ನಾಲ್ಕು ವಾರಗಳ ಕಾಲ ಒಟಿಟಿ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸಿನಿಮಾ ಇದು; ಈ ಒಟಿಟಿಯಲ್ಲಿ ವೀಕ್ಷಿಸಿ ‘ಡಿಸ್ಲ್ಯಾಚ್’
ಒಟಿಟಿ ಕ್ರೈಮ್ ಥ್ರಿಲ್ಲರ್: ಮನೋಜ್ ಬಾಜಪೇಯಿ ಅಭಿನಯದ 'ಡಿಸ್ಪ್ಯಾಚ್' ಸಿನಿಮಾ ಬಿಡುಗಡೆಯಾಗಿ ಈಗ ಒಟಿಟಿಗೂ ಆಗಮನಿಸಿದೆ. ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಯಾವ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂಬ ಮಾಹಿತಿಗಾಗಿ ಪೂರ್ತಿ ಓದಿ.
ಬಾಲಿವುಡ್ ಹಿರಿಯ ನಟ ಮನೋಜ್ ಬಾಜಪೇಯಿ ಅವರ ಚಲನಚಿತ್ರಗಳು ಮತ್ತು ಸರಣಿಗಳು ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಫ್ಯಾಮಿಲಿ ಮ್ಯಾನ್ ಸೇರಿದಂತೆ ಮನೋಜ್ ಅಭಿನಯದ ಹೆಚ್ಚಿನ ವೆಬ್ ಸರಣಿಗಳು ಮತ್ತು ಚಲನಚಿತ್ರಗಳು ಒಟಿಟಿಯಲ್ಲಿ ಹಲವರಿಂದ ಮೆಚ್ಚುಗೆ ಪಡೆದಿದೆ. ಮನೋಜ್ ಅಭಿನಯದ ಇತ್ತೀಚಿನ ಚಿತ್ರ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ‘ಡಿಸ್ಪ್ಯಾಚ್’ ಈ ಕ್ರೈಮ್ ಥ್ರಿಲ್ಲರ್ ಚಿತ್ರ ಒಟಿಟಿಗೆ ಬಂದಿದೆ. ಈ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಸಾಕಷ್ಟು ಜನ ಈ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಡಿಸ್ಪ್ಯಾಚ್ ಮೂವಿ ಜೀ 5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತಿದೆ. ನಾಲ್ಕು ವಾರಗಳಿಂದ ಒಟಿಟಿ ಇಂಡಿಯಾ ಟ್ರೆಂಡ್‌ನಲ್ಲಿ ಈ ಸಿನಿಮಾ ಅಗ್ರಸ್ಥಾನದಲ್ಲಿದೆ. ಈ ಚಿತ್ರವು ಡಿಸೆಂಬರ್ 13, 2024ರಿಂದ ಜೀ5 ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಇದು ಪ್ರಾರಂಭದಿಂದಲೂ ವೀಕ್ಷಣೆಗಳಲ್ಲಿ ಟ್ರೆಂಡಿಂಗ್ ಆಗಿದೆ. ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ಚಿತ್ರವು ವೀಕ್ಷಣೆಗಳಲ್ಲಿ ಹಲವರಿಂದ ವೀಕ್ಷಿಸಲ್ಪಟ್ಟಿದೆ.
ಪಾತ್ರವರ್ಗ
ಈ ಡಿಸ್ಪ್ಯಾಚ್ ಚಲನಚಿತ್ರವು ಕೊಲೆ, ಬೃಹತ್ ಹಗರಣ ಮತ್ತು ಈ ಪ್ರಕ್ರಿಯೆಯಲ್ಲಿ ಆದ ಘಟನೆಗಳನ್ನು ಬಹಿರಂಗಪಡಿಸುವ ಸಲುವಾಗಿ ಪತ್ರಕರ್ತನೊಬ್ಬ ಪಡುವ ಕಷ್ಟದ ಬಗ್ಗೆ ಕಥೆಯನ್ನು ಹೊಂದಿದೆ. ಈ ಚಿತ್ರವನ್ನು ಕನು ಬೆಹ್ಲ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮನೋಜ್ ಬಾಜಪೇಯಿ, ಸಹನಾ ಗೋಸ್ವಾಮಿ, ಅರ್ಚಿತಾ ಅಗರ್ವಾಲ್, ರಿತುಪರ್ಣ ಸೇನ್, ರಿಜು ಬಜಾಜ್, ಆನಂದ್ ಅಕುಂಟೆ, ಪೃಥ್ವಿಕ್ ಪ್ರತಾಪ್ ಮತ್ತು ವೀಣಾ ಮೆಹ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪತ್ರಕರ್ತನ ಪಾತ್ರದಲ್ಲಿ ಮನೋಜ್ ಬಾಜಪೇಯಿ
ಈ ಚಿತ್ರದಲ್ಲಿ ಮನೋಜ್ ಕ್ರೈಮ್ ರಿಪೋರ್ಟರ್ ಜಾಯ್ ಬೇಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಆರ್‌ಎಸ್‌ವಿಪಿ ಬ್ಯಾನರ್ ಅಡಿಯಲ್ಲಿ ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಸಿದ್ಧಾರ್ಥ್ ದಿವಾನ್ ಅವರ ಛಾಯಾಗ್ರಹಣವಿದೆ. ಈ ಚಿತ್ರವು ಜೀ5 ಒಟಿಟಿಯಲ್ಲಿ ಹಿಂದಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇಂಗ್ಲಿಷ್ ಉಪಶೀರ್ಷಿಕೆಗಳು ಲಭ್ಯವಿದೆ.
ಡಿಸ್ಪ್ಯಾಚ್ ಕಥಾಹಂದರ
ಡಿಸ್ಪ್ಯಾಚ್ ಎಂಬ ಪತ್ರಿಕೆಯಲ್ಲಿ ಹೀರೋ ಕ್ರೈ ರಿಪೋರ್ಟರ್ ಆಗಿ ಕೆಲಸ ಮಾಡುತ್ತಾನೆ. ಮುದ್ರಣ ಸುದ್ದಿ ಶಾಶ್ವತವಾಗಿ ಉಳಿಯಲು ಅವರು ಶ್ರಮಿಸುತ್ತಾರೆ. ದೇಶದಲ್ಲಿ ನಡೆದ ದೊಡ್ಡ ಹಗರಣದ ಬಗ್ಗೆ ವರದಿ ಮಾಡಲು ಜಾಯ್ ತುಂಬಾ ಕಷ್ಟಪಡುತ್ತಾನೆ. ಆದರೆ ಕೌಟುಂಬಿಕವಾಗಿ ಆ ಸಂದರ್ಭದಲ್ಲಿ ಅವನು ತನ್ನ ಹೆಂಡತಿಯೊಂದಿಗೆ ಸಮಸ್ಯೆ ಮಾಡಿಕೊಳ್ಳುತ್ತಾನೆ. ಕೆಲಸಕ್ಕಾಗಿ ಶ್ರಮಿಸುತ್ತಾ ಹೆಂಡತಿ ಶ್ವೇತಾ (ಸಹನಾ ಗೋಸ್ವಾಮಿ) ಗೆ ವಿಚ್ಛೇದನ ನೀಡಲು ತಯಾರಿ ನಡೆಸುತ್ತಾನೆ. ದೇಶವನ್ನು ಆಶ್ಚರ್ಯಗೊಳಿಸುವ ದೊಡ್ಡ ಹಗರಣವೊಂದರ ಬೆನ್ನು ಹಿಡಿದ ಆತನಿಗೆ ಆಗ ಅದೇ ಮುಖ್ಯವಾಗಿರುತ್ತದೆ. ಪತ್ರಿಕೆಯಲ್ಲಿ ಬಂದ ವರದಿ ಶಾಶ್ವತವಾಗಿ ಇರಬೇಕು ಎಂದು ಆತ ಬಯಸುತ್ತಾನೆ. ತನ್ನ ಜೀವನವನ್ನೇ ಹಗರಣದ ಜಾಲ ಹುಡುಕಲು ಮೀಸಲಿಟ್ಟಂತೆ ಬದುಕುತ್ತಾನೆ. ಈ ರೀತಿಯ ಕಥಾ ಹಂದರ ಸಿನಿಮಾದಲ್ಲಿದೆ.
ಪೊಲೀಸರು ಕೂಡ ಈ ಒಂದು ಹಗರಣದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿರುತ್ತಾರೆ. ಆದರೆ ಒಬ್ಬ ಪತ್ರಕರ್ತನಾಗಿ ಈಗ ಇನ್ನಷ್ಟು ಸಂಶೋಧನೆ ಮಾಡುತ್ತಾನೆ. ಸಿನಿಮಾದಲ್ಲಿ ಮುಖ್ಯ ಎನಿಸುವುದು ಹೇಗೆ ಆ ಹಗರಣ ಪ್ರಕರಣವನ್ನು ಈತ ಭೇದಿಸುತ್ತಾನೆ ಎಂಬುದು. ಎದುರಾದ ಸವಾಲುಗಳನ್ನು ಹೇಗೆ ಹಿಮ್ಮೆಟ್ಟುತ್ತಾನೆ ಎಂಬುದರ ಸುತ್ತ ಕಥೆ ಸುತ್ತುತ್ತದೆ. ಅಭಿನಯವೂ ತುಂಬಾ ಚೆನ್ನಾಗಿದ್ದು ಕಥೆಯ ಶೈಲಿ ಮತ್ತು ಕುತೂಹಲ ಕಾದುಕೊಳ್ಳುವ ತಂತ್ರ ಎಲ್ಲಿರಿಗೂ ಇಷ್ಟವಾಗುವ ರೀತಿಯಲ್ಲಿದೆ.