Malayalam OTT Movies: ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುತ್ತ ಗೆದ್ದು ಬೀಗಿದ ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಸಿನಿಮಾಗಳಿವು
ಕನ್ನಡ ಸುದ್ದಿ  /  ಮನರಂಜನೆ  /  Malayalam Ott Movies: ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುತ್ತ ಗೆದ್ದು ಬೀಗಿದ ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಸಿನಿಮಾಗಳಿವು

Malayalam OTT Movies: ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುತ್ತ ಗೆದ್ದು ಬೀಗಿದ ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಸಿನಿಮಾಗಳಿವು

ಸಿದ್ಧ ಸೂತ್ರಗಳನ್ನು ಬದಿಗೊತ್ತಿ, ಒಂದಷ್ಟು ಪ್ರಯೋಗಗಳ ಮೂಲಕ ಹಿಟ್‌ ಪಟ್ಟಿಗೆ ಸೇರಿ ಹಲವು ನಾಯಕಿ ಪ್ರಧಾನ ಸಿನಿಮಾಗಳು. ಅದು ಪಕ್ಕದ ಮಲಯಾಳಂ ಚಿತ್ರರಂಗಕ್ಕೂ ಹೊರತಾಗಿಲ್ಲ. ಇಲ್ಲಿವೆ ಸೂಪರ್‌ ಹಿಟ್‌ ಪಟ್ಟ ಪಡೆದ ಟಾಪ್‌ 5 ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಒಟಿಟಿ ಸಿನಿಮಾಗಳಿವು
ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಒಟಿಟಿ ಸಿನಿಮಾಗಳಿವು

Female- Led Malayalam Movies: ಮಹಿಳಾ ಪ್ರಧಾನ ಸಿನಿಮಾಗಳು ಕೇವಲ ಪ್ರೇಕ್ಷಕರ ಹೃದಯವನ್ನಷ್ಟೇ ಗೆಲ್ಲುತ್ತಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಕಮರ್ಷಿಯಲ್‌ ಆಗಿ ಹಿಟ್‌ ಸಹ ಆಗುತ್ತಿವೆ. ಒಂದಷ್ಟು ಸಿನಿಮಾಗಳು ಹಳೇ ಕಟ್ಟುಪಾಡುಗಳನ್ನು ದಾಟಿ, ಹೊಸ ದಾಖಲೆ ಬರೆದಿವೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್‌ ಪಟ್ಟಿಗೆ ಸೇರಿವೆ ಹಲವು ಸಿನಿಮಾಗಳು. ಆ ಪೈಕಿ ಮಲಯಾಳಂನಲ್ಲಿನ ಟಾಪ್‌ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. 

ಉಯಾರೆ

ಆಸಿಡ್ ದಾಳಿಯನ್ನು ಜಯಿಸಿ ತನ್ನ ಕನಸುಗಳನ್ನು ಮರಳಿ ಪಡೆಯುವ ಮಹತ್ವಾಕಾಂಕ್ಷೆಯ ಪೈಲಟ್ ಪಲ್ಲವಿ ಪಾತ್ರದಲ್ಲಿ ಪಾರ್ವತಿ ತಿರುವೋತ್ತು ಗಟ್ಟಿ ಅಭಿನಯ ನೀಡಿದ್ದಾರೆ. ವಿಮರ್ಶಾತ್ಮಕ ಮತ್ತು ಕಮರ್ಶಿಯಲ್‌ ಆಗಿ ಮೆಚ್ಚುಗೆ ಪಡೆದ ಈ ಸಿನಿಮಾ ಮಹಿಳಾ ಸಬಲೀಕರಣ ಸಂದೇಶವನ್ನೂ ಪ್ರೇಕ್ಷಕರತ್ತ ದಾಟಿಸಿದೆ. ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಲಭ್ಯವಿದೆ.

ದಿ ಗ್ರೇಟ್ ಇಂಡಿಯನ್ ಕಿಚನ್: ಮಲಯಾಳಂನ ಫ್ಯಾಮಿಲಿ ಡ್ರಾಮಾ ಸಿನಿಮಾ ದಿ ಗ್ರೇಟ್‌ ಇಂಡಿಯನ್‌ ಕಿಚನ್.‌ ನಿಮಿಷಾ ಸಜಯನ್ ನಟಿಸಿದ ಈ ಚಿತ್ರವು ಸಾಂಪ್ರದಾಯಿಕ ಮನೆಗಳಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ದೊಡ್ಡ ಮಟ್ಟದ ಪ್ರೇಕ್ಷಕ ವರ್ಗದಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಇತ್ತೀಚೆಗಷ್ಟೇ ಬಾಲಿವುಡ್‌ಗೂ ರಿಮೇಕ್‌ ಆಗಿತ್ತು. ಈ ಸಿನಿಮಾ ಅಮೆಜಾನ್‌ ಪ್ರೈಂ ಮತ್ತು ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸೂಪರ್ ಶರಣ್ಯ: ರೇಖಾಚಿತ್ರಂ ಸಿನಿಮಾ ಮೂಲಕ ಹಿಟ್‌ ಪಟ್ಟ ಅಲಂಕರಿಸಿದ ನಟಿ ಅನಸ್ವರ ರಾಜನ್, ನಟಿಸಿದ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಶರಣ್ಯ. ಸ್ನೇಹ, ಪ್ರಣಯ ಮತ್ತು ಸ್ವಯಂ-ಅನ್ವೇಷಣೆಯ ಮೂಲಕ ಸಣ್ಣ ಪಟ್ಟಣದ ಹುಡುಗಿಯ ಜೀವನವನ್ನು ಅಷ್ಟೇ ನಾಜೂಕಾಗಿ ಸೆರೆ ಹಿಡಿಯಲಾಗಿದೆ. ಈ ಸಿನಿಮಾವನ್ನು Zee5 ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

ಹೌ ಓಲ್ಡ್ ಆರ್ ಯು: ಮಲಯಾಳಂನ ಹೌ ಓಲ್ಡ್ ಆರ್ ಯು ಸಿನಿಮಾ ಮೂಲಕ ಮಹಿಳೆ ಮತ್ತು ಸಮಾಜದ ನಡುವಿನ ಬಂಧದ ಕಥೆ ಹೊತ್ತು ಬಂದಿದ್ದರು ನಟಿ ಮಂಜು ವಾರಿಯರ್. ಕಳೆದುಹೋದ ಕನಸುಗಳನ್ನು ಮರಳಿ ಪಡೆಯುವ ನಿರುಪಮಾ ಎಂಬ ಮಹಿಳೆಯ ಕಥೆಯು ಪ್ರೇಕ್ಷಕರ ಮನಗೆದ್ದಿತು. ಈ ಸಿನಿಮಾ ಕಮರ್ಷಿಯಲ್‌ ಆಗಿಯೂ ಹಿಟ್‌ ಆಗಿತ್ತು. ಈ ಸಿನಿಮಾ sun nxt ಒಟಿಟಿಯಲ್ಲಿ ಇದೆ.

ಓಂ ಶಾಂತಿ ಓಶಾನ: ನಜ್ರಿಯಾ ನಜೀಮ್ ನಾಯಕಿಯಾಗಿ ನಟಿಸಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಹೊಸ ನಿರೂಪಣೆಯ ಮೂಲಕವೇ ಸದ್ದು ಜತೆಗೆ ಯಶಸ್ಸು ಕಂಡಿತ್ತು. ಹಾಸ್ಯ, ಪ್ರಣಯ ಮತ್ತು ಇಡೀ ಚಿತ್ರದ ಕೇಂದ್ರಬಿಂದುವಾಗಿ ನಜ್ರಿಯಾ ಜೀವಿಸಿದ್ದಾರೆ. ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಲಭ್ಯವಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner