Love li OTT: ಸದ್ದಿಲ್ಲದೆ ಒಟಿಟಿಗೆ ಬಂತು ವಸಿಷ್ಠ ಸಿಂಹ ನಟನೆಯ ಲವ್‌ಲಿ ಸಿನಿಮಾ; ವೀಕ್ಷಣೆ ಎಲ್ಲಿ?-love li ott release date heres when and where you can watch vasistha simha and stefy patel s romantic action drama mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Love Li Ott: ಸದ್ದಿಲ್ಲದೆ ಒಟಿಟಿಗೆ ಬಂತು ವಸಿಷ್ಠ ಸಿಂಹ ನಟನೆಯ ಲವ್‌ಲಿ ಸಿನಿಮಾ; ವೀಕ್ಷಣೆ ಎಲ್ಲಿ?

Love li OTT: ಸದ್ದಿಲ್ಲದೆ ಒಟಿಟಿಗೆ ಬಂತು ವಸಿಷ್ಠ ಸಿಂಹ ನಟನೆಯ ಲವ್‌ಲಿ ಸಿನಿಮಾ; ವೀಕ್ಷಣೆ ಎಲ್ಲಿ?

ಜೂನ್‌ 14ರಂದು ತೆರೆಗೆ ಬಂದಿದ್ದ ವಸಿಷ್ಠ ಸಿಂಹ ನಾಯಕನಾಗಿ ನಟಿಸಿದ ಲವ್‌ ಲಿ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದೆ. ಹಾಗಾದರೆ, ರೊಮ್ಯಾಂಟಿಕ್‌ ಆಕ್ಷನ್‌ ಡ್ರಾಮಾ ಶೈಲಿಯ ಲವ್‌ ಲಿ ಸಿನಿಮಾವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ.

Love li OTT: ಸದ್ದಿಲ್ಲದೆ ಒಟಿಟಿಗೆ ಬಂತು ವಸಿಷ್ಠ ಸಿಂಹ ನಟನೆಯ ಲವ್‌ಲಿ ಸಿನಿಮಾ; ವೀಕ್ಷಣೆ ಎಲ್ಲಿ?
Love li OTT: ಸದ್ದಿಲ್ಲದೆ ಒಟಿಟಿಗೆ ಬಂತು ವಸಿಷ್ಠ ಸಿಂಹ ನಟನೆಯ ಲವ್‌ಲಿ ಸಿನಿಮಾ; ವೀಕ್ಷಣೆ ಎಲ್ಲಿ?

Loveli OTT: ಸ್ಯಾಂಡಲ್‌ವುಡ್‌ ನಟ, ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ನಟನೆಯ ಲವ್‌ ಲಿ ಸಿನಿಮಾ ಇತ್ತೀಚೆಗಷ್ಟೇ ತೆರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಒಳ್ಳೆಯ ರೆಸ್ಪಾನ್ಸ್‌ ಸಿಕ್ಕರೂ, ಹೆಚ್ಚು ದಿನಗಳ ಕಾಲ ಚಿತ್ರಮಂದಿರಲ್ಲಿ ನಿಂತಿರಲಿಲ್ಲ ಈ ಸಿನಿಮಾ. ಇದೀಗ ಇದೇ ಚಿತ್ರ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಹಾಗಾದರೆ, ಈ ಸಿನಿಮಾವನ್ನು ಯಾವ ಒಟಿಟಿ ವೇದಿಕೆಯಲ್ಲಿ ವೀಕ್ಷನೆ ಮಾಡಬಹುದು? ಇಲ್ಲಿದೆ ನೋಡಿ. 

‘ಲವ್ ಲಿ’ ಚೇತನ್ ಕೇಶವ್ ಅವರ ಮೊದಲ ನಿರ್ದೇಶದ ಸಿನಿಮಾ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಡಿಫ್ರೆಂಟ್ ಶೇಡ್‌ನಲ್ಲಿ ಕಂಡಿದ್ದರು. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹತ್ರತ್ರ ಎರಡು ತಿಂಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ.

ಏನಿದು ಕಥೆ?

ತಂದೆ ತಾಯಿ ಇಲ್ಲದ, ಅನಾಥನಾಗಿ ಬೆಳೆದ ನಾಯಕ ಈ ಚಿತ್ರದಲ್ಲಿ ಓರ್ವ ರೌಡಿ. ಇದೇ ರೌಡಿಯ ಪ್ರೀತಿಯಲ್ಲಿ ಬೀಳುತ್ತಾಳೆ ನಾಯಕಿ. ಪ್ರೀತಿಯಲ್ಲಿ ಬಿದ್ದು ಹೇಗೆ ಆ ಪ್ರೀತಿಗಾಗಿ ಆತ ಬದಲಾಗುತ್ತಾನೆ? ಕುಡಿತದ ಚಟ ಬಿಟ್ಟು ಪತ್ನಿ, ಮಕ್ಕಳು ಎಂದೆಲ್ಲ ಚೆನ್ನಾಗಿದ್ದ ನಾಯಕ ಬಾಳಲ್ಲಿ ಮತ್ತಷ್ಟು ಬಿರುಗಾಳಿ ಬೀಸಲಾರಂಭಿಸುತ್ತದೆ. ಏಡ್ಸ್‌ ಮತ್ತು ಮಕ್ಕಳ ಕಳ್ಳ ಸಾಗಣೆ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಆಕ್ಷನ್‌ ಜತೆಗೆ ಕಾಮಿಡಿ ಮೂಲಕವೇ ಲವ್‌ ಲಿ ಸಿನಿಮಾ ನೋಡುಗರಿಗೆ ಇಷ್ಟವಾಗಿತ್ತು. ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ.

ಪಾತ್ರವರ್ಗ ಹೀಗಿದೆ..

ಅಭುವನಸ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ Love ಲಿ ಸಿನಿಮಾ ನಿರ್ಮಾಣವಾಗಿದೆ. ರವೀಂದ್ರ ಕುಮಾರ್ ನಿರ್ಮಿಸಿರುವ, ಚೇತನ್ ಕೇಶವ್ ನಿರ್ದೇಶನದ ಮೂಡಿ ಬಂದಿರುವ ಲವ್‌ಲಿ ಚಿತ್ರದಲ್ಲಿ ವಸಿಷ್ಠ ಸಿಂಹ ನಾಯಕರಾಗಿ ನಟಿಸಿದರೆ, ಸ್ಟೆಫಿ ಪಟೇಲ್ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಸಾಧು ಕೋಕಿಲಾ, ನಟ ದತ್ತಣ್ಣ, ನಟಿ ನಂದು, ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ, ಬೇಬಿ ವಂಶಿಕ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್‌ 14ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆಗೆ ಬಂದಿತ್ತು.

ಯಾವ ಒಟಿಟಿಗೆ ಬಂತು ಲವ್‌ ಲಿ?

ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಲವ್‌ ಲಿ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಅಮೆಜಾನ್‌ ಪ್ರೈಂನಲ್ಲಿ ಈಗಾಗಲೇ ಸ್ಟ್ರೀಮ್‌ ಆರಂಭಿಸಿದೆ.