲರೂ ಸಂಗೀತ ಕಲಾವಿದರಾಗಿದ್ದಾರೆ ಎನ್ನಲಾಗಿದೆ. ಇನ್ನು ಕರ್ನಾಟಿಕ್ ಮ್ಯೂಸಿಕ್ ಹಾಗೂ ಭರತನಾಟ್ಯ ಎರಡನ್ನೂ ಇವರು ಕರಗತ ಮಾಡಿಕೊಂಡಿದ್ದಾರೆ.
ಮದುವೆ ಯಾವಾಗ?
2025 ಮಾರ್ಚ್ ತಿಂಗಳಿನಲ್ಲಿ ಇವರಿಬ್ಬರ ವಿವಾಹವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ, ಮಾರ್ಚ್ 4ರಂದು ಬೆಂಗಳೂರಿನಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ಯಾವುದೇ ಮಾಹಿತಿಯನ್ನೂ ಅಧಿಕೃತವಾಗಿ ನೀಡಿಲ್ಲ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ