ಶೂಟಿಂಗ್‌ ಬಿಡುವಿನಲ್ಲಿಯೇ ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಕಿರುತೆರೆ ನಟ ದಿಲೀಪ್ ಶಂಕರ್
ಕನ್ನಡ ಸುದ್ದಿ  /  ಮನರಂಜನೆ  /  ಶೂಟಿಂಗ್‌ ಬಿಡುವಿನಲ್ಲಿಯೇ ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಕಿರುತೆರೆ ನಟ ದಿಲೀಪ್ ಶಂಕರ್

ಶೂಟಿಂಗ್‌ ಬಿಡುವಿನಲ್ಲಿಯೇ ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಕಿರುತೆರೆ ನಟ ದಿಲೀಪ್ ಶಂಕರ್

ಮಲಯಾಳಿ ಕಿರುತೆರೆ ನಟ ದಿಲೀಪ್ ಶಂಕರ್ ತಿರುವನಂತಪುರಂನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ದಿಲೀಪ್‌ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದವು ಎಂದು ಅವರ ಆಪ್ತರು ಪೊಲೀಸರಿಗೆ ತಿಳಿಸಿದ್ದಾರೆ.

ಮಲಯಾಳಿ ನಟ ದಿಲೀಪ್‌ ನಿಧನ
ಮಲಯಾಳಿ ನಟ ದಿಲೀಪ್‌ ನಿಧನ

Mollywood actor Death: ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಭಾನುವಾರ (ಡಿ. 29) ಕೇರಳದ ತಿರುವನಂತಪುರಂನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟನ ಸಾವಿನಿಂದಾಗಿ ಸದ್ಯ ಸೀರಿಯಲ್‌ ತಂಡ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಿದ್ದು, ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಕಳೆದ ಎರಡು ದಿನಗಳಿಂದ ಹೊಟೇಲ್‌ನಲ್ಲಿಯೇ ತಂಗಿದ್ದ ದಿಲೀಪ್‌, ಸೀರಿಯಲ್‌ ಶೂಟಿಂಗ್‌ ಆರಂಭವಾದ ಬೆನ್ನಲ್ಲೇ ಚಿತ್ರೀಕರಣಕ್ಕೆ ಆಗಮಿಸುವುದಾಗಿ ಹೇಳಿದ್ದರು. ಇದೀಗ ಅವರ ಅಕಾಲಿಕ ಸಾವಿನಿಂದ  ಸೀರಿಯಲ್‌ ತಂಡ  ಮಾತ್ರವಲ್ಲದೆ ಮಲಯಾಳಂ ಕಿರುತೆರೆ ಕ್ಷೇತ್ರವೂ ಆಘಾತಗೊಂಡಿದೆ.

ಹೊಟೇಲ್‌ನಲ್ಲಿ ತಂಗಿದ್ದ ದಿಲೀಪ್‌ ಅವರನ್ನು ಸೆಟ್‌ಗೆ ಕರೆಯಲು ಸಾಕಷ್ಟು ಮಂದಿ ಫೋನ್‌ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಆತಂಕದಲ್ಲಿಯೇ ಹೋಟೆಲ್‌ಗೆ ತೆರಳಿದ್ದಾರೆ.

ಎದುರಾಗಿತ್ತು ಆರೋಗ್ಯ ಸಮಸ್ಯೆ

ಅವರ ಕೋಣೆಯ ಬಳಿ ದುರ್ವಾಸನೆ ಬಂದಿದೆ. ಕೂಡಲೇ ಅವರ ಸಾವಾಗಿರುವುದು ಖಚಿತವಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇತ್ತೀಚಿನ ಕೆಲ ದಿನಗಳಿಂದ ದಿಲೀಪ್‌ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಕೆಲ ಆಪ್ತ ಬಳಗ  ಪೊಲೀಸರಿಗೆ ಮಾಹಿತಿ ನೀಡಿದೆ.

ಇತ್ತ ನಟನ ಸಾವಿಗೆ ನಿಖರ ಕಾರಣ ಏನಿರಬಹುದೆಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಸದ್ಯಕ್ಕೆ ಇದು ಸಹಜ ಸಾವಿನ ರೀತಿ ಗೋಚರವಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಿಲೀಪ್ ಶಂಕರ್ ಯಾರು?

ಮಲಯಾಳಿಯ ಅಮ್ಮಯ್ಯರಿಯತೆ ಸೀರಿಯಲ್‌ನಲ್ಲಿ ಪೀಟರ್‌ ಪಾತ್ರದಲ್ಲಿ ನಟಿಸುತ್ತಿದ್ದ ದಿಲೀಪ್‌, ಪಂಚಾಗ್ನಿ ಧಾರಾವಾಹಿಯಲ್ಲಿ ಚಂದ್ರಸೇನನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡು ಸೀರಿಯಲ್‌ಗಳ ಪೈಕಿ ಅಮ್ಮಯ್ಯರಿಯತೆ ಧಾರಾವಾಹಿಯ ಪೀಟರ್ ಪಾತ್ರಕ್ಕೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಇದೀಗ ಅವರ ದಿಢೀರ್‌ ಸಾವು ಮಲಯಾಳಂ ಮನರಂಜನಾ ಕ್ಷೇತ್ರಕ್ಕೆ ಆಘಾತವನ್ನುಂಟು ಮಾಡಿದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner