OTT Web Series: ಒಟಿಟಿಗೆ ಬರಲಿದೆ ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ ‘ಲವ್ ಅಂಡರ್ ಕನ್ಸ್ಟ್ರಕ್ಷನ್’ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿಯೊಂದು ಕನ್ನಡದಲ್ಲೂ ಒಟಿಟಿಗೆ ಬರುತ್ತಿದೆ. ‘ಲವ್ ಅಂಡರ್ ಕನ್‌ಸ್ಟ್ರಕ್ಷನ್’ ಎಂಬ ಈ ವೆಬ್ ಸರಣಿಯನ್ನು ನೀವೆಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಒಟಿಟಿ ರೊಮ್ಯಾಂಟಿಕ್ ಕಾಮಿಡಿ: ಒಟಿಟಿಯಲ್ಲಿ ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ ಬರುತ್ತಿದೆ. ಈ ಸರಣಿಗೆ ಲವ್ ಅಂಡರ್ ಕನ್‌ಸ್ಟ್ರಕ್ಷನ್ ಎಂದು ಹೆಸರಿಡಲಾಗಿದೆ. ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗಿದೆ. ನೀರಜ್ ಮಾಧವ್, ಅಜು ವರ್ಗೀಸ್ ಮತ್ತು ಗೌರಿ ಜಿ ಕಿಶನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯು ಹೊಸ ಮನೆ ಮತ್ತು ಪ್ರೇಯಸಿಯ ನಡುವೆ ಸಿಕ್ಕಿಬಿದ್ದು ಒದ್ದಾಡುವ ಯುವಕನೊಬ್ಬನ ಕಥೆಯಾಗಿದೆ.
ಲವ್ ಅಂಡರ್ ಕನ್ಸ್ಟ್ರಕ್ಷನ್ ಒಟಿಟಿ ಬಿಡುಗಡೆ ದಿನಾಂಕ
ಲವ್ ಅಂಡರ್ ಕನ್‌ಸ್ಟ್ರಕ್ಷನ್ ವೆಬ್ ಸರಣಿಯನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಕೆಲವು ವರ್ಷಗಳ ಹಿಂದೆಯೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿತ್ತು. ಇದು ಪ್ರೇಮಿಗಳ ದಿನದಂದು ಬರುವ ನಿರೀಕ್ಷೆಯೂ ಇತ್ತು. ಆದರೆ, ಇನ್ನೂ ತಡವಾಗಿ ಎರಡು ವಾರಗಳ ನಂತರ ಫೆಬ್ರವರಿ 28ರಿಂದ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೆಬ್ ಸರಣಿಯ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಸರಣಿಯಲ್ಲಿ ಒಬ್ಬ ಯುವಕ ಗಲ್ಪ್‌ಗೆ ಹೋಗಿ ಹಣ ಸಂಪಾದನೆ ಮಾಡಿಕೊಂಡು ಬಂದು ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎಂದುಕೊಂಡಿರುತ್ತಾನೆ. ಸಾಮಾನ್ಯ ಮಧ್ಯಮ ವರ್ಗದ ಯುವಕ ಅವನಾಗಿದ್ದು, ಅವನಿಗೆ ಒಬ್ಬಾಕೆಯ ಮೇಲೆ ಪ್ರೀತಿಯಾಗುತ್ತದೆ. ಆ ನಂತರದಲ್ಲಿ ಅವನ ಆಶಯಗಳೇ ಬದಲಾಗುತ್ತದೆ. ಈ ರೀತಿಯಾದ ಕಥೆ ಹೊಂದಿರುವ ಸರಣಿಯೇ ಲವ್ ಅಂಡರ್ ಕನ್‌ಸ್ಟ್ರಕ್ಷನ್.
ಮನೆ ಕಟ್ಟಿನೋಡು, ಮದುವೆ ಆಗಿ ನೋಡು
ಮನೆ ಕಟ್ಟುವ ಕನಸು ಕಾಣುವ ಯುವಕ ಅಂತಿಮವಾಗಿ ತನ್ನ ಪ್ರೀತಿಯನ್ನು ಕಟ್ಟುವ ಕಾರ್ಯಕ್ಕೆ ಇಳಿಯುತ್ತಾನೆ. ಅದಕ್ಕಾಗಿಯೇ ಈ ಸರಣಿಗೆ ಲವ್ ಅಂಡರ್ ಕನ್‌ಸ್ಟ್ರಕ್ಷನ್ ಎಂದು ಹೆಸರಿಡಲಾಗಿದೆ. ನೀರಜ್ ಮಾಧವ್ ಈ ಚಿತ್ರದಲ್ಲಿ ವಿನೋದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಒಂದು ಮಾತಿದೆ. “ಮನೆ ಕಟ್ಟಿ ನೋಡು, ಮದುವೆ ಆಗಿ ನೋಡು” ಎಂದು ಅದೇ ಮಾತಿನಂತೆ ಈ ಸರಣಿ ಇದೆ. ಕಾಮಿಡಿಯೊಂದಿಗೆ ನಿಮಗೆ ಮನರಂಜನೆ ನೀಡುತ್ತಾ ಕಥೆ ಸಾಗುತ್ತದೆ. ಮನೆಯನ್ನು ತುಂಬಾ ರಿಚ್ ಆಗಿ ನಿರ್ಮಾಣ ಮಾಡಬೇಕು ಎಂದು ಅವನ ಕುಟುಂಬವೂ ಆಸೆ ಹೊತ್ತಿರುತ್ತದೆ. ಆದರೆ ಅವನು ಗೌರಿ ಎಂಬ ಹುಡುಗಿಯನ್ನು ಪ್ರೀತಿಸಲು ಆರಂಭಿಸಿದ ನಂತರ ಎಲ್ಲವೂ ಊಹೆಯನ್ನು ಮೀರುತ್ತದೆ. ಆದರೆ ಅವರ ಎರಡು ಕನಸುಗಳು ಒಂದೇ ಸಮಯದಲ್ಲಿ ನನಸಾಗುವುದು ಸುಲಭವಲ್ಲ. ಮನೆ ಮತ್ತು ಪ್ರೀತಿ ಇವೆರಡ ನಡುವೆ ಸಿಲುಕಿದವನ ಬದುಕು ಹೇಗಾಗುತ್ತದೆ ಎಂಬುದನ್ನು ಈ ಸರಣಿಯಲ್ಲಿ ನೀಡಲಾಗಿದೆ.
ಯಾವಾಗ? ಎಲ್ಲಿ ವೀಕ್ಷಣೆ?
ಮನೆ, ಪ್ರೇಮ ಮತ್ತು ಮದುವೆಯ ನಡುವೆ ಸಿಲುಕಿರುವ ಯುವಕನ ಜೀವನಕ್ಕೆ ಸ್ವಲ್ಪ ಕಾಮಿಡಿ ಬೆರೆಸಿ, ನೋಡುಗರಿಗೆ ಮಜ ನೀಡುವ ಪ್ರಯತ್ನ ಈ ಸರಣಿಯಲ್ಲಿದೆ ಎಂಬುದು ಟ್ರೇಲರ್ ನೋಡಿದ ತಕ್ಷಣ ಅರಿವಿಗೆ ಬರುವ ಸಂಗತಿ. ಲವ್ ಅಂಡರ್ ಕನ್‌ಸ್ಟ್ರಕ್ಷನ್ ವೆಬ್ ಸರಣಿ ಫೆಬ್ರವರಿ 28 ರಿಂದ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಮಲಯಾಳಂ, ತೆಲುಗು, ಹಿಂದಿ, ತಮಿಳು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಈ ತಮಾಷೆಯ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿಯನ್ನು ವೀಕ್ಷಿಸಲು ಸಿದ್ಧರಾಗಿ.
