Max Movie Twitter Review: ‘ಮ್ಯಾಕ್ಸ್’ ಸಿನಿಮಾ ನೋಡಿ ಖುಷಿಯಿಂದ ಹೊರಬಂದ ವೀಕ್ಷಕರು; ಕಿಚ್ಚ ಸುದೀಪ್ ಅಭಿನಯ ಮೆಚ್ಚಿಕೊಂಡ ಫ್ಯಾನ್ಸ್
Max Movie Review: ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆಯಾಗಿದೆ ವೀಕ್ಷಕರು ಇಷ್ಟಪಟ್ಟಿದ್ದಾರೆ. ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
Max Movie Review: ಕಿಚ್ಚ ಸುದೀಪ್ ಅಭಿನಯದ ಸಿನಿಮಾ ‘ಮ್ಯಾಕ್ಸ್’ ಬಿಡುಗಡೆಯಗಾಗಿ ಅಭಿಮಾನಿಗಳು ಕಾದಿದ್ದರು. ಇಂದು (ಡಿಸೆಂಬರ್ 25) ಕ್ರಿಸ್‌ಮಸ್ ದಿನದಂದು ಕಿಚ್ಚ ಸುದೀಪ್ ಅಭಿನಯದ ಮಾಕ್ಸ್ ಸಿನಿಮಾ ಬಿಡುಗಡೆಯಾಗಿದೆ. ಸಾಕಷ್ಟು ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದ್ದು ಫಸ್ಟ್ ಡೇ, ಫಸ್ಟ್ ಶೋ ನೋಡಲು ಅಭಿಮಾನಿಗಳು ಕಾತರರಾಗಿದ್ದು ಸಾಕಷ್ಟು ಜನ ಈಗಾಗಲೇ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಹೇಗಿತ್ತು ಎಂಬ ಅಭಿಪ್ರಾಯವನ್ನು ಕೆಲವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದಷ್ಟು ಜನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದು ಪಕ್ಕಾ ಮಾಸ್ ಸಿನಿಮಾ
ಸುದೀಪ್ ಅಭಿನಯ ತುಂಬಾ ಚೆನ್ನಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಫಸ್ಟ್ ಹಾಪ್ ಬಗ್ಗೆ ಮಾತೇ ಇಲ್ಲ ಅಷ್ಟೊಂದು ಚೆನ್ನಾಗಿದೆ ಎಂದು ಕೆಲವರು ಹೇಳಿದ್ದಾರೆ.
ಡೈಲಾಗ್‌ಗಳು ಚೆನ್ನಾಗಿವೆ. ಎಂಟ್ರಿ ಸೂಪರ್ ಆಗಿದೆ. ಮುಂದೆ ಏನಾಗುತ್ತದೆ ಎಂಬ ಕುತೂಹಲವನ್ನು ವೀಕ್ಷಕರಲ್ಲಿ ಹುಟ್ಟು ಹಾಕುತ್ತದೆ. ಇದು ಪಕ್ಕಾ ಮಾಸ್ ಸಿನಿಮಾ ಎಂದಿದ್ಧಾರೆ.
ಆಕ್ಷನ್ ಸಿನಿಮಾ ಸೂಪರ್ ಹಿಟ್
ಆಕ್ಷನ್ ಮತ್ತು ಥ್ರಿಲ್ ಎಲ್ಲವೂ ತುಂಬಾ ಚೆನ್ನಾಗಿದೆ ಎಂದಿದ್ಧಾರೆ. ಕಿಚ್ಚ ಬಾಸ್ ಸ್ವ್ಯಾಗ್ ಎಂದು ಹೇಳಿ ಸಿನಿಮಾ ನೋಡಿದ ಅನುಭವ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಈ ಸಿನಿಮಾ ಇಷ್ಟವಾಗಿಲ್ಲ ಮುಂದೇನಾಗುತ್ತದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸಿನಿಮಾ ಅಂದುಕೊಂಡಷ್ಟು ಚೆನ್ನಾಗಿಲ್ಲ ಎಂದವರೂ ಇದ್ದಾರೆ
ಕನ್ನಡದಲ್ಲಿ ದೊಡ್ಡ ಸಿನಿಮಾ ಬರ್ತಾ ಇದೆ, ತುಂಬಾ ದೊಡ್ಡ ಸದ್ದು ಮಾಡುತ್ತದೆ ಎಂದುಕೊಂಡಿದ್ದೆ ಆದರೆ ಸಿನಿಮಾ ಓಕೆ ಓಕೆ ಎನ್ನುವ ಹಾಗಿದೆ ಎಂದವರೂ ಇದ್ದಾರೆ.
ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ತುಂಬಾ ಚೆನ್ನಾಗಿದೆ ಎಂದಿದ್ದಾರೆ
ಅಭಿನಯ ಚಕ್ರವರ್ತಿ ಫರ್ ರೀಸನ್ ಎಂದಿದ್ದಾರೆ