ಕನ್ನಡ ಸುದ್ದಿ  /  Entertainment  /  Mega Star Chiranjeevi Says Good By To Politics

Chiranjeevi Political life: ಸಕ್ರಿಯ ರಾಜಕಾರಣ ತ್ಯಜಿಸುವುದಾಗಿ ಘೋಷಿಸಿದ ಮೆಗಾಸ್ಟಾರ್‌..ಎಲ್ಲವೂ ಆತನಿಗಾಗೇ ಎಂದ ಚಿರಂಜೀವಿ..!

ನಟ ಚಿರಂಜೀವಿ ಸಕ್ರಿಯ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ್ದಾರೆ. ಅದೂ ಕೂಡಾ ತಮ್ಮ ಸಹೋದರ ಪವನ್‌ ಕಲ್ಯಾಣ್‌ಗಾಗಿ. ಜನಸೇನಾ ಪಕ್ಷ ಹಾಗೂ ಪವನ್‌ ಕಲ್ಯಾಣ್‌ ಅಭಿವೃದ್ಧಿಗಾಗಿ ಚಿರಂಜೀವಿ ಈ ನಿರ್ಧಾರ ಮಾಡಿದ್ದಾರಂತೆ. ಪವನ್‌ ಕಲ್ಯಾಣ್‌ ಪಕ್ಷಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ರಾಜ್ಯಕ್ಕೆ ಪವನ್ ಕಲ್ಯಾಣ್‌ರಂತ ಬದ್ಧತೆಯ ನಾಯಕನ ಅಗತ್ಯವಿದೆ ಎಂದು ಚಿರಂಜೀವಿ ಹೇಳಿದ್ದಾರೆ.

ಸಕ್ರಿಯ ರಾಜಕಾರಣ ತ್ಯಜಿಸುವುದಾಗಿ ಘೋಷಿಸಿದ ಮೆಗಾಸ್ಟಾರ್‌
ಸಕ್ರಿಯ ರಾಜಕಾರಣ ತ್ಯಜಿಸುವುದಾಗಿ ಘೋಷಿಸಿದ ಮೆಗಾಸ್ಟಾರ್‌

ಚಿರಂಜೀವಿ: ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ 'ಗಾಡ್‌ ಫಾದರ್‌' ಸಿನಿಮಾ ಇಂದು ತೆರೆ ಕಂಡಿದೆ. ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ಅಥವಾ ಗುರುವಾರ ತೆರೆ ಕಾಣುವುದು ವಾಡಿಕೆ. ಆದರೆ ವಿಜಯದಶಮಿಯ ವಿಶೇಷ ದಿನವಾದ ಇಂದು ದೇಶಾದ್ಯಂತ ಚಿರಂಜೀವಿ ಅಭಿನಯದ ಸಿನಿಮಾ ತೆರೆ ಕಂಡಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿರಂಜೀವಿ ಸಂತೋಷ ವ್ಯಕ್ತಪಡಿಸಿದ್ದಾರೆ.

'ಆಚಾರ್ಯ' ಚಿತ್ರದ ಸೋಲಿನ ಬೇಸರದಲ್ಲಿದ್ದ ಚಿರಂಜೀವಿ, ಕುಟುಂಬ ಹಾಗೂ ಅಭಿಮಾನಿಗಳಿಗೆ ಗಾಡ್‌ ಫಾದರ್‌ ಸಿನಿಮಾ ಖುಷಿ ನೀಡಿದೆ. ಆದರೆ ಈ ಖುಷಿ ನಡುವೆಯೇ ಮೆಗಾಸ್ಟಾರ್‌, ತಮ್ಮ ಬೆಂಬಲಿಗರಿಗೆ ಬೇಸರದ ಸುದ್ದಿ ನೀಡಿದ್ದಾರೆ. ನಟ ಚಿರಂಜೀವಿ ಸಕ್ರಿಯ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ್ದಾರೆ. ಅದೂ ಕೂಡಾ ತಮ್ಮ ಸಹೋದರ ಪವನ್‌ ಕಲ್ಯಾಣ್‌ಗಾಗಿ. ಜನಸೇನಾ ಪಕ್ಷ ಹಾಗೂ ಪವನ್‌ ಕಲ್ಯಾಣ್‌ ಅಭಿವೃದ್ಧಿಗಾಗಿ ಚಿರಂಜೀವಿ ಈ ನಿರ್ಧಾರ ಮಾಡಿದ್ದಾರಂತೆ. ಪವನ್‌ ಕಲ್ಯಾಣ್‌ ಪಕ್ಷಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ರಾಜ್ಯಕ್ಕೆ ಪವನ್ ಕಲ್ಯಾಣ್‌ರಂತ ಬದ್ಧತೆಯ ನಾಯಕನ ಅಗತ್ಯವಿದೆ ಎಂದು ಚಿರಂಜೀವಿ ಹೇಳಿದ್ದಾರೆ.

''ಪವನ್‌ ಕಲ್ಯಾಣ್‌ ಹಾಗೂ ನಾನು, ಇಬ್ಬರೂ ರಾಜಕೀಯದಲ್ಲಿ ಪರಸ್ಪರ ವಿರುದ್ಧವಾಗಿ ಇರುವುದಕ್ಕಿಂತ ನಾನು ರಾಜಕೀಯ ತೊರೆದರೆ ಅದು ಸಹೋದರನಿಗೆ ಸಹಾಯವಾಗುತ್ತದೆ'' ಎಂದು ಚಿರಂಜೀವಿ ಹೇಳಿದ್ದಾರಂತೆ. ''ಮುಂದಿನ ಚುನಾವಣೆಯಲ್ಲಿ ಪವನ್‌ ಕಲ್ಯಾಣ್‌ ಗೆಲ್ಲವಂತಹ ಅವಕಾಶ ಒದಗಿ ಬರಲಿ'' ಎಂದು ಚಿರಂಜೀವಿ ಗಾಡ್‌ಫಾದರ್‌ ಚಿತ್ರದ ಪ್ರಚಾರದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಚಿರಂಜೀವಿ ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದು ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಇದುವರೆಗೂ ಜನಸೇನಾ ಪಕ್ಷಕ್ಕೆ ಬೆಂಬಲ ಘೋಷಿಸದ ಚಿರು ಇದೀಗ ಮಾಧ್ಯಮಗೋಷ್ಠಿಯಲ್ಲಿ ಪವನ್ ಕಲ್ಯಾಣ್‌ಗೆ ಬೆಂಬಲ ನೀಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.

<p>ಸಹೋದರ ಪವನ್‌ ಕಲ್ಯಾಣ್‌ ಜೊತೆ ಚಿರಂಜೀವಿ</p>
ಸಹೋದರ ಪವನ್‌ ಕಲ್ಯಾಣ್‌ ಜೊತೆ ಚಿರಂಜೀವಿ

'ಗಾಡ್‌ಫಾದರ್' ಸಿನಿಮಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಮೋಹನ್ ರಾಜ ನಿರ್ದೇಶಿಸಿದ್ದಾರೆ. ಈ ಚಿತ್ರ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮಲಯಾಳಂನ ಸೂಪರ್‌ಹಿಟ್ ಚಿತ್ರ ಲೂಸಿಫರ್‌ನ ಅಧಿಕೃತ ತೆಲುಗು ರಿಮೇಕ್ ಆಗಿದೆ. ಇದರಲ್ಲಿ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಟಿಸಿರುವುದು ವಿಶೇಷ. ಕೊನಿಡೆಲ ಪ್ರೊಡಕ್ಷನ್ಸ್ ಮತ್ತು ಸೂಪರ್ ಗುಡ್ ಫಿಲ್ಮ್ಸ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ. ಖ್ಯಾತ ಸಂಗೀತ ನಿರ್ದೇಶಕ ತಮನ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇದನ್ನು ಹೊರತುಪಡಿಸಿ ಮೆಗಾಸ್ಟಾರ್‌ ವಾಲ್ತೇರು ವೀರಯ್ಯ ಹಾಗೂ ಭೋಲಾ ಶಂಕರ್‌ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ವಾಲ್ತೇರು ವೀರಯ್ಯ' ಮೆಗಾಸ್ಟಾರ್‌ ಅಭಿನಯದ 154ನೇ ಚಿತ್ರವಾಗಿದ್ದು ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿ ಕೆ.ಎಸ್‌ ರವೀಂದ್ರ ನಿರ್ದೇಶಿಸುತ್ತಿದ್ದಾರೆ. ಇನ್ನು 'ಭೋಲಾ ಶಂಕರ್‌' ಚಿತ್ರವನ್ನು ಅನಿಲ್‌ ಸುಂಕರ ನಿರ್ಮಿಸುತ್ತಿದ್ದು ಮೆಹರ್‌ ರಮೇಶ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಮತ್ತೊಂದೆಡೆ ಪವನ್‌ ಕಲ್ಯಾಣ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ಭೀಮ್ಲಾ ನಾಯಕ್‌ ತೆರೆ ಕಂಡಿತ್ತು. ಸದ್ಯಕ್ಕೆ ಅವರು ಹರಿಹರ ವೀರಮಲ್ಲು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ಜಗರ್ಲಮುಡಿ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ. ಚಿತ್ರದಲ್ಲಿ ಪವನ್‌ ಕಲ್ಯಾಣ್‌ಗೆ ನಿಧಿ ಅಗರ್‌ವಾಲ್‌ ಜೋಡಿಯಾಗಿ ನಟಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point