Malayalam OTT: ಒಟಿಟಿಯಲ್ಲಿ ಬ್ಯಾಡ್‌ ಬಾಯ್ಜ್‌ ಬಿಡುಗಡೆ, ಮಲಯಾಳಂ ಆಕ್ಷನ್‌ ಕಾಮಿಡಿ ಸಿನಿಮಾವನ್ನು ಮನೆಯಲ್ಲೇ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Malayalam Ott: ಒಟಿಟಿಯಲ್ಲಿ ಬ್ಯಾಡ್‌ ಬಾಯ್ಜ್‌ ಬಿಡುಗಡೆ, ಮಲಯಾಳಂ ಆಕ್ಷನ್‌ ಕಾಮಿಡಿ ಸಿನಿಮಾವನ್ನು ಮನೆಯಲ್ಲೇ ನೋಡಿ

Malayalam OTT: ಒಟಿಟಿಯಲ್ಲಿ ಬ್ಯಾಡ್‌ ಬಾಯ್ಜ್‌ ಬಿಡುಗಡೆ, ಮಲಯಾಳಂ ಆಕ್ಷನ್‌ ಕಾಮಿಡಿ ಸಿನಿಮಾವನ್ನು ಮನೆಯಲ್ಲೇ ನೋಡಿ

Bad Boyz out on OTT: ಒಮರ್ ಲುಲು ನಿರ್ದೇಶನದ ಬ್ಯಾಡ್‌ ಬಾಯ್ಜ್‌ ಮಲಯಾಳಂ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆರು ತಿಂಗಳ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಆಕ್ಷನ್‌ ಕಾಮಿಡಿ ಸಿನಿಮಾ ಇಷ್ಟಪಡುವವರು ಮಿಸ್‌ ಮಾಡದೆ ನೋಡಬೇಕಾದ ಸಿನಿಮಾವಿದು.

ಒಟಿಟಿಯಲ್ಲಿ ಬ್ಯಾಡ್‌ ಬಾಯ್ಜ್‌ ಬಿಡುಗಡೆ
ಒಟಿಟಿಯಲ್ಲಿ ಬ್ಯಾಡ್‌ ಬಾಯ್ಜ್‌ ಬಿಡುಗಡೆ

Bad Boyz out on OTT: ಈ ವೀಕೆಂಡ್‌ನಲ್ಲಿ ಮಲಯಾಳಂ ಆಕ್ಷನ್‌ ಕಾಮಿಡಿ ಸಿನಿಮಾ ನೋಡಲು ಬಯಸುವವರಿಗೆ ಸಿನಿಮಾವೊಂದು ಕಾಯುತ್ತಿದೆ. ಒಮರ್ ಲುಲು ನಿರ್ದೇಶನದ ಬ್ಯಾಡ್ ಬಾಯ್ಜ್ ಚಿತ್ರವು ಸೆಪ್ಟೆಂಬರ್ 2024 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ರೆಹಮಾನ್ ಮತ್ತು ಬಾಬು ಆಂಟನಿ ನಟಿಸಿರುವ ಈ ಮಲಯಾಳಂ ಚಿತ್ರವು ಅಂತಿಮವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಮಲಯಾಳಂ ಆಕ್ಷನ್ ಹಾಸ್ಯ ಚಿತ್ರವು ಈಗ ಎರಡು ವೇದಿಕೆಗಳಲ್ಲಿ ಲಭ್ಯವಿದೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಮನೋರಮಾ ಮ್ಯಾಕ್ಸ್‌ನಲ್ಲಿ ಇದೀಗ ರಿಲೀಸ್‌ ಆಗಿದೆ.

ಬ್ಯಾಡ್‌ ಬಾಯ್ಜ್‌ ಒಟಿಟಿಯಲ್ಲಿ ಬಿಡುಗಡೆ

ಒಮರ್ ಲುಲು ನಿರ್ದೇಶನದ ಬ್ಯಾಡ್ ಬಾಯ್ಜ್ ಚಿತ್ರವು ಬಿಡುಗಡೆಯಾಗಿ ಆರು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತರ ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ನೀವು ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ಮನೋರಮಾ ಮ್ಯಾಕ್ಸ್‌ನಲ್ಲಿ ಬ್ಯಾಡ್ ಬಾಯ್ಜ್ ಸಿನಿಮಾ ನೋಡಬಹುದು. ಈ ಚಿತ್ರವು ಮೂಲ ಮಲಯಾಳಂ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಈ ಚಿತ್ರವನ್ನು ಇತರೆ ಭಾಷಿಕರು ಇಂಗ್ಲಿಷ್‌ ಸಬ್‌ಟೈಟಲ್‌ ನೆರವಿನಿಂದ ನೋಡಬಹುದು.

ಈ ಸಿನಿಮಾವು ಚಿತ್ರಮಂದಿರಗಳಲ್ಲಿ ನೀರಸ ಪ್ರದರ್ಶನ ಕಂಡಿತು. ಬ್ಯಾಡ್ ಬಾಯ್ಜ್ ಈಗ ಎರಡು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿರುವುದರಿಂದ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವುದೇ ಕಾದು ನೋಡಬೇಕಿದೆ.

ಬ್ಯಾಡ್ ಬಾಯ್ಜ್ ಪಾತ್ರವರ್ಗ

ಈ ಮಲಯಾಳಂ ಸಿನಿಮಾದಲ್ಲಿ ಬಾಬು ಆಂಟನಿ, ಸೆಂಥಿಲ್ ಕೃಷ್ಣ, ಬಿಬಿನ್ ಜಾರ್ಜ್, ಶೀಲು ಅಬ್ರಹಾಂ ಮತ್ತು ಅನ್ಸನ್ ಪಾಲ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹರಿಶ್ರೀ ಅಶೋಕನ್, ರಮೇಶ್ ಪಿಶಾರೋಡಿ, ಅಜು ವರ್ಗೀಸ್, ಸಜಿನ್ ಚೆರುಕಾಯಿಲ್, ಸೈಜು ಕುರುಪ್, ಟಿನಿ ಟಾಮ್, ಭೀಮನ್ ರಘು ಮತ್ತು ಬಾಲ ಕೂಡ ಚಿತ್ರದ ಭಾಗವಾಗಿದ್ದಾರೆ.

ಸಾರಂಗ್ ಜಯಪ್ರಕಾಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ದಿಲೀಪ್ ಡೆನ್ನಿಸ್ ಸಿನಿಮಾದ ಎಡಿಟರ್‌. ವಿಲಿಯಂ ಫ್ರಾನ್ಸಿಸ್ ಸಂಗೀತ ನೀಡಿರುವ ಈ ಚಿತ್ರದ ಛಾಯಾಗ್ರಹಣವನ್ನು ಆಲ್ಬಿ ಆಂಟನಿ ನಿರ್ವಹಿಸಿದ್ದಾರೆ. ಈ ಚಿತ್ರವು ಅಂತಪ್ಪನ್ (ರೆಹಮಾನ್) ಮತ್ತು ಅವನ ಸ್ನೇಹಿತರು ವೆಟ್ಟುಕಾಡು ಬೆಲ್ಸನ್‌ನ ಡ್ರಗ್ ಮಾಫಿಯಾದ ವಿರುದ್ಧ ಹೋರಾಡುವ ಕಥೆಯಿದೆ. ಬಾಬು ಆಂಟನಿ ಬೆಲ್ಸನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವರ್ಷಂಗಲ್ಕು ಶೇಷಂ ಮತ್ತು ಮಲಯಾಳಿ ಫ್ರಮ್ ಇಂಡಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಧ್ಯಾನ್ ಶ್ರೀನಿವಾಸನ್ ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಶಸ್ಸು ಪಡೆದಿಲ್ಲ. ಒಟಿಟಿ ಸಿನಿಮಾ ಪ್ರಿಯರಿಗೆ ಇಷ್ಟವಾಗುವುದೇ ಕಾದು ನೋಡಬೇಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner