ಮೋಹನ್‌ಲಾಲ್‌ ನಟನೆಯ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ಸಿನಿಮಾ ತುಡರಂ ಒಟಿಟಿ ಬಿಡುಗಡೆ ವಿವರ ಪ್ರಕಟ, ಕನ್ನಡದಲ್ಲಿಯೂ ಸ್ಟ್ರೀಮಿಂಗ್‌
ಕನ್ನಡ ಸುದ್ದಿ  /  ಮನರಂಜನೆ  /  ಮೋಹನ್‌ಲಾಲ್‌ ನಟನೆಯ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ಸಿನಿಮಾ ತುಡರಂ ಒಟಿಟಿ ಬಿಡುಗಡೆ ವಿವರ ಪ್ರಕಟ, ಕನ್ನಡದಲ್ಲಿಯೂ ಸ್ಟ್ರೀಮಿಂಗ್‌

ಮೋಹನ್‌ಲಾಲ್‌ ನಟನೆಯ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ಸಿನಿಮಾ ತುಡರಂ ಒಟಿಟಿ ಬಿಡುಗಡೆ ವಿವರ ಪ್ರಕಟ, ಕನ್ನಡದಲ್ಲಿಯೂ ಸ್ಟ್ರೀಮಿಂಗ್‌

ತುಡರಂ ಒಟಿಟಿ ರಿಲೀಸ್‌: ಮೋಹನ್‌ಲಾಲ್‌ ಮತ್ತು ಶೋಭನಾ ನಟನೆಯ ದಾಖಲೆ ನಿರ್ಮಿತ ಮಲಯಾಳಂ ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗಲು ಸಿದ್ಧವಾಗಿದೆ. ಈ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ಸಿನಿಮಾದ ಒಟಿಟಿ ಬಿಡುಗಡೆ ವಿವರ ಇಲ್ಲಿದೆ.

ಮೋಹನ್‌ಲಾಲ್‌ ನಟನೆಯ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ತುಡರಂ ಒಟಿಟಿ ಬಿಡುಗಡೆ ವಿವರ ಪ್ರಕಟ
ಮೋಹನ್‌ಲಾಲ್‌ ನಟನೆಯ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ತುಡರಂ ಒಟಿಟಿ ಬಿಡುಗಡೆ ವಿವರ ಪ್ರಕಟ

ತುಡರಂ ಒಟಿಟಿ ರಿಲೀಸ್‌: ಸದ್ಯದಲ್ಲಿಯೇ ಬ್ಲಾಕ್‌ಬಸ್ಟರ್‌ ಥ್ರಿಲ್ಲರ್‌ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಸಿಹಿಸುದ್ದಿಯಿದೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿರುವ ಮೋಹನ್ ಲಾಲ್, ಪ್ರಕಾಶ್ ವರ್ಮಾ ಮತ್ತು ಶೋಭನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಲಯಾಳಂ ಸಿನಿಮಾ "ತುಂಡರಂʼ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಈ ಕುರಿತು ಅಪ್‌ಡೇಟ್‌ ನೀಡಿದ್ದು, ದೇಶಾದ್ಯಂತ ಇರುವ ಮೋಹನ್‌ ಲಾಲ್‌ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಈ ಸಿನಿಮಾವು ಮೂಲ ಮಲಯಾಳಂ ಭಾಷೆ ಮಾತ್ರವಲ್ಲದೆ ಇನ್ನಿತರ ಭಾರತೀಯ ಭಾಷೆಗಳಲ್ಲಿಯೂ ಸ್ಟ್ರೀಮಿಂಗ್‌ ಆಗಲಿದೆ.

ತುಡರಂ ಒಟಿಟಿ ಬಿಡುಗಡೆ ವಿವರ

ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರತಂಡಕ್ಕೆ ತುಡರಂ ಒಟಿಟಿ ಹಕ್ಕುಗಳ ಕುರಿತು ಸವಾಲು ಎದುರಾಗಿತ್ತು. ಹೆಚ್ಚು ಪ್ರಚಾರವಿಲ್ಲದೆ ಥಿಯೇಟರ್‌ನಲ್ಲಿ ಬಿಡುಗಡೆಯಾದ ಕಾರಣ ಒಟಿಟಿ ಹಕ್ಕುಗಳಿಗೆ ಅಂತಹ ಡಿಮ್ಯಾಂಡ್‌ ಕಾಣಿಸಿರಲಿಲ್ಲ. ಆದರೆ, ಮೊದಲ ದಿನದಿಂದಲೇ ಈ ಸಿನಿಮಾ ಬ್ಲಾಕ್‌ಬಸ್ಟರ್‌ ಆಗಲು ಆರಂಭಿಸಿದಾಗ ಪರಿಸ್ಥಿತಿ ಬದಲಾಯಿತು. ಈ ಸಿನಿಮಾ ಕೇವಲ ಕೇರಳದ ಬಾಕ್ಸ್‌ ಆಫೀಸ್‌ನಲ್ಲಿಯೇ 100 ಕೋಟಿ ರೂಪಾಯಿ ಗಳಿಸಿತ್ತು. ಇದು ಯಾವುದೇ ಮಲಯಾಳಂ ಸಿನಿಮಾ ಸಾಧಿಸದೆ ಇರುವ ಸಾಧನೆಯಾಗಿದೆ. ಬಿನು ಪಪ್ಪು, ಥಾಮಸ್ ಮ್ಯಾಥ್ಯೂ ಮತ್ತು ಮಣಿಯನ್‌ಪಿಳ್ಳ ರಾಜು ಕೂಡ ಪ್ರಮುಖ ಪಾತ್ರಗಳಲ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ.

ಕನ್ನಡದಲ್ಲಿಯೂ ಸ್ಟ್ರೀಮಿಂಗ್‌

ಮೋಹನ್‌ ಲಾಲ್‌ ನಟನೆಯ ತುಡರಂ ಸಿನಿಮಾವು ಮೇ 30ರಂದು ಜಿಯೋಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಸಿನಿಮಾ ಮಲಯಾಳಂ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಸೌದಿ ವೆಲ್ಲಕ್ಕ ಮತ್ತು ಆಪರೇಷನ್ ಜಾವಾ ಮುಂತಾದ ಸಿನಿಮಾಗಳಿಂದ ಖ್ಯಾತಿ ಪಡೆದಿರುವ ನಿರ್ದೇಶಕ ತರುಣ್ ಮೂರ್ತಿ ಅವರು ತುಡರಂ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದ ಸಹ ನಿರ್ಮಾಪಕ ಕೆಆರ್‌ ಸುನಿಲ್‌ ಇದಕ್ಕೆ ಸಹ- ಬರಹಗಾರರು. ತುಡರಂ ಸಿನಿಮಾ ಏಪ್ರಿಲ್‌ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿರುವ ಲೂಸಿಫರ್‌ ಸೀಕ್ವೆಲ್‌ ಎಲ್‌2: ಎಂಪುರನ್‌ ಬಿಡುಗಡೆಯಾದ ಒಂದು ತಿಂಗಳ ಬಳಿಕ ತುಡರಂ ರಿಲೀಸ್‌ ಆಗಿತ್ತು. ಇದೇ ಸಮಯದಲ್ಲಿ ಆಸಿಫ್ ಅಲಿ ಅವರ ರೇಖಾಚಿತ್ರಂ ಮತ್ತು ಕುಂಚಾಕೊ ಬೋಬನ್ ಅವರ ಆಫೀಸರ್ ಆನ್ ಡ್ಯೂಟಿಯಂತಹ ಸೂಪರ್‌ಹಿಟ್ ಮಲಯಾಳಂ ಸಿನಿಮಾಗಳೂ ರಿಲೀಸ್‌ ಆಗಿದ್ದವು.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in