Nunakkuzhi OTT: ಒಟಿಟಿಗೆ ಬರಲು ಅಣಿಯಾದ ಮಲಯಾಳಿ ದೃಶ್ಯಂ ನಿರ್ದೇಶಕರ ಹೊಸ ಸಿನಿಮಾ; ಯಾವಾಗ, ಯಾವ ಒಟಿಟಿ, ಏನ್ ಕಥೆ?
ಮಾಲಿವುಡ್ ನಿರ್ದೇಶಕ ಜೀತು ಜೋಸೆಫ್ ಸಿನಿಮಾಗಳೆಂದರೆ ಅಲ್ಲಿ ಕ್ರೈಂ ಥ್ರಿಲ್ಲರ್ ಅಂಶ ಇದ್ದಿದ್ದೇ. ಇದೀಗ ನುನಕುಳಿ ಚಿತ್ರದಲ್ಲಿಯೂ ಕಾಮಿಡಿ ಎಳೆಯ ಮೂಲಕ ಕ್ರೈಮ್ ಥ್ರಿಲ್ಲರ್ ಕಥೆ ಹೊತ್ತು ತಂದಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ಒಟಿಟಿಗೆ ಪ್ರವೇಶಿಸಲಿದೆ.
Nunakkuzhi OTT: ಮಲಯಾಳಂನ ಸ್ಟಾರ್ ಡೈರೆಕ್ಟರ್ ಜಿತು ಜೋಸೆಫ್ ನಿರ್ದೇಶನದ ನುನಕುಳಿ (Nunakkuzhi) ಚಿತ್ರ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಕ್ರೈಂ ಕಾಮಿಡಿ ಸಿನಿಮಾದಲ್ಲಿ ಬೇಸಿಲ್ ಜೋಸೆಫ್ ಮತ್ತು ಗ್ರೇಸ್ ಆಂಟೋನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದರು. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೂ, ಕಲೆಕ್ಷನ್ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಇದೇ ಚಿತ್ರ ಒಟಿಟಿ ಅಂಗಳಕ್ಕೆ ಬರಲು ರೆಡಿಯಾಗದೆ.
ಜೀ5 OTT ಪ್ಲಾಟ್‌ಫಾರ್ಮ್ 'ನುನಕುಳಿ' ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರವು ಸೆಪ್ಟೆಂಬರ್ 13 ರಂದು ಜೀ5 OTTಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ. ಇನ್ನೇನು ಶೀಘ್ರದಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಬಹುತೇಕ ಮಲಯಾಳಿ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಪರಭಾಷೆಗಳಿಗೂ ಡಬ್ ಆಗಿ ಸ್ಟ್ರೀಮಿಂಗ್ ಕಾಣುತ್ತಿವೆ. ಅದೇ ರೀತಿ ಕನ್ನಡಕ್ಕೂ ಈ ಚಿತ್ರ ಡಬ್ ಆಗಿ ಬರುವ ಸಾಧ್ಯತೆಗಳಿವೆ.
ಕಾಮಿಡಿ ಕ್ರೈಂ ಥ್ರಿಲ್ಲರ್
ಜೀತು ಜೋಸೆಫ್ ಸಿನಿಮಾಗಳೆಂದರೆ ಅಲ್ಲಿ ಕ್ರೈಂ ಥ್ರಿಲ್ಲರ್ ಅಂಶ ಇದ್ದಿದ್ದೇ. ಇದೀಗ ನುನಕುಳಿ ಚಿತ್ರದಲ್ಲಿಯೂ ಕಾಮಿಡಿ ಎಳೆಯ ಮೂಲಕ ಕ್ರೈಮ್ ಥ್ರಿಲ್ಲರ್ ಕಥೆ ಹೊತ್ತು ತಂದಿದ್ದಾರೆ. ನುನಕುಳಿ ಚಿತ್ರದಲ್ಲಿ ಬೇಸಿಲ್ ಜೋಸೆಫ್, ಗ್ರೇಸ್, ಸಿದ್ದಿಕಿ, ಬೈಜು ಸಂತೋಷ್, ನಿಖಿಲಾ ವಿಮಲ್, ಮನೋಜ್ ಕೆ ಜಯನ್, ಅಲ್ತಾಫ್ ಸಲೀಂ, ಬಿನು ಪಪ್ಪು, ಅಜೀಜ್ ನಡುಮಗ್ದನ್, ಅಜು ವರ್ಗೀಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನುನಕುಳಿ ಸಿನಿಮಾವನ್ನು ಉಡ್ಲಿ ಫಿಲಂಸ್ ಮತ್ತು ಸರಿಗಮ್ ಬ್ಯಾನರ್ ಜಂಟಿಯಾಗಿ ನಿರ್ಮಾಣ ಮಾಡಿವೆ. ಈ ಚಿತ್ರಕ್ಕೆ ಜೈ ಉನ್ನಿಥಾನ್ ಮತ್ತು ವಿಷ್ಣು ಶ್ಯಾಮ್ ಸಂಗೀತ ನಿರ್ದೇಶಕರು. ಸತೀಶ್ ಕುರುಪ್, ವಿ ಎಸ್ ವಿನಾಯಕ್ ಛಾಯಾಗ್ರಹಣ ಮಾಡಿದ್ದಾರೆ.
ಏನಿದು ನುನಕುಳಿ ಕಥೆ?
ಸೆಕ್ಸ್ ಟೇಪ್‌ವೊಂದರ ಹಿಂದೆ ಇಡೀ ಸಿನಿಮಾ ಸಾಗುತ್ತದೆ. ಐಟಿ ರೈಡ್ ವೇಳೆ, ಪತ್ನಿ ಜತೆಗಿನ ಆಪ್ತ ವಿಡಿಯೋಗಳಿರುವ ಲ್ಯಾಪ್‌ಟಾಪ್‌ಅನ್ನು ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ಆ ಲ್ಯಾಪ್‌ಟಾಪ್ ಮರಳಿ ತರದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿ ಗಂಡನಿಗೆ ಹೇಳುತ್ತಾಳೆ. ಈ ಪ್ರಹಸನ ಮುಂದೆ ಏನೆಲ್ಲ ತಿರುವು ಪಡೆದುಕೊಳ್ಳುತ್ತೆ ಎಂಬುದೇ ಈ ಸಿನಿಮಾದ ಕಥೆ.