Mansore on Movie Release: ಪ್ಯೂರ್‌ ಕಂಟೆಂಟ್‌ ಸಿನಿಮಾ ಮಾಡುವವರ ಫಜೀತಿ ಯಾರಿಗೂ ಬೇಡ; ಬಿಡುಗಡೆ ಪ್ರಹಸನದ ವಾಸ್ತವ ತೆರೆದಿಟ್ಟ ಮಂಸೋರೆ
ಕನ್ನಡ ಸುದ್ದಿ  /  ಮನರಂಜನೆ  /  Mansore On Movie Release: ಪ್ಯೂರ್‌ ಕಂಟೆಂಟ್‌ ಸಿನಿಮಾ ಮಾಡುವವರ ಫಜೀತಿ ಯಾರಿಗೂ ಬೇಡ; ಬಿಡುಗಡೆ ಪ್ರಹಸನದ ವಾಸ್ತವ ತೆರೆದಿಟ್ಟ ಮಂಸೋರೆ

Mansore on Movie Release: ಪ್ಯೂರ್‌ ಕಂಟೆಂಟ್‌ ಸಿನಿಮಾ ಮಾಡುವವರ ಫಜೀತಿ ಯಾರಿಗೂ ಬೇಡ; ಬಿಡುಗಡೆ ಪ್ರಹಸನದ ವಾಸ್ತವ ತೆರೆದಿಟ್ಟ ಮಂಸೋರೆ

'19-20-21' ಚಿತ್ರ ಇನ್ನೇನು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಳ್ಳಬೇಕಿದೆ. ಆ ಸಿನಿಮಾ ಸಂಬಂಧಿ ಕೆಲಸಗಳ ಸಲುವಾಗಿಯೇ ನಿರ್ದೇಶಕ ಮಂಸೋರೆ ಸದ್ಯ ಮುಂಬೈನಲ್ಲಿದ್ದಾರೆ.

ಪ್ಯೂರ್‌ ಕಂಟೆಂಟ್‌ ಸಿನೆಮಾ ಮಾಡುವವರ ಫಜೀತಿ ಯಾರಿಗೂ ಬೇಡ; ಬಿಡುಗಡೆ ಪ್ರಹಸನಕ್ಕೆ ಬೇಸತ್ತ ಮಂಸೋರೆ..
ಪ್ಯೂರ್‌ ಕಂಟೆಂಟ್‌ ಸಿನೆಮಾ ಮಾಡುವವರ ಫಜೀತಿ ಯಾರಿಗೂ ಬೇಡ; ಬಿಡುಗಡೆ ಪ್ರಹಸನಕ್ಕೆ ಬೇಸತ್ತ ಮಂಸೋರೆ.. (Instagram/@manso.re.10)

Mansore on Movie Release: ಸ್ಯಾಂಡಲ್‌ವುಡ್‌ ಸೂಕ್ಷ್ಮ ಸಂವೇದಿ ನಿರ್ದೇಶಕ ಮಂಸೋರೆ ಇದೀಗ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ಅಲ್ಲಲ್ಲ ಆತಂಕದಲ್ಲಿದ್ದಾರೆ. ಅಂದರೆ, ಎಲ್ಲ ಹಂತದಿಂದಲೂ ರಿಲೀಸ್‌ಗೆ ಸಿದ್ಧವಿರುವ '19-20-21' ಚಿತ್ರ ಇನ್ನೇನು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಳ್ಳಬೇಕಿದೆ. ಆ ಸಿನಿಮಾ ಸಂಬಂಧಿ ಕೆಲಸಗಳ ಸಲುವಾಗಿಯೇ ನಿರ್ದೇಶಕ ಮಂಸೋರೆ ಸದ್ಯ ಮುಂಬೈನಲ್ಲಿದ್ದಾರೆ. ಸಿನಿಮಾ ಮಾಡುವುದು ತುಂಬ ಸುಲಭ, ಅದನ್ನು ತೆರೆಗೆ ತರುವುದು ಅಷ್ಟು ಸುಲಭದ್ದಲ್ಲ ಎಂದು, ಸಿನಿಮಾ ಬಿಡುಗಡೆಯ ಸಮಯದಲ್ಲಿ ಒಬ್ಬ ನಿರ್ಮಾಪಕ-ನಿರ್ದೇಶಕ ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಬರೆದಿದ್ದಾರೆ ಮಂಸೋರೆ.

ನೈಜ ಘಟನೆ ಆಧರಿತ ಸಿನಿಮಾ

'19 20 21' ನೈಜ ಘಟನೆಯಾಧರಿತ ಸಿನಿಮಾ. ಈ ಸಿನಿಮಾದಲ್ಲಿ ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ಶೃಂಗ, ಸಂಪತ್ ಮೈತ್ರೇಯ, ಕೃಷ್ಣ ಹೆಬ್ಬಾಲೆ, ಅವಿನಾಶ್ ಸೇರಿ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಂಸೋರೆ ಹಾಗೂ ವೀರೇಂದ್ರ ಮಲ್ಲಣ್ಣ ಚಿತ್ರಕಥೆ ರಚಿಸಿದರೆ, ಅವಿನಾಶ್ ಜಿ ಮತ್ತು ವೀರೇಂದ್ರ ಮಲ್ಲಣ್ಣ ಸಂಭಾಷಣೆ ಒದಗಿಸಿದ್ದಾರೆ.

ಮಂಸೋರೆ ಹೇಳಿಕೊಂಡಿದ್ದೇನು...

ಈ ಸಿನೆಮಾರಂಗದಲ್ಲಿ ಇವತ್ತಿಗೆ ತುಂಬಾ ಕಷ್ಟದ ಹಂತ ಸಿನೆಮಾ ಬಿಡುಗಡೆ ಮಾಡುವುದು. ಸಿನೆಮಾ ನಿರ್ದೇಶನ ಮಾಡುವುದಕ್ಕಿಂತ ದೊಡ್ಡ ಟಾಸ್ಕ್‌ ಇದು. ಇದು ಉಂಟು ಮಾಡುವ ತಲ್ಲಣ, ಆತಂಕ, ಒತ್ತಡ ಅನುಭವಿಸುವವನಿಗೇ ಗೊತ್ತು.

ಇಂದಿನ ಸಾಮಾಜಿಕ ತಾಣದಲ್ಲಿನ ಭರಾಟೆ, ಅದು ವರ್ಕ್‌ ಆಗುವ ಆಲ್ಗೋರಿಥಮ್, ಪ್ರಮೋಷನ್ಸ್‌- ಪೇಡ್‌ ಪ್ರಮೋಷನ್ಸ್, ಥಿಯೇಟರ್‌ ಸೆಟ್‌ ಅಪ್, ಮಲ್ಟಿಫ್ಲೆಕ್ಸ್‌ ಡಿಸ್ಟ್ರಿಬ್ಯೂಷನ್‌ ಮತ್ತು ಅದರಲ್ಲಿನ ಪ್ರೈಮ್‌ ಶೋಗಳು, ಸರಿಯಾದ ವಿತರಣೆ ಜತೆಗೆ ಜೊತೆಗೆ OTTಗಳ ಭರಾಟೆ, ಅದರ ಮೇಲೆ ಹಿಡಿತ ಸಾಧಿಸಿರುವವರ ಮೊನೊಪೊಲಿ, ಆ ಒಳಗಿನ ರಾಜಕೀಯ, ಕಮಿಷನ್ಡ್‌ ಸೇಲ್ಸ್‌, ಅದರ ಏಜೆಂಟುಗಳು, ಒಳ ಒಪ್ಪಂದಗಳು, ಅದನ್ನು ತೆರೆಯ ಹಿಂದೆ ನಿರ್ವಹಣೆ ಮಾಡುವವರ ಸಂಚಿನ ನಡುವೆ, ಯಾವುದೇ ಜನಪ್ರಿಯ ಸಿದ್ಧ ಸೂತ್ರಗಳಿಗೆ ಸಿಲುಕಿಕೊಳ್ಳದೆ ಪ್ಯೂರ್‌ ಕಂಟೆಂಡ್ ಸಿನೆಮಾ ಮಾಡುವವರ ಫಜೀತಿಗಳು ವರ್ಣಿಸಲು ಅಸಾಧ್ಯ.

ಇದೆಲ್ಲದರ ಕಾರಣದಿಂದಲೇ ಜನರಿಗೆ ತಲುಪಲೇಬೇಕಾದ ಅದೆಷ್ಟೋ ಒಳ್ಳೆಯ ಸಿನೆಮಾಗಳು ಮೂಲೆಗುಂಪಾಗಿರುತ್ತವೆ. ಈಗಾಗಲೇ ಗೆದ್ದಿರುವ ಸಿನೆಮಾಗಳು ಅದರ ಹಿಂದಿನ ತಂತ್ರಗಾರಿಕೆ, ಪ್ರೊಮೋಷನ್ ಟೀಂ, ಸ್ಟ್ರಾಟಜಿ, ಸರಿಯಾದ ವಾಹಿನಿ, ಸರಿಯಾದ ವಿತರಣೆ, ಸರಿಯಾದ ಸಮಯಕ್ಕೆ ರಿಲೀಸ್‌ ಮಾಡುವುದು ( teaser, trailer, cinema all) ಇದೆಲ್ಲವನ್ನು ಭೇದಿಸಿಕೊಂಡು ಸಿನೆಮಾ ಜನರ ಮುಂದೆ ತರುವುದು ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸುವ ಸಾಹಸಕ್ಕಿಂತ ದೊಡ್ಡದೇ ಸರಿ. ಒಳ್ಳೆಯ ಸಿನೆಮಾ ಮಾಡುವದಷ್ಟೇ ಇಂದು ಮುಖ್ಯವಾಗುವುದಿಲ್ಲಾ. ಅದನ್ನು ಸರಿಯಾದ ಮಾರ್ಗದಲ್ಲಿ ತಲುಪಿಸುವುದೂ ಕೂಡ ಇಂದು ಮುಖ್ಯವಾಗಿದೆ.

ಮುಂಬಯಿಯಲ್ಲಿ ಇಂದು ಸಿನೆಮಾ ಬಿಡುಗಡೆಗೆ ಸಂಬಂಧಿಸಿದಂತೆ ನಡೆದ ಒಂದು ಮೀಟಿಂಗ್ ನಂತರ ಅರ್ಥವಾದ ಆತಂಕಗಳು. ಇವೆಲ್ಲವನ್ನು ಪರಿಹರಿಸಿಕೊಂಡು ಸಾಧ್ಯವಾದಷ್ಟು ಬೇಗ ನಮ್ಮ '19-20-21' ಸಿನೆಮಾ ನಿಮ್ಮ ಮುಂದೆ ತರಲು ಪ್ರಯತ್ನ ಜಾರಿಯಲ್ಲಿದೆ. ನಿಮ್ಮೆಲ್ಲರ ಸಹಕಾರ ಇರಲಿ. ನಿಮ್ಮ ಮಂಸೋರೆ"

Whats_app_banner