ಟೊವಿನೋ ಥಾಮಸ್ ಅಭಿನಯದ 8 ಅತ್ಯುತ್ತಮ ಮಲಯಾಳಂ ಥ್ರಿಲ್ಲರ್ ಸಿನಿಮಾಗಳಿವು; ಈ ಒಟಿಟಿಯಲ್ಲಿ ಕನ್ನಡದಲ್ಲಿಯೇ ವೀಕ್ಷಿಸಿ
ಕನ್ನಡ ಸುದ್ದಿ  /  ಮನರಂಜನೆ  /  ಟೊವಿನೋ ಥಾಮಸ್ ಅಭಿನಯದ 8 ಅತ್ಯುತ್ತಮ ಮಲಯಾಳಂ ಥ್ರಿಲ್ಲರ್ ಸಿನಿಮಾಗಳಿವು; ಈ ಒಟಿಟಿಯಲ್ಲಿ ಕನ್ನಡದಲ್ಲಿಯೇ ವೀಕ್ಷಿಸಿ

ಟೊವಿನೋ ಥಾಮಸ್ ಅಭಿನಯದ 8 ಅತ್ಯುತ್ತಮ ಮಲಯಾಳಂ ಥ್ರಿಲ್ಲರ್ ಸಿನಿಮಾಗಳಿವು; ಈ ಒಟಿಟಿಯಲ್ಲಿ ಕನ್ನಡದಲ್ಲಿಯೇ ವೀಕ್ಷಿಸಿ

ಮಲಯಾಳಂ ಸ್ಟಾರ್ ನಟ ಟೊವಿನೋ ಥಾಮಸ್ ಅನೇಕ ಥ್ರಿಲ್ಲರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಅತ್ಯುತ್ತಮ ಚಲನಚಿತ್ರಗಳು ಯಾವುವು? ಯಾವ OTT ಪ್ಲಾಟ್‌ಫಾರ್ಮ್‌ಗಳಲ್ಲಿ ನೋಡಬಹುದು ಎಂಬುದನ್ನು ತಿಳಿಯಿರಿ. ಇವುಗಳಲ್ಲಿ ಕೆಲವು ಕನ್ನಡದಲ್ಲಿಯೂ ಸ್ಟ್ರೀಮಿಂಗ್ ಆಗುತ್ತಿವೆ.

ಟೊವಿನೋ ಥಾಮಸ್ ಅಭಿನಯದ 8 ಅತ್ಯುತ್ತಮ ಮಲಯಾಳಂ ಥ್ರಿಲ್ಲರ್ ಸಿನಿಮಾಗಳಿವು; ಈ ಒಟಿಟಿಯಲ್ಲಿ ಕನ್ನಡದಲ್ಲಿಯೇ ವೀಕ್ಷಿಸಿ
ಟೊವಿನೋ ಥಾಮಸ್ ಅಭಿನಯದ 8 ಅತ್ಯುತ್ತಮ ಮಲಯಾಳಂ ಥ್ರಿಲ್ಲರ್ ಸಿನಿಮಾಗಳಿವು; ಈ ಒಟಿಟಿಯಲ್ಲಿ ಕನ್ನಡದಲ್ಲಿಯೇ ವೀಕ್ಷಿಸಿ

ಮಾಲಿವುಡ್‌ ನಟ ಟೊವಿನೊ ಥಾಮಸ್ ಮಲಯಾಳಂನ ಅತ್ಯಂತ ಕಿರಿಯ ನಟರಲ್ಲಿ ಒಬ್ಬರು. 2012ರಲ್ಲಿ ಮಲಯಾಳಂ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದ ಸ್ಟಾರ್ ಹೀರೋ, ಈಗಾಗಲೇ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಐವತ್ತರಲ್ಲಿ ಥ್ರಿಲ್ಲರ್ ಚಿತ್ರಗಳೇ ಅಧಿಕ. ಆ ಸಿನಿಮಾಗಳೆಲ್ಲವೂ ಸದ್ಯ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಸೋನಿ ಲೀವ್‌ ಸೇರಿ ಹಲವು ಒಟಿಟಿಗಳಲ್ಲಿ ಸ್ಟ್ರೀಮಿಂಗ್‌ ಆಗುತ್ತವೆ. ಇಲ್ಲಿವೆ ಆ ಸಿನಿಮಾಗಳ ವಿವರ.

2018 - ಸೋನಿ ಲಿವ್ ಒಟಿಟಿ

ಈ ವರ್ಷದ ʻಎಲ್2; ಎಂಪುರನ್ʼ, ಕಳೆದ ವರ್ಷದ ʻಮಂಜುಮ್ಮೆಲ್ ಬಾಯ್ಸ್ʼ ಸಿನಿಮಾಗಿಂತಲೂ ಮೊದಲು ಅತಿ ಹೆಚ್ಚು ಗಳಿಕೆ ಕಂಡ ಮಲಯಾಳಂ ಸಿನಿಮಾ 2018. ಟೊವಿನೊ ಥಾಮಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೇರಳದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಮೂಡಿಬಂದ ಥ್ರಿಲ್ಲರ್ ಕಥಾನಕ. ಈ ಚಿತ್ರವು ಸೋನಿ ಲಿವ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ನಾರದನ್ - ಅಮೆಜಾನ್‌ ಪ್ರೈಂ

ನಾರದನ್ 2022ರ ಥ್ರಿಲ್ಲರ್ ಚಿತ್ರವಾಗಿದ್ದು, ಟೊವಿನೊ ಥಾಮಸ್ ಚಂದ್ರಪ್ರಕಾಶ್ ಎಂಬ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಮತ್ತು ಆಹಾ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಐಡೆಂಟಿಟಿ - ಜೀ5 ಒಟಿಟಿ

ಟೊವಿನೊ ಥಾಮಸ್ ಮತ್ತು ತ್ರಿಷಾ ಕೃಷ್ಣನ್‌ ಮುಖ್ಯಭೂಮಿಕೆಯಲ್ಲಿರುವ ʻಐಡೆಂಟಿಟಿʼ ಸಿನಿಮಾ, ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಹಿಟ್‌ ಸಿನಿಮಾಗಳಲ್ಲಿ ಒಂದು. ಈ ಚಿತ್ರದಲ್ಲಿ ಸ್ಕೆಚ್ ಆರ್ಟಿಸ್ಟ್‌ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ವವಸ್ಟಿಗೇಟಿವ್‌ ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾ, ಜೀ5 ಒಟಿಟಿಯಲ್ಲಿ ಕನ್ನಡದಲ್ಲಿಯೂ ವೀಕ್ಷಣೆ ಮಾಡಬಹುದು.

ಫೋರೆನ್ಸಿಕ್ - ನೆಟ್‌ಫ್ಲಿಕ್ಸ್‌

ಮಲಯಾಳಂನ ʻಫೋರೆನ್ಸಿಕ್ʼ ಚಿತ್ರವೂ ಒಂದು ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಟೊವಿನೊ ವಿಧಿವಿಜ್ಞಾನ ತಜ್ಞನ ಪಾತ್ರ ನಿರ್ವಹಿಸಿದ್ದಾರೆ. ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುವ ಸರಣಿ ಕೊಲೆಗಾರನ ಪ್ರಕರಣದ ಬೆನ್ನತ್ತಿ, ಹೇಗೆ ಆ ಕೊಲೆಗಾರನನ್ನು ಪತ್ತೆ ಮಾಡಲಾಗುತ್ತದೆ ಎಂಬುದೇ ಈ ಸಿನಿಮಾ. ಈ ಚಿತ್ರವು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ವಾಶಿ - ನೆಟ್‌ಫ್ಲಿಕ್ಸ್‌

ಮಲಯಾಳಂನ ವಾಶಿ ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ಟೊವಿನೊ ಥಾಮಸ್ ಈ ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ನಟಿಸಿದ್ದಾರೆ. ಇಬ್ಬರೂ ವಕೀಲರಾಗಿ ಕಾಣಿಸಿಕೊಂಡಿದ್ದು, ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಟೊವಿನೊ ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರದಲ್ಲಿ ಮತ್ತು ಕೀರ್ತಿ ಡಿಫೆನ್ಸ್ ವಕೀಲರಾಗಿ ನಟಿಸಿದ್ದಾರೆ. ಇದೊಂದು ಕೋರ್ಟ್ ರೂಮ್ ಡ್ರಾಮಾ ಥ್ರಿಲ್ಲರ್ ಸಿನಿಮಾ. ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿದೆ.

ವೈರಸ್ - ಜೀ5 ಒಟಿಟಿ

ಕೇರಳವನ್ನು ಬೆಚ್ಚಿಬೀಳಿಸಿದ ನಿಫಾ ವೈರಸ್ ಹಿನ್ನೆಲೆಯಲ್ಲಿ ʻವೈರಸ್ʼ ಚಿತ್ರವನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಟೊವಿನೊ ಥಾಮಸ್ ಜೊತೆಗೆ ಕುಂಚಾಕೋ ಬೋಬನ್ ಮತ್ತು ಇಂದ್ರಜಿತ್ ಸುಕುಮಾರನ್ ಸಹ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ಕೇರಳದಲ್ಲಿ ನಿಫಾ ವೈರಸ್ ಹೇಗೆ ಹುಟ್ಟಿಕೊಂಡಿತು ಎಂಬುದರ ಕಥೆಯಾಗಿದೆ. ಇದನ್ನು ಜೀ 5 ಒಟಿಟಿಯಲ್ಲಿ ವೀಕ್ಷಿಸಬಹುದು.

ಅನ್ವೇಶಿಪಿನ್ ಕಂದೆತುಮ್ - ನೆಟ್‌ಫ್ಲಿಕ್ಸ್‌

ಟೊವಿನೊ ಥಾಮಸ್ ನಟಿಸಿದ ಅತ್ಯುತ್ತಮ ಥ್ರಿಲ್ಲರ್ ಚಿತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ ಅನ್ವೇಶಿಪಿನ್ ಕಂದೆತುಮ್ ಎಂದು ಹೇಳಬಹುದು. ಇದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ತೆಲುಗಿನಲ್ಲಿಯೂ ಸ್ಟ್ರೀಮಿಂಗ್ ಆಗುತ್ತಿದೆ. ಇಬ್ಬರು ಹುಡುಗಿಯರ ಕೊಲೆ ಪ್ರಕರಣದ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ಎಸ್ಐ ಆನಂದ್ ಪಾತ್ರದಲ್ಲಿ ಟೊವಿನೊ ನಟಿಸಿದ್ದಾರೆ. ಈ ಸಿನಿಮಾ ಊಹಿಸಲಾಗದ ತಿರುವುಗಳೊಂದಿಗೆ ನೋಡುಗನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ.

ಕಾನೆಕ್ಕಾನೆ - ಸೋನಿ ಲಿವ್ ಒಟಿಟಿ

ಸೋನಿಲೀವ್‌ ಒಟಿಟಿಯಲ್ಲಿ ಲಭ್ಯವಿರುವ ಮತ್ತೊಂದು ಮಲಯಾಳಂ ಥ್ರಿಲ್ಲರ್ ಚಿತ್ರ ಕಾನೆಕ್ಕಾನೆ. ಟೊವಿನೊ ಥಾಮಸ್‌ ಜತೆಗೆ ಸೂರಜ್ ವೆಂಜರಮೂಡು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮನು ಅಶೋಕನ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.