ಮತ್ತೊಂದು ʻದೃಶ್ಯಂʼ ಫೀಲ್‌ನ ಸಿನಿಮಾ ಬೇಕಾ? ಜೂನ್‌ನಲ್ಲಿ ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸುರಿಮಳೆ
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೊಂದು ʻದೃಶ್ಯಂʼ ಫೀಲ್‌ನ ಸಿನಿಮಾ ಬೇಕಾ? ಜೂನ್‌ನಲ್ಲಿ ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸುರಿಮಳೆ

ಮತ್ತೊಂದು ʻದೃಶ್ಯಂʼ ಫೀಲ್‌ನ ಸಿನಿಮಾ ಬೇಕಾ? ಜೂನ್‌ನಲ್ಲಿ ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸುರಿಮಳೆ

ಜೂನ್‌ನಲ್ಲಿ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬರಲಿವೆ. ಐದು ಸೂಪರ್ ಹಿಟ್ ಚಿತ್ರಗಳು ಒಟಿಟಿಯಲ್ಲಿ ಪ್ರಸಾರವಾಗಲಿವೆ. 200 ಕೋಟಿ ರೂಪಾಯಿಗೂ ಅಧಿಕ ಸಂಗ್ರಹಿಸಿದ ತಮಿಳು ಮತ್ತು ಮಲಯಾಳಂ ಚಿತ್ರಗಳು ಸೇರಿವೆ. ಜೂನ್‌ನಲ್ಲಿ ಒಟಿಟಿಯಲ್ಲಿ ಪ್ರಸಾರವಾಗುವ ಟಾಪ್-5 ಚಿತ್ರಗಳು ಇಲ್ಲಿವೆ.

ಜೂನ್‌ ತಿಂಗಳಲ್ಲಿ ಒಟಿಟಿಗೆ ಬರಲಿರುವ ಟಾಪ್‌ 5 ಸಿನಿಮಾಗಳಿವು
ಜೂನ್‌ ತಿಂಗಳಲ್ಲಿ ಒಟಿಟಿಗೆ ಬರಲಿರುವ ಟಾಪ್‌ 5 ಸಿನಿಮಾಗಳಿವು

ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸುರಿಮಳೆಯಾಗಲಿದೆ. ಅವುಗಳ ಪೈಕಿ ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆದ ಐದು ಚಿತ್ರಗಳು ಒಟಿಟಿಗೆ ಬರಲಿವೆ. ಅದರಲ್ಲಿ ಮೋಹನ್‌ಲಾಲ್ ನಟನೆಯ ಮಲಯಾಳಂನ ‘ತುಡರಮ್’ ಚಿತ್ರವೂ ಸೇರಿದೆ. ಒಂದು ತೆಲುಗು ಕಾಮಿಡಿ ಚಿತ್ರವೂ ಸ್ಟ್ರೀಮಿಂಗ್ ಆಗಲಿದೆ. ಎರಡು ತಮಿಳು ಬ್ಲಾಕ್‌ಬಸ್ಟರ್‌ಗಳು ಕೂಡ ಲಿಸ್ಟ್‌ನಲ್ಲಿವೆ. ಹೀಗಿವೆ ಜೂನ್‌ನಲ್ಲಿ ಒಟಿಟಿಗೆ ಬರಲಿರುವ ಟಾಪ್-5 ಸಿನಿಮಾಗಳು.

  • ಟೂರಿಸ್ಟ್ ಫ್ಯಾಮಿಲಿ

ತಮಿಳು ಸಿನಿಮಾ ʻಟೂರಿಸ್ಟ್ ಫ್ಯಾಮಿಲಿʼ ಹಿಟ್ ಪಟ್ಟಿಗೆ ಸೇರಿದೆ. ಈ ಫ್ಯಾಮಿಲಿ ಓರಿಯೆಂಟೆಡ್‌ ಚಿತ್ರದಲ್ಲಿ ಶಶಿಕುಮಾರ್ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೇ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, 16 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ 75 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಮಾಡಿ ಬ್ಲಾಕ್‌ಬಸ್ಟರ್ ಆಗಿದೆ. ಅಭಿಷಾನ್ ಜೀವಂತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟೂರಿಸ್ಟ್ ಫ್ಯಾಮಿಲಿ ಜೂನ್ ಮೊದಲ ವಾರದಲ್ಲಿ ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.

  • ತುಡರಮ್

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸಿರುವ ʻತುಡರಮ್ʼ ಸಿನಿಮಾ ಬಾಕ್ಸ್ ಆಫೀಸ್ ಶೇಕ್‌ ಮಾಡಿದೆ. 30 ಕೋಟಿ ರೂಪಾಯಿಗಿಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ, 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಮಾಡಿ, ಬಂಪರ್ ಬ್ಲಾಕ್‌ಬಸ್ಟರ್ ಆಗಿದೆ. ತರುಣ್ ಮೂರ್ತಿ ನಿರ್ದೇಶಿಸಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರ, ಏಪ್ರಿಲ್ 26ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಈ ಸಿನಿಮಾ ಜೂನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ ಒಟಿಟಿಗೆ ಬರಲಿದೆ.

  • ಸಿಂಗಲ್

ತೆಲುಗು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಸಿಂಗಲ್’ ಸೂಪರ್ ಹಿಟ್ ಆಗಿದೆ. ಶ್ರೀ ವಿಷ್ಣು ನಟಿಸಿರುವ ಈ ಚಿತ್ರ ಮೇ 9ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ಸುಮಾರು 10 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ ಸುಮಾರು 26 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಈ ಚಿತ್ರದಲ್ಲಿ ಶ್ರೀ ವಿಷ್ಣು ಜೊತೆಗೆ ಕೇತಿಕಾ ಶರ್ಮ ಮತ್ತು ಇವಾಣಾ ನಟಿಸಿದ್ದಾರೆ. ಕಾರ್ತಿಕ್ ರಾಜು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜೂನ್‌ನಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಬರಲಿದೆ.

  • ರೆಟ್ರೋ

ತಮಿಳು ಸ್ಟಾರ್ ಹೀರೋ ಸೂರ್ಯ ನಟಿಸಿರುವ ರೆಟ್ರೋ ಚಿತ್ರ ಮೇ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಈ ಚಿತ್ರ 200 ಕೋಟಿ ರೂಪಾಯಿಗೂ ಅಧಿಕ ಸಂಗ್ರಹಿಸಿದೆ ಎಂದು ಚಿತ್ರತಂಡ ತಿಳಿಸಿದೆ. 70 ಕೋಟಿ ರೂಪಾಯಿಗಿಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಆಕ್ಷನ್ ಚಿತ್ರದಲ್ಲಿ ಸೂರ್ಯ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಜೂನ್‌ನಲ್ಲಿ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಮೊದಲ ವಾರದಲ್ಲೇ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗುತ್ತಿದೆ.

  • ಅಲಪ್ಪುಝ ಜಿಂಖಾನಾ

ಮಲಯಾಳಂ ಸ್ಪೋರ್ಟ್ಸ್ ಕಾಮಿಡಿ ಮೂವಿ ‘ಅಲಪ್ಪುಝ ಜಿಂಖಾನಾ’ ಕೂಡ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡ ಸಿನಿಮಾ. ನೆಸ್ಲನ್ ಗಫೂರ್ ನಟಿಸಿರುವ ಈ ಚಿತ್ರ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡು ಹಿಟ್‌ ಆಯಿತು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ 50 ಕೋಟಿ ರೂಪಾಯಿಗೂ ಅಧಿಕ ಸಂಗ್ರಹಿಸಿ ಸೂಪರ್ ಹಿಟ್ ಆಗಿದೆ. ಖಾಲಿದ್ ರಹಮಾನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜೂನ್‌ನಲ್ಲಿ ಸೋನಿಲಿವ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.