ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ಜೀ5 ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಮಲಯಾಳಂ ಚಿತ್ರಗಳಿವು
ಕನ್ನಡ ಸುದ್ದಿ  /  ಮನರಂಜನೆ  /  ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ಜೀ5 ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಮಲಯಾಳಂ ಚಿತ್ರಗಳಿವು

ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ಜೀ5 ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಮಲಯಾಳಂ ಚಿತ್ರಗಳಿವು

ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ನೀವು ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾಗಳ ಅಭಿಮಾನಿಯಾಗಿದ್ದರೆ ಜೀ5 ಒಟಿಟಿಯಲ್ಲಿ ಈ ಲೇಖನದಲ್ಲಿ ನೀಡಲಾದ ಸಿನಿಮಾಗಳನ್ನು ಮಿಸ್‌ ಮಾಡದೆ ನೋಡಿ. ಕೆಲವು ಸಿನಿಮಾಗಳು ಕನ್ನಡ ಆಡಿಯೋ ಆಯ್ಕೆಯಲ್ಲಿ ಲಭ್ಯವಿದೆ.

ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ಜೀ5 ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಮಲಯಾಳಂ ಚಿತ್ರಗಳಿವು
ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ಜೀ5 ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಮಲಯಾಳಂ ಚಿತ್ರಗಳಿವು

ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು: ಒಟಿಟಿಯಲ್ಲಿ ಈಗ ಸಿನಿಮಾ ಪ್ರೇಕ್ಷಕರು ಮಲಯಾಳಂ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದಾರೆ. ಜೀ5 ಒಟಿಟಿಗೆ ನೀವು ಚಂದಾದಾರರಾಗಿದ್ದರೆ ಅಲ್ಲಿರುವ ಅನೇಕ ಸಿನಿಮಾಗಳನ್ನು ನೋಡಬಹುದು. ಈ ಒಟಿಟಿಯಲ್ಲಿ ಕೆಲವೊಂದು ಆಸಕ್ತಿದಾಯಕ ಮಲಯಾಳಂ ಕ್ರೈಮ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾಗಳಿವೆ. ಮಿಸ್‌ ಮಾಡದೆ ನೋಡಬಹುದಾದ ಅಂತಹ ಏಳು ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.

ಐಡೆಂಟೆಟಿ

ಮಲಯಾಳಂನ ಖ್ಯಾತ ನಟ ಟೋವಿನೋ ಥಾಮಸ್ ಮತ್ತು ತ್ರಿಷಾ ನಟಿಸಿರುವ ಚಿತ್ರ 'ಐಡೆಂಟಿಟಿ' ಸಿನಿಮಾ ಜೀ5 ಒಟಿಟಿಯಲ್ಲಿದೆ. ಇದು ಸೂಪರ್ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ. ಒಬ್ಬ ಪೊಲೀಸ್ ಅಧಿಕಾರಿ, ಪತ್ರಕರ್ತ ಮತ್ತು ಸ್ಕೆಚ್ ಕಲಾವಿದನ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಹುಡುಗಿಯರಿಗೆ ಕಿರುಕುಳ ನೀಡಿದ ಅಪರಾಧಿಯನ್ನು ಕೊಂದವರು ಯಾರು? ಪ್ರಕರಣದ ತನಿಖೆಯ ವಿಧಾನಗಳನ್ನು ತೋರಿಸುವ ಮೂಲಕ ಕಥೆ ಮುಂದುವರಿಯುತ್ತದೆ. ಈ ಐಡೆಂಟೆಟಿ ಸಿನಿಮಾವು ಅನಿರೀಕ್ಷಿತ ತಿರುವುಗಳೊಂದಿಗೆ ರೋಮಾಂಚನವನ್ನು ನೀಡುತ್ತದೆ.

ಪಾಕುಲಂ ಪಾತಿರವುಂ

ಇದು ಕುಂಚಾಕೊ ಬೋಬನ್ ಮತ್ತು ರಜಿಶಾ ವಿಜಯನ್ ಅಭಿನಯದ ಆಕ್ಷನ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಸಿನಿಮಾ ಮಾವೋವಾದಿಗಳ ನಿಯಂತ್ರಣದಲ್ಲಿರುವ ವಯನಾಡಿನ ಕಾಡುಗಳ ಹಿನ್ನೆಲೆಯಲ್ಲಿ ನಡೆಯುತ್ತದೆ. ಮೈಕೆಲ್ ಎಂಬ ವನ್ಯಜೀವಿ ಛಾಯಾಗ್ರಾಹಕ ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಅಲ್ಲಿಗೆ ಹೋಗುತ್ತಾನೆ. ಚಿತ್ರದಲ್ಲಿನ ತಿರುವುಗಳು ಮನರಂಜನೆ ನೀಡುತ್ತವೆ. ಇದು 2023ರ ಅತ್ಯುತ್ತಮ ಕ್ರೈಮ್ ಥ್ರಿಲ್ಲರ್‌ಗಳಲ್ಲಿ ಒಂದಾಗಿದೆ.

ವೋಲ್ಫ್‌

ಅರ್ಜುನ್ ಅಶೋಕನ್ ಮತ್ತು ಸಂಯುಕ್ತಾ ಮೆನನ್ ಅಭಿನಯದ ಚಿತ್ರವಾಗಿದೆ. ಇದು ಸೈಕಲಾಜಿಕಲ್ ಥ್ರಿಲ್ಲರ್. ಸಂಜಯ್ ಎಂಬ ಯುವಕ ತನ್ನ ಭಾವಿ ಪತ್ನಿ ಆಶಾಳನ್ನು ಭೇಟಿಯಾಗಲು ಬಯಸುತ್ತಾನೆ. ಆದರೆ ಈ ಪ್ರಯಾಣದಲ್ಲಿ ಅವನಿಗೆ ಕೆಲವು ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ

ಪಾಪನ್‌

ಸುರೇಶ್ ಗೋಪಿ ಮತ್ತು ನೀತಾ ಪಿಳ್ಳೈ ಅಭಿನಯದ ಚಿತ್ರ ಪಾಪನ್. ಇದು ಒಂದು ಅದ್ಭುತ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಚಿತ್ರವು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕೊಲೆ ಪ್ರಕರಣವನ್ನು ಭೇದಿಸಲು ಆಗಮಿಸುವ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಸುರೇಶ್ ಗೋಪಿಯವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಇನಿ ಉತ್ತರಂ

ಇನಿ ಉತ್ತರಂ ಚಿತ್ರದಲ್ಲಿ ಅಪರ್ಣಾ ಬಾಲಮುರಳಿ ಮತ್ತು ಕಲಾಭವನ್ ಶಾಜೋನ್ ನಟಿಸಿದ್ದಾರೆ. ಈ ಚಿತ್ರ ಜಾನಕಿ ಎಂಬ ವೈದ್ಯೆಯ ಸುತ್ತ ಸುತ್ತುತ್ತದೆ. ಅವಳು ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾಳೆ. ಆದರೆ ಅದಾದ ನಂತರವೇ ನಿಜವಾದ ಕಥೆ ಆರಂಭವಾಗುತ್ತದೆ. ಅದರಲ್ಲಿನ ತಿರುವುಗಳು ಪ್ರೇಕ್ಷಕರನ್ನು ಸೆಳೆಯುತ್ತವೆ.

ಪುತಿಯಾ ನಿಯಮಮ್

ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಮತ್ತು ನಯನತಾರಾ ಅಭಿನಯದ ಚಿತ್ರ ಪುತಿಯಾ ನಿಯಮಮ್. ಇದು ಸೇಡಿನ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಇದು ತನ್ನ ಸ್ವಂತ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವ ವಾಸುಕಿ ಎಂಬ ಮಹಿಳೆಯ ಸುತ್ತ ಸುತ್ತುವ ಕಥೆಯಾಗಿದೆ. ಈ ಚಿತ್ರದಲ್ಲಿ ಮಮ್ಮುಟ್ಟಿ ಮತ್ತು ನಯನತಾರಾ ಅವರ ಅಭಿನಯ ಪ್ರೇಕ್ಷಕರನ್ನು ಸೆಳೆದಿದೆ.

ಆಪರೇಷನ್ ಜಾವಾ

ಆಪರೇಷನ್ ಜಾವಾ ಸಿನಿಮಾ ಸೈಬರ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಬಾಲು ವರ್ಗೀಸ್ ಮತ್ತು ಲುಕ್ಮಾನ್ ಅವರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕೆಲವು ನಿಜ ಜೀವನದ ಸೈಬರ್ ಅಪರಾಧಗಳನ್ನು ತೆಗೆದುಕೊಂಡು ಅವುಗಳ ತನಿಖೆ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುತ್ತದೆ. ಒಟ್ಟಾರೆ, ಜೀ5ನಲ್ಲಿ ಅನೇಕ ಮಲಯಾಳಂ ಸಿನಿಮಾಗಳಿದ್ದು, ಅವುಗಳಲ್ಲಿ ಈ ಏಳು ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತವೆ. ನೀವು ಇವುಗಳಲ್ಲಿ ಯಾವುದಾದರೂ ಸಿನಿಮಾ ನೋಡಿಲ್ಲವೆಂದಾದರೆ ಬಿಡುವು ಮಾಡಿಕೊಂಡು ನೋಡಬಹುದು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in