ಟ್ವಿಸ್ಟ್ ಮೇಲೆ ಟ್ವಿಸ್ಟ್​; ಮಲಯಾಳಂನ ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತ ಸ್ಟ್ರೀಮಿಂಗ್
ಕನ್ನಡ ಸುದ್ದಿ  /  ಮನರಂಜನೆ  /  ಟ್ವಿಸ್ಟ್ ಮೇಲೆ ಟ್ವಿಸ್ಟ್​; ಮಲಯಾಳಂನ ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತ ಸ್ಟ್ರೀಮಿಂಗ್

ಟ್ವಿಸ್ಟ್ ಮೇಲೆ ಟ್ವಿಸ್ಟ್​; ಮಲಯಾಳಂನ ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತ ಸ್ಟ್ರೀಮಿಂಗ್

ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್​ನಲ್ಲಿ ಸಿನಿಮಾಗಳನ್ನು ಹುಡುಕುತ್ತಾ ಇರುವವರಿಗೆ ಇಲ್ಲಿದೆ ಒಂದೊಳ್ಳೆ ಮಲಯಾಳಂ ಸಿನಿಮಾ. ಅದು ಕೂಡ ತೆಲುಗಿಗೆ ಡಬ್ ಆಗಿದೆ. ಯಾವ ಚಿತ್ರ? ಇಲ್ಲಿದೆ ಮಾಹಿತಿ.

ಟ್ವಿಸ್ಟ್ ಮೇಲೆ ಟ್ವಿಸ್ಟ್​; ಮಲಯಾಳಂ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತ ಸ್ಟ್ರೀಮಿಂಗ್
ಟ್ವಿಸ್ಟ್ ಮೇಲೆ ಟ್ವಿಸ್ಟ್​; ಮಲಯಾಳಂ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತ ಸ್ಟ್ರೀಮಿಂಗ್

ಲವ್​ ಸ್ಟೋರಿ, ಮಾಸ್, ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವವರ ಸಂಖ್ಯೆಗಿಂತ ಕ್ರೈಮ್​ ಸಸ್ಪೆನ್ಸ್​ ಥ್ರಿಲ್ಲರ್​ ಮೂವಿಗಳ ನೋಡುಗರ ಸಂಖ್ಯೆ ದುಪ್ಪಟ್ಟಾಗಿದೆ. ಒಟಿಟಿ ವೇದಿಕೆಗಳಲ್ಲಿ ಅವುಗಳ ದರ್ಬಾರ್ ಕೂಡ ಹೆಚ್ಚಾಗಿದೆ. ಎಷ್ಟೋ ಮಂದಿ ಅಮೆಜಾನ್, ನೆಟ್​ಫ್ಲಿಕ್ಸ್, ಜಿಯೋಹಾಟ್​ಸ್ಟಾರ್​ನಂತಹ ಒಟಿಟಿ ವೇದಿಕೆಗಳ ಚಂದಾದಾರಿಕೆ ಇಲ್ಲದೆ ಸಸ್ಪೆನ್ಸ್ ಥ್ರಿಲ್ಲರ್​ ಮೂವಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಬಹಳಷ್ಟು ಜನರು ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್​ನಲ್ಲಿ ಸಿನಿಮಾಗಳನ್ನು ಹುಡುಕುತ್ತಾ ಇರುತ್ತಾರೆ. ಅವರಿಗೊಂದು ಇಲ್ಲಿದೆ ಒಂದೊಳ್ಳೆ ಮಲಯಾಳಂ ಸಿನಿಮಾ. ಅದು ಕೂಡ ತೆಲುಗಿನಲ್ಲಿ!

ಇತ್ತೀಚೆಗೆ ಮಲಯಾಳಂ ಸಿನಿಮಾಗಳು ಎಲ್ಲಾ ಭಾಷೆಗಳಿಗೂ ಡಬ್ ಆಗುತ್ತಿರುವುದು ಗೊತ್ತೇ ಇದೆ. ಈ ಭಾಷೆಯ ಚಿತ್ರಗಳಿಗೆ ಬೇಡಿಕೆ ದಿನೆದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಹಳೆಯ ಬ್ಲಾಕ್​ಬಸ್ಟರ್​​ ಸಿನಿಮಾಗಳನ್ನೂ ಈಗ ಡಬ್ಬಿಂಗ್ ಮಾಡುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದಾರೆ. ಈ ಪೈಕಿ ದಿ ಹಿಟ್​ ಲಿಸ್ಟ್​ ಕೂಡ ಒಂದು. ಮಲಯಾಳಂನ ವೆಟ್ಟಾ ಚಿತ್ರವು ಈಗ ತೆಲುಗಿನಲ್ಲಿ ಹಿಟ್​ ಲಿಸ್ಟ್​ ಹೆಸರಿನಲ್ಲಿ ಡಬ್ ಆಗುತ್ತಿದೆ. ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಚಿತ್ರ ಯೂಟ್ಯೂಬ್​​ನಲ್ಲಿ ಮುಕ್ತವಾಗಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾಗೆ ಸಂಬಂಧಿಸಿ ವಿವರಗಳನ್ನು ಮುಂದೆ ನೋಡೋಣ.

ಯೂಟ್ಯೂಬ್​ನಲ್ಲಿ ಎಲ್ಲಿದೆ?

‘ದಿ ಹಿಟ್ ಲಿಸ್ಟ್’ ಚಿತ್ರದಲ್ಲಿ ‘ಕುಂಚಾಕೋ ಬೋಬನ್’ ಮತ್ತು ‘ಕಾದಲ್ ಸಂಧ್ಯಾ’ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಮ್ ಥ್ರಿಲ್ಲರ್ ಅನಿರೀಕ್ಷಿತ ತಿರುವು ತೆಗೆದುಕೊಳ್ಳಲಿದೆ. ಹೆಚ್ಚೆಚ್ಚು ಟ್ವಿಸ್ಟ್​​ಗಳನ್ನು ಕಾಣಬಹುದು. ಸಿನಿಮಾ ಮುಂದುವರೆದಂತೆಯೇ ನಿಮ್ಮನ್ನು ಅತ್ತಿತ್ತ ಕದಲದಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ಕೌತುಕತೆ ಇರುತ್ತದೆ. ಈ ಚಿತ್ರವು ಭವಾನಿ ಎಚ್​ಡಿ ಮೂವೀಸ್​ನ ಯೂಟ್ಯೂಬ್ ಚಾನೆಲ್​​​ನಲ್ಲಿ ಲಭ್ಯವಿದೆ. ಈ ಚಿತ್ರವು ಕೆಲವು ದಿನಗಳ ಹಿಂದೆ ಡಬ್ ಆಗಿ ತೆಲುಗಿನಲ್ಲಿ ಬಿಡುಗಡೆಗೊಂಡಿದೆ.

ಈ ಬೇಸಿಗೆಯಲ್ಲಿ ಬಿಡುವಿದ್ದರೆ ತೆಲುಗು ಡಬ್ಬಿಂಗ್​ನಲ್ಲಿ ಮಲಯಾಳಂ ಥ್ರಿಲ್ಲರ್ ಚಲನಚಿತ್ರವನ್ನು ನೋಡಲು ನೀವು ಬಯಸಿದ್ದೇ ಆದರೆ 'ದಿ ಹಿಟ್ ಲಿಸ್ಟ್' ಉತ್ತಮ ಆಯ್ಕೆ ಎಂದರೆ ತಪ್ಪಿಲ್ಲ. ನೀವು ಅದನ್ನು ಯೂಟ್ಯೂಬ್​ನಲ್ಲಿ ಮುಕ್ತವಾಗಿ ವೀಕ್ಷಿಸಬಹುದು. ವೀಕ್ಷಿಸಲು ಯಾವುದೇ ನಯಾಪೈಸೆ ಕಟ್ಟಬೇಕಿಲ್ಲ. ಚಿತ್ರವು ರೋಮಾಂಚನಕಾರಿಯಾಗಲಿದೆ. ಮಲಯಾಳಂ ವೆಟ್ಟಾ ಚಿತ್ರವು ಇತ್ತೀಚೆಗೆ ಬಿಡುಗಡೆ ಆಗಿರೋದಲ್ಲ, 9 ವರ್ಷಗಳ ಹಿಂದೆಯೇ ಬಿಡುಗಡೆಯಾಗಿದೆ. ವೆಟ್ಟಾ 2016ರ ಫೆಬ್ರವರಿ ತಿಂಗಳಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾಯಿತು. ಆಗಲೇ ಬಿಗ್ಗೆಸ್ಟ್​ ಬ್ಲಾಕ್ ಬಸ್ಟರ್​ ಚಿತ್ರಗಳಲ್ಲಿ ಒಂದಾಗಿತ್ತು.

ರಾಜೇಶ್ ಪಿಳ್ಳೈ ನಿರ್ದೇಶಿಸಿರುವ ಈ ಈ ಚಿತ್ರವು ಅಪಹರಣಗಳು, ಕೊಲೆಗಳು ಮತ್ತು ಪೊಲೀಸ್ ತನಿಖೆಯ ಸರಣಿಯ ಸುತ್ತ ಸುತ್ತುತ್ತದೆ. ಈ ಚಿತ್ರವನ್ನು ತೆಲುಗಿನಲ್ಲಿ ‘ಹಿಟ್ ಲಿಸ್ಟ್’ಎಂದು ಡಬ್ ಮಾಡಲಾಗಿದೆ. ಕುಂಚಾಕೋ ಬೋಬನ್ ಮತ್ತು ಮಂಜು ವಾರಿಯರ್ ಅವರಲ್ಲದೆ, ಇಂದ್ರಜಿತ್ ಸುಕುಮಾರನ್, ದೀಪಕ್ ಪರಂಬೋಲ್ ಸಂಧ್ಯಾ, ರೋನಿ ಡೇವಿಡ್, ಪ್ರೇಮ್ ಪ್ರಕಾಶ್ ಮತ್ತು ಸನುಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಾನ್ ರೆಹಮಾನ್ ಸಂಗೀತ ನೀಡಿದ್ದಾರೆ. ರಾಜೇಶ್ ಪಿಳ್ಳೈ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರಾಜೇಶ್ ಪಿಳ್ಳೈ, ಹನೀಫ್ ಮೊಹಮ್ಮದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬೋಬನ್ ನಟನೆಯ ಮತ್ತೊಂದು ಸಿನಿಮಾ ಬ್ಲಾಕ್ ಬಸ್ಟರ್

ಮಲಯಾಳಂ ಹಿರಿಯ ನಟ ಕುಂಚಾಕೋ ಬೋಬನ್ ಈ ವರ್ಷ ಬ್ಲಾಕ್​ಬಸ್ಟರ್ ಸಾಧನೆ ಮಾಡಿದ್ದಾರೆ. ಅವರ ಪ್ರಮುಖ ಪಾತ್ರ 'ಆಫೀಸರ್ ಆನ್ ಡ್ಯೂಟಿ' ಈ ವರ್ಷದ ಫೆಬ್ರವರಿ 20ರಂದು ಬಿಡುಗಡೆಯಾಗಿದ್ದು , ಸೂಪರ್ ಹಿಟ್ ಕೂಡ ಆಯಿತು. ಈ ಚಿತ್ರವು ತೆಲುಗು ಡಬ್ಬಿಂಗ್​ನಲ್ಲೂ ಹಿಟ್ ಆಗಿತ್ತು. ಈ ಚಿತ್ರವು ತೆಲುಗು ಡಬ್ಬಿಂಗ್​ನಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿತು. ನೆಟ್​ಫ್ಲಿಕ್ಸ್​​ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ಭಾರಿ ವೀಕ್ಷಣೆ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಕುಂಚಾಕೋ ಬೋಬನ್ ತೆಲುಗಿನಲ್ಲಿಯೂ ಜನಪ್ರಿಯರಾದರು. ಇದು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರವನ್ನು ಜಿತು ಅಶ್ರಫ್ ನಿರ್ದೇಶಿಸಿದ್ದಾರೆ. ಪ್ರಿಯಾಮಣಿ ಪ್ರಮುಖ ಪಾತ್ರ ವಹಿಸಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.