Desai Muhurtha: ‘ದೇಸಾಯಿ’ ಆದ ‘ಲವ್ 360’ ಚಿತ್ರದ ಹುಡುಗ; ಜಗವೇ ನೀನು ಗೆಳತಿಯೇ.. ಎಂದು ಹಾಡಿದ್ದ ನಾಯಕನ ಎರಡನೇ ಚಿತ್ರವಿದು..
Desai Muhurtha: ಉತ್ತರ ಕರ್ನಾಟಕ ಭಾಗದಲ್ಲಿ ಹಿಂದಿನಿಂದಲೂ ‘ದೇಸಾಯಿ’ ಮನೆತನಕ್ಕೆ ಅದರದೇ ಆದ ಪರಂಪರೆಯ ವೈಶಿಷ್ಟ್ಯವಿದೆ. ಇದನ್ನು ಸಿನಿಮಾ ಮೂಲಕ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಮಹಾಂತೇಶ್ ವಿ ಚೊಳಚಗುಡ್ಡ. ‘ಲವ್ 360’ ಚಿತ್ರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಪ್ರವೀಣ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದೆ.
(1 / 7)
ಇತ್ತೀಚೆಗೆ ‘ದೇಸಾಯಿ’ ಚಿತ್ರದ ಮುಹೂರ್ತ ಸಮಾರಂಭ ಬಾಗಲಕೋಟೆಯ ಮುಚಖಂಡಿಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
(2 / 7)
ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕರಾದ ವೀರಣ್ಣ ಚರಂತಿಮಠ ಆರಂಭ ಫಲಕ ತೋರಿದರು. ವನಶ್ರೀಮಠ ವಿಜಯಪುರದ ಡಾ. ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ನೀಡಿದರು.
(3 / 7)
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರ ಆರಂಭವಾಯಿತು. ಗಣ್ಯರು ಚಿತ್ರತಂಡದ ಸದಸ್ಯರು ಮೊದಲಿಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
(4 / 7)
ಇದೇ ವೇಳೆ ಮಾತನಾಡಿದ ನಾಯಕ ಪ್ರವೀಣ್ ಈ ಚಿತ್ರ ನನ್ನ ನಟನಾ ವೃತ್ತಿಯಲ್ಲಿ ಒಂದು ಹೊಸ ಅಧ್ಯಾಯ ಆಗಲಿದೆ ಅಂತಹ ಚಾಲೆಂಜಿಂಗ್ ಪಾತ್ರ ಇದಾಗಿದೆ. ಚಿತ್ರದ ಕಥೆ ತುಂಬಾ ಇಷ್ಟವಾಯಿತು ಎಂದರು.
(5 / 7)
ಮೈಸೂರು ಮೂಲದ ರಾದ್ಯಾ ದೇಸಾಯಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್, ನಟನ ಪ್ರಶಾಂತ್, ವೀರೇಂದ್ರ, ಹರಿಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
(6 / 7)
ಮಹಾಂತೇಶ್ ವಿ ಚೊಳಚ್ಚಗುಡ್ಡ ನಿರ್ಮಾಣದ, ಯಲ್ಲಪ್ಪ ವಿ ಚೊಳಚಗುಡ್ಡ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.
(7 / 7)
ಜೈ ಆನಂದ್ ಛಾಯಾಗ್ರಹಣ, ಸಾಯಿಕಾರ್ತಿಕ್ ಸಂಗೀತ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇತರ ಗ್ಯಾಲರಿಗಳು