ಕನ್ನಡ ಸುದ್ದಿ  /  ಮನರಂಜನೆ  /  Upcoming Movies: ಕರ್ತಮ್ ಭುಗ್ಟಮ್, ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್; ಮೇ ತಿಂಗಳಲ್ಲಿ ರಿಲೀಸ್‌ ಆಗಲಿರುವ 10 ಸಿನಿಮಾಗಳು

Upcoming Movies: ಕರ್ತಮ್ ಭುಗ್ಟಮ್, ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್; ಮೇ ತಿಂಗಳಲ್ಲಿ ರಿಲೀಸ್‌ ಆಗಲಿರುವ 10 ಸಿನಿಮಾಗಳು

May 2024 upcoming movies: ಮೇ ತಿಂಗಳಲ್ಲಿ ಶ್ರೀಕಾಂತ್‌, ಶ್ರೀಕಾಂತ್, ಮಿಸ್ಟರ್ ಅಂಡ್ ಮಿಸೆಸ್ ಮಹಿ, ಭೈಯಾ ಜಿ, ದಿ ಫಾಲ್ ಗೈ ಮತ್ತು ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಸೇರಿದಂತೆ ಹಲವು ಸಿನಿಮಾಗಳು ಹಾಲಿವುಡ್‌, ಬಾಲಿವುಡ್‌ನಲ್ಲಿ ರಿಲೀಸ್‌ ಆಗಲಿದೆ.

ಮೇ ತಿಂಗಳಲ್ಲಿ ರಿಲೀಸ್‌ ಆಗಲಿರುವ 10 ಸಿನಿಮಾಗಳು
ಮೇ ತಿಂಗಳಲ್ಲಿ ರಿಲೀಸ್‌ ಆಗಲಿರುವ 10 ಸಿನಿಮಾಗಳು

ಈಗಾಗಲೇ ಏಪ್ರಿಲ್‌ ತಿಂಗಳಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಈ ಮೇ ತಿಂಗಳಲ್ಲಿ ಯಾವ ಹೊಸ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಿನಿಪ್ರಿಯರು ಕಾಯುತ್ತಿರಬಹುದು. ಶ್ರೀಕಾಂತ್, ಮಿಸ್ಟರ್ ಅಂಡ್ ಮಿಸೆಸ್ ಮಹಿ, ಭೈಯಾ ಜಿ, ದಿ ಫಾಲ್ ಗೈ ಮತ್ತು ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಸೇರಿದಂತೆ ಹಲವು ಸಿನಿಮಾಗಳು ಮೇ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಮೇ 2024ರ ಸಿನಿಮಾ ಕ್ಯಾಲೆಂಡರ್‌ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

1) ಶ್ರೀಕಾಂತ್

ಶ್ರೀಕಾಂತ್ ಬೊಲ್ಲಾ ಬಯೋಪಿಕ್‌ಗೆ ರಾಜ್ ಕುಮಾರ್ ರಾವ್ ಜೀವ ತುಂಬಿದ್ದಾರೆ. ಇವರು ಕೈಗಾರಿಕೋದ್ಯಮಿ. ದೃಷ್ಟಿಹೀನತೆಯಿದ್ದರೂ ಅಭೂತಪೂರ್ವ ಸಾಧನೆ ಮಾಡಿದ ವ್ಯಕ್ತಿ. ಇವರು ಶ್ರೀಕಾಂತ್ ಬೊಲ್ಲಾಂಟ್ ಇಂಡಸ್ಟ್ರೀಸ್ ಸ್ಥಾಪಕ. ಕೌಶಲ್ಯರಹಿತ ಮತ್ತು ವಿಕಲಚೇತನರಿಗೆ ಉದ್ಯೋಗವನ್ನು ನೀಡಿದರು. ಈ ಚಿತ್ರದಲ್ಲಿ ರಾಜ್ ಕುಮಾರ್ ಜೊತೆಗೆ ಜ್ಯೋತಿಕಾ, ಶರದ್ ಕೇಲ್ಕರ್ ಮತ್ತು ಅಲಯಾ ಎಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ತುಷಾರ್ ಹಿರಾನಂದಾನಿ ನಿರ್ದೇಶಿಸಿದ್ದಾರೆ. ಜಗದೀಪ್ ಸಿಧು ಮತ್ತು ಸುಮಿತ್ ಪುರೋಹಿತ್ ಕಥೆ ಬರೆದಿದ್ದಾರೆ. ಟಿ-ಸೀರಿಸ್ ಮತ್ತು ಚಾಕ್ ಎನ್ ಚೀಸ್ ಫಿಲ್ಮ್ಸ್ ಪ್ರೊಡಕ್ಷನ್ ಎಲ್ ಎಲ್ ಪಿ ನಿರ್ಮಿಸಿರುವ ಈ ಚಿತ್ರ ಮೇ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

2) ಮಿಸ್ಟರ್ ಅಂಡ್ ಮಿಸೆಸ್ ಮಹಿ

ಇದು ಸ್ಪೋರ್ಟ್ಸ್ ಡ್ರಾಮಾ. ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಮೇ ತಿಂಗಳಲ್ಲಿ ರಿಲೀಸ್‌ ಆಗಲಿರುವ ರಾಜ್ ಕುಮಾರ್ ಅವರ ಎರಡನೇ ಚಿತ್ರವಾಗಿದೆ. ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಚಿತ್ರಕ್ಕೆ ಶರಣ್ ಶರ್ಮಾ ಆಕ್ಷನ್‌ ಕಟ್‌ ಹೇಳಿದ್ದಾರೆ. ರೂಹಿ ಚಿತ್ರದ ಬಳಿಕ ಜಾನ್ವಿ ಮತ್ತು ರಾಜ್ ಕುಮಾರ್ ರಾವ್ ಅವರ ಜತೆ ಈ ನಿರ್ದೇಶಕರ ಎರಡನೇ ಸಿನಿಮಾವಾಗಿದೆ. ಇತ್ತೀಚೆಗೆ, ಕರಣ್ ಜೋಹರ್ ಇನ್‌ಸ್ಟಾಗ್ರಾಂನಲ್ಲಿ ಈ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ್ದರು. ರಾಜ್ ಕುಮಾರ್ ಮತ್ತು ಜಾನ್ವಿ 7ನೇ ಸಂಖ್ಯೆಯ ನೀಲಿ ಜರ್ಸಿ ಧರಿಸಿ ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುತ್ತಿರುವ ಪೋಸ್ಟರ್‌ ಇದಾಗಿದೆ. ಈ ಪೋಸ್ಟರ್ ನಲ್ಲಿ ಜಾನ್ವಿಯನ್ನು ಮಹಿಮಾ ಆಗಿ ಮತ್ತು ರಾಜ್ ಕುಮಾರ್ ಅವರನ್ನು ಮಹೇಂದ್ರ ಆಗಿ ಪರಿಚಯಿಸಲಾಯಿತು. ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಕ್ರೀಡಾ ನಾಟಕವು ಈಗ ಮೇ 31, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

3) ಭೈಯಾ ಜಿ

ಮನೋಜ್ ಬಾಜಪೇಯಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪುರುಷರ ಗುಂಪೊಂದು ಯಾರನ್ನೋ ಕೊಲ್ಲಲು ಪ್ರಯತ್ನಿಸುವಂತಹ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಭೈಯಾ ಜಿ ಮನೋಜ್ ಬಾಜಪೇಯಿ ಅವರ 100 ನೇ ಚಿತ್ರವಾಗಿದೆ., ಇದನ್ನು ವಿನೋದ್ ಭಾನುಶಾಲಿ, ಕಮಲೇಶ್ ಭಾನುಶಾಲಿ, ಸಮಿಕ್ಷಾ ಓಸ್ವಾಲ್, ಶಹೀಲ್ ಓಸ್ವಾಲ್, ಶಬಾನಾ ರಾಜಾ ಬಾಜಪೇಯಿ ಮತ್ತು ವಿಕ್ರಮ್ ಖಖರ್ ನಿರ್ಮಿಸಿದ್ದಾರೆ. ಅಪೂರ್ವ್ ಸಿಂಗ್ ಕರ್ಕಿ ಈ ಚಿತ್ರವನ್ನು ನಿರ್ದೇಶಿಸಿದ್ದು, ದೀಪಕ್ ಕಿಂಗ್ರಾನಿ ಕಥೆ ಬರೆದಿದ್ದಾರೆ. ಈ ಸಿನಿಮಾ ಮೇ 24ರಂದು ರಿಲೀಸ್‌ ಆಗಲಿದೆ.

4) ದಿ ಫಾಲ್ ಗೈ

ಎಮಿಲಿ ಬ್ಲಂಟ್ ಮತ್ತು ರಯಾನ್ ಗೋಸ್ಲಿಂಗ್ ಅವರ ಆಕ್ಷನ್-ಕಾಮಿಡಿ ದಿ ಫಾಲ್ ಗೈ ಮೇ 3 ರಂದು ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಡೇವಿಡ್ ಲೀಚ್ ನಿರ್ದೇಶನದ ದಿ ಫಾಲ್ ಗೈ ಚಿತ್ರವು ಕಾಣೆಯಾದ ತಾರೆಯನ್ನು ಹುಡುಕುವ ಕಥೆ ಹೊಂದಿದೆ. ಸ್ಟಂಟ್ಮ್ಯಾನ್ ಕೋಲ್ಟ್ ಸೀವರ್ಸ್ ಪಾತ್ರದಲ್ಲಿ ನಟಿಸಿದ್ದಾರೆ. 1980 ರ ಟಿವಿ ಸರಣಿಯಿಂದ ಸ್ಫೂರ್ತಿ ಪಡೆದ ಈ ಚಿತ್ರದಲ್ಲಿ ವಿನ್ಸ್ಟನ್ ಡ್ಯೂಕ್, ಆರನ್ ಟೇಲರ್-ಜಾನ್ಸನ್, ವಾಡಿಂಗ್ಹ್ಯಾಮ್ ಮತ್ತು ಸ್ಟೆಫನಿ ಹ್ಸು ಕೂಡ ನಟಿಸಿದ್ದಾರೆ. ಭಾರತದಲ್ಲಿ, ದಿ ಫಾಲ್ ಗೈ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

5) ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್

ಇದು ಏಪ್ಸ್‌ನ ಹತ್ತನೇ ಗ್ರಹ. ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಕ್ರೇಜ್‌ ಹುಟ್ಟುಹಾಕಿದೆ. 2011 ರಲ್ಲಿ ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಬಿಡುಗಡೆಯಾಗಿತ್ತು. 2014 ರ ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಮತ್ತು 2017 ರ ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಬಿಡುಗಡೆಯಾಗಿದ್ದವು. ಈ ಸಿನಿಮಾದಲ್ಲಿ ಹೊಸ ತಲೆಮಾರಿನ ಕೋತಿಗಳು ಇವೆ. ಯುವ ಮತ್ತು ಮುಗ್ಧ ಆದರೆ ಧೈರ್ಯಶಾಲಿ ಕೋತಿ ನೋವಾ (ಓವನ್ ಟೀಗ್) ಕೇಂದ್ರಿಕೃತ ಕಥೆಯನ್ನು ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಹೊಂದಿದೆ. ಮೇ 8 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ವೆಸ್ ಬಾಲ್ ನಿರ್ದೇಶಿಸಿದ್ದಾರೆ.

6) ಗಾರ್ಫೀಲ್ಡ್ ಮೂವಿ

ಗಾರ್ಫೀಲ್ಡ್ ಎಂಬ ಬೆಕ್ಕಿನ ಸಾಹಸದ ಕಥೆಯಿದು. . ದೀರ್ಘಕಾಲದಿಂದ ಕಳೆದುಹೋದ ತನ್ನ ತಂದೆಯ ಜತೆ ಪುನರ್‌ಮಿಲನದ ವಿಷಯವೂ ಇದರಲ್ಲಿದೆ. ಗಾರ್ಫೀಲ್ಡ್ ಗೆ ಕ್ರಿಸ್ ಪ್ರಾಟ್ ಧ್ವನಿ ನೀಡಿದ್ದಾರೆ. ವಿಕ್‌ಗೆ ನಟ ಸ್ಯಾಮ್ಯುಯೆಲ್ ಎಲ್ ಜಾಕ್ಸನ್ ಧ್ವನಿ ನೀಡಿದ್ದಾರೆ. ಮಾರ್ಕ್ ದಿಂಡಾಲ್ ನಿರ್ದೇಶನದ ಈ ಚಿತ್ರದಲ್ಲಿ ಹನ್ನಾ ವಾಡಿಂಗ್ಹ್ಯಾಮ್, ವಿಂಗ್ ರಾಮ್ಸ್, ನಿಕೋಲಸ್ ಹೌಲ್ಟ್, ಸಿಸಿಲಿ ಸ್ಟ್ರಾಂಗ್, ಹಾರ್ವೆ ಗಿಲ್ಲೆನ್, ಬ್ರೆಟ್ ಗೋಲ್ಡ್ಸ್ಟೈನ್ ಮತ್ತು ಬೊವೆನ್ ಯಾಂಗ್ ನಟಿಸಿದ್ದಾರೆ. ಗಾರ್ಫೀಲ್ಡ್ ಚಲನಚಿತ್ರವು ಮೇ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

7) ಕರ್ತಮ್ ಭುಗ್ಟಮ್

ಈ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ, ವಿಜಯ್ ರಾಜ್, ಮಧು ಮತ್ತು ಅಕ್ಷ ಪರ್ದಸಾನಿ ನಟಿಸಿದ್ದಾರೆ. ಕರ್ತಮ್ ಭುಗ್ಟಮ್ ಅನ್ನು ಸೋಹಮ್ ಪಿ ಶಾ ನಿರ್ದೇಶಿಸಿದ್ದಾರೆ. ಜ್ಯೋತಿಷ್ಯ ಮತ್ತು ಕರ್ಮದ ಪ್ರಾಚೀನ ಸಾರ್ವತ್ರಿಕ ಸತ್ಯಗಳ ವಿಷಯದ ಸುತ್ತ ಈ ಸಿನಿಮಾ ಸುತ್ತಲಿದೆ. ಕರ್ತಮ್ ಭುಗ್ಟಮ್ ಮೇ 17 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

8) ಫ್ಯೂರಿಯೋಸಾ

ನಿರ್ಮಾಪಕ ಜಾರ್ಜ್ ಮಿಲ್ಲರ್ ಅವರ ಬಹುನಿರೀಕ್ಷಿತ ಚಿತ್ರ ಫ್ಯೂರಿಯೋಸಾ: ಎ ಮ್ಯಾಡ್ ಮ್ಯಾಕ್ಸ್ ಸಾಗಾ ಮೇ 23 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು 2014ರ ಹಿಟ್ ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಚಿತ್ರದ ಭಾಗವಾಗಿದೆ. ಇದರಲ್ಲಿ ಕ್ರಿಸ್ ಹೆಮ್ಸ್ ವರ್ತ್ ಮತ್ತು ಟಾಮ್ ಬರ್ಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಮತ್ತು ವಿಲೇಜ್ ರೋಡ್ ಶೋ ಪಿಕ್ಚರ್ಸ್‌ನ ಫ್ಯೂರಿಯೋಸಾ ಸಿನಿಮಾವನ್ನು ಜಾರ್ಜ್ ಮತ್ತು ಡೌಗ್ ಮಿಚೆಲ್ ತಮ್ಮ ಬ್ಯಾನರ್ ಕೆನಡಿ ಮಿಲ್ಲರ್ ಮಿಚೆಲ್ ಮೂಲಕ ನಿರ್ಮಿಸಿದ್ದಾರೆ.

9) ಇಫ್‌

ಇದು ಮೇ 12ರಂದು ರಿಲೀಸ್‌ ಆಗುವ ಅನಿಮೇಷನ್‌ ಸಿನಿಮಾ. ಸ್ಟೀವ್ ಕ್ಯಾರೆಲ್, ಎಮಿಲಿ ಬ್ಲಂಟ್, ಫೋಬೆ ವಾಲರ್-ಬ್ರಿಡ್ಜ್, ಮ್ಯಾಟ್ ಡ್ಯಾಮನ್, ಜಾನ್ ಸ್ಟೀವರ್ಟ್, ಮಾಯಾ ರುಡಾಲ್ಫ್ ಮತ್ತು ದಿವಂಗತ ಲೂಯಿಸ್ ಗೊಸೆಟ್ ಜೂನಿಯರ್ ಧ್ವನಿ ನೀಡಿದ್ದಾರೆ.

10) ದಿ ಸ್ಟ್ರೇಂಜರ್ಸ್: ಚಾಪ್ಟರ್ 1

ರೆನ್ನಿ ಹಾರ್ಲಿನ್ ನಿರ್ದೇಶನದ ಭಯಾನಕ ಥ್ರಿಲ್ಲರ್ "ದಿ ಸ್ಟ್ರೇಂಜರ್ಸ್: ಚಾಪ್ಟರ್ 1" ಮೇ 17 ರಂದು ಬಿಡುಗಡೆಯಾಗಲಿದೆ. ಇದು ದಿ ಸ್ಟ್ರೇಂಜರ್ಸ್ ಚಲನಚಿತ್ರ ಸರಣಿಯ ಭಾಗವಾಗಿದ್ದರೂ, ದಿ ಸ್ಟ್ರೇಂಜರ್ಸ್: ಚಾಪ್ಟರ್ 1 ಹೊಸ ಕಥೆಗಳ ಮೊದಲ ಸರಣಿಯಾಗಿದೆ. ಈ ಚಿತ್ರವು ಮಾಯಾ (ಮ್ಯಾಡೆಲೈನ್ ಪೆಟ್ಶ್) ಮತ್ತು ಅವಳ ಗೆಳೆಯ ರಯಾನ್ (ಫ್ರಾಯ್ ಗುಟೆರೆಜ್) ಕಥೆಯನ್ನು ಹೊಂದಿದೆ. ಒರೆಗಾನ್ ನಲ್ಲಿ ಅವರ ಕಾರು ಕೆಟ್ಟುಹೋದ ಬಳಿಕ ಅವರು ಪ್ರತ್ಯೇಕ ಏರ್ ಬಿಎನ್ ಬಿಯಲ್ಲಿ ರಾತ್ರಿ ಕಳೆಯುತ್ತಾರೆ. ರಾತ್ರಿಯಿಡೀ, ಮುಖವಾಡ ಧರಿಸಿದ ಮೂವರು ಕೊಲೆಗಡುಕ ಅಪರಿಚಿತರಿಂದ ಭಯಗೊಳ್ಳುತ್ತಾರೆ.

IPL_Entry_Point