L2 Empuraan Trailer: ಮಧ್ಯರಾತ್ರಿ ಬಿಡುಗಡೆ ಆಯ್ತು ಮಲಯಾಳಂನ ಎಂಪುರಾನ್‌ ಚಿತ್ರದ ಟ್ರೇಲರ್; ಸಿನಿಮಾ ರಿಲೀಸ್‌ ದಿನಾಂಕವೂ ಘೋಷಣೆ
ಕನ್ನಡ ಸುದ್ದಿ  /  ಮನರಂಜನೆ  /  L2 Empuraan Trailer: ಮಧ್ಯರಾತ್ರಿ ಬಿಡುಗಡೆ ಆಯ್ತು ಮಲಯಾಳಂನ ಎಂಪುರಾನ್‌ ಚಿತ್ರದ ಟ್ರೇಲರ್; ಸಿನಿಮಾ ರಿಲೀಸ್‌ ದಿನಾಂಕವೂ ಘೋಷಣೆ

L2 Empuraan Trailer: ಮಧ್ಯರಾತ್ರಿ ಬಿಡುಗಡೆ ಆಯ್ತು ಮಲಯಾಳಂನ ಎಂಪುರಾನ್‌ ಚಿತ್ರದ ಟ್ರೇಲರ್; ಸಿನಿಮಾ ರಿಲೀಸ್‌ ದಿನಾಂಕವೂ ಘೋಷಣೆ

L2 Empuraan Trailer: ʻಎಲ್‌2; ಎಂಪುರಾನ್‌ʼ ಸಿನಿಮಾ ಟ್ರೇಲರ್‌ ಮಧ್ಯರಾತ್ರಿ (ಮಾ. 20) ಬಿಡುಗಡೆ ಆಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಬಹುಕೋಟಿ ಬಜೆಟ್‌ನ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುತಾರಾಗಣದ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಮಧ್ಯರಾತ್ರಿ ಬಿಡುಗಡೆ ಆಯ್ತು ಮಲಯಾಳಂನ ಎಂಪುರಾನ್‌ ಚಿತ್ರದ ಟ್ರೇಲರ್
ಮಧ್ಯರಾತ್ರಿ ಬಿಡುಗಡೆ ಆಯ್ತು ಮಲಯಾಳಂನ ಎಂಪುರಾನ್‌ ಚಿತ್ರದ ಟ್ರೇಲರ್

L2 Empuraan Trailer: ಮಲಯಾಳಂನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ʻಎಲ್‌2; ಎಂಪುರಾನ್‌ʼ ಸಿನಿಮಾ ಟ್ರೇಲರ್‌ ಮಧ್ಯರಾತ್ರಿ (ಮಾ. 20) ಬಿಡುಗಡೆ ಆಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಬಹುಕೋಟಿ ಬಜೆಟ್‌ನ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುತಾರಾಗಣದ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಇದೇ ಮಾರ್ಚ್‌ 27ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ.

ಎಂಪುರಾನ್‌ ಸಿನಿಮಾದ ಟ್ರೇಲರ್‌ನಲ್ಲಿ ಖುರೇಷಿ ಅಬ್ರಾಮ್ ಮತ್ತು ಸ್ಟೀಫನ್ ನೆಡುಂಪಲ್ಲಿ ಎರಡು ಶೇಡ್‌ಗಳಲ್ಲಿ ಮೋಹನ್‌ಲಾಲ್‌ ಕಾಣಿಸಿಕೊಂಡಿದ್ದಾರೆ. ರಾಜಕೀಯ ಥ್ರಿಲ್ಲರ್‌ ಕಥಾಹಂದರದ ಈ ಸಿನಿಮಾ ರಾಜಕೀಯ ಪಕ್ಷದೊಳಗಿನ ಅಧಿಕಾರದ ಸುತ್ತ ಸುತ್ತಲಿದೆ. ಇದೆಲ್ಲದರ ಜತೆಗೆ ಭಯೋತ್ಪಾದನೆ, ಡ್ರಗ್ಸ್‌ ಇನ್ನೂ ಹಲವು ಪದರಗಳಲ್ಲಿ ಈ ಸಿನಿಮಾ ತೆರೆದುಕೊಳ್ಳಲಿದೆ. ಖುರೇಷಿ ಪಾತ್ರದಲ್ಲಿ ಮೋಹನ್ ಲಾಲ್, ಜಾಯೆದ್ ಮಸೂದ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್‌ ಟ್ರೇಲರ್‌ನಲ್ಲಿ ಬೆಂಕಿ ಕಿಡಿಯಂತೆ ಕಂಡಿದ್ದಾರೆ. ಜತಿನ್ ರಾಮ್‌ದಾಸ್ ಆಗಿ ಟೋವಿನೋ ಥಾಮಸ್, ಪ್ರಿಯದರ್ಶಿನಿ ರಾಮ್‌ದಾಸ್ ಆಗಿ ಮಂಜು ವಾರಿಯರ್ ಮತ್ತು ಗೋವರ್ಧನ್ ಪಾತ್ರದಲ್ಲಿ ಇಂದ್ರಜಿತ್ ಸುಕುಮಾರನ್ ಕಂಡಿದ್ದಾರೆ.

ಚಿತ್ರ ಯಾವಾಗ ಬಿಡುಗಡೆ?

3 ನಿಮಿಷ 50 ಸೆಕೆಂಡ್‌ನ ಈ ಟ್ರೇಲರ್‌ನಲ್ಲಿ ಹತ್ತಾರು ವಿಷಯಗಳನ್ನು ಮುಟ್ಟಿದ್ದಾರೆ ನಿರ್ದೇಶಕ ಪ್ರಥ್ವಿರಾಜ್‌ ಸುಕುಮಾರನ್‌. ಜತೆಗೆ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಈ ಚಿತ್ರ ಮಾರ್ಚ್ 27 ರಂದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆಂಥೋನಿ ಪೆರುಂಬವೂರ್, ಸುಭಾಸ್ಕರನ್ ಮತ್ತು ಗೋಕುಲಂ ಗೋಪಾಲನ್ ಅವರು ಆಶೀರ್ವಾದ್ ಸಿನಿಮಾಸ್, ಲೈಕಾ ಪ್ರೊಡಕ್ಷನ್ಸ್ ಮತ್ತು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಹೊಂಬಾಳೆ ತೆಕ್ಕೆಗೆ ವಿತರಣೆ ಜವಾಬ್ದಾರಿ

ಮಲಯಾಳಂನ ಬಹುನಿರೀಕ್ಷಿತ "L2E: ಎಂಪುರಾನ್" ಚಿತ್ರವನ್ನು ಕರ್ನಾಟಕದಾದ್ಯಂತ ವಿತರಿಸುವುದಾಗಿ ಹೊಂಬಾಳೆ ಫಿಲಂಸ್‌ ಘೋಷಿಸಿದೆ. ಹೊಂಬಾಳೆ ಫಿಲಂಸ್‌ನ, ಕೆಜಿಎಫ್ ಚಾಪ್ಟರ್‌ 1, ಕೆಜಿಎಫ್ ಚಾಪ್ಟರ್‌ 2 ಮತ್ತು ಕಾಂತಾರ ಸಿನಿಮಾಗಳನ್ನು ಕೇರಳದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ವಿತರಿಸಿದರು. ಇದೀಗ ಅವರ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದಾರೆ ವಿಜಯ್‌ ಕಿರಗಂದೂರು.

ಸಲಾರ್‌ನಲ್ಲಿ ಮುಂದುವರಿದ ಬಂಧ

ಪೃಥ್ವಿರಾಜ್‌ ಅವರ ಆಡುಜೀವಿತಂ (ದಿ ಗೋಟ್‌ ಲೈಫ್‌) ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದು ಹೊಂಬಾಳೆ ಫಿಲಂಸ್‌ ಸಂಸ್ಥೆಯೇ. ಸಲಾರ್‌ ಸಿನಿಮಾದಲ್ಲಿಯೂ ಪೃಥ್ವಿರಾಜನ್‌ ನಟಿಸುವ ಮೂಲಕ ಆ ಬಂಧ ಮತ್ತಷ್ಟು ಗಟ್ಟಿಯಾಯಿತು. ಅಷ್ಟೇ ಅಲ್ಲ ಹೊಂಬಾಳೆ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ಹೊಸ ಚಿತ್ರವನ್ನು ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಿಸುತ್ತಿದ್ದಾರೆ. ಇದೆಲ್ಲದರ ನಡುವೆ L2E: ಎಂಪುರಾನ್ ಸಿನಿಮಾವನ್ನು ಕರ್ನಾಟಕದಾದ್ಯಂತ ಐದು ಭಾಷೆಗಳಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner