OTT Action Thriller: ಈ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ ಮಲಯಾಳಂನ ಆಕ್ಷನ್ ಥ್ರಿಲ್ಲರ್ ಮುರಾ ಚಿತ್ರ
OTT Action Thriller: ಮಲಯಾಳಂ ಆಕ್ಷನ್ ಥ್ರಿಲ್ಲರ್ ಮುರಾ ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ರಿವೆಂಜ್ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಮಾಲಿವುಡ್ ನಟ ಸೂರಜ್ ವೆಂಜಾರ್‌ಮೂಡು, ತಮಿಳಿನ ಹೃದು ಹಾರೂನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ.
OTT Action Thriler: ಮಾಲಿವುಡ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ, ಒಟಿಟಿಯಲ್ಲಿಯೂ ಹೆಚ್ಚು ಸದ್ದು ಮಾಡುತ್ತಿರುತ್ತವೆ. ಅದರಲ್ಲೂ ಈ ವರ್ಷ ಮಲಯಾಳಂನ ಒಂದಕ್ಕಿಂತ ಒಂದು ಸಿನಿಮಾಗಳು ಥಿಯೇಟರ್ ಜತೆಗೆ ಒಟಿಟಿಯಲ್ಲೂ ಹಿಟ್ ಪಟ್ಟ ಅಲಂಕರಿಸಿವೆ. ಅದರಂತೆ, ಇದೀಗ ಇನ್ನೊಂದು ಮಾಲಿವುಡ್ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಆಕ್ಷನ್ ಥ್ರಿಲ್ಲರ್ ಶೈಲಿಯ ಮುರಾ ಸಿನಿಮಾ ಒಟಿಟಿ ವೀಕ್ಷಕರ ಗಮನ ಸೆಳೆದಿದೆ. ಹಾಗಾದರೆ, ಏನಿದು ಮುರಾ? ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ.
ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಶುಕ್ರವಾರ (ಡಿ. 27) ದಿಂದ ಮಲಯಾಳಂ ಆಕ್ಷನ್ ಥ್ರಿಲ್ಲರ್ ಮುರಾ ಸಿನಿಮಾ ಕನ್ನಡ ಹೊರತುಪಡಿಸಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಮಲಯಾಳಿ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಸೂರಜ್ ವೆಂಜಾರಾಮೂಡು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಅವರ ಜತೆಗೆ ಹೃದು ಹರೂನ್, ಮಾಲಾ ಪಾರ್ವತಿ, ಕಾನಿ ಕಸ್ತೂರಿ, ಕ್ರಿಶ್ ಹಾಸನ್ ಮತ್ತು ಜೋಬಿನ್ ದಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮುರಾ ಚಿತ್ರಕ್ಕೆ ಸುರೇಶ್ ಬಾಬು ಚಿತ್ರಕಥೆ ಬರೆದಿದ್ದು, ಮೊಹಮ್ಮದ್ ಮುಸ್ತಫಾ ನಿರ್ದೇಶಿಸಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಸೋತ ಮುರಾ
ಇದೇ ವರ್ಷದ ನವೆಂಬರ್ 8ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಮುರಾ ಸಿನಿಮಾಕ್ಕೆ ಒಳ್ಳೆಯ ವಿಮರ್ಶೆಗಳು ಸಿಕ್ಕರೂ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಕಾಣಲಿಲ್ಲ. ಇನ್ನುಳಿದಂತೆ ನಟ ಸೂರಜ್ ವೆಂಜಾರಮೂಡು ನೆಗೆಟಿವ್ ಪಾತ್ರದ ಮೂಲಕವೇ ಗಮನ ಸೆಳೆದರು.
ಮುರಾ ಕಥೆ ಏನು?
ಆನಂದು (ಹೃದು ಹರೂನ್), ಮನು (ಯಧು ಕೃಷ್ಣನ್), ಮನಾಫ್ (ಅನುಜಿತ್) ಮತ್ತು ಸಾಜಿ (ಜೋಬಿನ್ ದಾಸ್) ದರೋಡೆಕೋರರಾಗುವ ಕನಸು ಕಾಣುತ್ತಿರುವವರು. ಈ ನಾಲ್ವರು ಅನಿ (ಸೂರಜ್ ವೆಂಜರಮೂಡು) ಎಂಬ ಖದೀಮನ ಜತೆ ಸೇರುತ್ತಾರೆ. ಒಂದೇ ಸ್ಥಳದಲ್ಲಿ ಅಡಗಿಸಿಟ್ಟ ನೂರಾರು ಕೋಟಿ ಕಪ್ಪು ಹಣವನ್ನು ಕದಿಯುವ ಪ್ಲಾನ್ ಮಾಡುತ್ತಾರೆ. ಆ ಹಣದ ದರೋಡೆಗೆ ಹೋದ ನಾಲ್ವರು ಏನೆಲ್ಲ ಅಡೆತಡೆಗಳನ್ನು ಎದುರಿಸಿದರು ಎಂಬುದೇ ಈಸ ಸಿನಿಮಾದ ಕಥೆ.
ಕಾಲಿವುಡ್ ನಟ ಹೃದು ಹರೂನ್ ಈ ಹಿಂದೆ ತಮಿಳಿನ ಥಗ್ಸ್ ಮತ್ತು ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇತ್ತ ಮಲಯಾಳಂನ ಸೂರಜ್ ವೆಂಜಾರಮೂಡು ಮಾಲಿವುಡ್‌ನಲ್ಲಿ 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ಜೋಡಿ ಮುರಾ ಸಿನಿಮಾದಲ್ಲಿ ಒಂದಾಗಿದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope