Max Movie: 'ಮ್ಯಾಕ್ಸ್‌' ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲೇ ದೊಡ್ಡ ತಪ್ಪು; ಹೀರೋ ಬಿರುದಿನಲ್ಲೇ ಪ್ರಮಾದ, ಏನದು?
ಕನ್ನಡ ಸುದ್ದಿ  /  ಮನರಂಜನೆ  /  Max Movie: 'ಮ್ಯಾಕ್ಸ್‌' ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲೇ ದೊಡ್ಡ ತಪ್ಪು; ಹೀರೋ ಬಿರುದಿನಲ್ಲೇ ಪ್ರಮಾದ, ಏನದು?

Max Movie: 'ಮ್ಯಾಕ್ಸ್‌' ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲೇ ದೊಡ್ಡ ತಪ್ಪು; ಹೀರೋ ಬಿರುದಿನಲ್ಲೇ ಪ್ರಮಾದ, ಏನದು?

Max Movie: ಕಿಚ್ಚ ಸುದೀಪ್ ಅಭಿನಯದ ಇಂದು (ಡಿಸೆಂಬರ್ 25) ಬಿಡುಗಡೆಯಾದ ‘ಮ್ಯಾಕ್ಸ್‌’ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ತಪ್ಪಾಗಿದೆ (Max Movie Title Card Error). ಅಭಿನಯ ಚಕ್ರವರ್ತಿ ಎಂದು ಬರೆಯುವ ಬದಲು ಏನು ಬರೆದಿದ್ದಾರೆ ಎಂದು ನೀವೇ ನೋಡಿ.

'ಮ್ಯಾಕ್ಸ್‌' ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲೇ ದೊಡ್ಡ ತಪ್ಪು
'ಮ್ಯಾಕ್ಸ್‌' ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲೇ ದೊಡ್ಡ ತಪ್ಪು

Max Movie: ಕಿಚ್ಚ ಸುದೀಪ್ ಅಭಿನಯದ ಇಂದು (ಡಿಸೆಂಬರ್ 25) ಬಿಡುಗಡೆಯಾಗಿದೆ. ಸಿನಿಮಾ ನೋಡಲು ಸಾಕಷ್ಟು ಜನ ಫಸ್ಟ್‌ ಡೇ, ಫಸ್ಟ್‌ ಶೋಗೆ ಹೋಗಿದ್ದಾರೆ. ಹೀಗಿರುವಾಗ ಸಿನಿಮಾ ನೋಡಿ ಬಂದ ಕೆಲವರು ಟೈಟಲ್ ಕಾರ್ಡ್‌ನಲ್ಲಿ ತಪ್ಪಾಗಿರುವುದನ್ನು (Max Movie Title Card Error) ಗಮನಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಸುದೀಪ್ ಅಭಿಮಾನಿಗಳು, ಕನ್ನಡ ಅಭಿಮಾನಿಗಳು ಹೀಗೆ ಹಲವರಿಂದ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಚರ್ಚೆ ಗಮನಸೆಳೆದಿದೆ.

ಹೀರೋ ಹೆಸರಿನಲ್ಲೇ ಪ್ರಮಾದ, ಏನದು

ಮೊದಲಿಗೆ ಹೀರೋ ಹೆಸರನ್ನು ತೋರಿಸುವ ಸಂದರ್ಭದಲ್ಲಿ ಅವರಿಗೆ ಸಿಕ್ಕ ಬಿರುದು (ನಿಕ್ ನೇಮ್‌) ಉಲ್ಲೇಖಿಸುವಾಗ ಅಭಿನಯ ಚಕ್ರವರ್ತಿ ಬಾದ್‌ ಷಾ ಕಿಚ್ಚ ಸುದೀಪ್ ಎಂದು ಬರಬೇಕಿತ್ತು. ಆದರೆ ಅಭಿನಯ “ಚತ್ರವರ್ತಿ” ಎಂದು ತಪ್ಪಾಗಿ ಬರೆಯಲಾಗಿದೆ. ಹೆಸರಿನಲ್ಲೇ ಈ ರೀತಿ ತಪ್ಪಾಗಬಾರದಿತ್ತು ಎಂದು ಹೇಳಿದರೆ ಇನ್ನು ಕೆಲವರು ಈ ಸಿನಿಮಾದಲ್ಲಿರುವ ಚಿಕ್ಕ ಚಿಕ್ಕ ತಪ್ಪುಗಳನ್ನು ಹುಡುಕುವುದನ್ನು ಬಿಟ್ಟು ಸಿನಿಮಾ ಹೇಗಿದೆ ಎಂಬುದನ್ನು ಗಮನಿಸಿ ಎಂದಿದ್ದಾರೆ. ನಮ್ಮ ಕನ್ನಡದ ಚಿತ್ರಗಳನ್ನು ನಾವೇ ಹೀಗೆ ಟ್ರೋಲ್ ಮಾಡಬಾರದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಆದರೆ ಈ ಹಿಂದೆ ಕನ್ನಡದ ಸಿನಿಮಾಗೆ ಯಾಕೆ ಇಂಗ್ಲೀಷ್ ಹೆಸರಿಟ್ಟಿದ್ದೀರಿ ಎಂಬ ಪ್ರಶ್ನೆಯೂ ಬಂದಿತ್ತು. ಅದಕ್ಕೆ ಕಿಚ್ಚ ಸುದೀಪ್‌ ತಾರ್ಕಿಕವಾಗಿ ಉತ್ತರ ನೀಡಿದ್ದರು.

ಈಗ ಕನ್ನಡ ಸಿನಿಮಾದಲ್ಲಿ ಕನ್ನಡದ ಹೀರೋ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ ಎಂದು ಸಾಕಷ್ಟು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹೀರೋ ಯಾರು ಎಂದು ತೋರಿಸುವ ಮುಖ್ಯವಾದ ಸಮಯದಲ್ಲೇ ಟೈಟಲ್ ಕಾರ್ಡ್‌ನಲ್ಲೇ ಈ ರೀತಿ ತಪ್ಪಾಗಿದೆ.

ಇಂಗ್ಲೀಷಿನ ಮ್ಯಾಕ್ಸ್ ಹೆಸರಿನ ಕನ್ನಡ ಸಿನಿಮಾದಲ್ಲಿ ತೋರಿಸಲಾಗುವ ಹೆಸರುಗಳ ತುಂಬೆಲ್ಲಾ ಅಕ್ಷರದೋಷಗಳೇ ಇದೆ. ಹೋಗ್ಲಿ ಹೀರೋ ಹೆಸರಿನ ಅಭಿನಯ 'ಚಕ್ರವರ್ತಿ' ಹೋಗಿ 'ಚತ್ರವರ್ತಿ' ಆಗಿರೋದನ್ನೂ ಚಿತ್ರತಂಡ ಗಮನಿಸಿಲ್ಲ ಅಂದ್ರೆ ಅವರು ಸಿನಿಮಾನ ನೋಡದೇ ಹಾಗೇ ಬಿಡುಗಡೆ ಮಾಡಿದ್ದಾರೆ ಅನ್ಸುತ್ತೆ..

ಸಿನಿಮಾ ಬಗ್ಗೆ ಪಾಸಿಟಿವ್ ಟಾಕಿದೆ ಎಂದು ಕಂಟ್ರೋಲ್ ಆಲ್ಟ್‌ ಡಿಲಿಟ್‌ ಎಂಬ ಫೇಸ್ಬುಕ್ ಖಾತೆಯೊಂದರಲ್ಲಿ ಪೋಸ್ಟ್‌ ಮಾಡಲಾಗಿದೆ.

ಸಿನಿಮಾ ಕನ್ನಡದ್ದೇ ಆದರೂ ಅದರಲ್ಲಿ ಕೆಲಸ ಮಾಡುವ ಜನರು ಬೇರೆ ಬೇರೆ ಊರಿನಿಂದ ಬಂದಿರುತ್ತಾರೆ. “ಚಿತ್ರದಲ್ಲಿ ಕೆಲಸ ಮಾಡಿದವರು ಎಲ್ಲ ಪರಭಾಷಿಕರೇ ನಟನೆ ಮಾತ್ರ ಕನ್ನಡದವರು” ಎಂದು ವೆಂಕಟೇಶ್‌ ಕಾಮೆಂಟ್ ಮಾಡಿದ್ದಾರೆ.

“ಒಂದ್ ಮುಖ್ಯವಾದ ಟೈಟಲ್ ಕಾರ್ಡ್ ಅದು ಅದನ್ನೇ ಹೀಗೆ ಮಾಡಿದ್ರೆ ಹೇಗೆ? ಫ್ಯಾನ್ಸ್ ವರ್ಷನುಗಟ್ಟಲೆ ಕಾಯೋದು ಆ ಸ್ಕ್ರೀನ್ ನಲ್ಲಿ ತಮ್ಮ ಹೀರೋ ಹೆಸರು ನೋಡೋಕೆ” ಎಂದು ಪ್ರಕಾಶ್‌ ಶ್ರೀನಿವಾಸ್‌ ಕಾಮೆಂಟ್ ಮಾಡಿದ್ದಾರೆ.

ಸಿನಿಮಾ ಹೇಗಿದೆ?

'ಮ್ಯಾಕ್ಸ್‌' ಸಿನಿಮಾದ ಟೈಟಲ್‌ ಕಾರ್ಡ್‌ ಪ್ರಮಾದ (Max Movie Title Card Error) ಹಾಗಿರಲಿ. ಕಿಚ್ಚ ಸುದೀಪ್ ಅಭಿನಯದ ಸಿನಿಮಾ ‘ಮ್ಯಾಕ್ಸ್‌’ ಬಿಡುಗಡೆಯಗಾಗಿ ಅಭಿಮಾನಿಗಳು ಕಾದಿದ್ದರು. ಇಂದು (ಡಿಸೆಂಬರ್ 25) ಕ್ರಿಸ್‌ಮಸ್‌ ದಿನದಂದು ಕಿಚ್ಚ ಸುದೀಪ್ ಅಭಿನಯದ ಮಾಕ್ಸ್‌ ಸಿನಿಮಾ ಬಿಡುಗಡೆಯಾಗಿದೆ. ಸಾಕಷ್ಟು ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದ್ದು ಫಸ್ಟ್‌ ಡೇ, ಫಸ್ಟ್‌ ಶೋ ನೋಡಲು ಅಭಿಮಾನಿಗಳು ಕಾತರರಾಗಿದ್ದು ಸಾಕಷ್ಟು ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಚೆನ್ನಾಗಿದೆ, ಇಂದು ಒಂದು ರಾತ್ರಿ ನಡೆಯುವ ಕಥೆ. ಕಿಚ್ಚ ಸುದೀಪ್ ಅಭಿನಯ ತುಂಬಾ ಚೆನ್ನಾಗಿದೆ. ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ತುಂಬಾ ಸೊಗಸಾಗಿದೆ ಎಂದಿದ್ದಾರೆ.

Whats_app_banner