Mansore New Movie: '19.20.21' ಹೊಸ ಪೋಸ್ಟರ್‌ ಜೊತೆಗೆ ಸಿನಿಮಾ ರಿಲೀಸ್‌ ಡೇಟ್‌ ಘೋಷಿಸಿದ ನಿರ್ದೇಶಕ ಮಂಸೋರೆ
ಕನ್ನಡ ಸುದ್ದಿ  /  ಮನರಂಜನೆ  /  Mansore New Movie: '19.20.21' ಹೊಸ ಪೋಸ್ಟರ್‌ ಜೊತೆಗೆ ಸಿನಿಮಾ ರಿಲೀಸ್‌ ಡೇಟ್‌ ಘೋಷಿಸಿದ ನಿರ್ದೇಶಕ ಮಂಸೋರೆ

Mansore New Movie: '19.20.21' ಹೊಸ ಪೋಸ್ಟರ್‌ ಜೊತೆಗೆ ಸಿನಿಮಾ ರಿಲೀಸ್‌ ಡೇಟ್‌ ಘೋಷಿಸಿದ ನಿರ್ದೇಶಕ ಮಂಸೋರೆ

ಎರಡು ದಶಕಗಳ ಕಾಲ ಕರಾವಳಿಯ ಸಮುದಾಯವೊಂದು ಅನುಭವಿಸಿದ ನೋವು ಹಾಗೂ ಅದರ ವಿರುದ್ಧ ನಡೆಸಿದ ಹೋರಾಟವೇ ಈ ಸಿನಿಮಾ ಕಥೆಗೆ ಸ್ಪೂರ್ತಿ. ನೈಜ ಘಟನೆ ಆಧರಿಸಿದ ಈ ಚಿತ್ರಕ್ಕಾಗಿ ನಿರ್ದೇಶಕ ಮಂಸೋರೆ ಹಾಗೂ ತಂಡ ಸಾಕಷ್ಟು ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿ ಸುಂದರವಾದ ಕಥಾಹಂದರವನ್ನು ಹೆಣೆದಿದ್ದಾರೆ.

ಮಾರ್ಚ್‌ 3 ರಂದು ತೆರೆ ಕಾಣುತ್ತಿರುವ  '19.20.21'
ಮಾರ್ಚ್‌ 3 ರಂದು ತೆರೆ ಕಾಣುತ್ತಿರುವ '19.20.21'

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ಈಗಾಗಲೇ ಮೂರು ವಿಭಿನ್ನ ಸಿನಿಮಾಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಸಾಮಾಜಿಕ ಕಳಕಳಿಯ ಸಿನಿಮಾಗಳ ಮೂಲಕ ಮನರಂಜನೆ ಜೊತೆಗೆ ಜನರನ್ನು ಎಚ್ಚರಿಸುತ್ತಾ ಮನೆ ಮಾತಾಗಿರುವ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ, ಇದೀಗ ಹೊಸ ಸಿನಿಮಾದೊಂದಿಗೆ ಮತ್ತೆ ನಿಮ್ಮೆಲರ ಮುಂದೆ ಬರುತ್ತಿದ್ದಾರೆ.

ಮಂಸೋರೆ ನಿರ್ದೇಶನದ '19.20.21' ಮಾರ್ಚ್ 3ರಂದು ತೆರೆ ಮೇಲೆ ಬರುತ್ತಿದೆ. ಈಗಾಗಲೇ ಸಿನಿಮಾ ಪೋಸ್ಟರ್‌ಗಳು, ಹಾಗೂ ಟ್ರೇಲರ್ ಎಲ್ಲರ ಮನಸ್ಸಿಗೂ ನಾಟಿದ್ದು, ಈ ಸಿನಿಮಾ ಮೂಲಕ ಮಂಸೋರೆ ಏನು ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರ ವಲಯದಲ್ಲಿದೆ. ಇದರ ನಡುವೆ ಹೊಸದೊಂದು ಪೋಸ್ಟರ್ ಕೂಡಾ ರಿಲೀಸ್ ಮಾಡಿ ಮಂಸೋರೆ ಕುತೂಹಲ ಹೆಚ್ಚಿಸಿದ್ದಾರೆ. ಇದೊಂದು ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಸಿನಿಮಾ. ರಂಗಭೂಮಿ ಕಲಾವಿದ ಶೃಂಗ. ಬಿ.ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೋಳದಿಂದ ಬಂಧಿತನಾಗಿರುವ ನಾಯಕ, ಪೊಲೀಸ್ ಕಾವಲಿನ ನಡುವೆ ಪರೀಕ್ಷೆ ಬರೆಯುತ್ತಿರುವ ಈ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಪೋಸ್ಟರ್ ಜೊತೆಗೆ ಚಿತ್ರದ ಒಂದು ಹಾಡು ಕೂಡಾ ಬಿಡುಗಡೆಯಾಗಿದೆ. ಬಿಂದು ಮಾಲಿನಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಊರ ಹಬ್ಬ... ಎಂಬ ಹಾಡು ಬಿಡುಗಡೆಯಾಗಿದೆ. ಕಿರಣ್ ಕಾವೇರಪ್ಪ ಹಾಗೂ ಉದಯ್ ರಾಜ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಎಂ.ಡಿ. ಪಲ್ಲವಿ, ಬಿಂದು ಮಾಲಿನಿ, ಉಮಾ ವೈಜಿ, ಮೋಹನ್ ಕುಮಾರ್, ಶೃಂಗ ಬಿ.ವಿ ದನಿಯಾಗಿದ್ದಾರೆ. ಹಾಡು ಸಂಗೀತಪ್ರಿಯರಿಗೆ ಮೆಚ್ಚುಗೆಯಾಗಿದೆ. ಎರಡು ದಶಕಗಳ ಕಾಲ ಕರಾವಳಿಯ ಸಮುದಾಯವೊಂದು ಅನುಭವಿಸಿದ ನೋವು ಹಾಗೂ ಅದರ ವಿರುದ್ಧ ನಡೆಸಿದ ಹೋರಾಟವೇ ಈ ಸಿನಿಮಾ ಕಥೆಗೆ ಸ್ಪೂರ್ತಿ. ನೈಜ ಘಟನೆ ಆಧರಿಸಿದ ಈ ಚಿತ್ರಕ್ಕಾಗಿ ನಿರ್ದೇಶಕ ಮಂಸೋರೆ ಹಾಗೂ ತಂಡ ಸಾಕಷ್ಟು ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿ ಸುಂದರವಾದ ಕಥಾಹಂದರವನ್ನು ಹೆಣೆದಿದ್ದಾರೆ. ನಿರ್ದೇಶಕರ ಪ್ರಯತ್ನಕ್ಕೆ ವೀರೇಂದ್ರ ಮಲ್ಲಣ್ಣ ಹಾಗೂ ಸಂತೋಷ್, ಸಾಥ್ ನೀಡುವುದರ ಜೊತೆಗೆ ಸ್ಕ್ರಿಪ್ಟ್ ಕೆಲಸದಲ್ಲಿ ಜೊತೆಯಾಗಿದ್ದಾರೆ.

ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಇದೆ. ಬಿಂದು ಮಾಲಿನಿ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ. ಮುಂದಿನ ವಾರ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ.

Whats_app_banner