Seetha Rama Serial: ಕೊನೆಗೂ ಬಯಲಾಯ್ತು ಮಹಾ ಸತ್ಯ; ಸೀತಾ ಬಾಡಿಗೆ ತಾಯಿಯೆಂದು ಅರಿತ ರಾಮ್, ಶ್ಯಾಮ್ ಮಡಿಲಿಗೆ ಸಿಹಿ!
Seetha Rama Serial: ಇಲ್ಲಿಯವರೆಗೂ ಬಚ್ಚಿಟ್ಟುಕೊಂಡು ಬಂದ ಸಿಹಿ ಸತ್ಯ ಇದೀಗ ಬಯಲಾಗಿದೆ. ಸಿಹಿಯೇ ತನ್ನ ಮಗಳೆಂದು ಶ್ಯಾಮ್‌ಗೆ ಗೊತ್ತಾಗಿದೆ. ಇತ್ತ ಸೀತಾನೇ ಬಾಡಿಗೆ ತಾಯಿ ಅನ್ನೂ ವಿಷಯ ರಾಮ್‌ಗೆ ತಿಳಿದಿದೆ. ಹಾಗಾದರೆ ಈ ಇಬ್ಬರಲ್ಲಿ ಯಾರ ಪಾಲಾಗ್ತಾಳೆ ಪುಟಾಣಿ ಸಿಹಿ.

Seetha Rama Serial 18th October Episode: ಪ್ರಸ್ತದ ಕೋಣೆಯಲ್ಲಿ ತಾನು ಮಾತನಾಡಿದ ಎಲ್ಲವನ್ನೂ ರಾಮ್ ಕೇಳಿಸಿಕೊಂಡಿದ್ದಾನೆ ಅನ್ನೋ ಮನಸ್ಥಿತಿಯಲ್ಲಿದ್ದಾಳೆ ಸೀತಾ. ಆದರೆ, ರಾಮ್‌ಗೆ ನಿದ್ದೆ ಮಂಪರಲ್ಲಿ ಸೀತಾ ಮಾತನಾಡಿದ್ದು ಏನೂ ಕೇಳಿಸಿಲ್ಲ. ಕೊನೆಗೆ ಮಾತನಾಡಿ ಎಂದು ಫೋರ್ಸ್ ಮಾಡಿದ ಬಳಿಕವಷ್ಟೇ, ನಿನ್ನದೇನು ತಪ್ಪಿಲ್ಲ ಸೀತಾ, ನಿನ್ನ ನಿರ್ಧಾರ ಸರಿಯಾಗಿದೆ ಎಂದಿದ್ದಾನೆ. ಇತ್ತ ಬೆಳಗಾಗಿದೆ, ಲೀಗಲ್ ಆಕ್ಷನ್ ಬಗ್ಗೆ ಸೀತಾ ಬಳಿ ಮಾತನಾಡಿದ್ದಾನೆ. ರಾಮನ ಮಾತು ಕೇಳಿ ಸೀತಾ ಮತ್ತೆ ಕುಸಿದಿದ್ದಾಳೆ.
ನೇರವಾಗಿ ರಾಮ್ ಶ್ಯಾಮ್ ಮಗುವನ್ನು ಹುಡುಕಲು ಜತೆಯಾಗಿದ್ದಾನೆ. ಇತ್ತ ಆಸ್ಪತ್ರೆಗೆ ಮೆಡಿಕಲ್ ಕೌನ್ಸಿಲರ್ ಆಗಮಿಸಿ, ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿದ್ದಾರೆ. ಅನಿವಾರ್ಯವಾಗಿ ಇರೋ ಸತ್ಯವನ್ನು ವಿಚಾರಣೆ ವೇಳೆ ಹೇಳಿಕೊಳ್ಳುತ್ತಾರೆ. ಸೀತಾಳ ಸತ್ಯವನ್ನು ಬಾಯ್ಬಿಡುತ್ತಾರೆ. ಅನಂತಲಕ್ಷ್ಮೀ ಅವರಾಡುವ ಮಾತನ್ನು ಶ್ಯಾಮ್ ಕೇಳಿಸಿಕೊಂಡಿದ್ದಾನೆ.
ಅಷ್ಟಕ್ಕೂ ಸೀತಾ ಮಗುವಿಗೆ ಜನ್ಮ ನೀಡಿದಾಗ ಶ್ಯಾಮ್ ಮತ್ತು ಅವರ ಪತ್ನಿ ಶಾಲಿನಿ ಆಸ್ಪತ್ರೆಗೆ ಬರಲಿಲ್ಲ. ಆ ಮಗು ದೂರವಾಗಲು ನೀವೂ ಇದರಲ್ಲಿ ಭಾಗಿಯಾಗಿದ್ದೀರಿ ಎಂದು ನಮಗೆ ದೂರು ಬಂದಿದೆ. ನಾನು ಯಾವ ಮಗುವನ್ನೂ ತಾಯಿಯಿಂದ ದೂರ ಮಾಡಿಲ್ಲ ಎಂದಿದ್ದಾಳೆ. ಆ ಮಗುವನ್ನು ಸೀತಾ ಸಾಕಿದಳು. ಇದರಲ್ಲಿ ಶ್ಯಾಮ್ ಅವರೇ ಮೋಸ ಮಾಡಿದ್ದು ಎಂಬುದನ್ನೂ ಅನಂತಲಕ್ಷ್ಮೀ ಹೇಳುತ್ತಾಳೆ. ಇದೆಲ್ಲವನ್ನೂ ಬಾಗಿಲ ಮುಂದೆ ನಿಂತ ಶ್ಯಾಮ್ ಕೇಳಿಸಿಕೊಳ್ಳುತ್ತಾನೆ. ಅಲ್ಲಿಗೆ ಚಾಂದಿನಿ ಹೇಳಿದ್ದು ನಿಜ ಎಂದು ನಂಬುತ್ತಾನೆ ಶ್ಯಾಮ್.
ನೇರವಾಗಿ ಆಸ್ಪತ್ರೆಯಿಂದ ಹೊರಬಂದು, ರಾಮ್ ಮೇಲೆ ಕೂಗಾಡುತ್ತಾನೆ ಶ್ಯಾಮ್. ನನ್ನ ಮಗುವನ್ನು ನಿನ್ನ ಮನೆಯಲಿಟ್ಟುಕೊಂಡು ಯಾಕೋ ಮೋಸ ಮಾಡಿದೆ ಎನ್ನುತ್ತಾನೆ. ಜತೆಯಲ್ಲಿಯೇ ಇದ್ದು ಬೆನ್ನಿಗೆ ಚೂರಿ ಹಾಕಿದೆ ಯಾಕೋ. ಮಗಳು ಮಗಳು ಅಂತ ಹಗಲು ರಾತ್ರಿ ಹುಡುಕಾಡ್ತಿದ್ದೀನಿ. ನಿನ್ನ ಮನೆಯಲ್ಲಿ ನನ್ನ ಮಗಳನ್ನ ಇಟ್ಕೊಂಡು ನಾಟಕ ಮಾಡ್ತಿದ್ದೀಯಲ್ಲ. ಯಾಕೋ ಹೀಗೆ ಮಾಡಿದೆ. ಸಿಹಿನೇ ನನ್ನ ಮಗಳು. ನಿನ್ನನ್ನು ತುಂಬ ನಂಬಿದ್ದೆ ಎಂದು ಆದರೆ ಈ ರೀತಿ ಮೋಸ ಮಾಡ್ತಿಯಾ ಅಂತ ಅಂದುಕೊಂಡಿರಲಿಲ್ಲ ಎಂದಿದ್ದಾನೆ.
ಇತ್ತ ಅನಂತಲಕ್ಷ್ಮೀ ರಾಮ್‌ನನ್ನು ಕರೆದು ಇರೋ ವಿಷ್ಯವನ್ನು ತಿಳಿಸುತ್ತಾಳೆ. ನೀವು ಇಷ್ಟು ದಿನ ಹುಡುಕುತ್ತಿರೋ ಆ ಸೆರೋಗೆಟ್ ಮದರ್ ಬೇರೆ ಯಾರೂ ಅಲ್ಲ. ಅವಳು ಸೀತಾ ಎನ್ನುತ್ತಾಳೆ. ಅಲ್ಲಿಗೆ ರಾಮ್‌ಗೆ ಆಕಾಶವೇ ತಲೆಮೇಲೆ ಬಿದ್ದಂತಾಗುತ್ತದೆ. ಇತ್ತ ಸಿಹಿಯೇ ತನ್ನ ಮಗಳೆಂದು ನೇರವಾಗಿ ಶಾಲಿನಿ ಬಳಿಯೂ ಹೇಳಿದ್ದಾನೆ. ಆದರೆ, ಈ ಮಾತು ಕೇಳಿ ಶಾಲಿನಿ ಶಾಕ್ ಆಗಿದ್ದಾಳೆ. ಸಿಹಿಯೇ ನಮ್ಮ ಮಗಳು ಎಂಬ ಸತ್ಯವನ್ನು ಹೇಳುತ್ತಾನೆ.
ರಾಮ್ ಮನೆಗೆ ಬಂದ ಶ್ಯಾಮ್
ಇತ್ತ ನೇರವಾಗಿ ರಾಮ್ ಮನೆಗೆ ಬಂದ ಶ್ಯಾಮ್, ಸಿಹಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ. ಸಿಹಿ ಓಡೋಡಿ ಬರುತ್ತಿದ್ದಂತೆ, ಇನ್ಮೇಲೆ ನೀವು ನನ್ನನ್ನು ಅವಳಿಂದ ದೂರ ಮಾಡಬೇಡಿ. ಏಕೆಂದರೆ ಆಕೆ ನನ್ನ ಮಗಳು ಎಂದಿದ್ದಾನೆ. ಅಲ್ಲಿಗೆ ಸೀತಾಳ ಒಡಲಿಗೆ ಕಿಚ್ಚು ಬಿದ್ದಿದೆ. ಯಾವ ವಿಚಾರವನ್ನು ಜತನದಿಂದ ಬಚ್ಚಿಟ್ಟುಕೊಂಡು ಬಂದಿದ್ದಳೋ ಅದೇ ವಿಚಾರ ಈಗ ಜಗಜ್ಜಾಹೀರಾಗಿದೆ. ಹಾಗಾದರೆ, ಸಿಹಿ ಈಗ ಯಾರ ಪಾಲಾಗುತ್ತಾಳೆ? ಸೀತಾ ತನ್ನ ಮಗಳನ್ನು ಬಿಟ್ಟುಕೊಡುತ್ತಾಳಾ? ಈ ರೋಚಕ ಟ್ವಿಸ್ಟ್‌ಗೆ ಸೋಮವಾರವೇ ಉತ್ತರ ಸಿಗಲಿದೆ.