Tarini Movie launched: ರಿಯಲ್‌ ಲೈಫ್‌ನಲ್ಲೂ ಪ್ರೆಗ್ನೆಂಟ್‌, ಸಿನಿಮಾದಲ್ಲೂ ಅದೇ ಪಾತ್ರ: ಮಮತಾ ರಾವುತ್‌ ಈಗ 'ತಾರಿಣಿ'
ಕನ್ನಡ ಸುದ್ದಿ  /  ಮನರಂಜನೆ  /  Tarini Movie Launched: ರಿಯಲ್‌ ಲೈಫ್‌ನಲ್ಲೂ ಪ್ರೆಗ್ನೆಂಟ್‌, ಸಿನಿಮಾದಲ್ಲೂ ಅದೇ ಪಾತ್ರ: ಮಮತಾ ರಾವುತ್‌ ಈಗ 'ತಾರಿಣಿ'

Tarini Movie launched: ರಿಯಲ್‌ ಲೈಫ್‌ನಲ್ಲೂ ಪ್ರೆಗ್ನೆಂಟ್‌, ಸಿನಿಮಾದಲ್ಲೂ ಅದೇ ಪಾತ್ರ: ಮಮತಾ ರಾವುತ್‌ ಈಗ 'ತಾರಿಣಿ'

'ತಾರಿಣಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು ಈ ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸುತ್ತಿದ್ದಾರೆ. ಸಿದ್ದು ಇದಕ್ಕೂ ಮುನ್ನ 'ದಾರಿ ಯಾವುದಯ್ಯ ವೈಕುಂಠಕೆ' ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಮಹಿಳಾ ಪ್ರಧಾನ ಚಿತ್ರ 'ತಾರಿಣಿ'ಯಲ್ಲಿ ಮಮತಾ ರಾವುತ್
ಮಹಿಳಾ ಪ್ರಧಾನ ಚಿತ್ರ 'ತಾರಿಣಿ'ಯಲ್ಲಿ ಮಮತಾ ರಾವುತ್

ಮದುವೆ ಆದ ನಂತರ ಕೆಲವು ದಿನಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಮಮತಾ ರಾವುತ್‌ ಈಗ ಮತ್ತೆ ಕ್ಯಾಮರಾ ಮುಂದೆ ವಾಪಸಾಗಿದ್ದಾರೆ. ಮಮತಾ ರಾವುತ್‌ ಈಗ 7 ತಿಂಗಳ ಗರ್ಭಿಣಿ ಆಗಿದ್ದು, ಈ ಸಿನಿಮಾದಲ್ಲಿ ಕೂಡಾ ಅವರು ಗರ್ಭಿಣಿ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಮಮತಾ ರಾವುತ್‌ ಅಭಿನಯದ ಈ ಚಿತ್ರಕ್ಕೆ ತಾರಿಣಿ ಎಂದು ಹೆಸರಿಟ್ಟಿದ್ದು ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳುರಿನ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನೆರವೇರಿತು. ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ. ಸುರೇಶ್ ಕೊಟ್ಯಾನ್ ಚಿತ್ರಾಪು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗಂಡಸಿ ಸದಾನಂದಸ್ವಾಮಿ ಆರಂಭ ಫಲಕ ತೋರಿದರು. ನಟ ಪ್ರಣಯಮೂರ್ತಿ ಕ್ಯಾಮರಾ ಚಾಲನೆ ಮಾಡಿದರು. ನಿರ್ಮಾಪಕ ಸುರೇಶ್‌ ಕೋಟ್ಯಾನ್‌, ಮಮತಾ ರಾವುತ್‌ ಅವರ ಪತಿ ಅನ್ನೋದು ಮತ್ತೊಂದು ವಿಶೇಷ.

'ತಾರಿಣಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು ಈ ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸುತ್ತಿದ್ದಾರೆ. ಸಿದ್ದು ಇದಕ್ಕೂ ಮುನ್ನ 'ದಾರಿ ಯಾವುದಯ್ಯ ವೈಕುಂಠಕೆ' ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡಾ ಸಿದ್ದು ಪೂರ್ಣಚಂದ್ರ ಅವರದ್ದೇ. ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ದೀಪಕ್ ಸಿ.ಎಸ್‌. ಸಂಕಲನ, ಬಸವರಾಜ್ ಆಚಾರ್ಯ ಕಲಾ ನಿರ್ದೇಶನ, ನಾಗರತ್ನ ಕೆ.ಹೆಚ್. ವಸ್ತ್ರಾಲಂಕಾರ ಹಾಗೂ ಎಸ್ ರಘುನಾಥ್ ರಾವ್ ಅವರ ಸ್ಥಿರಚಿತ್ರಣ ಇದೆ.

ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್‌ ನಡೆಯಲಿದೆ. ಚಿತ್ರದಲ್ಲಿ ಮಮತಾ ತಾರಿಣಿ ಪಾತ್ರದಲ್ಲಿ ನಟಿಸುತ್ತಿದ್ದು, ಅವರಿಗೆ ನಾಯಕನಾಗಿ ರೋಹಿತ್‌ ಅಭಿನಯಿಸುತ್ತಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ. ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ಕುಮಾರ ಬೇಂದ್ರೆ, ತೇಜಸ್ವಿನಿ, ರಾಜು ಕಲ್ಕುಣಿ, ಶ್ರೀಸಾಯಿ ಮಂಜು, ಸುಚಿತ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈಗಂತೂ ಹೆಣ್ಣು ಭ್ರೂಣಹತ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನಾಯಕಿಯರು ಮದುವೆ ಆದರೆ ಸಾಕು ಆಕೆಗೆ ಹಿರೋಯಿನ್‌ ಪಾತ್ರಕ್ಕೆ ಹೊಂದುವುದಿಲ್ಲ ಎಂದು ಕೆಲವು ನಿರ್ದೇಶಕ, ನಿರ್ಮಾಪಕರು ಫಿಕ್ಸ್‌ ಆಗುತ್ತಾರೆ. ನಾಯಕಿಯರು ಕೂಡಾ ತಾವು ಮದುವೆ ಆದರೆ ಕೆರಿಯರ್‌ ಕೂಡಾ ಸ್ಟಾಪ್‌ ಆಗಬಹುದು ಎಂಬ ಭಯದಲ್ಲಿರುತ್ತಾರೆ. ಈ ವಿಚಾರದಲ್ಲಿ ಒಂದು ಸಂದೇಶ ನೀಡಬೇಕೆಂಬ ಕಾರಣಕ್ಕೆ ನಾವು ಈ ಸಿನಿಮಾ ಮಾಡುತ್ತಿದ್ದೇವೆ. ಹಾಗೇ ಈ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅವಶ್ಯಕತೆ ಇದೆ. ಆದರೆ ನಾವು ಪ್ರೆಗ್ನೆಂಟ್‌ ಎಂಬ ಮಾತ್ರಕ್ಕೆ ಮನೆಯಲ್ಲಿ ಕುಳಿತಿದ್ದರೆ ಚಿತ್ರರಂಗದಿಂದ ದೂರ ಉಳಿದಂತೆ ಆಗುತ್ತದೆ. ನನಗೆ ಈ ಸಮಯದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಲು ಹುರುಪು ಬಂದಂತೆ ಆಗಿದೆ ಎಂದು ಮಮತಾ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

Whats_app_banner