ಸಂಕ್ರಾಂತಿ ಹಬ್ಬಕ್ಕೆ ‘ಮಹಾವತಾರ್ ನರಸಿಂಹ’ ಅನಿಮೇಟೆಡ್ ಚಿತ್ರದ ಟೀಸರ್ ಹೊರತಂದ ಹೊಂಬಾಳೆ ಫಿಲಂಸ್
Mahavatar Narsimha teaser: ಪೌರಾಣಿಕ ಹಿನ್ನೆಲೆಯ ಮಹಾವತಾರ್ ನರಸಿಂಹ ಎಂಬ ಅನಿಮೇಷನ್ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್. ಈಗ ಈ ಚಿತ್ರದ ಮೊದಲ ಟೀಸರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ.

Mahavatar Narsimha Teaser: ಕನ್ನಡ ಮಾತ್ರವಲ್ಲದೆ, ಪರಭಾಷೆಗಳ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಮತ್ತು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಲಿರುವ ಹೊಂಬಾಳೆ ಫಿಲಂಸ್ ಇದೀಗ ಅನಿಮೇಟೆಡ್ ಸಿನಿಮಾ ನಿರ್ಮಾಣಕ್ಕೆ ಇಳಿದಿದೆ. ಮಹಾವತಾರ್ ನರಸಿಂಹ ಹೆಸರಿನ ಅನಿಮೇಟೆಡ್ ಸಿನಿಮಾ ನಿರ್ಮಾಣ ಮಾಡಿದ್ದು, ನವೆಂಬರ್‌ನಲ್ಲಿ ಈ ಚಿತ್ರದ ಘೋಷಣೆ ಆಗಿತ್ತು. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇದೇ ಚಿತ್ರದ ಟೀಸರ್ ಹೊರಬಂದಿದ್ದು, ಬಿಡುಗಡೆಯ ದಿನಾಂಕವೂ ಘೋಷಣೆ ಆಗಿದೆ.
ಪೌರಾಣಿಕ ಹಿನ್ನೆಲೆಯ ಮಹಾವತಾರ್ ನರಸಿಂಹ ಎಂಬ ಅನಿಮೇಷನ್ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮಹಾವತಾರ್ ನರಸಿಂಹ ಅನಿಮೇಷನ್ ಚಿತ್ರದ ಮೊದಲ ಟೀಸರ್ ಅನ್ನು ಪಂಚ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಹೊಂಬಾಳೆ ಫಿಲಂಸ್ ಹೊಂಬಾಳೆ ಫಿಲಂಸ್ ಸಂಸ್ಥೆ ಜತೆಗೆ ಕ್ಲಿಂ ಸಂಸ್ಥೆ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಈಗಾಗಲೇ ಹಲವು ಅನಿಮೇಷನ್ ಸಿನಿಮಾ ನಿರ್ಮಿಸಿದ ಅನುಭವ ಈ ತಂಡಕ್ಕಿದೆ.
ಅನಿಮೇಟೆಡ್ ದೃಶ್ಯವೈಭೋಗ
ಕ್ಲಿಂನ ಅಶ್ವಿನ್ ಕುಮಾರ್ ಮಹಾವತಾರ್ ನರಸಿಂಹ ಅನಿಮೇಷನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಚಿಕ್ಕಂದಿನಿಂದಲೂ ತಿಳಿದಿರುವ ಪ್ರಹ್ಲಾದನ ತಂದೆ ಹಿರಣ್ಯಕಶಿಪು ಮತ್ತು ವಿಷ್ಣುವಿನ ನಡುವಿನ ಕಾಳಗದ ಕುರಿತ ಕಥೆ ಇದಾಗಿದೆ. ಅನಿಮೇಟೆಡ್ ಸಿನಿಮಾ ಆಗಿರುವುದರಿಂದ ಕಾಲ್ಪನಿಕ ಲೋಕದ ಮತ್ತೊಂದು ಮಜಲನ್ನು ಕಣ್ತುಂಬಿಕೊಳ್ಳಬಹುದಾಗಿದೆ. ನಿಬ್ಬೆರಗಾಗೋ ರೀತಿಯ ದೃಶ್ಯಗಳು ಗಮನ ಸೆಳೆಯುತ್ತಿವೆ. ನರಸಿಂಹ ಅವತಾರ ನೋಡುಗರ ಕಣ್ಣರಳಿಸುವಂತಿದೆ.
ಮಹಾವತಾರ್ ನರಸಿಂಹ ಟೀಸರ್
"ನಂಬಿಕೆಗೆ ಸವಾಲು ಎದುರಾದಾಗ, ಅವನು ಕಾಣಿಸಿಕೊಳ್ಳುತ್ತಾನೆ. ಕತ್ತಲು ಮತ್ತು ಅವ್ಯವಸ್ಥೆಯಡಿ ಸಿಲುಕಿದ ಈ ಜಗತ್ತಿನಲ್ಲಿ.. ಉಗ್ರ ನರಸಿಂಹನ ಅವತಾರದಲ್ಲಿ ಭಗವಾನ್ ವಿಷ್ಣು ಮಹಾವತಾರ ಎತ್ತುತ್ತಾನೆ" ಎಂಬ ಸಾಲುಗಳನ್ನು ಬರೆದುಕೊಂಡು ಟೀಸರ್ ಶೇರ್ ಮಾಡಿದೆ ಹೊಂಬಾಳೆ ಫಿಲಂಸ್.
ಏಪ್ರಿಲ್ 5ರಂದು ಬಿಡುಗಡೆ
ಮೂಲ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಅನಿಮೇಷನ್ ಸಿನಿಮಾ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ. ಮೊದಲಾರ್ಥ ಟೀಸರ್ ಹೊರಬಂದಿದ್ದು, ಏಪ್ರಿಲ್ 5ರಂದು ವಿಶ್ವಾದ್ಯಂತ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 3ಡಿಯಲ್ಲಿಯೂ ಈ ಸಿನಿಮಾ ತೆರೆಕಾಣಲಿದೆ.
