Vikatkavi OTT: ಒಟಿಟಿಗೆ ಬರ್ತಿದೆ ವಿಕಟಕವಿ ವೆಬ್ ಸರಣಿ; ಪತ್ತೇದಾರಿ ಕಥೆ ಇಷ್ಟಪಡುವವರು ಮಿಸ್ ಮಾಡದೇ ನೋಡಿ
ನೀವು ಪತ್ತೇದಾರಿ ಕಥೆಗಳನ್ನು ತುಂಬಾ ಇಷ್ಟಪಡುವವರಾಗಿದ್ದರೆ ವಿಕಟಕವಿ ವೆಬ್ ಸರಣಿ ನೋಡಿ. ಇದೇ ತಿಂಗಳಿನಲ್ಲಿ ಜೀ 5 ಓಟಿಟಿಯಲ್ಲಿ ನಿಮಗೆ ಈ ವೆಬ್ ಸರಣಿ ನೋಡಲು ಸಿಗುತ್ತದೆ. ಇದು ತೆಲಂಗಾಣ ಹಿನ್ನೆಲೆಯ ಒಂದು ಥ್ರಿಲ್ಲರ್ ಕಥೆಯಾಗಿದೆ.
ತೆಲಂಗಾಣ ಹಿನ್ನೆಲೆಯ ಪತ್ತೇದಾರಿ ಥ್ರಿಲ್ಲರ್ ಸರಣಿ ವಿಕಟಕವಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಇತ್ತೀಚೆಗೆ ವಿಕಟಕವಿ ಟೀಸರ್ ಬಿಡುಗಡೆಯಾಗಿದೆ. ವಿಕಟಕವಿ 30 ವರ್ಷಗಳಿಂದ ಕಾಡುತ್ತಿರುವ ಶಾಪದ ಕಥೆಯಿದೆ. ವಿಕಟಕವಿ OTT ಸ್ಟ್ರೀಮಿಂಗ್ ದಿನಾಂಕವನ್ನು ನಾವಿಲ್ಲಿ ನೀಡಿದ್ದೇವೆ. ತಿನ್ ಮತ್ತು ನರೇಶ್ ಅಗಸ್ತ್ಯ ಅಭಿನಯದ ಈ ವೆಬ್‌ಸರಣಿ ಸಾಕಷ್ಟು ನಿರೀಕ್ಷೆ ಹೊಂದಿದೆ. ಮಲಯಾಳಂ ಸಿನಿಮಾ ಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಲಯಾಳಂ ಸಿನಿಮಾಗಳ ಮೇಕಿಂಗ್- ಕಥಾ ಹಂದರ ಇಷ್ಟಪಡುವವರ ಸಾಲಲ್ಲಿ ನೀವೂ ಇದ್ದರೆ ನಿರೀಕ್ಷೆ ಹುಟ್ಟಿಸಿರುವ ಮಲಯಾಳಂ ವೆಬ್ ಸಿರೀಸ್ ಒಂದರ ಕುರಿತು ಮಾಹಿತಿ ಇಲ್ಲಿದೆ. ನೀವೂ ಕೂಡ ಯಾವುದಾದರೂ ಒಂದು ಮಲಯಾಳಂ ಸಿರೀಸ್ ನೋಡಬೇಕು ಎಂದುಕೊಂಡರೆ ಈ ವೆಬ್‌ಸಿರೀಸ್ ನೋಡಬಹುದು.
ಪತ್ತೇದಾರಿ ಥ್ರಿಲ್ಲರ್ ವೆಬ್ ಸರಣಿ ವಿಕಟಕವಿ ಸಾಕಷ್ಟು ಕುತೂಹಲಗಳನ್ನು ತನ್ನೊಳಗಡೆ ಅಡಗಿಸಿಕೊಂಡಂತಿದೆ. ಇದರ ಟೀಸರ್ ನೋಡಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ. SRT ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ರಾಮ್ ತಲ್ಲೂರಿ ಅವರು ಈ ಸರಣಿಯನ್ನು ನಿರ್ಮಿಸಿದ್ದಾರೆ. ಪ್ರದೀಪ್ ಮದ್ದಾಲಿ ನಿರ್ದೇಶನದ ವಿಕಟಕವಿ ವೆಬ್ ಸೀರೀಸ್ ತೆಲಂಗಾಣ ಹಿನ್ನೆಲೆಯಲ್ಲಿ ತಯಾರಾದ ಮೊದಲ ವೆಬ್ ಸರಣಿಯಾಗಿದೆ.
ನಿಮ್ಮ ಕುತೂಹಲ ಹೆಚ್ಚಿಸಲು ಇದೊಂದೇ ಪದ ಸಾಕು. ಅದೇನೆಂದರೆ ಇದೊಂದು ಪತ್ತೆದಾರಿ ಕಥೆ. ವಿಶ್ವಕ್ ಸೇನ್ ಇತ್ತೀಚೆಗೆ ವಿಕಟಕವಿ ಮಾಸ್ ಕಾ ದಾಸ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ವಿಕಟಕವಿ ಟೀಸರ್ ರೋಚಕ ದೃಶ್ಯಗಳೊಂದಿಗೆ ಆಕರ್ಷಕವಾಗಿದೆ. ವಿಕಟಕವಿಯ ಟೀಸರ್ ನೋಡಿದರೆ ಹೈದರಾಬಾದ್ ವಿಲೀನದ ನಂತರದ ಕಥೆಯಂತಿದೆ. ‘ಅಮರಗಿರಿ’ ಗ್ರಾಮಕ್ಕೆ 30 ವರ್ಷಗಳಿಂದ ಶಾಪವೊಂದು ಕಾಡುತ್ತಿದ್ದು, ಅಮರಿಗಿರಿಯಲ್ಲಿರುವ ದೇವರ ಗುಡಿಗೆ ಹೋಗಲು ಜನ ಭಯಪಡುತ್ತಿರುತ್ತಾರೆ. ಅಲ್ಲಿನ ಜನ ಆ ಗ್ರಾಮವನ್ನು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ. ಆದರೆ ಆ ಹಳ್ಳಿಯ ಪ್ರಾಧ್ಯಾಪಕರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರು ಇದರ ಜಾಡು ಹುಡುಕುತ್ತಾರೆ. ಈ ರೀತಿಯ ಕಥೆಯನ್ನು ಕಾಣಬಹುದು.
ಅಮರಗಿರಿಯ ಕಥೆ
ಅಮರಗಿರಿಯಲ್ಲಿ ಯಾರಿಂದಲೂ ಪರಿಹರಿಸಲಾಗದ ಸಮಸ್ಯೆ ಇದೆ ಎಂದು ಭಾವಿಸಿ ಅದನ್ನು ಪರಿಹರಿಸಲು ತನ್ನ ಶಿಷ್ಯ ರಾಮಕೃಷ್ಣರನ್ನು ಕಳಿಸಿಕೊಡುತ್ತಾರೆ. ರಾಮಕೃಷ್ಣರು ಅಮರಗಿರಿಗೆ ಹೋದಾಗ ಏನು ಮಾಡುತ್ತಾರೆ ? ಅಲ್ಲಿನ ಸಮಸ್ಯೆಯನ್ನು ಹೇಗೆ ಗುರುತಿಸುತ್ತಾನೆ ಎಂದು ಕಥೆ ಮುಂದುವರಿಯುತ್ತಾ ಹೋಗುತ್ತದೆ. ಈ ಪಯಣದಲ್ಲಿ ರಾಮಕೃಷ್ಣರು ಎದುರಿಸಿದ ಸವಾಲುಗಳೇನು? ಅಮರಿಗಿರಿ ಪ್ರದೇಶಕ್ಕೂ ರಾಮಕೃಷ್ಣರಿಗೂ ಇರುವ ನಂಟು ತಿಳಿಯಲು ನೀವು ಈ ವೆಬ್‌ಸರಣಿ ನೋಡಬಹುದು. ಯಾರಾದರೂ ಪತ್ತೆದಾರಿ ಕಾದಂಬರಿಯನ್ನು ತುಂಬಾ ಆಸಕ್ತಯಿಂದ ಓದುವವರಾಗಿದ್ದರೆ ಅವರಿಗೆ ಖಂಡಿತ ಈ ಸರಣಿ ಇಷ್ಟವಾಗುತ್ತದೆ.
ಯಾವ ಓಟಿಟಿಯಲ್ಲಿ ಲಭ್ಯ?
ವಿಕಟಕವಿ ವೆಬ್ ಸರಣಿಯು ಜೀ5 OTT ಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ . (Vikatkavi OTT) ನವೆಂಬರ್ 28 ರಿಂದ ಜೀ5 ಪ್ಲಾಟ್‌ಫಾರ್ಮ್‌ನಲ್ಲಿ ಮಲಯಾಳಂ ಜೊತೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ .