ಕಡಿಮೆ ಬಜೆಟ್‌ನ ಈ ಮಲಯಾಳಿ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್; ಈಗ ಒಟಿಟಿಗೂ ಎಂಟ್ರಿ
ಮಲಯಾಳಂನ ಬ್ರೊಮಾನ್ಸ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಒಂದು ದಿನ ಮುಂಚಿತವಾಗಿ ಇಂದಿನಿಂದ (ಏ. 30) ಸ್ಟ್ರೀಮಿಂಗ್ ಆಗಲಿದೆ. ಈ ಮಲಯಾಳಂ ಹಾಸ್ಯ ಚಿತ್ರವು ಕನ್ನಡದಲ್ಲೂ ಸ್ಟ್ರೀಮಿಂಗ್‍ಗೆ ಲಭ್ಯವಾಗಲಿದೆ.

ಮಲಯಾಳಂ ನಟರಾದ ಮ್ಯಾಥ್ಯೂ ಥಾಮಸ್, ಅರ್ಜುನ್ ಅಶೋಕನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ʻಬ್ರೊಮಾನ್ಸ್ʼ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್‌ನಲ್ಲೂ ಕಮಾಲ್ ಮಾಡಿದೆ. ಇದೇ ವರ್ಷದ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಅಡ್ವೆಂಚರ್ ಕಾಮಿಡಿ ಸಿನಿಮಾಕ್ಕೆ ನೋಡುಗರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಈ ಪಾಸಿಟಿವ್ ಟಾಕ್‌ನಿಂದಲೇ ಒಳ್ಳೆಯ ಗಳಿಕೆಯನ್ನೂ ಕಂಡಿತ್ತು. ಹೀಗಿರುವ ಚಿತ್ರ ಅದ್ಯಾವಾಗ ಒಟಿಟಿಗೆ ಬರಲಿದೆ ಎಂದು ಕಾದಿದ್ದೇ ಬಂತು. ಆದರೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಕೊನೆಗೂ ಒಟಿಟಿಗೆ ಲಗ್ಗೆ ಇಟ್ಟಿದೆ.
ʻಬೊಮಾನ್ಸ್ʼ ಸಿನಿಮಾ ಇಂದು (ಏಪ್ರಿಲ್ 30) ಸಂಜೆ 5.30 ಗಂಟೆಗೆ SonyLIV ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿಯೂ ಸ್ಟ್ರೀಮಿಂಗ್‍ಗೆ ಬರಲಿದೆ. ಈ ಚಿತ್ರವನ್ನು ಮೇ 1 ರಂದು ತರುವುದಾಗಿ ಈ ಹಿಂದೆ ಸೋನಿ ಲಿವ್ ಘೋಷಿಸಿತ್ತು. ಆದರೆ, ಒಂದು ದಿನ ಮುಂಚಿತವಾಗಿ ಇಂದು ಸಂಜೆ ಈ ಚಿತ್ರ ಸ್ಟ್ರೀಮಿಂಗ್‍ಗೆ ಎಂಟ್ರಿ ಕೊಡಲಿದೆ.
ಎರಡೂವರೆ ತಿಂಗಳ ನಂತರ..
ʻಬ್ರೊಮಾನ್ಸ್ʼ ಸಿನಿಮಾ ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇ ದಿನದಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿತ್ತು. ಉತ್ತಮ ಪ್ರತಿಕ್ರಿಯೆ ಪಡೆದು ಕಮರ್ಷಿಯಲ್ ಆಗಿಯೂ ಸಕ್ಸಸ್ ಸಾಧಿಸಿತು. ಸಹಜವಾಗಿ ಒಂದು ತಿಂಗಳ ಅಂತರದಲ್ಲಿ ಬಹುತೇಕ ಸಿನಿಮಾಗಳು ಒಟಿಟಿಗೆ ಬರುತ್ತವೆ. ಆದರೆ, ಬ್ರೊಮ್ಯಾನ್ಸ್ ಸಿನಿಮಾ ಸುದೀರ್ಘ ಎರಡೂವರೆ ತಿಂಗಳ ಬಳಿಕ ಒಟಿಟಿಗೆ ಆಗಮಿಸುತ್ತದೆ.
ಬ್ರೊಮಾನ್ಸ್ ಚಿತ್ರಕ್ಕೆ ಅರುಣ್ ಜಿ ಜೋಸ್ ನಿರ್ದೇಶನ ಮಾಡಿದ್ದಾರೆ. ಕಾಣೆಯಾದ ಅಣ್ಣನಿಗಾಗಿ ತಮ್ಮ ಹುಡುಕುವ ಕಥೆಯ ಸುತ್ತ ಈ ಚಿತ್ರ ಸಾಗುತ್ತದೆ. ಅಣ್ಣನನ್ನು ಹುಡುಕಲು ಸ್ನೇಹಿತರ ಸಹಾಯ ಪಡೆಯುತ್ತಾನೆ ಆ ತಮ್ಮ. ಈ ಕ್ರಮದಲ್ಲಿ ಕೆಲವು ಊಹಿಸದ ಟ್ವಿಸ್ಟ್‌ಗಳು, ಸವಾಲುಗಳು, ಹೊಸ ವಿಷಯಗಳು ಎದುರಾಗುತ್ತವೆ. ಈ ಚಿತ್ರ ಹಾಸ್ಯ ಪ್ರಧಾನವಾಗಿ ಸಾಗುತ್ತದೆ. ಕೆಲವು ಸೀನ್‍ಗಳು ಮನಸ್ಸಿಗೆ ಹತ್ತಿರವಾಗುವಂತಿವೆ.
ಬ್ರೊಮಾನ್ಸ್ ಸಿನಿಮಾದಲ್ಲಿ ಮ್ಯಾಥ್ಯೂ ಥಾಮಸ್, ಅಶೋಕನ್ ಜೊತೆಗೆ ಮಹಿಮಾ ನಂಬಿಯಾರ್, ಸಂಗೀತಾ ಪ್ರತಾಪ್, ಕಲಾಭವನ್ ಶಾಜಾನ್, ಶ್ಯಾಮ್ ಮೋಹನ್, ಭರತ್ ಬೋಪಣ್ಣ, ಬಿನೂ ಪಪ್ಪು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಶಿಕ್ ಉಸ್ಮಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಶಿಕ್ ಉಸ್ಮಾನ್ ಈ ಮೂವಿಯನ್ನು ನಿರ್ಮಾಣ ಮಾಡಿದ್ದಾರೆ. ಗೋವಿಂದ್ ವಸಂತ ಮ್ಯೂಸಿಕ್ ನೀಡಿದ್ದಾರೆ. ಬ್ರೊಮಾನ್ಸ್ ಚಿತ್ರವನ್ನು ಸುಮಾರು 3 ಕೋಟಿ ಬಜೆಟ್‍ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ 13 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾವನ್ನು ಇಂದಿನಿಂದ ಸೋನಿ ಲೀವ್ ಒಟಿಟಿಯಲ್ಲಿ ನೋಡಬಹುದು.